ಸಣ್ಣ ದೇಶಗಳಲ್ಲಿ ಹಣಕ್ಕೆ ವಿಶೇಷ ಮಹತ್ವ ಇಲ್ಲದೆ ಇರುವುದರಿಂದ ಅವರು ಸಮಾಧಾನಿ ! – ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ

೨೫ ದೇಶಗಳ ಪ್ರವಾಸ ಮಾಡಿ ಸ್ಕಾಟ್ಲ್ಯಾಂಡ್ ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ ಇವರ ನಿಷ್ಕರ್ಷ !

ಏಡಿನಬರ್ಗ್ (ಸ್ಕಾಟ್ಲ್ಯಾಂಡ್) – ಮನುಷ್ಯನ ವರ್ತನೆಯ ಅಧ್ಯಯನ ಮಾಡಿರುವ ಇಲ್ಲಿಯ ವಿಜ್ಞಾನಿ ಕ್ರಿಸ್ಟೋಫರ್ ಬಾಯಸೆ ಇವರು ‘ಮನುಷ್ಯನಿಗೆ ಯಾವ ವಿಷಯದಿಂದ ಶಾಶ್ವತ ಆನಂದವಾಗುತ್ತದೆ ?’, ಈ ಪ್ರಶ್ನೆಯ ಹುಡುಕಾಟಕ್ಕೆ ಸೈಕಲ್ ನಿಂದ ೨೫ ದೇಶಗಳಿಗೆ ೨೦ ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ. ಅದಕ್ಕಾಗಿ ಅವರು ತಮ್ಮ ನೌಕರಿ ಕೂಡ ಬಿಟ್ಟರು. ಈ ಪ್ರವಾಸದಲ್ಲಿ ಅವರು ಮುಖ್ಯವಾಗಿ ಭಾರತದ ಪಕ್ಕದಲ್ಲಿರುವ ಭೂತಾನ ದೇಶದಲ್ಲಿ ವಾಸವಾಗಿದ್ದರು. ಅಲ್ಲಿ ಅವರಿಗೆ, ಸಣ್ಣದೇಶ ‘ಜೀವನದಲ್ಲಿ ಸಮಾಧಾನ ಪಡೆಯುವುದಕ್ಕೆ ಹಣಕ್ಕೆ ವಿಶೇಷ ಮಹತ್ವ ಇಲ್ಲ’, ಎಂದು ಕಲಿಸುತ್ತಾರೆ. ಎಂಬುದು ಗಮನಕ್ಕೆ ಬಂದಿದೆ.

ಸ್ಕಾಟ್ಲ್ಯಾಂಡ್ ನಿಂದ ಬಾಯಸೆ ಇವರ ಪ್ರಯಾಣ ಆರಂಭವಾಯಿತು. ಈ ಸಮಯದಲ್ಲಿ ಅವರು ನೂರಾರು ಜನರನ್ನು ಭೇಟಿ ಮಾಡಿದರು. ಅವರ ಜೊತೆ ವಾಸವಾಗಿದ್ದರು. ‘ವಿವಿಧ ದೇಶದಲ್ಲಿನ ಬದುಕುವ ಪದ್ಧತಿಯಲ್ಲಿ ಆನಂದದ ಕಾರಣ ಅಡಗಿದೆ’, ಇದನ್ನು ತಿಳಿದುಕೊಂಡು ಅದರ ಅಧ್ಯಯನ ಮಂಡಿಸಿದರು.

೧. ಮಧ್ಯ ಅಮೇರಿಕಾದ ದೇಶ ಕೋಸ್ಟಾ ರಿಕಾ ಈ ದೇಶದಲ್ಲಿ ಬಾಯಸೆ ತಲುಪಿದ ನಂತರ, ಈ ದೇಶದಲ್ಲಿ ತನ್ನದೇ ಸೈನ್ಯ ಇಲ್ಲ ಎಂಬುದು ಗಮನಕ್ಕೆ ಬಂದಿತು. ಬಾಯಸೆ, ‘ಪ್ಯೂರ ವಿಡಾ’ ಎಂದರೆ ಸಾಮಾನ್ಯ ಜೀವನ ಶೈಲಿ ! ಇಲ್ಲಿಯ ಜನರ ಸರಾಸರಿ ವಯಸ್ಸು ೭೯.೧ ಇದೆ. ದೇಶದಲ್ಲಿ ಸೈನ್ಯ ಇಲ್ಲದಿರುವುದರಿಂದ ಹೆಚ್ಚಿನ ಖರ್ಚು ಶಿಕ್ಷಣ ಮತ್ತು ಆರೋಗ್ಯಕ್ಕೆ ಆಗುತ್ತದೆ ಎಂದು ಹೇಳಿದರು.

೨. ದಕ್ಷಿಣ ಅಮೇರಿಕಾ ದೇಶದ ಪೇರು ದ ಬಗ್ಗೆ ಬಾಯಸೆ, ಇಲ್ಲಿ ಬಡವರು ಇರಲಿ ಅಥವಾ ಶ್ರೀಮಂತರು ಅವರು ಆನಂದದಿಂದ ಇದ್ದಾರೆ. ಇಲ್ಲಿ ಕೂಡು ಕುಟುಂಬ ಪದ್ಧತಿ ಇದೆ. ಎಲ್ಲಾ ಒಟ್ಟಾಗಿ ಕೆಲಸ ಮಾಡುತ್ತಾರೆ. ಜನರಲ್ಲಿ ಪರಸ್ಪರರಲ್ಲಿ ಆತ್ಮೀಯತೆ ಇದೆ. ಇದರ ಜೊತೆಗೆ ಅವರಲ್ಲಿ ಧೈರ್ಯ ಇದೆ ಎಂದು ಹೇಳಿದರು.

೩. ಕೆನಡಾದಂತಹ ಅಭಿವೃದ್ಧಿ ದೇಶದಲ್ಲಿ ಸೈಕಲ್ ನಿಂದ ಪ್ರಯಾಣ ಮಾಡುವ ಬಾಯಸೆ ಇವರಿಗೆ, ಇಲ್ಲಿ ೨೦೦೦ ರಿಂದ ‘ಕೆನಡಿಯನ್ ಇಂಡೆಕ್ಸ್ ಆಫ್ ವಿಲ್ ಬೀಯಿಂಗ್ (ಜನರ ಕಲ್ಯಾಣಕ್ಕಾಗಿ ಅಳವಡಿಸಿರುವ ಪದ್ಧತಿ) ಪ್ರಾರಂಭಿಸಿದ್ದಾರೆ. ಇದರಲ್ಲಿ ವಿಕಾಸದ ಮಾನದಂಡ ನಿಶ್ಚಯಿಸಲಾಗಿದ್ದು ಇದರಲ್ಲಿ ಸಾಮಾಜಿಕ ಜೀವನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ, ಶಿಕ್ಷಣ, ಪರಿಸರ, ಆರೋಗ್ಯ ಮುಂತಾದರ ಸಮಾವೇಶವಿದೆ.

ಕ್ರಿಸ್ಟೋಫರ್ ಬಾಯಸೆ ಇವರ ವೈಶಿಷ್ಟ್ಯ ಪೂರ್ಣ ಅನುಭವದ ವಿಡಿಯೋ ನೋಡಲು ಮುಂದಿನ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಕೆಳಗಿನ QR code ಸ್ಕ್ಯಾನ್ ಮಾಡಿ. https :/www. You tube.com/watch ? v=Zllm 9 -P4Uwg

ಭೂತಾನ ‘ಜನರ ಆನಂದ’ಕ್ಕೆ ವಿಕಾಸದ ಮಾನದಂಡ ನಿಶ್ಚಯಿಸುವ ಮಂತ್ರ ಜಗತ್ತಿಗೆ ನೀಡಿದೆ ! – ಬಾಯಸೆ

ವಿಜ್ಞಾನಿ ಬಾಯಸೆ ಇವರು ಕೊನೆಗೆ ಭೂತಾನಗೆ ತಲುಪಿದರು. ಈ ದೇಶದಲ್ಲಿ ವಿಕಾಸದ ಮಾನದಂಡ ‘ಜಿಡಿಪಿ’ ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ಇಲ್ಲ ಜಿ.ಎನ್ಎಚ್. ಎಂದರೆ ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಎಂದರೆ ಆನಂದಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. ಭೂತಾನಿನ ಜನರ ಆನಂದಕ್ಕೆ ವಿಕಾಸದ ಮಾನದಂಡ ನಿಶ್ಚಯಿಸುವ ಮಂತ್ರ ಜಗತ್ತಿಗೆ ನೀಡಿದ್ದಾರೆ ಎಂದು ಬಾಯಸೆ ಹೇಳಿದರು. ಇಲ್ಲಿಯ ಜನರು ಸಂಸ್ಕೃತಿಯ ರಕ್ಷಣೆ ಮಾಡುವುದು, ಸಮುದಾಯದ ಜೊತೆಗೆ ಬದುಕುವುದು ಮತ್ತು ಪರಿಸರದ ರಕ್ಷಣೆ ಮಾಡುವುದು ಇದರಲ್ಲಿ ನಂಬಿಕೆ ಇದೆ. ಆದ್ದರಿಂದ ಜನರು ಆನಂದಿ ಮತ್ತು ಸಮಾಧಾನವಾಗಿ ಇದ್ದಾರೆ.

ಸಂಪಾದಕೀಯ ನಿಲುವು

ಜಗತ್ತಿಗೆ ಶಾಶ್ವತ ಆನಂದದ ಮಾರ್ಗವನ್ನು ಹಿಂದೂ ಧರ್ಮ ನೀಡಿದೆ; ಆದರೆ ಭಾರತದಲ್ಲಿನ ಹಿಂದೂಗಳ ಕರ್ಮಧಾರಿದ್ರದಿಂದ ಇಂದು ಕೇವಲ ವ್ಯಾವಹಾರಿಕ ಯಶಸ್ಸಿನ ಹಿಂದೆ ಓಡುತ್ತಿದ್ದಾರೆ ಮತ್ತು ದುಃಖಿತರಾಗುತ್ತಿದ್ದಾರೆ. ಈ ಎಲ್ಲದಕ್ಕೂ ಒಂದೇ ಉಪಾಯ ಮತ್ತು ಅದು ಎಂದರೆ ಹಿಂದೂಗಳು ಧರ್ಮಶಿಕ್ಷಣ ಪಡೆದು ಸಾಧನೆ ಮಾಡಬೇಕು ಇದನ್ನು ತಿಳಿದುಕೊಳ್ಳಿ !