೧. ಅನ್ನನಳಿಕೆಯಲ್ಲಿ ಒಳಬದಿಗೆ ಗಾಯವಾದುದರಿಂದ ಆಹಾರವನ್ನು ನುಂಗುವಾಗ ತೊಂದರೆಯಾಗುವುದು, ಅಲ್ಲಿ ಗುಳ್ಳೆಯಾಗಿ ಗಾಯವಾಗಿದೆ ಎಂದು ಆಧುನಿಕ ವೈದ್ಯರು ಹೇಳುವುದು
‘ಸುಮಾರು ೧ ತಿಂಗಳಿನಿಂದ ನನಗೆ ಆಹಾರವನ್ನು ನುಂಗುವಾಗ ತೊಂದರೆಯಾಗುತ್ತಿತ್ತು. ಅನ್ನ ಅಥವಾ ಪಲ್ಯ ಚೆನ್ನಾಗಿ ಬೆಂದಿದ್ದರೂ ನುಂಗುವಾಗ ಬಿಕ್ಕಳಿಕೆ ಅಥವಾ ಕೆಮ್ಮು ಬರುತ್ತಿತ್ತು. ಕೆಲವೊಮ್ಮೆ ಕೂಡಲೇ ವಾಂತಿಯೂ ಆಗುತ್ತಿತ್ತು. ಮಹಾ ಪ್ರಸಾದ ಸೇವಿಸುವಾಗ ೨-೩ ಸಲ ಹೀಗೇ ಆಯಿತು; ಆದುದರಿಂದ ‘ವೈದ್ಯ ಸಾಧಕರು ಒಂದು ಸಲ ಆಧುನಿಕ ವೈದ್ಯರಿಗೆ ತೋರಿಸಿ’, ಎಂದು ನನಗೆ ಹೇಳಿದರು. ಶಸ್ತ್ರಚಿಕಿತ್ಸಕರು ನನ್ನ ಅನ್ನನಳಿಕೆಯ ಪರೀಕ್ಷೆ ಮಾಡಿ ಅನ್ನನಳಿಕೆಯಲ್ಲಿ ಒಳಬದಿಗೆ ಸ್ವಲ್ಪ ಗಾಯವಾಗಿದೆ’, ಎಂದು ಹೇಳಿ ಅದನ್ನು ಪರೀಕ್ಷಿಸಲು ಒಂದು ದಿನ ಆಸ್ಪತ್ರೆಗೆ ಬೆಳಗ್ಗೆ ೯ ಗಂಟೆಗೆ ಖಾಲಿ ಹೊಟ್ಟೆಯಲ್ಲಿ ಕೇವಲ ಎಳನೀರು ಕುಡಿದು ಬರಲು ಹೇಳಿದರು. ಅವರು ಪರೀಕ್ಷೆ ಮಾಡಿ ಕೆಲವು ಔಷಧಿಗಳನ್ನು ಬರೆದುಕೊಟ್ಟರು. ೧೫ ದಿನಗಳ ನಂತರ ಬೆಳಗ್ಗೆ ೯ ಗಂಟೆಗೆ ಇದೇ ರೀತಿ ಬರಲು ಹೇಳಿದರು.
೨. ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಉಪಾಯ ಮತ್ತು ಪ್ರಾರ್ಥನೆಯನ್ನು ಮಾಡಿದ ನಂತರ ಬಂದ ಅನುಭೂತಿ
೨ ಅ. ಸದ್ಗುರು ಡಾ. ಮುಕುಲ ಗಾಡಗೀಳ ಇವರು ತೊಂದರೆ ನಿವಾರಣೆಗಾಗಿ ಹೇಳಿದ ಜಪವನ್ನು ಮಾಡಿ ಪ್ರಾರ್ಥನೆ ಮಾಡುವುದು :
ಒಂದು ದಿನ ನಾನು ಸ್ನಾನ ಮಾಡಿ ದೇವರ ಆರತಿ ಮಾಡಿದೆನು. ಎಳನೀರನ್ನು ದೇವರ ಮುಂದೆ ಇಟ್ಟು ನಾನು ಸದ್ಗುರು ಮುಕುಲ ಗಾಡಗೀಳಕಾಕಾ ಇವರು ನನಗೆ ಈ ತೊಂದರೆ ನಿವಾರಣೆಗಾಗಿ ನೀಡಿದ ಜಪವನ್ನು ಒಂದು ಗಂಟೆ ಮಾಡಿದೆನು. ಅನಂತರ ನಾನು ಶ್ರೀಕೃಷ್ಣನ ಚಿತ್ರ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಛಾಯಾಚಿತ್ರಗಳ ಎದುರು ನಿಂತು ಮುಂದಿನ ಪ್ರಾರ್ಥನೆಯನ್ನು ಮಾಡುತ್ತಾ ಸ್ವಲ್ಪ ಸ್ವಲ್ಪ ಎಳನೀರನ್ನು ಕುಡಿದೆನು. ‘ಹೇ ಶ್ರೀಕೃಷ್ಣ, ಹೇ ಗುರುದೇವಾ, ಇದು ನಿಮ್ಮ ದಿವ್ಯ ಚರಣಗಳ ಪವಿತ್ರ ಗಂಗಾಜಲವಾಗಿದೆ’, ಎಂಬ ಭಾವವನ್ನಿಟ್ಟು ನಾನು ಈ ನೀರನ್ನು ಕುಡಿಯುತ್ತಿದ್ದೇನೆ. ಈ ತೀರ್ಥವು ನನ್ನ ಅನ್ನನಳಿಕೆಯ ಮೂಲಕ ಒಳಗೆ ಹೋಗುವಾಗ ಅನ್ನನಳಿಕೆಯ ಒಳಗಿನ ಭಾಗದಲ್ಲಿ ನನಗಾದ ಗಾಯವನ್ನು ನಾಶ ಮಾಡುತ್ತಲೇ ಕೆಳಗೆ ಹೋಗಲಿ. ಇಂದು ಆಧುನಿಕ ವೈದ್ಯರು ಪರೀಕ್ಷೆ ಮಾಡುವಾಗ ಗಾಯವು ಕಾಣದಂತಾಗಲಿ.’
೨ ಆ. ‘ನಿಮ್ಮ ತೊಂದರೆ (ಗಾಯ) ಶೇ. ೫೦ ಕ್ಕಿಂತ ಹೆಚ್ಚು ಕಡಿಮೆಯಾಗಿದ್ದು ಕಾಳಜಿ ಮಾಡುವ ಅವಶ್ಯಕತೆಯೇ ಇಲ್ಲ’, ಎಂದು ಆಧುನಿಕ ವೈದ್ಯರು ಹೇಳುವುದು : ಬೆಳಗ್ಗೆ ೯ ಗಂಟೆಗೆ ಪರೀಕ್ಷೆ ಮಾಡುವಾಗ ಆಧುನಿಕ ವೈದ್ಯರು (ಶಸ್ತ್ರಚಿಕಿತ್ಸಕರು) ಆಶ್ಚರ್ಯದಿಂದ ಮತ್ತು ಆನಂದದಿಂದ ನನಗೆ, ”ಅಮ್ಮಾ, ನಿಮ್ಮ ಆರೋಗ್ಯ ಶೇ. ೫೦ ಕ್ಕಿಂತ ಹೆಚ್ಚು ಚೆನ್ನಾಗಿದೆ. (ನಿಮ್ಮ ಗಾಯ ಶೇ. ೫೦ ಕ್ಕಿಂತ ಹೆಚ್ಚು ಕಡಿಮೆಯಾಗಿದೆ.) ಕಾಳಜಿ ಮಾಡುವ ಅವಶ್ಯಕತೆಯೇ ಇಲ್ಲ. ಮೊದಲ ಬಾರಿ ಪರೀಕ್ಷೆ ಮಾಡುವಾಗ ನನಗೆ ಸ್ವಲ್ಪ ರಕ್ತ ಕಾಣಿಸಿತ್ತು. ‘ಅದೇನಿದೆ ?’ ಎಂದು ನೋಡಲು ನಾನು ಮತ್ತೊಮ್ಮೆ ಪರೀಕ್ಷೆ ಮಾಡಿದೆ. ನಿಮಗೆ ಯಾವುದೇ ದೊಡ್ಡ ರೋಗವಿಲ್ಲ. ಹೆದರಬೇಡಿ”, ಎಂದು ಹೇಳಿದರು.
ಹೇ ಗುರುದೇವಾ, ಹೇ ಶ್ರೀಕೃಷ್ಣ, ‘ನಿಮ್ಮ ಕೃಪಾಶೀರ್ವಾದದಿಂದ ನನ್ನ ಭಯ ದೂರವಾಗಿದೆ. ಅದಕ್ಕಾಗಿ ನಿಮ್ಮ ಚರಣಗಳಲ್ಲಿ ಕೋಟಿಶಃ ಕೃತಜ್ಞತೆಗಳು ! ನಾನು ಈಗ ಬಹಳ ಆನಂದದಲ್ಲಿದ್ದೇನೆ. ಇದೇ ರೀತಿ ಕೊನೆಯವರೆಗೆ ನನ್ನನ್ನು ಆನಂದದಲ್ಲಿಡಿ’, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ !’
– (ಪೂ.) ಶ್ರೀಮತಿ ರಾಧಾ ಪ್ರಭು (ಸನಾತನದ ೪೪ ನೇ (ಸಮಷ್ಟಿ) ಸಂತರು, ವಯಸ್ಸು ೮೭ ವರ್ಷಗಳು), ಮಂಗಳೂರು (೨೫.೪.೨೦೨೪)