ಬ್ರಿಟಿಷ ಸರಕಾರದ ಸಮಿತಿಯ ವರದಿಯಲ್ಲಿನ ಮಾಹಿತಿ
ಲಂಡನ್ – ಬ್ರಿಟನ್ ಗೆ ಕೇವಲ ಭಯೋತ್ಪಾದಕ ಸಂಘಟನೆಯಿಂದ ಅಪಾಯ ಅಲ್ಲದೆ, ಸ್ವತಃ ಪ್ರತ್ಯಕ್ಷ ಹಿಂಸಾಚಾರದ ಕೃತ್ಯದಲ್ಲಿ ಸಹಭಾಗಿಯಾಗದೆ, ಜನರ ಬ್ರೈನ್ ವಾಷ್ ಮಾಡಿ ಅವರನ್ನು ಭಯೋತ್ಪಾದಕ ಚಟುವಟಿಕೆಗಳಲ್ಲಿ ಎಳೆಯುವುದರಿಂದಲೂ ಅಪಾಯವಿದೆ, ಎಂದು ಇಲ್ಲಿಯ ಬ್ರಿಟಿಷ ಸರಕಾರದ ಒಂದು ಸಮಿತಿಯು ಸಿದ್ಧಪಡಿಸಿರುವ ನಿಷ್ಕರ್ಷದ ವರದಿ ಮಂಡಿಸಿದೆ. ಈ ವರದಿಯಲ್ಲಿ 3 ವರ್ಷದ ಆಳವಾದ ಅಧ್ಯಯನದ ನಂತರ ಸಿದ್ಧಪಡಿಸಿದ್ದಾರೆ.
UK report deems Islamist terrorism the greatest and deadliest threat facing the countryhttps://t.co/uxc8h4fndd
— OpIndia.com (@OpIndia_com) February 11, 2023
ಈ ವರದಿಯಲ್ಲಿ ತಾಲಿಬಾನದಂತಹ ಇಸ್ಲಾಮಿ ಭಯೋತ್ಪಾದಕರ ಬೆಂಬಲವಾಗಿ ನಿಲ್ಲುವ ಹಾಗೂ ಅವರನ್ನು ಸತತವಾಗಿ ಬೆಂಬಲಿಸುವ ಎಡಪಂಥೀಯ ವಿಚಾರಧಾರೆಯ ಸಂಘಟನೆಗಳ ಮೇಲೆಯೂ ಕೂಡ ವಾಗ್ದಾಳಿ ನಡೆಸಿದೆ. ಬ್ರಿಟಿಷ ಸರಕಾರ ಈ ಸಂಘಟನೆಗಳ ಜೊತೆಗಿನ ಸಂಬಂಧ ಕಡೆದು ಕೊಳ್ಳಬೇಕೆಂದು ಈ ವರದಿಯಲ್ಲಿ ಹೇಳಿದೆ. ಈ ವರದಿಯಲ್ಲಿನ ಎಲ್ಲಾ ೩೪ ಶಿಫಾರಸುಗಳನ್ನು ಬ್ರಿಟಿಷಿ ಸರಕಾರ ಸ್ವೀಕರಿಸಿದೆ.
ಕಾಶ್ಮೀರದ ಬಗ್ಗೆ ನೀಡುವ ಹೇಳಿಕೆಯಿಂದ ಬ್ರಿಟನ್ ನಲ್ಲಿನ ಹಿಂದೂಗಳ ಸುರಕ್ಷತೆಗೆ ಅಪಾಯ !
ಬ್ರಿಟನ್ ನಲ್ಲಿ ಶ್ರದ್ಧಾಸ್ಥಳಗಳ ಮೇಲೆ ಅವಮಾನದಿಂದಾಗಿ ನಡೆಯುವ ದಾಳಿಯ ಬಗ್ಗೆ ಕೂಡ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಕಾಶ್ಮೀರದ ಬಗ್ಗೆ ನೀಡುವ ಹೇಳಿಕೆಯಿಂದ ಹಿಂದೂಗಳ ಸುರಕ್ಷತೆಗೆ ಅಪಾಯ ನಿರ್ಮಾಣವಾಗಿದೆ ಹಾಗೂ ಅವರ ವಿರುದ್ಧ ಹಿಂಸಾಚಾರ ಹೆಚ್ಚುತ್ತಿದೆ. ಶ್ರದ್ಧಾ ಸ್ಥಾನಗಳ ಅವಮಾನದ ಬಗ್ಗೆ ಜನರನ್ನು ಪ್ರಚೋದಿಸುವ ಮೌಲ್ವಿಗಳು ಬ್ರಿಟನಿನಲ್ಲಿ ಭಾರತ ದ್ವೇಷಪಸರಿಸುವುದರಲ್ಲಿ ಕೈವಾಡವಿರುತ್ತದೆ. ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ಸಹಭಾಗಿಯಾಗುವವರೇ ಬ್ರಿಟನ್ ನಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಅದೇ ಜನರು ಸಹಭಾಗಿ ಆಗುತ್ತಾರೆ, ಈಗ ಪರಿಶೀಲನ ವರದಿಯಲ್ಲಿ ನೋಂದಾಯಿಸಲಾಗಿದೆ.
ಖಲಿಸ್ತಾನಿ ಭಯೋತ್ಪಾದನೆ, ಇದು ಬ್ರಿಟಿಷ ಸಾಮ್ರಾಜ್ಯಕ್ಕೆ ಅಪಾಯ !
ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಖಲಿಸ್ತಾನಿ ಭಯೋತ್ಪಾದನೆ ಕೂಡ ಬ್ರಿಟಿಷ ಸಾಮ್ರಾಜ್ಯಕ್ಕಾಗಿ ದೊಡ್ಡ ಅಪಾಯವಾಗಿದೆ, ಎಂದು ಈ ವರದಿಯಲ್ಲಿ ಹೇಳಿದೆ.