೧. ಛತ್ರಪತಿ ಶಿವಾಜಿ ಮಹಾರಾಜರು ಮತ್ತುಛತ್ರಪತಿ ಸಂಭಾಜಿ ಮಹಾರಾಜರು ತಯಾರಿಸಿದಹಿಂದೂ ಕಾಲ ಗಣನೆಯ ಪದ್ದತಿಯ ಬಗೆಗಿನ ಗ್ರಂಥಗಳು !
ಹಿಂದೂ ಕಾಲಗಣನೆಯ ಮಹತ್ವವನ್ನು ಅರಿತು ಶಿವಾಜಿ ಮಹಾರಾಜರು ಬಾಲಕೃಷ್ಣ ಮತ್ತು ರಾಮಕೃಷ್ಣ ಸಂಗಮೇಶ್ವರಕರ್ ಸಹೋದರರಿಂದ ‘ಕರಣ ಕೌಸ್ತುಭ’ ಈ ಗ್ರಂಥವನ್ನು ತಯಾರಿಸಿಕೊಂಡರು. ಛತ್ರಪತಿ ಸಂಭಾಜಿ ಮಹಾರಾಜರು ಗಾಗಾಭಟ್ಟ ಇವರಿಂದ ‘ಸಮಯನಯಃ’ ಎಂಬ ಇಂಥಹದೇ ಹಿಂದೂ ಕಾಲಗಣನೆಯ ಶಾಸ್ತ್ರದ ಮೇಲೆ ಆಧರಿಸಿದ ಗ್ರಂಥವನ್ನು ಬರೆಯಿಸಿಕೊಂಡಿದ್ದಾರೆ. ಈ ಗ್ರಂಥವನ್ನು ತಿಥಿನಿರ್ಣಯ ಈ ವಿಷಯದ ಮೇಲೆ ಬರೆಯಲಾಗಿದೆ.
೨. ಪ್ರತಿ ೩ ವರ್ಷಗಳಿಗೊಮ್ಮೆ ಬರುವ ‘ಅಧಿಕ ಮಾಸ’ದಿಂದ ಪರಿಪೂರ್ಣವಾಗಿರುವ ಹಿಂದೂ ಕಾಲಗಣನೆ ಪದ್ಧತಿ !
ಭಾರತೀಯ ಎಂದರೆ ಹಿಂದೂ ಕಾಲಗಣನೆಯ ಪದ್ಧತಿಯಲ್ಲಿ ವರ್ಷದಲ್ಲಿ ಹನ್ನೆರಡು ತಿಂಗಳು ಮತ್ತು ಪ್ರತಿ ತಿಂಗಳಲ್ಲಿ ಹದಿನೈದು ದಿನಗಳ ಎರಡು ಪಕ್ಷಗಳಿರುತ್ತವೆ. ಇದರಲ್ಲಿ ಚಂದ್ರ ಮತ್ತು ಸೂರ್ಯ ಈ ಎರಡರ ವೇಗದ ವಿಚಾರವನ್ನು ಮಾಡಲಾಗಿದೆ. ಚಂದ್ರನಿಗೆ ಪೃಥ್ವಿಯ ಸುತ್ತಲೂ ಹನ್ನೆರಡು ಸುತ್ತುಗಳನ್ನು ಪೂರ್ಣಗೊಳಿಸಲು ಬೇಕಾಗುವ ಸಮಯವು ಪೃಥ್ವಿಗೆ ಸೂರ್ಯನ ಸುತ್ತಲೂ ಒಂದು ಸುತ್ತು ಪೂರ್ಣಗೊಳಿಸಲು ಬೇಕಾಗುವ ಸಮಯಕ್ಕಿಂತ ಸುಮಾರು ೫೦ ನಿಮಿಷಗಳು ಕಡಿಮೆ ಇರುತ್ತವೆ. ಈ ಕಾಲ ಒಟ್ಟಾಗಿ ಮೂರು ವರ್ಷಗಳಲ್ಲಿ ಒಂದು ಸಂಪೂರ್ಣ ತಿಂಗಳ ಅವಧಿ ತಯಾರಾಗುತ್ತದೆ. ಆದುದ ರಿಂದ ಪ್ರತಿ ಮೂರು ವರ್ಷಗಳ ನಂತರ ನಮ್ಮ ಹಿಂದೂ ಪಂಚಾಂಗದಲ್ಲಿ ‘ಅಧಿಕ ಮಾಸ’ ಬರುತ್ತದೆ. ಈ ಅಧಿಕ ಮಾಸದ ಸಂಕಲ್ಪನೆಯಿಂದಾಗಿ ಹಿಂದೂ ಕಾಲಗಣನೆಯ ಪದ್ಧತಿ ನಿಖರವಾಗಿದೆ. ಅಧಿಕ ಮಾಸದ ಯೋಜನೆಯಿಂದ ಹಿಂದೂಗಳ ಎಲ್ಲ ಹಬ್ಬಗಳು, ವಾರಗಳು, ಉತ್ಸವಗಳು ಆಯಾ ಋತುಗಳಲ್ಲಿಯೇ ಬರುತ್ತವೆ. (ಹಿಜರಿ ಕಾಲಗಣನೆಯಲ್ಲಿ ಬಹಳಷ್ಟು ದೋಷಗಳಿರುವುದರಿಂದ ಪ್ರತಿವರ್ಷ ರಮಜಾನ್ ಬೇರೆ ಬೇರೆ ಋತುಗಳಲ್ಲಿ ಬರುತ್ತದೆ.)
ಇಂದಿಗೂ ‘ಈದ್’ನ ಚಂದ್ರನು ಯಾವಾಗ ಉದಯಿಸುತ್ತಾನೆ, ಎಂಬುದನ್ನು ತಿಳಿದುಕೊಳ್ಳಲು ‘ಹಿಜರಿ ಕ್ಯಾಲೆಂಡರ್’ (ಇಸ್ಲಾಮಿಕ್ ದಿನದರ್ಶಿಕೆ) ಉಪಯೋಗಕ್ಕೆ ಬರುವುದಿಲ್ಲ, ಆಗ ಹಿಂದೂ ಕಾಲಗಣನೆಯ ಪದ್ಧತಿಯ ಆಧಾರವನ್ನೇ ಪಡೆಯಲಾಗುತ್ತದೆ. ದಾತೆ ಪಂಚಾಂಗವನ್ನು ನೋಡಿ ಈದ್‌ನ ಚಂದ್ರನು ಯಾವಾಗ ಕಾಣಿಸುತ್ತಾನೆ, ಎಂಬುದನ್ನು ನಿಶ್ಚಯಿಸಲಾಗುತ್ತದೆ.
ಅಮೇರಿಕಾ ಹಮ್ಮಿಕೊಂಡ ಬಾಹ್ಯಾಕಾಶ ಅಭಿಯಾನಗಳ ಪೈಕಿ ಅನೇಕ ಅಭಿಯಾನಗಳನ್ನು ಆ ದಿನ ಅವರ ಭೂಭಾಗದಲ್ಲಿ ಏಕಾದಶಿಯ ತಿಥಿಯಂದು ಹಮ್ಮಿಕೊಂಡಿರುವುದು ಗಮನಕ್ಕೆ ಬಂದಿದೆ. ಏಕಾದಶಿಯ ವಿಶಿಷ್ಟ ತಿಥಿಯಂದು ಬಾಹ್ಯಾಕಾಶದಲ್ಲಿ ಯಾನ (ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಬಿಡಲು ಉಪಯೋಗಿಸುವ ವಾಹನ) ವನ್ನು ಹಾರಿಸಲು, ಯಾನವು ಬಾಹ್ಯಾಕಾಶವನ್ನು ಭೇದಿಸಲು ಅನುಕೂಲಕರ ದಿನವಾಗಿದೆ ಎಂದು ಗಮನಕ್ಕೆ ಬಂದಿತು. (ಆಧಾರ : ಜಾಲತಾಣ)