ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ಈಗಿನ ಕಾಲದಲ್ಲಿ ‘ಹೇಗೆ ಪ್ರಜೆಗಳೋ ಹಾಗೇ ರಾಜ !

‘ಯಥಾ ರಾಜಾ ತಥಾ ಪ್ರಜಾ, ಅರ್ಥಾತ್ ‘ಹೇಗೆ ರಾಜನೋ, ಹಾಗೇ ಪ್ರಜೆ, ಉದಾ. ರಾಮ ರಾಜ್ಯದಲ್ಲಿ ಶ್ರೀ ರಾಮನಂತೆ ಪ್ರಜೆಗಳೂ ಸಾತ್ತ್ವಿಕರಾಗಿದ್ದರು. ಈಗಿನ ಸ್ಥಿತಿ ‘ಯಥಾ ಪ್ರಜಾ ತಥಾ ರಾಜಾ, ಅರ್ಥಾತ್ ‘ಪ್ರಜೆಗಳು ಹೇಗಿರುತ್ತಾರೋ ಹಾಗೇ ರಾಜನಿರುತ್ತಾನೆ. ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮ ರಹಿತ ಪ್ರಜೆಗಳಿಂದ ಆರಿಸಿ ಬಂದ  ರಾಜಕಾರಣಿಗಳೂ ಹಾಗೆಯೇ ಇದ್ದಾರೆ !

ಶಾಶ್ವತವಾಗಿರುವ ಧರ್ಮ ಮತ್ತು ನಿರಂತರ ಬದಲಾಗುತ್ತಿರುವ ಬುದ್ಧಿಪ್ರಾಮಾಣ್ಯವಾದ !

‘ಧರ್ಮವು ಚಿರಂತನ ಸತ್ಯವನ್ನು ಹೇಳಿದೆ.  ಹಾಗಾಗಿಯೇ ಮುಂದಿನ ಪೀಳಿಗೆಯು ಹಿಂದಿನ ಪೀಳಿಗೆಯನ್ನು ಮೂರ್ಖರು ಎಂದು ಪರಿಗಣಿಸುವುದಿಲ್ಲ. ತದ್ವಿರುದ್ಧ ಬುದ್ಧಿಯ ಮಟ್ಟ ಹೆಚ್ಚಾತ್ತಾ ಹೋದಂತೆ ಹಿಂದಿನ ಪೀಳಿಗೆಯ ಬುದ್ಧಿವಂತರನ್ನು ‘ಮೂರ್ಖ ಅಥವಾ ‘ಸನಾತನಿ ಎಂದು ಪರಿಗಣಿಸಲಾಗುತ್ತದೆ !

ದೇವರ ಶೋಧನೆ ಅಗತ್ಯ !

‘ದೇವರನ್ನು ಹುಡುಕುವ ಬದಲು, ದೇವರು ಸೃಷ್ಟಿಸಿದ ಜಗತ್ತನ್ನು ವಿಜ್ಞಾನಿಗಳು ಅನೇಕ ಪೀಳಿಗೆಗಳ ವರೆಗೆ ಶೋಧಿಸುತ್ತಲೆ ಇರುತ್ತಾರೆ. ತದ್ವಿರುದ್ಧ ಸಾಧಕರು ದೇವರನ್ನು ಶೋಧಿಸುತ್ತಾರೆ. ದೇವರ ಸಾಕ್ಷಾತ್ಕಾರವಾದಾಗ ಅವರಿಗೆ ಜೀವನದ ರಹಸ್ಯ ಅರಿವಿಗೆ ಬರುತ್ತದೆ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮಷ್ಟಿ ಸಾಧನೆ ಅವಶ್ಯಕ !

ವ್ಯಷ್ಟಿ ನಾಧನೆಯಲ್ಲಿ ಒಂದೇ ದೇವತೆಯ ಉಪಾಸನೆ ಮಾಡಲಾಗುತ್ತದೆ, ಆದರೆ ಸಮಷ್ಟಿ ಸಾಧನೆಯಲ್ಲಿ ಅನೇಕ ದೇವತೆಗಳ ಉಪಾಸನೆ ಮಾಡಲಾಗುತ್ತದೆ. ಸೈನ್ಯದಲ್ಲಿ  ಸೇನಾಪಡೆ, ಟ್ಯಾಂಕ್, ವಾಯುಪಡೆ, ನೌಕಾಪಡೆ ಇತ್ಯಾದಿ ಅನೇಕ ವಿಭಾಗಗಳಿರುತ್ತದೆ. ಅದೇರೀತಿ ಹಿಂದೂ ರಾಷ್ಟ್ರ ಸ್ಥಾಪನೆಯ ಸಮಷ್ಟಿ ಕಾರ್ಯದಲ್ಲಿ ಅನೇಕ ದೇವತೆಗಳ ಉಪಾಸನೆ, ಯಜ್ಞ-ಯಾಗ ಇತ್ಯಾದಿಗಳನ್ನು ಮಾಡಬೇಕಾಗುತ್ತದೆ !

ಹಿಂದೂ ರಾಷ್ಟ್ರದಲ್ಲಿ ರಾಷ್ಟ್ರೀಯ ಹಿತಾಸಕ್ತಿಯೇ ಪ್ರಧಾನ !

‘ಹಿಂದೂ ರಾಷ್ಟ್ರದಲ್ಲಿ ಜಾತಿಗಳು ಇರುವುದಿಲ್ಲ.  ಆದ್ದರಿಂದ ಜಾತಿ ಮೀಸಲಾತಿ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಷ್ಟ್ರದ ಹಿತದೃಷ್ಟಿಯಿಂದ ಎಲ್ಲಾ ಸ್ಥಾನಗಳನ್ನು ಗುಣಗಳ ಆಧಾರದ ಮೇಲೆ ಭರ್ತಿ ಮಾಡಲಾಗುವುದು.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ