ಗುರುಕೃಪೆಯಿಂದ ಸದ್ಗುರು ಡಾ. ಮುಕುಲ ಗಾಡಗೀಳರು ಮಾಡುತ್ತಿರುವ ಸೇವೆಗಳ ವ್ಯಾಪ್ತಿ ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ ಉಪಾಯವನ್ನು ಹುಡುಕುತ್ತಿರುವ ಸದ್ಗುರು ಡಾ. ಮುಕುಲ ಗಾಡಗೀಳ

ಪ್ರಾಣವಹನಶಕ್ತಿ ಉಪಾಯಪದ್ಧತಿಗನುಸಾರ ಉಪಾಯವನ್ನು ಹುಡುಕುತ್ತಿರುವ ಸದ್ಗುರು ಡಾ. ಮುಕುಲ ಗಾಡಗೀಳ

ಸಂಚಿಕೆ ೨೫/೫೨ ರಲ್ಲಿ ಪ್ರಕಟಿಸಲಾದ ಲೇಖನದಲ್ಲಿ ನಾವು ‘ವಿವಿಧ ರೀತಿಯ ಸೇವೆಗಳು ಸಿಗುವ ಹಿಂದಿನ ಮುಖ್ಯ ಕಾರಣವೆಂದರೆ ನನ್ನಲ್ಲಿನ ‘ಜಿಜ್ಞಾಸೆ’ ಈ ಗುಣ ಮತ್ತು ಮುಖ್ಯವಾಗಿ ‘ಗುರುಕೃಪೆ’ಯಾಗಿದೆ’, ಎಂದೆನಿಸುವುದು, ಆಧ್ಯಾತ್ಮಿಕ ತೊಂದರೆಗಳಿಗಾಗಿ ನಾಮಜಪಾದಿ ಉಪಾಯಗಳನ್ನು ಹೇಳುವುದು ಮತ್ತು ಇತರರಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುವುದು’, ಇವುಗಳ ಬಗೆಗಿನ ಬರಹವನ್ನು ಓದಿದೆವು. ಇಂದು ಈ ಲೇಖನದ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

(ಭಾಗ ೨)

ಕಲ್ಪನಾತೀತ ಹಾಗೂ ಅಪ್ರತಿಮ ಲೇಖನವನ್ನು ಬರೆಯುವ ಸದ್ಗುರು ಡಾ. ಮುಕುಲ ಗಾಡಗೀಳ 

ಸದ್ಗುರು ಡಾ. ಮುಕುಲ ಗಾಡಗೀಳರ ಈ ಲೇಖನವನ್ನು ಓದಿ ನಾನು ಆಶ್ಚರ್ಯಚಕಿತನಾದೆ ! ಇದರಲ್ಲಿರುವ ಜ್ಞಾನ ಜಗತ್ತಿನಲ್ಲಿ ಯಾರಲ್ಲಿಯೂ ಇರಲಿಕ್ಕಿಲ್ಲ ! ಭಾರತೀಯ ಸಂಗೀತದಲ್ಲಿನ ದೊಡ್ಡ ದೊಡ್ಡ ಸಂಗೀತತಜ್ಞರಿಗೂ ಈ ಲೇಖನವನ್ನು ಓದಿ ಆಶ್ಚರ್ಯವೆನಿಸಬಹುದು ! ‘ಸದ್ಗುರು ಡಾ. ಮುಕುಲ ಗಾಡಗೀಳರು ಈ ಜ್ಞಾನವನ್ನು ಜಗತ್ತಿನಾದ್ಯಂತದ ಜಿಜ್ಞಾಸು ಸಾಧಕರಿಗೆ ಕಲಿಸಿ ಉಪಾಯ ಮಾಡಲು ಅವರಂತಹ ಅನೇಕ ಜನರನ್ನು ತಯಾರಿಸಬೇಕು. ಅದರಿಂದ ಜಗತ್ತಿನಾದ್ಯಂತ ಸಂಗೀತದಿಂದ ಗುಣಮುಖರಾಗುವ ಸಾಧಕರಿಗೆ ಉಪಾಯ ಉಪಲಬ್ಧವಾಗಬಹುದು’, ಎಂದು ನಾನು ಅವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ

೪. ಸಮಷ್ಟಿ ಸೇವೆಯನ್ನು ಮಾಡುತ್ತಿರುವ ಸಾಧಕರಿಗೆ ಆಧ್ಯಾತ್ಮಿಕ ತೊಂದರೆಯಿಂದ ಬಂದ ಅಡಚಣೆಗಳನ್ನು ದೂರಗೊಳಿಸುವುದು

ಅಧ್ಯಾತ್ಮಪ್ರಸಾರ ಮಾಡುವ ಸಾಧಕರು ವರ್ಷವಿಡಿ ವಿವಿಧ ಸಮಷ್ಟಿ ಸೇವೆಗಳನ್ನು ಮಾಡುತ್ತಿರುತ್ತಾರೆ, ಉದಾ. ಶಿಬಿರಗಳನ್ನು ಆಯೋಜಿಸುವುದು, ಸತ್ಸಂಗಗಳನ್ನು ತೆಗೆದುಕೊಳ್ಳುವುದು, ಗ್ರಂಥಪ್ರದರ್ಶನಗಳನ್ನು ಹಾಕುವುದು, ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳನ್ನು ತೆಗೆದುಕೊಳ್ಳುವುದು, ಆಂದೋಲನಗಳನ್ನು ಮಾಡು ವುದು, ಧರ್ಮಜಾಗೃತಿ ಪರ ಮೆರವಣಿಗೆಗಳನ್ನು ತೆಗೆಯುವುದು, ಹಿಂದೂ ರಾಷ್ಟ್ರ ಅಧಿವೇಶನವನ್ನು ತೆಗೆದುಕೊಳ್ಳುವುದು ಇತ್ಯಾದಿ. ಈ ಸಮಷ್ಟಿ ಸೇವೆಗಳಿಂದ ಸಮಾಜವು ಮಾಯೆಯಿಂದ ಅಧ್ಯಾತ್ಮದ ಕಡೆಗೆ ಹೊರಳುತ್ತದೆ. ಇದರಿಂದ ಸಮಾಜದ ಸಾತ್ತ್ವಿಕತೆ ಹೆಚ್ಚಾಗುತ್ತದೆ. ಸಮಾಜವು ಹೆಚ್ಚೆಚ್ಚು ಸಾತ್ತ್ವಿಕವಾದರೆ ರಾಮರಾಜ್ಯಕ್ಕೆ ಸಮನಾಗಿರುವ ಹಿಂದೂ ರಾಷ್ಟ್ರವು ಬೇಗನೆ ಸ್ಥಾಪನೆಯಾಗುವುದು. ಈ ಕಲಿಯುಗದಲ್ಲಿ ಪ್ರಬಲರಾಗಿರುವ ಕೆಟ್ಟ ಶಕ್ತಿಗಳಿಗೆ ಇದು ಬೇಡವಾಗಿರುತ್ತದೆ. ಆದುದರಿಂದ ಅವು ಈ ಸಮಷ್ಟಿ ಸೇವೆಗಳಲ್ಲಿ ಅಡಚಣೆಗಳನ್ನು ತರುತ್ತವೆ. ಈಗಂತೂ ಕೆಟ್ಟ ಶಕ್ತಿಗಳು ಸಮಷ್ಟಿ ಸೇವೆಗಳ ಪ್ರತಿಯೊಂದು ಹಂತದಲ್ಲಿ ಅಡಚಣೆಗಳನ್ನು ತರುತ್ತಿವೆ.

ಅ. ಯಾವುದಾದರೊಂದು ಶಿಬಿರವನ್ನು ಆಯೋಜಿಸುವುದಿದ್ದರೆ ಆ ಶಿಬಿರದ ರೂಪರೇಷೆಯನ್ನು ತಯಾರಿಸುವುದು, ಮಾರ್ಗದರ್ಶನ ಮಾಡುವ ವಕ್ತಾರರನ್ನು ಆಯ್ಕೆ ಮಾಡುವುದು, ಶಿಬಿರಕ್ಕಾಗಿ ಜಿಜ್ಞಾಸುಗಳ ಹೆಸರುಗಳನ್ನು ನೋಂದಣಿ ಮಾಡುವುದು, ಜಿಜ್ಞಾಸುಗಳು ಶಿಬಿರಕ್ಕೆ ಬರುವುದು, ಪ್ರತ್ಯಕ್ಷ ಶಿಬಿರವನ್ನು ಆಯೋಜಿಸುವುದು ಇತ್ಯಾದಿ ಹಂತಗಳಿರುತ್ತವೆ. ನಾನು ಇಂತಹ ಸಮಷ್ಟಿ ಸೇವೆಯಲ್ಲಿ ಬರಲಿರುವ ಸಂಭಾವ್ಯ ಅಡಚಣೆಗಳನ್ನು ಅರಿತುಕೊಂಡು ಅವುಗಳನ್ನು ದೂರ ಮಾಡಲು ನಾಮಜಪವನ್ನು ಕಂಡು ಹಿಡಿಯುತ್ತೇನೆ ಮತ್ತು ಅದನ್ನು ಕಾರ್ಯಕ್ರಮದ ಮೊದಲೇ ಮಾಡಲು ಕೊಡುತ್ತೇನೆ.

ಆ. ಸೇವೆಯಲ್ಲಿ ಪ್ರತ್ಯಕ್ಷ ಬಂದ ಯಾವುದಾದರೊಂದು ಅಡಚಣೆಯ ಬಗ್ಗೆ ಯಾರಾದರೂ ಹೇಳಿದರೆ ನಾನು ‘ಕೆಟ್ಟ ಶಕ್ತಿಗಳು ಯಾವ ರೀತಿ ದಾಳಿ ಮಾಡುತ್ತಿವೆ ?’, ಎಂಬುದನ್ನು ತಿಳಿದುಕೊಂಡು ಸರಿಯಾದ ನಾಮಜಪವನ್ನು ಮಾಡುವ ಮೂಲಕ ಅದನ್ನು ಪರಿಹರಿಸುತ್ತೇನೆ. ನಾನು ಉಪಾಯ ಮಾಡಿದ ನಂತರ ಆ ಅಡಚಣೆಯು ದೂರವಾದ ಅನುಭೂತಿಯು ಸಾಧಕರಿಗೆ ಬರುತ್ತದೆ, ಉದಾ. ಕಾರ್ಯಕ್ರಮದಲ್ಲಿ ಧ್ವನಿವರ್ಧಕ ವ್ಯವಸ್ಥೆ (ಮೈಕ್‌ ಸಿಸ್ಟಿಮ್) ಎಲ್ಲ ರೀತಿಯಿಂದಲೂ ಸರಿ ಇರುವಾಗಲೂ ಕೆಲಸ ಮಾಡುತ್ತಿಲ್ಲವಾದರೆ ನಾನು ‘ಕೆಟ್ಟ ಶಕ್ತಿ ಆ ವ್ಯವಸ್ಥೆಯ ಮೇಲೆ ಯಾವ ರೀತಿ ಮತ್ತು ಯಾವ ದಿಶೆಯಿಂದ ದಾಳಿ ಮಾಡುತ್ತಿದೆ’, ಎಂಬುದನ್ನು ಸೂಕ್ಷ್ಮದಿಂದ ತಿಳಿದುಕೊಂಡು ಅದಕ್ಕಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತೇನೆ. ಅದರಿಂದ ಆ ಅಡಚಣೆ ದೂರವಾಗುತ್ತದೆ.

ಇ. ಕೆಲವೊಮ್ಮೆ ಯಾವುದಾದರೊಂದು ವ್ಯವಸ್ಥೆಯಲ್ಲಿ ಬಂದ ಯಾವುದಾದರೊಂದು ವೈಫಲ್ಯವು (ಅಡಚಣೆ) ಕೆಟ್ಟ ಶಕ್ತಿಗಳು ನಿರ್ಮಿಸಿದ ತೊಂದರೆದಾಯಕ (ಕಪ್ಪು) ಆವರಣದಿಂದ ಸಾಧಕರ ಗಮನಕ್ಕೆ ಬರುವುದಿಲ್ಲ. ನಾನು ಅದನ್ನು ಆವರಣ ಮುದ್ರೆ ಮತ್ತು ನಾಮಜಪಾದಿ ಉಪಾಯಗಳಿಂದ ದೂರ ಮಾಡುತ್ತೇನೆ ಮತ್ತು ನಂತರ ಸೂಕ್ಷ್ಮದಿಂದ ತಿಳಿದುಕೊಂಡು ಇಂತಹ ಒಂದು ಸ್ಥಳದಲ್ಲಿ ವೈಫಲ್ಯ ಇರುವುದಾಗಿ ಗಮನಕ್ಕೆ ಬರುತ್ತದೆ.

ಈ. ಶಿಬಿರದಲ್ಲಿ ಮಾರ್ಗದರ್ಶನವನ್ನು ಮಾಡಲಿರುವ ಯಾರಾದರೂ ವಕ್ತಾರರಿಗೆ ಶೀತ, ಜ್ವರ, ಕೆಮ್ಮು, ತಲೆ ಸುತ್ತುವುದು, ಹೊಟ್ಟೆ ತೊಳೆಸಿದಂತಾಗುವುದು ಇತ್ಯಾದಿಗಳಿಂದ ಉದ್ಭವಿಸಿದ ತೊಂದರೆಗಳನ್ನು ದೂರ ಮಾಡಲು ನಾನು ನಾಮಜಪವನ್ನು ಹೇಳುತ್ತೇನೆ.

ಉ. ಕೆಲವೊಮ್ಮೆ ಕಾರ್ಯಕ್ರಮ ನಡೆದಿರುವ ಸಭಾಗೃಹದಲ್ಲಿ ತೊಂದರೆದಾಯಕ ಶಕ್ತಿಗಳು ಒತ್ತಡವನ್ನು ನಿರ್ಮಾಣ ಮಾಡುತ್ತವೆ. ಅದರಿಂದ ಅಸ್ವಸ್ಥತೆಯ ಅರಿವಾಗುತ್ತದೆ, ಹಾಗೆಯೇ ಉಪಸ್ಥಿತರಿಗೆ ನಡೆದಿರುವ ಮಾರ್ಗದರ್ಶನ ತಿಳಿಯುವುದಿಲ್ಲ. ಆಗ ಆ ಒತ್ತಡವನ್ನು ನಾಮಜಪಾದಿ ಉಪಾಯಗಳನ್ನು ಮಾಡಿ ದೂರ ಮಾಡಬೇಕಾಗುತ್ತದೆ.

ಊ. ಸಭೆ, ಆಂದೋಲನ, ಧರ್ಮಪ್ರಸಾರ ಮೆರವಣಿಗೆ ಇವುಗಳಂತಹ ಯಾವುದಾದರೂ ಸಾರ್ವಜನಿಕ ಕಾರ್ಯಕ್ರಮ ವಿದ್ದರೆ ಕೆಲವೊಮ್ಮೆ ಕಾರ್ಯಕ್ರಮದ ಮೊದಲು ಮೋಡ ಕವಿದ ವಾತಾವರಣ ಉಂಟಾಗುವುದು, ಜೋರಾಗಿ ಗಾಳಿ ಬೀಸುವುದು, ಹೀಗೆ ಮಳೆ ಬೀಳುವ ಲಕ್ಷಣಗಳು ಕಾಣಿಸತೊಡಗುತ್ತವೆ. ಇವುಗಳಿಗೆ ನಾಮಜಪದ ಉಪಾಯ ಮಾಡಿದರೆ ಆ ಲಕ್ಷಣಗಳು ದೂರವಾಗುತ್ತವೆ. ಇದರಿಂದ ‘ಇವು ಕೆಟ್ಟ ಶಕ್ತಿಗಳು ಕಾರ್ಯಕ್ರಮದಲ್ಲಿ ಅಡಚಣೆ ತರಲು ನಿರ್ಮಿಸಿದ ಲಕ್ಷಣಗಳಾಗಿವೆ’, ಎಂಬುದು ಗಮನಕ್ಕೆ ಬರುತ್ತದೆ.

ಕಾರ್ಯಕ್ರಮದಲ್ಲಿ ಬಂದ ಈ ರೀತಿಯ ಅಡಚಣೆಗಳಿಗೆ ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯಗಳನ್ನು ಮಾಡುವುದರಿಂದ, ಹಾಗೆಯೇ ಆ ಕಾರ್ಯಕ್ರಮದಲ್ಲಿ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯು ಒಳ್ಳೆಯ ರೀತಿಯಲ್ಲಾಗಲು ನಾಮಜಪಾದಿ ಉಪಾಯಗಳನ್ನು ಮಾಡಿದರೆ ಲಾಭವಾಗುತ್ತದೆ.

(ಸದ್ಗುರು) ಡಾ. ಮುಕುಲ ಗಾಡಗೀಳ

೪. ಬೇರೆ ದೇಶಗಳಿಗೆ ಅಥವಾ ಪ್ರದೇಶಗಳಿಗೆ ಹೋಗಿ ಅಧ್ಯಾತ್ಮಪ್ರಸಾರ ಮಾಡುವ ಪ್ರಸಾರಸೇವಕರ ಅಡಚಣೆಗಳನ್ನು ದೂರುಗೊಳಿಸುವುದು

ಬೇರೆ ದೇಶಕ್ಕೆ ಹೋಗಲು ‘ವೀಸಾ’ ಬೇಗನೆ ಸಿಗುವುದಿಲ್ಲ. ಬೇರೆ ದೇಶಕ್ಕೆ ಹೋದ ನಂತರ ವಿಮಾನ ನಿಲ್ದಾಣದಿಂದ ನಿರ್ಗಮಿಸಲು (‘ಎಮಿಗ್ರೇಶನ್‌’) ಅಡಚಣೆಗಳು ಬರುತ್ತವೆ. ಬೇರೆ ದೇಶದಲ್ಲಿ ಸತ್ಸಂಗ ತೆಗೆದುಕೊಳ್ಳಲು ಸರಿಯಾದ ಸ್ಥಳ ಸಿಗುವುದಿಲ್ಲ. ಪ್ರಸಾರಸೇವಕರು ಇದ್ದಕ್ಕಿದ್ದಂತೆಯೇ ಅನಾರೋಗ್ಯಕ್ಕೊಳಗಾಗುತ್ತಾರೆ. ಈ ರೀತಿಯ ಅಡಚಣೆಗಳು ಪ್ರಸಾರ ಸೇವಕರಿಗೆ ಬರುತ್ತವೆ. ಈ ಅಡಚಣೆಗಳನ್ನು ತಕ್ಷಣ ದೂರ ಮಾಡುವುದು ಆವಶ್ಯಕವಾಗಿರುತ್ತದೆ. ಆದುದರಿಂದ ನನಗೆ ಸ್ವತಃ ಅವುಗಳಿಗಾಗಿ ನಾಮಜಪ ಮಾಡಿ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯ ಮಾಡಬೇಕಾಗುತ್ತದೆ.

ಬೇರೆ ಪ್ರದೇಶಗಳಿಗೆ ಹೋಗಿ ಅಧ್ಯಾತ್ಮಪ್ರಸಾರದ ಸೇವೆಯನ್ನು ಮಾಡುವ ಪ್ರಸಾರಸೇವಕರು ತಮ್ಮ ಸೇವೆಯನ್ನು ಆರಂಭಿಸುವ ಮೊದಲೇ ನನಗೆ ಆಧ್ಯಾತ್ಮಿಕ ಸ್ತರದ ಉಪಾಯದ ಬಗ್ಗೆ ಕೇಳುತ್ತಾರೆ. ಅವರ ಈ ಸೇವೆಯಲ್ಲಿ ಯಾವುದೇ ಅಡಚಣೆ ಬರಬಾರದು ಮತ್ತು ಅವರ ಈ ಸೇವೆಯು ಗುರುದೇವರಿಗೆ ಅಪೇಕ್ಷಿತ ರೀತಿಯಲ್ಲಿ ಪರಿಪೂರ್ಣವಾಗಬೇಕೆಂದು ನಾನು ಅವರಿಗೆ ನಾಮಜಪವನ್ನು ಹೇಳುತ್ತೇನೆ.

೫. ‘ಇಂಟರ್‌ನೆಟ್‌'(ಅಂತರ್ಜಾಲ) ಮೂಲಕ ಅಧ್ಯಾತ್ಮಪ್ರಸಾರ ಮಾಡಲು ಬರುವ ಅಡಚಣೆಗಳನ್ನು ದೂರ ಮಾಡುವುದು

ಇತ್ತೀಚೆಗೆ ಪ್ರತ್ಯಕ್ಷ ಅಧ್ಯಾತ್ಮಪ್ರಸಾರ ಮಾಡುವುದಕ್ಕಿಂತ ‘ಅಂತರ್ಜಾಲ’ದಿಂದ ಮಾಡಿದ ಅಧ್ಯಾತ್ಮಪ್ರಸಾರವು ಜಗತ್ತಿನಾದ್ಯಂತ ಶೀಘ್ರಗತಿಯಲ್ಲಿ ಹರಡುತ್ತದೆ, ಹಾಗೆಯೇ ಅದು ಒಂದೇ ಸಮಯಕ್ಕೆ ಲಕ್ಷಾಂತರ ಜನರವರೆಗೆ ತಲುಪುತ್ತದೆ. ಆದುದರಿಂದ ‘ಅಂತರ್ಜಾಲ’ದಲ್ಲಿ ಸಂಸ್ಥೆಯ ಮಾಹಿತಿ, ಅದರ ವಿವಿಧ ಉಪಕ್ರಮಗಳು ಮತ್ತು ಅಧ್ಯಾತ್ಮದಲ್ಲಿನ ತಾತ್ತ್ವಿಕ ಮತ್ತು ಪ್ರಾಯೋಗಿಕ ಮಾಹಿತಿಯನ್ನು ಹೇಳುವ ‘ವೆಬ್‌ಸೈಟ್’ (ಜಾಲತಾಣ)ಗಳಿರುತ್ತವೆ. ಈ ‘ವೆಬ್‌ಸೈಟ್‌’ಗಳ ಮೂಲಕ ಅಧ್ಯಾತ್ಮಪ್ರಸಾರ ಮಾಡಲು ಕೆಟ್ಟ ಶಕ್ತಿಗಳು ಅಡಚಣೆಗಳನ್ನು ತರುತ್ತವೆ. ‘ವೆಬ್‌ ಸೈಟ್‌’ಗಳಲ್ಲಿನ ಮಾಹಿತಿಯ ಯಾವುದಾದರೂ ಭಾಗವು ಕಾಣಿಸದಂತಾಗುವುದು, ಜನರಿಗೆ ‘ವೆಬ್‌ಸೈಟ್’ ತೆರೆಯುವಲ್ಲಿ ಅಡಚಣೆ ಬರುವುದು, ‘ಇಂಟರ್‌ನೆಟ್‌’ನ ‘ಸರ್ವರ್’ ಬಂದ್‌ ಆಗುವುದು ಇಂತಹ ಅಡಚಣೆಗಳು ಬರುತ್ತವೆ. ಅವುಗಳಿಗೆ ನಾಮಜಪಾದಿ ಉಪಾಯಗಳನ್ನು ಹೇಳಬೇಕಾಗುತ್ತದೆ. ಹಾಗೆಯೇ ಕೆಲವೊಮ್ಮೆ ‘ಫೇಸ್‌ಬುಕ್, ‘ಎಕ್ಸ್‌’ (ಹಿಂದಿನ ‘ಟ್ವಿಟರ್‌’) ಇಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಅಧ್ಯಾತ್ಮ ಪ್ರಸಾರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಅಡಚಣೆಗಳನ್ನೂ ನಾಮಜಪಾದಿ ಉಪಾಯಗಳನ್ನು ಮಾಡಿ ದೂರ ಮಾಡಬೇಕಾಗುತ್ತದೆ.

೬. ಆಶ್ರಮಗಳ ಕಟ್ಟಡ ಕಾಮಗಾರಿಯಲ್ಲಿ ಆಧ್ಯಾತ್ಮಿಕ ಉಪಾಯಗಳ ಮೂಲಕ ಸಹಾಯ ಮಾಡುವುದು

ಅ. ಆಶ್ರಮಕ್ಕಾಗಿ ಭೂಮಿ ಖರೀದಿಯ ಅಡಚಣೆಗಳನ್ನು ದೂರ ಮಾಡುವುದು

ಆ. ಆಶ್ರಮದ ಯೋಜನೆಗೆ ಸರಕಾರದಿಂದ ಮಾನ್ಯತೆ ಪಡೆಯುವಲ್ಲಿನ ವಿಳಂಬವನ್ನು ದೂರ ಮಾಡುವುದು

ಇ. ಕಾಮಗಾರಿಯಲ್ಲಿನ ಸೂಕ್ಷ್ಮದ ಅಡಚಣೆ ದೂರ ಮಾಡುವುದು

ಈ. ಕಾಮಗಾರಿಯಾದ ಮೇಲೆ ಅದು ನಿಯಮಗಳಿಗನುಸಾರ ಸರಿ ಇದೆ ಎಂದು ಖಚಿತಪಡಿಸಲು, ಹಾಗೆಯೇ ಆದಷ್ಟು ಬೇಗ ಆಕ್ಯುಪೆನ್ಸಿ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು

೭. ಆಶ್ರಮದ ಭೂಮಿಯಲ್ಲಿ ಬಾವಿ ಅಥವಾ ಕೊಳವೆಬಾವಿ ತೋಡಲು ಯೋಗ್ಯ ಜಾಗವನ್ನು ಹುಡುಕುವುದು

ಆಶ್ರಮದ ಭೂಮಿಯಲ್ಲಿ ನೀರಿರುವ ಜಾಗವನ್ನು ಹುಡುಕುವ ಸೇವೆಯು ನನಗೆ ಸಿಕ್ಕಿತು. ಭೂಮಿಯಲ್ಲಿ ಈಶಾನ್ಯ ದಿಕ್ಕಿನಲ್ಲಿ (ಉತ್ತರ ಮತ್ತು ಪೂರ್ವ ದಿಕ್ಕುಗಳ ಮಧ್ಯದ ಜಾಗಗಳಲ್ಲಿ) ನೀರು ದೊರಕಿದರೆ ಅದು ಬಹಳ ಉತ್ತಮ. ಭೂಮಿಯಲ್ಲಿ ನೀರು ಹುಡುಕಲು ನನಗೆ ಆ ಜಾಗದ ನಕಾಶೆಯನ್ನು ನೀಡಲಾಗುತ್ತದೆ. ಮೊದಲ ಬಾರಿಗೆ ನನಗೆ ಈ ಸೇವೆ ಸಿಕ್ಕಾಗ, ನಾನು ನಕಾಶೆಯ ಮೇಲೆ ಬೆರಳು ತಿರುಗಿಸಿ ಭೂಮಿಯಲ್ಲಿನ ನೀರಿನ ಸ್ಪಂದನಗಳನ್ನು ನೋಡುತ್ತಿದ್ದೆನು. ಇದ್ದಕ್ಕಿದ್ದಂತೆಯೇ ನನಗೆ ಒಂದು ಸ್ಥಳದಲ್ಲಿ ಬೆರಳು ಒಯ್ದಾಗ ಬಾಯಿಯಲ್ಲಿ ಲಾಲಾರಸ (ಜೊಲ್ಲು) ಬಂದಿತು. ಆಗ ‘ಆ ಸ್ಥಳದಲ್ಲಿ ಭೂಮಿಯಲ್ಲಿ ನೀರಿದೆ’, ಎಂದು ನನ್ನ ಗಮನಕ್ಕೆ ಬಂದಿತು. ನಾನು ಆ ಜಾಗದಿಂದ ಇನ್ನೊಂದು ಕಡೆಗೆ ಬೆರಳು ಒಯ್ದಾಗ ನನಗೆ ಬಾಯಿಯಲ್ಲಿ ಲಾಲಾರಸ ಬರುವುದು ನಿಂತಿತು ಮತ್ತು ಪುನಃ ಆ ಸ್ಥಳದಲ್ಲಿ ಬೆರಳು ಒಯ್ದಾಗ ನನ್ನ ಬಾಯಿಯಲ್ಲಿ ಲಾಲಾರಸ ಬರತೊಡಗಿತು. ನಾನು ಈ ಪ್ರಯೋಗವನ್ನು ೩-೪ ಬಾರಿ ಮಾಡಿದೆನು ಮತ್ತು ‘ನನಗೆ ಅರಿವಾಗಿದ್ದು ಯೋಗ್ಯ ವಾಗಿದೆಯೇ ?’, ಎಂದು ಪರಿಶೀಲಿಸಿದ ನಂತರ ಭೂಮಿಯಲ್ಲಿ ನೀರು ಅರಿವಾದ ಭಾಗದಲ್ಲಿ ಎಷ್ಟು ಪರಿಸರದಲ್ಲಿ ನೀರಿದೆ ಮತ್ತು ಅದರ ಕೇಂದ್ರಬಿಂದು ಎಲ್ಲಿದೆ ?’, ಎಂದೂ ನಾನು ಹುಡುಕಿದೆನು ಮತ್ತು ಆ ಪ್ರಕಾರ ನಕಾಶೆಯಲ್ಲಿ ‘ಪೆನ್ಸಿಲ್‌’ನಿಂದ ಗುರುತು ಹಾಕಿದೆನು. ಹಾಗೆಯೇ ದೇವರಲ್ಲಿ ಕೇಳಿ ‘ಎಷ್ಟು ಮೀಟರ್’ ಆಳಕ್ಕೆ ಹೋದಾಗ ನೀರು ಸಿಗುವುದು ?’, ಎಂಬುದನ್ನೂ ಅಲ್ಲಿ ನಮೂದಿಸಿದೆನು. ‘ಆಶ್ರಮದ ಜಾಗದಲ್ಲಿ ಇನ್ನೂ ಎಲ್ಲೆಲ್ಲಿ ನೀರಿದೆ ?’, ಎಂಬುದನ್ನೂ ನಾನು ಕಂಡು ಹಿಡಿದೆ. ಇಲ್ಲಿಯವರೆಗೆ ನಾನು ಕಂಡು ಹಿಡಿದ ಸ್ಥಳಗಳಲ್ಲಿ ನೀರು ಸಿಕ್ಕಿದೆ ಮತ್ತು ಅದು ನನ್ನ ಮೇಲಿನ ಗುರುಕೃಪೆಯೇ ಆಗಿದೆ.

೮. ಸಾಧಕರ ಕಳೆದುಹೋದ ವಸ್ತುಗಳು ಎಲ್ಲಿರಬಹುದು, ಎಂದು ಹೇಳಲು ಪ್ರಯತ್ನಿಸುವುದು

 ಕೆಲವೊಮ್ಮೆ ಸಾಧಕರಿಗೆ ‘ತಾವು ಮಹತ್ವದ ವಸ್ತು ಎಲ್ಲಿಟ್ಟಿದ್ದೇವೆ ?’, ಎಂದು ನೆನಪಾಗುವುದಿಲ್ಲ. ಅವರು ಆಶ್ರಮದಲ್ಲಿ (ಅಥವಾ ಮನೆಯಲ್ಲಿ) ಎಲ್ಲೆಡೆ ಹುಡುಕುತ್ತಾರೆ; ಆದರೆ ಆ ಮಹತ್ವದ ವಸ್ತು ಸಿಗುವುದಿಲ್ಲ. ಅವರು ನನಗೆ ಆ ಬಗ್ಗೆ ಹೇಳಿ ‘ಸಾಮಾನ್ಯವಾಗಿ ಎಲ್ಲಿ ಆ ವಸ್ತುವನ್ನು ಇಟ್ಟಿದ್ದರು’, ಎಂದು ಹೇಳುತ್ತಾರೆ. ನಾನು ಆ ಬಗ್ಗೆ ಸೂಕ್ಷ್ಮದಿಂದ ತಿಳಿದುಕೊಂಡು ಅವರಿಗೆ ವಸ್ತುವನ್ನು ಹುಡುಕಬೇಕಾದ ಸ್ಥಾನವನ್ನು ಹೇಳುತ್ತೇನೆ, ಉದಾ. ‘ಆ ಕೋಣೆಯ ಬಾಗಿಲಿನಿಂದ ಒಳಗೆ ಪ್ರವೇಶಿಸಿದಾಗ ಎದುರಿಗೆ ಪಕ್ಕ ದಲ್ಲಿ ಯಾವುದಾದರೊಂದು ಕಪಾಟು ಇದ್ದರೆ ಅದರ ಮೇಲಿನ ಖಾನೆಯಲ್ಲಿ ಹುಡುಕಿ’, ಎನ್ನುತ್ತೇನೆ. ಹೆಚ್ಚಿನ ಬಾರಿ ನನ್ನ ಉತ್ತರ ಯೋಗ್ಯವಾಗಿರುತ್ತದೆ.

(ಮುಂದುವರಿಯುವುದು)

(ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್‌.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೭.೪.೨೦೨೪)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.