‘ಸಂತರು ದೇವರಿಗೆ ನಮಸ್ಕಾರ ಮಾಡಿದಾಗ ಅವರ ಮೇಲೆ ಮತ್ತು ದೇವತೆಯ ಮೂರ್ತಿಯ ಮೇಲಾಗುವ ಪರಿಣಾಮದ ವೈಶಿಷ್ಟ್ಯಪೂರ್ಣ ಸಂಶೋಧನೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

(ಸದ್ಗುರು) ಡಾ. ಮುಕುಲ ಗಾಡಗೀಳ

‘ಸಾಮಾನ್ಯ ವ್ಯಕ್ತಿಯು ದೇವರಿಗೆ ನಮಸ್ಕಾರ ಮಾಡಿದರೆ ಅವನಿಗೆ ಚೈತನ್ಯ ಸಿಗುತ್ತದೆ. ಸಾಮಾನ್ಯ ವ್ಯಕ್ತಿಯ ತುಲನೆಯಲ್ಲಿ ಭಾವವಿರುವ ಸಾಧಕನು ದೇವರಿಗೆ ನಮಸ್ಕಾರ ಮಾಡಿದರೆ ಅವನಿಗೆ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಸಿಗುತ್ತದೆ. ಸಂತರೆಂದರೆ ಈಶ್ವರನ ಸಗುಣ ರೂಪ ! ‘ಸಂತರು ದೇವರಿಗೆ ನಮಸ್ಕಾರ ಮಾಡಿದ ಮೇಲೆ ಅವರ ಮೇಲೆ ಮತ್ತು ದೇವತೆಯ ಮೂರ್ತಿಯ ಮೇಲೆ ಏನು ಪರಿಣಾಮವಾಗುತ್ತದೆ ?, ಎಂಬುದರ ಅಧ್ಯಯನಕ್ಕಾಗಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದಿಂದ ಒಂದು ಪರೀಕ್ಷಣೆಯನ್ನು ಮಾಡಿತು. ಈ ಪರೀಕ್ಷಣೆ ಯಲ್ಲಿನ ನಿರೀಕ್ಷಣೆಗಳ ವಿವೇಚನೆಯನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪ್ರಯೋಗದಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳಕಾಕಾ ಇವರು ದೇವತೆಗೆ ನಮಸ್ಕಾರ ಮಾಡುವ ಮೊದಲು ಮತ್ತು ಮಾಡಿದ ನಂತರ ಅವರ ಹಾಗೂ ದೇವತೆಯ ಮೂರ್ತಿಯ ಛಾಯಾಚಿತ್ರಗಳನ್ನು ತೆಗೆದು ‘ಯು.ಎ.ಎಸ್. ಉಪಕರಣದಿಂದ ಅವುಗಳ ಪರೀಕ್ಷಣೆಯನ್ನು ಮಾಡಲಾಯಿತು.

೧ ಅ. ಸದ್ಗುರು ಗಾಡಗೀಳಕಾಕಾ ಇವರು ದೇವತೆಗೆ ನಮಸ್ಕಾರ ಮಾಡಿದಾಗ ಅವರ ಮೇಲೆ ಮತ್ತು ದೇವತೆಯ ಮೂರ್ತಿಯ ಮೇಲಾದ ಪರಿಣಾಮ : ಸದ್ಗುರು ಗಾಡಗೀಳಕಾಕಾ ಇವರಲ್ಲಿ ಮೊದಲೇ (ನಮಸ್ಕಾರ ಮಾಡುವ ಮೊದಲು) ಸ್ವಲ್ಪ ಮಟ್ಟಿಗೆ ನಕಾರಾತ್ಮಕ ಸ್ಪಂದನಗಳು ಮತ್ತು ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳಿದ್ದವು. ದೇವತೆಯ ಮೂರ್ತಿಯಲ್ಲಿ ಮೊದಲು ನಕಾರಾತ್ಮಕ ಊರ್ಜೆ ಇರಲಿಲ್ಲ, ಸಕಾರಾತ್ಮಕ ಊರ್ಜೆಯಿತ್ತು. ಸದ್ಗುರು ಗಾಡಗೀಳಕಾಕಾ ಇವರು ದೇವತೆಯ ಮೂರ್ತಿಗೆ ನಮಸ್ಕಾರ ಮಾಡಿದ ನಂತರ ಅವರಲ್ಲಿನ ನಕಾರಾತ್ಮಕ ಸ್ಪಂದನಗಳು ಇಲ್ಲವಾದವು; ಆದರೆ ದೇವತೆಯ ಮೂರ್ತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದವು ಮತ್ತು ಇಬ್ಬರಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೨. ಪರೀಕ್ಷಣೆಯಲ್ಲಿ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಸದ್ಗುರು ಡಾ. ಮುಕುಲ ಗಾಡಗೀಳಕಾಕಾ ಇವರು ದೇವತೆಗೆ ಮಾಡಿದ ಭಕ್ತಿಪೂರ್ಣ ನಮಸ್ಕಾರದಿಂದ ಸಾಕ್ಷಾತ್ ದೇವತೆಯು ಅವರ ರಕ್ಷಣೆಗಾಗಿ ಕಾರ್ಯನಿರತವಾಗುವುದು : ಸದ್ಗುರು ಗಾಡಗೀಳಕಾಕಾ ಇವರು ದೇವತೆಗೆ ನಮಸ್ಕಾರ ಮಾಡಿದ ನಂತರ ಅವರಿಗೆ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಸಿಕ್ಕಿತು. ಸದ್ಗುರು ಗಾಡಗೀಳಕಾಕಾ ಇವರು ದೇವತೆಯ ಮೂರ್ತಿಗೆ ನಮಸ್ಕಾರ ಮಾಡಿದ ನಂತರ ಅವರ ಸುತ್ತಲಿನ ನಕಾರಾತ್ಮಕ ಸ್ಪಂದನಗಳು ಇಲ್ಲವಾದವು; ಆದರೆ ದೇವತೆಯ ಮೂರ್ತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದವು. ಇದು ವೈಶಿಷ್ಟ್ಯಪೂರ್ಣವಾಗಿದೆ. ಇದರ ಕಾರಣವೆಂದರೆ, ಸದ್ಗುರು ಗಾಡಗೀಳಕಾಕಾರವರ ಭಕ್ತಿಯಿಂದ ಸಾಕ್ಷಾತ್ ದೇವತೆಯೇ ಅವರ ರಕ್ಷಣೆಗಾಗಿ ಧಾವಿಸಿ ಬಂದಳು. ದೇವತೆ ತನ್ನ ಭಕ್ತರಾಗಿರುವ ಸದ್ಗುರು ಗಾಡಗೀಳಕಾಕಾ ಇವರ ಸುತ್ತಲಿನ ತೊಂದರೆದಾಯಕ ಸ್ಪಂದನಗಳನ್ನು ತನ್ನ ಕಡೆಗೆ ಸೆಳೆದುಕೊಂಡು ನಾಶ ಮಾಡಲು ಪ್ರಾರಂಭಿಸಿದಳು. ಇದರ ತಾತ್ಕಾಲಿಕ ಪರಿಣಾಮವೆಂದು ದೇವತೆಯ ಮೂರ್ತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದವು. (ಈ ಛಾಯಾಚಿತ್ರಗಳ ‘ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡುವ ಸಾಧಕ ಶ್ರೀ. ಆಶಿಷ ಸಾವಂತ ಇವರಿಗೂ ಹೀಗೆಯೇ ಅರಿವಾಯಿತು.)

೨ ಆ. ಸಾಧಕರ ಆಧ್ಯಾತ್ಮಿಕ ತೊಂದರೆಗಳು ದೂರವಾಗಿ ಅವರ ಸಾಧನೆ ಸುಲಭವಾಗಿ ಆಗಬೇಕೆಂದು ನಿರಂತರವಾಗಿ ಶ್ರಮಪಡುವ ಸದ್ಗುರು ಡಾ. ಮುಕುಲ ಗಾಡಗೀಳ ! : ಸದ್ಗುರು ಗಾಡಗೀಳಕಾಕಾ ಇವರು ಸಾಧಕರ ಆಧ್ಯಾತ್ಮಿಕ ತೊಂದರೆಗಳು ದೂರವಾಗಬೇಕೆಂದು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ. ಇದು ಒಂದು ರೀತಿಯಲ್ಲಿ ಕೆಟ್ಟ ಶಕ್ತಿಗಳೊಂದಿಗೆ ನಡೆದಿರುವ ಅವರ ಸೂಕ್ಷ್ಮ ಯುದ್ಧವೇ ಆಗಿದೆ. ಈ ಸೂಕ್ಷ್ಮ ಯುದ್ಧದ ತಾತ್ಕಾಲಿಕ ಪರಿಣಾಮವೆಂದು ಕೆಲವೊಮ್ಮೆ ಅವರ ಸುತ್ತಲೂ ಕೆಲವು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳ ಆವರಣ ಬರುತ್ತದೆ. ಅವರು ದೇವತೆಗೆ ಮಾಡಿದ ಭಕ್ತಿಪೂರ್ಣ ನಮಸ್ಕಾರದಿಂದ ದೇವತೆ ಸ್ವತಃ ಕಾರ್ಯನಿರತಳಾದಳು ಮತ್ತು ಅವಳು ಸಂತರ ರಕ್ಷಣೆಯನ್ನು ಮಾಡಿದಳು. ‘ಸದ್ಗುರು ಗಾಡಗೀಳಕಾಕಾ ಇವರಂತಹ ಸಮಷ್ಟಿ-ಕಲ್ಯಾಣಕ್ಕಾಗಿ ಕಾರ್ಯವನ್ನು ಮಾಡುವ ಮತ್ತು ಭಕ್ತರಾಗಿರುವ ಸಂತರ ಮೇಲೆ ಕೃಪೆ ಮಾಡಲು ದೇವತೆಗಳು ಯಾವಾಗಲೂ ತತ್ಪರರಾಗಿರುತ್ತಾರೆ, ಇದೇ ಈ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಸಾಧಕರ ಆಧ್ಯಾತ್ಮಿಕತೊಂದರೆ ದೂರವಾಗಿ ಅವರ ಸಾಧನೆಯು ಸುಲಭವಾಗ ಬೇಕೆಂದು ನಿರಂತರವಾಗಿ ಶ್ರಮಪಡುವ ಸದ್ಗುರು ಗಾಡಗೀಳಕಾಕಾ ಇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು ! ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೧.೧.೨೦೨೩)

ವಿ-ಅಂಚೆ : [email protected]

ದೇವತೆಗೆ ಭಕ್ತಿಪೂರ್ಣ ನಮಸ್ಕಾರ ಮಾಡುತ್ತಿರುವ ಸದ್ಗುರು ಡಾ. ಮುಕುಲ ಗಾಡಗೀಳಕಾಕಾ

೩. ದೇವತೆಯ ಮೂರ್ತಿಗೆ ನಮಸ್ಕಾರ ಮಾಡಿದ ಮೇಲೆ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ತಮ್ಮಲ್ಲಿ ಮತ್ತು ದೇವತೆಯ ಮೂರ್ತಿಯಲ್ಲಿ ಅರಿವಾದ ಬದಲಾವಣೆಗಳು

ಟಿಪ್ಪಣಿ ೧ – ದೇವತೆಯ ಮೂರ್ತಿಯಲ್ಲಿ ಸಿಂಹಾಸನದ ಮೇಲೆ ಶ್ರೀರಾಮ ಮತ್ತು ಸೀತಾಮಾತೆ ಕುಳಿತಿದ್ದಾರೆ. ಶ್ರೀರಾಮನ ಸಹೋದರರಾದ ಭರತ ಮತ್ತು ಶತ್ರುಘ್ನ ಇವರು ಅವರಿಗೆ ಗಾಳಿಯನ್ನು ಹಾಕುತ್ತಿದ್ದಾರೆ. ಹಾಗೆಯೇ ಶ್ರೀರಾಮ ಮತ್ತು ಸೀತಾ ಇವರ ಚರಣಗಳಲ್ಲಿ ಮಾರುತಿ ಮತ್ತು ಶ್ರೀರಾಮನ ಇನ್ನೊಬ್ಬ ಸಹೋದರ ಲಕ್ಷ್ಮಣ ಇವರಿಬ್ಬರು ಕುಳಿತುಕೊಂಡಿದ್ದಾರೆ. ದೇವತೆಯ ಈ ಮೂರ್ತಿಯ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ಆ ಮೂರ್ತಿಯಲ್ಲಿನ ಕೇವಲ ಶ್ರೀರಾಮನ ಕಣ್ಣುಗಳ ಮೇಲೆಯೇ ಬಂದಿರುವುದು ಅರಿವಾಯಿತು. ಇದರ ಕಾರಣವೆಂದರೆ ನಾನು ದೇವತೆಯ ಮೂರ್ತಿಗೆ ನಮಸ್ಕಾರ ಮಾಡುವಾಗ ಆ ಮೂರ್ತಿಯಲ್ಲಿನ ಶ್ರೀರಾಮನನ್ನೇ ಹೆಚ್ಚಾಗಿ ನೋಡುತ್ತಿದ್ದೆನು.

ಟಿಪ್ಪಣಿ ೨ – ದೇವತೆಯ ಮೂರ್ತಿಯ ಮೇಲೆ ಸ್ವಲ್ಪ ಆವರಣ ಬಂದಿದ್ದರೂ, ಮೂರ್ತಿ ಸ್ಪಷ್ಟ ಮತ್ತು ಪ್ರಕಾಶಮಾನವಾಗಿ ಕಾಣಿಸಿತು. ಇದರ ಕಾರಣವೆಂದರೆ ನಾನು ದೇವತೆಗೆ ನಮಸ್ಕಾರ ಮಾಡಿದ್ದರಿಂದ ನನ್ನಲ್ಲಿನ ಭಾವದಿಂದ ‘ಬಿಂಬ-ಪ್ರತಿಬಿಂಬ ಈ ನ್ಯಾಯದಿಂದ ದೇವತೆಯಲ್ಲಿಯೂ ಭಾವ ನಿರ್ಮಾಣವಾಯಿತು. ಮೂರ್ತಿಯಲ್ಲಿನ ಪ್ರತಿಯೊಂದು ದೇವತೆಯ ಕಣ್ಣುಗಳು ಮೊದಲು ಸಾಕ್ಷಿಭಾವದಲ್ಲಿದ್ದವು, ಅವುಗಳಲ್ಲಿ ಭಾವ ಪ್ರಕಟವಾದುದರಿಂದ ನೀರು ತುಂಬಿದ ಹಾಗೆ ಕಾಣಿಸತೊಡಗಿದವು. ಈ ಬದಲಾವಣೆಯು ಆ ಮೂರ್ತಿಯಲ್ಲಿನ ಎಲ್ಲ ದೇವತೆಗಳಲ್ಲಿ ಕಾಣಿಸಿತು.

೩ ಅ. ಮೇಲಿನ ಕೋಷ್ಟಕದಿಂದ ಗಮನಕ್ಕೆ ಬಂದ ಅಂಶಗಳು

೧. ನಾನು ದೇವತೆಯ ಮೂರ್ತಿಗೆ ನಮಸ್ಕಾರ ಮಾಡಿದ್ದರಿಂದ ನನ್ನಲ್ಲಿನ ಭಾವದ ಸ್ಪಂದನಗಳು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾದವು.

೨. ನನ್ನಂತೆಯೇ ದೇವತೆಯ ಮೂರ್ತಿಯಲ್ಲಿಯೂ ಭಾವದ ಸ್ಪಂದನಗಳು ಹೆಚ್ಚಾದವು, ಹಾಗೆಯೇ ಆ ಮೂರ್ತಿಯಲ್ಲಿನ ಚೈತನ್ಯದ ಸ್ಪಂದನಗಳೂ ಹೆಚ್ಚಾದವು.

೩. ನಾನು ದೇವತೆಯ ಮೂರ್ತಿಗೆ ನಮಸ್ಕಾರ ಮಾಡಿದ್ದರಿಂದ ನನ್ನಲ್ಲಿನ ತೊಂದರೆದಾಯಕ ಶಕ್ತಿ ನಾಶವಾಯಿತು. ‘ಯೂ.ಎ.ಎಸ್. ಉಪಕರಣದಿಂದ ಮಾಡಿದ ಪರೀಕ್ಷಣೆ ಯಲ್ಲಿಯೂ ನನ್ನ ಮೇಲಿನ ತೊಂದರೆದಾಯಕ ಸ್ಪಂದನಗಳು ಸಂಪೂರ್ಣ ದೂರವಾಗಿರುವುದು ಗಮನಕ್ಕೆ ಬಂದಿತು. ಹಾಗೆಯೇ ನಾನು ನಮಸ್ಕಾರ ಮಾಡಿದ ನಂತರ ದೇವತೆಯ ಮೂರ್ತಿಯು ನನ್ನಲ್ಲಿನ ತೊಂದರೆದಾಯಕ ಸ್ಪಂದನಗಳನ್ನು ಎಳೆದುಕೊಂಡಿತು. ಆದ್ದರಿಂದ ದೇವತೆಯ ಮೂರ್ತಿಯಲ್ಲಿ ತೊಂದರೆದಾಯಕ ಸ್ಪಂದನಗಳು ಬಂದವು. ಇದು ಸಹ ‘ಯು.ಎ.ಎಸ್. ಉಪಕರಣದಿಂದ ಮಾಡಿದ ಪರೀಕ್ಷಣೆಯಲ್ಲಿ ಗಮನಕ್ಕೆ ಬಂದಿತು.

೪. ನಾನು ದೇವತೆಯ ಮೂರ್ತಿಗೆ ನಮಸ್ಕಾರ ಮಾಡಿದ ನಂತರ ನನ್ನ ಮುಖದ ಮೇಲೆ ಒಳ್ಳೆಯ ಬದಲಾವಣೆ ಆಯಿತು ಮತ್ತು ಅದು ಸ್ಪಷ್ಟ, ಆನಂದಿ ಹಾಗೂ ಪ್ರಕಾಶಮಾನವಾಗಿ ಕಾಣಿಸತೊಡಗಿತು. ಹಾಗೆಯೇ ನನ್ನ ಕಣ್ಣುಗಳಲ್ಲಿ ನೀರು ತುಂಬಿರುವುದರ ಹಾಗೆ ಕಾಣಿಸತೊಡಗಿದವು. ಅದೇ ರೀತಿ ದೇವತೆಯ ಮೂರ್ತಿಯಲ್ಲಿಯೂ ಒಳ್ಳೆಯ ಬದಲಾವಣೆಯಾಗಿ ಅದು ಸಹ ಸ್ಪಷ್ಟ ಮತ್ತು ಪ್ರಕಾಶಮಾನವಾಗಿ ಕಾಣಿಸತೊಡಗಿತು. ಹಾಗೆಯೇ ದೇವತೆಗಳ ಮೂರ್ತಿಯಲ್ಲಿನ ಎಲ್ಲ ದೇವತೆಗಳ ಕಣ್ಣುಗಳು ನೀರು ತುಂಬಿದಂತೆ ಕಾಣಿಸತೊಡಗದವು. ನನ್ನಲ್ಲಿ ಮತ್ತು ದೇವತೆಯ ಮೂರ್ತಿಯಲ್ಲಿನ ಈ ಒಳ್ಳೆಯ ಬದಲಾವಣೆಯು ‘ಯು.ಎ.ಎಸ್. ಉಪಕರಣದ ಮೂಲಕ ಮಾಡಿದ ಪರೀಕ್ಷಣೆಯಲ್ಲಿ ನಮ್ಮ ಸಕಾರಾತ್ಮಕ ಊರ್ಜೆಯಲ್ಲಿ ಆದ ಹೆಚ್ಚಳದಿಂದಲೂ ಸ್ಪಷ್ಟವಾಗುತ್ತದೆ.

೫. ಸಾರಾಂಶ

‘ದೇವತೆಗೆ ಭಕ್ತಿಭಾವದಿಂದ ನಮಸ್ಕಾರ ಮಾಡಿದ ನಂತರ ಸೂಕ್ಷ್ಮದಿಂದ ಏನು ಪರಿಣಾಮವಾಗುತ್ತದೆ ?, ಎಂಬುದು ಈ ಪ್ರಯೋಗದಿಂದ ಸ್ಪಷ್ಟವಾಯಿತು. ಹಾಗೆಯೇ ‘ಭಕ್ತಿಭಾವದಿಂದ ನಮಸ್ಕಾರ ಮಾಡಿದರೆ ದೇವತೆಯ ಕೃಪಾದೃಷ್ಟಿಯು ನಮ್ಮ ಮೇಲೆ ಹೇಗೆ ಆಗುತ್ತದೆ ?, ಎಂಬುದು ಸಹ ಈ ಪ್ರಯೋಗದಿಂದ ಗಮನಕ್ಕೆ ಬಂದಿತು. ದೇವರಿಗೆ ಭಕ್ತಿಭಾವದಿಂದ ನಮಸ್ಕಾರ ಮಾಡುವುದರ ಮಹತ್ವವೇನಿದೆ ಎಂಬುದು ಇದರಿಂದ ತಿಳಿಯಿತು. ‘ದೇವರು ಇದ್ದಾರೆಯೇ ?,

ಎಂಬ ಬುದ್ಧಿಪ್ರಾಮಾಣ್ಯವಾದಿಗಳ ಮತ್ತು ನಾಸ್ತಿಕರ ಪ್ರಶ್ನೆಗೆ ಈ ಪ್ರಯೋಗದಿಂದ ಉತ್ತರ ಸಿಗುವುದು. ಈಶ್ವರನು ಸೂಕ್ಷ್ಮಾತೀಸೂಕ್ಷ್ಮ ಆಗಿದ್ದಾನೆ ಮತ್ತು ಅವನವರೆಗೆ ನಮಸ್ಕಾರದ ಸ್ಪಂದನಗಳು ಸೂಕ್ಷ್ಮದಲ್ಲಿ ತಲುಪುತ್ತವೆ. ಆದ್ದರಿಂದ ದೇವರು ಕಲ್ಲಿನಲ್ಲಿರಲಿ, ಚಿತ್ರದಲ್ಲಿರಲಿ ಅಥವಾ ಕೇವಲ ನಮ್ಮ ಕಣ್ಣುಗಳೆದುರು ತಂದರೂ, ಅವನಿಗೆ ಮನಃಪೂರ್ವಕವಾಗಿ ಮಾಡಿದ ಪ್ರಾರ್ಥನೆಯು ಅವನಿಗೆ ತಲುಪುತ್ತದೆ, ಎಂಬುದು ಈ ಪ್ರಯೋಗದಿಂದ ಸಿದ್ಧವಾಗುತ್ತದೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಹೆಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೪.೧.೨೦೨೩)

* ಸೂಕ್ಷ್ಮ :  ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.