ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅವ್ಯಕ್ತ ಸಂಕಲ್ಪದ ಫಲ !
‘ಅಖಿಲ ಮನುಕುಲದ ಉದ್ಧಾರಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ವಜವನ್ನು ಏರಿಸಲು ಹಗಲಿರಳು ಕಾರ್ಯನಿರತರಾಗಿರುವ ಮಹಾನ್ ವಿಭೂತಿಯೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ. ‘ಹಿಂದೂ ರಾಷ್ಟ್ರವು ಧರ್ಮದ ಅಧಿಷ್ಠಾನದ ಮೇಲೆಯೇ ನಿರ್ಮಾಣವಾಗಲಿಕ್ಕಿದೆ, ಆದುದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲೆಡೆ ಧರ್ಮಪ್ರಸಾರದ ಕಾರ್ಯವಾಗುವುದು ಬಹಳ ಆವಶ್ಯಕವಾಗಿದೆ. ಧರ್ಮಪ್ರಸಾರದ ಕಾರ್ಯ ವಾಗಲು ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಇವುಗಳಲ್ಲಿನ ಜ್ಞಾನಶಕ್ತಿಯ ಯೋಗದಾನ ಅತ್ಯಧಿಕವಿದೆ. ಜ್ಞಾನಶಕ್ತಿಯ ಮಾಧ್ಯಮದಿಂದ ಕಾರ್ಯವಾಗುವ ಅತ್ಯಧಿಕ ಪ್ರಭಾವಿ ಮಾಧ್ಯಮವೆಂದರೆ ‘ಗ್ರಂಥಗಳು ! ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಘೋರ ಆಪತ್ಕಾಲ ಪ್ರಾರಂಭವಾಗುವ ಮೊದಲೇ, ‘ಗ್ರಂಥಗಳ ಮಾಧ್ಯಮದಿಂದ ಹೆಚ್ಚಚ್ಚು ಧರ್ಮಪ್ರಸಾರ ಮಾಡುವುದು, ಸದ್ಯದ ಕಾಲದ ಶ್ರೇಷ್ಠ ಸಾಧನೆಯಾಗಿದೆ !, ಇದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಉದ್ಗಾರವಾಗಿದೆ. ಗ್ರಂಥನಿರ್ಮಿತಿಯ ಕಾರ್ಯವು ವೇಗವಾಗಿ ಆಗಲು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಅವ್ಯಕ್ತ ಸಂಕಲ್ಪವೇ ಒಂದು ರೀತಿಯಲ್ಲಿ ಕಾರಣವಾಗಿದೆ. ಈ ಸಂಕಲ್ಪದಿಂದ ಕಳೆದ ಕೆಲವು ವರ್ಷಗಳಲ್ಲಿ ಸನಾತನದ ಗ್ರಂಥಕಾರ್ಯ ಅನೇಕ ಪಟ್ಟು ಹೆಚ್ಚಾಗಿದೆ.
೧. ಮಾರ್ಚ್ ೨೦೨೨ ರಿಂದ ಫೆಬ್ರವರಿ ೨೦೨೩ ರ ತನಕ ವಿವಿಧ ಭಾಷೆಗಳಲ್ಲಿ ಒಟ್ಟು ೩೪ ಹೊಸ ಗ್ರಂಥಗಳ ಪ್ರಕಾಶನ ಭಾಷೆ ಗ್ರಂಥ
೨. ಮಾರ್ಚ್ ೨೦೨೨ ರಿಂದ ಫೆಬ್ರವರಿ ೨೦೨೩ ರ ವರೆಗೆ ವಿವಿಧ ಭಾಷೆಗಳಲ್ಲಿ ಒಟ್ಟು ೨೫೪ ಗ್ರಂಥ – ಕಿರುಗ್ರಂಥಗಳ ಪುನರ್ ಮುದ್ರಣ !
೩.‘ಜ್ಞಾನಶಕ್ತಿ ಪ್ರಸಾರ ಅಭಿಯಾನಕ್ಕೆ ವಾಚಕರಿಂದ ಸಿಕ್ಕಿದ ಅಪ್ರತಿಮ ಸ್ಪಂದನ !
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಅವ್ಯಕ್ತ ಸಂಕಲ್ಪದಿಂದ ಸಪ್ಟೆಂಬರ್ ೨೦೨೧ ರಿಂದ ಸನಾತನ ಸಂಸ್ಥೆಯ ರಾಷ್ಟ್ರವ್ಯಾಪಿ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ ಉಪಕ್ರಮ ಪ್ರಾರಂಭವಾಯಿತು. ಈ ಅಭಿಯಾನದ ಮಾಧ್ಯಮದಿಂದ ಸಮಾಜದ ಪ್ರತಿಯೊಂದು ವರ್ಗದವರೆಗೆ ಗ್ರಂಥಗಳ ಪ್ರಸಾರವಾಗುತ್ತಿದ್ದು, ಸಮಾಜದಿಂದ ಈ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನ ಸಿಗುತ್ತಿದೆ. ಈ ಅಭಿಯಾನದ ಅಂತರ್ಗತ ಕೇವಲ ೬ ತಿಂಗಳುಗಳಲ್ಲಿ ಮರಾಠಿ, ಹಿಂದಿ, ಕನ್ನಡ, ಗುಜರಾತಿ ಮತ್ತು ಆಂಗ್ಲ ಈ ೫ ಭಾಷೆಗಳ ೩,೨೭,೩೬೩ ಗ್ರಂಥಗಳ ಮಾರಾಟವಾಗಿದೆ. ‘ಕೊರೊನಾ ದಂತಹ ಮಹಾಮಾರಿಯ ಕಾಲದಲ್ಲಿ ಅನೇಕ ಜನರ ಏಕಾಂಗಿತನ, ನಿರಾಶೆ
ಇತ್ಯಾದಿಗಳನ್ನು ದೂರಗೊಳಿಸಿ ಅವರನ್ನು ಸಾಧನೆಯ ಮಾರ್ಗಕ್ಕೆ ತರಲು ಈ ಗ್ರಂಥಗಳು ದೊಡ್ಡ ಪಾಲನ್ನು ನಿರ್ವಹಿಸಿವೆ.
೪. ಕಳೆದ ಒಂದು ವರ್ಷದಲ್ಲಿ ವಿವಿಧ ಭಾಷೆಗಳ ಒಟ್ಟು ೪ ಲಕ್ಷಕ್ಕಿಂತ ಹೆಚ್ಚು ಗ್ರಂಥ-ಕಿರುಗ್ರಂಥಗಳ ಮಾರಾಟ !
ಗ್ರಂಥಗಳ ಪ್ರದರ್ಶನ, ಗ್ರಂಥಗಳ ಮಾರಾಟಕೇಂದ್ರ, ‘ಆನ್‌ಲೈನ್ ಗ್ರಂಥಗಳ ಮಾರಾಟ ಮುಂತಾದ ಮಾಧ್ಯಮಗಳ ಮೂಲಕ ಸನಾತನದ ಗ್ರಂಥಗಳು ಸಮಾಜವನ್ನು ತಲುಪುತ್ತಿವೆ. ೨೦೨೨-೨೩ ನೇ ವರ್ಷದಲ್ಲಿ ವಿವಿಧ ಭಾಷೆಗಳ ಒಟ್ಟು ೪ ಲಕ್ಷ ೧೪ ಸಾವಿರ ೨೯೧ ಗ್ರಂಥ-ಕಿರುಗ್ರಂಥಗಳ ಮಾರಾಟವಾಗಿದೆ. ಕೇವಲ ಒಂದು ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆದ ಗ್ರಂಥಗಳ ಮಾರಾಟದಿಂದ ಸಮಾಜದಲ್ಲಿ ಸನಾತನದ ಗ್ರಂಥಗಳಿಗೆ ಜನಪ್ರಿಯತೆ ಸಿಗುತ್ತಿರುವುದು ಸ್ಪಷ್ಟವಾಗುತ್ತದೆ.
೫. ಇ-ಬುಕ್
ಆಧುನಿಕ ಪೀಳಿಗೆಯ ಓದುಗರಿಗಾಗಿ ಸನಾತನದ ಗ್ರಂಥಗಳನ್ನು ‘ಇ-ಬುಕ್ ಸ್ವರೂಪದಲ್ಲಿಯೂ ಲಭ್ಯ ಮಾಡಿಕೊಡಲಾಗುತ್ತಿದೆ. ಫೆಬ್ರವರಿ ೨೦೨೩ ರ ವರೆಗೆ ಮರಾಠಿ, ಹಿಂದಿ ಮತ್ತು ಆಂಗ್ಲ ಈ ಭಾಷೆಗಳಲ್ಲಿ ೯ ಗ್ರಂಥಗಳು ಲಭ್ಯವಿದ್ದು, ಆದಷ್ಟು ಬೇಗನೆ ಇತರ ಗ್ರಂಥಗಳನ್ನು ಸಹ ಲಭ್ಯಮಾಡಿಕೊಡಲಾಗುವುದು.
೬. ಸನಾತನದ ಗ್ರಂಥಗಳ ಬಗ್ಗೆ ವಿದೇಶಗಳಲ್ಲಿರುವ ಹಿಂದೂ ಮತ್ತು ಹಿಂದೂಯೇತರರ ಗಮನಕ್ಕೆ ಬಂದಿರುವ ಮಹತ್ವ
೬ ಅ. ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೇರಿಕಾ, ಪಾಕಿಸ್ತಾನ, ಸೌದಿ ಅರೇಬಿಯಾ, ಇಂಡೋನೇಶಿಯಾ, ನೇಪಾಳ ಮುಂತಾದ ದೇಶ ಗಳಿಂದಲೂ ‘ಇ-ಮೇಲ್ ಮೂಲಕ ಸನಾತನದ ಗ್ರಂಥಗಳಿಗೆ ಬೇಡಿಕೆ ಬರುತ್ತಿದೆ.
೬ ಆ. ವಿದೇಶಗಳಲ್ಲಿನ ಕೆಲವು ಜಾಲತಾಣಗಳು ಸನಾತನ ಗ್ರಂಥ ಗಳ ಪುಟಗಳನ್ನು ವಿದೇಶಿ ಭಾಷೆ ಗಳಲ್ಲಿ ಭಾಷಾಂತರ ಮಾಡಿಟ್ಟಿವೆ. ಈ ಪುಟಗಳಿಗೆ ಪ್ರತಿ ತಿಂಗಳು
೧ ಲಕ್ಷಕ್ಕಿಂತ ಹೆಚ್ಚು ಜಿಜ್ಞಾಸುಗಳು ಭೇಟಿ ನೀಡುತ್ತಿದ್ದಾರೆ. ವಿವಿಧ ಜಾಲತಾಣಗಳು ಸನಾತನದ ಗ್ರಂಥಗಳಲ್ಲಿ ನೀಡಿರುವ ಆಧ್ಯಾತ್ಮಿಕ ಉಪಾಯ, ಔಷಧಿರಹಿತ ಉಪಚಾರ ಪದ್ಧತಿ ಇತ್ಯಾದಿ ಮಾಹಿತಿ ಗಳನ್ನು ಸಮಾಜಹಿತಕ್ಕಾಗಿ ಪ್ರಸಾರ ಮಾಡುತ್ತಿದ್ದಾರೆ.
೬ ಇ. ಸನಾತನದ ಗ್ರಂಥಗಳನ್ನು ನೋಡಿ ಅಮೇರಿಕಾದ, ನ್ಯೂಯಾರ್ಕನ ಶ್ರೀ. ದೀಪಕ ಘೋಷ ಇವರು “ಸನಾತನ-ನಿರ್ಮಿತ ಗ್ರಂಥಗಳಲ್ಲಿರುವ ಜ್ಞಾನದ ಮೂಲಕ ಜಗತ್ತಿನಾದ್ಯಂತ ಸನಾತನ ಹಿಂದೂ ಧರ್ಮದ ಸುಗಂಧವನ್ನು ಹರಡುವಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯವಾಗಿದೆ, ಅದಕ್ಕಾಗಿ ನಿಮಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
೭. ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಗ್ರಂಥಕಾರ್ಯದಲ್ಲಿ ಭಾಗವಹಿಸಿರಿ !
ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಇವುಗಳಲ್ಲಿ ಜ್ಞಾನ ಶಕ್ತಿಯ ಸ್ತರದಲ್ಲಿನ ಸೇವೆಯನ್ನು ಮಾಡುವುದರಿಂದ ಆಧ್ಯಾತ್ಮಿಕ ಉನ್ನತಿಯ ವೇಗವು ಬಹಳ ಹೆಚ್ಚಾಗುತ್ತದೆ. ಇದಕ್ಕಾಗಿ ಗ್ರಂಥ ಸೇವೆಯ ಮಹತ್ವ ಅನನ್ಯಸಾಧಾರಣವಾಗಿದೆ.
ವರ್ಷ ೧೯೯೫ ರಿಂದ ಫೆಬ್ರವರಿ ೨೦೨೩ ವರೆಗೆ ೩೬೦ ಗ್ರಂಥ-ಕಿರುಗ್ರಂಥಗಳು ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಕನ್ನಡ, ತಮಿಳು, ತೆಲುಗು, ಮಲ್ಯಾಳಮ್, ಬಂಗಾಳಿ, ಓರಿಯಾ, ಆಸ್ಸಾಮಿ, ಗುರುಮುಖಿ, ಸರ್ಬಿಯನ್, ಜರ್ಮನಿ, ಸ್ಪ್ಯಾನಿಶ್, ಫ್ರೆಂಚ್ ಮತ್ತು ನೇಪಾಳಿ ಈ ೧೭ ಭಾಷೆಗಳಲ್ಲಿ ಒಟ್ಟು ೯೨ ಲಕ್ಷ ೮೧ ಸಾವಿರ ಪ್ರತಿಗಳು ಮುದ್ರಣವಾಗಿವೆ. ಇನ್ನಿತರ ಸುಮಾರು ೫ ಸಾವಿರಕ್ಕಿಂತ ಹೆಚ್ಚು ಗ್ರಂಥಗಳ ರಚನೆಯ ಕಾರ್ಯ ಅಧಿಕ ವೇಗದಿಂದ ಆಗಲು ಅನೇಕ ಜನರ ಸಹಾಯದ ಆವಶ್ಯಕತೆಯಿದೆ. ನಿಮ್ಮ ಆಸಕ್ತಿ ಮತ್ತು ಕ್ಷಮತೆಯನುಸಾರ ಗ್ರಂಥನಿರ್ಮಿತಿ ಸೇವೆಯಲ್ಲಿ ನೀವು ಸಹ ಸಹಭಾಗಿಗಳಾಗಬಹುದು. ಇದರೊಂದಿಗೆ ಗ್ರಂಥಗಳ ಪ್ರಸಾರ ಮಾಡುವುದು, ಗ್ರಂಥಗಳಿಗಾಗಿ ಅರ್ಪಣೆ ಅಥವಾ ಜಾಹೀರಾತುಗಳನ್ನು ನೀಡುವುದು ಅಥವಾ ಬೇರೆಯವರಿಂದ ಪಡೆಯುವುದು, ಗ್ರಂಥಗಳ ವಿತರಣೆ ಮಾಡುವುದು ಮುಂತಾದ ಸೇವೆಗಳಲ್ಲಿಯೂ ನೀವು ಭಾಗವಹಿಸಬಹುದು. ‘ಎಲ್ಲರೂ ಈ ಸುವರ್ಣಾವಕಾಶದ ಹೆಚ್ಚೆಚ್ಚು ಲಾಭವನ್ನು ಪಡೆದುಕೊಳ್ಳಬೇಕು ಇದೇ ನಮ್ರ ವಿನಂತಿ.
– ಪೂ. ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು (೫.೩.೨೦೨೩)