ರಷ್ಯಾವನ್ನು ದಿವಾಳಿ ಎಬ್ಬಿಸುವುದು ಇದು ಅಮೇರಿಕಾದ ಉದ್ದೇಶ ! – ಡಾ. ಶೈಲೇಂದ್ರ ದೇವಳಾಣಕರ, ವಿದೇಶಾಂಗ ನೀತಿ ವಿಶ್ಲೇಷಕರು

ಡಾ. ಶೈಲೇಂದ್ರ ದೇವಳಾಣಕರ್

ಎಲ್ಲಿಯವರೆಗೆ ರಷ್ಯಾ ಸಂಪೂರ್ಣ ಆರ್ಥಿಕವಾಗಿ ನಾಶವಾಗುವುದಿಲ್ಲ ಅಲ್ಲಿಯವರೆಗೆ ರಷ್ಯಾ ಮತ್ತು ಯುಕ್ರೆನ್ ಇವರಲ್ಲಿನ ಯುದ್ಧ ಮುಂದುವರಿಯುವುದು. ಈ ಯುದ್ಧ ರಷ್ಯಾ ಮತ್ತು ಯುಕ್ರೇನ್ ಇವರಿಗೆ ಸೀಮಿತವಾಗಿ ಉಳಿದಿಲ್ಲ. ಇವರಿಬ್ಬರು ಯುದ್ಧದಲ್ಲಿ ಪ್ರತ್ಯಕ್ಷ ಸಹಭಾಗಿದ್ದರೂ, ರಷ್ಯಾವು ಯುಕ್ರೇನ್ ಜೊತೆ ಅಮೇರಿಕಾ ಪಶ್ಚಿಮ ಯುರೋಪಿಯನ್ ದೇಶ ಇವರ ಆರ್ಥಿಕ ಶಕ್ತಿಯ ಜೊತೆಗೆ ಹೋರಾಡುತ್ತಿದೆ. ಇಲ್ಲಿಯವರೆಗೆ  ಅಮೇರಿಕಾ ಯುಕ್ರೇನಿಗೆ ೨೦೦ ಕೋಟಿಗಿಂತಲೂ ಹೆಚ್ಚಿನ ಆರ್ಥಿಕ ಮತ್ತು ಶಸ್ತ್ರಾಸ್ತ್ರದ ಸಹಾಯ ಮಾಡಿದೆ. ಆದ್ದರಿಂದ ಇದರಲ್ಲಿ ಅಮೇರಿಕಾದ ಅತ್ಯಂತ ದೊಡ್ಡ ಮತ್ತು ಎಲ್ಲರನ್ನು ಪೋಣಿಸುವ ಉದ್ದೇಶ ಕಾಣುತ್ತಿದೆ. ಎಲ್ಲಿಯವರೆಗೆ ರಷ್ಯಾ ಸಂಪೂರ್ಣವಾಗಿ ಆರ್ಥಿಕ ದೃಷ್ಟಿಯಿಂದ ಮುಳುಗುವುದಿಲ್ಲ, ಅಲ್ಲಿಯವರೆಗೆ ಈ ಯುದ್ಧ ಮುಂದುವರಿಸುವುದು ಅದರಉದ್ದೇಶವಾಗಿದೆ.