೨೫_೫೦ ರ ಸಾಪ್ತಾಹಿಕದ ಸಂಚಿಕೆಯಲ್ಲಿ ಪ್ರಕಟಿಸಲಾದ ಲೇಖನದಲ್ಲಿ ‘ಚೈತನ್ಯ ವಾಹಿನಿ’ಯ ಸೇವೆಯ ಸ್ವರೂಪ ಮತ್ತು ಆ ಸೇವೆಯನ್ನು ಮಾಡುವಾಗ ಆದ ತೊಂದರೆ’, ಇತ್ಯಾದಿ ಅಂಶಗಳನ್ನು ನೋಡಿದೆವು. ಈಗ ಈ ಭಾಗದಲ್ಲಿ ಈ ಸೇವೆಯನ್ನು ಮಾಡುವಾಗ ‘ಗುರುದೇವರ ಅಪಾರ ಕೃಪೆಯನ್ನು ಹೇಗೆ ಅನುಭವಿಸಿದೆ ?’, ಎಂಬುದನ್ನು ಇಲ್ಲಿ ನೀಡಲಾಗಿದೆ. (ಭಾಗ ೨)
೫. ದೇವದ ಆಶ್ರಮದ ಸಾಧಕರು ಪಂಚಕರ್ಮದಲ್ಲಿನ ‘ಸ್ನೇಹನ್’ ಮತ್ತು ‘ಬಸ್ತಿ ಕೊಡುವುದು’, ಈ ಉಪಚಾರಗಳನ್ನು ಕಲಿತು ಆಶ್ರಮದಲ್ಲಿಯೇ ಈ ಉಪಚಾರಗಳನ್ನು ಮಾಡಿದ್ದರಿಂದ ಉಪಚಾರಗಳಿಗಾಗಿ ಹೊರಗೆ ಹೋಗುವ ಆವಶ್ಯಕತೆ ಇಲ್ಲವಾಯಿತು
‘ಆಶ್ರಮದ ಸಾಧಕರು ಪಂಚಕರ್ಮದ ಸ್ನೇಹನ್ (ಟಿಪ್ಪಣಿ ೧), ‘ಬಸ್ತಿ’ ಕೊಡುವುದು (ಟಿಪ್ಪಣಿ ೨) ಇತ್ಯಾದಿ ಎಲ್ಲ ಉಪಚಾರ ಪ್ರಕ್ರಿಯೆಗಳನ್ನು ಕಲಿತ ಕಾರಣ ಈ ಎಲ್ಲ ಉಪಚಾರಗಳು ನನಗೆ ನನ್ನ ಕೋಣೆಯಲ್ಲಿಯೇ ಸಿಗುತ್ತಿದ್ದವು. ಸಾಧಕರು ಪ್ರತಿದಿನ ಬೆಳಗ್ಗೆ ನನ್ನ ಶರೀರಕ್ಕೆ ಸ್ನೇಹನ್ ಮತ್ತು ನಡುನಡುವೆ ನನ್ನ ಮೇಲೆ ‘ಬಸ್ತಿ’ಯ ಉಪಚಾರ ಮಾಡುತ್ತಿದ್ದುದರಿಂದ ‘ಗುರುದೇವರಿಗೆ ನನ್ನ ಬಗ್ಗೆ ಎಷ್ಟು ಕಾಳಜಿಯಿದೆ ಎಂದು ನನ್ನ ಗಮನಕ್ಕೆ ಬಂದಿತು.
(ಟಿಪ್ಪಣಿ ೧ – ಔಷಧೀಯ ಎಣ್ಣೆಯನ್ನು ಬೆಚ್ಚಗೆ ಮಾಡಿ ನಿಧಾನವಾಗಿ ಉಜ್ಜಿ ಆ ಎಣ್ಣೆಯನ್ನು ಶರೀರದಲ್ಲಿ ಇಂಗಿಸುವುದು)
(ಟಿಪ್ಪಣಿ ೨ – ಶರೀರದಲ್ಲಿ ಹೆಚ್ಚಾದ ವಾತಕ್ಕೆ ಔಷಧೀಯ ಎಣ್ಣೆ ಅಥವಾ ಕಷಾಯವನ್ನು ಗುದದ್ವಾರದ ಮೂಲಕ ನೀಡುವುದು)
೬. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ‘ಚೈತನ್ಯ ವಾಹಿನಿ’ಯ ಸೇವೆಯಲ್ಲಿ ಯಾವುದೇ ಕಾರಣದಿಂದ ವ್ಯತ್ಯಯ ಬರಲಿಲ್ಲ
ನನಗೆ ಇಷ್ಟು ಶಾರೀರಿಕ ತೊಂದರೆಗಳು ಆಗುತ್ತಿದ್ದರೂ ‘ಚೈತನ್ಯ ವಾಹಿನಿ’ಯ ಸೇವೆಯಲ್ಲಿ ಯಾವುದೇ ಕಾರಣಕ್ಕೆ ವ್ಯತ್ಯಯ ಬರಲಿಲ್ಲ. ಇದು ಕೇವಲ ಗುರುದೇವರ ಕೃಪೆಯಿಂದಲೇ ಸಾಧ್ಯವಾಯಿತು. ಕೇವಲ ಗಣೇಶೋತ್ಸವ ಮತ್ತು ದೀಪಾವಳಿ ಈ ೨ ಹಬ್ಬದಂದು ‘ಚೈತನ್ಯ ವಾಹಿನಿ’ಯ ಸೇವೆ ಇರುತ್ತಿರಲಿಲ್ಲ.
೭. ನಾನು ಅನುಭವಿಸಿದ ಸಂತರ ಕೃಪೆ !
೭ ಅ. ಪರಾತ್ಪರ ಗುರು ಪಾಂಡೆ ಮಹಾರಾಜರು ಸ್ವತಃ ಮಾಡಿದ ನಾಮಜಪಾದಿ ಉಪಾಯಗಳು ಮತ್ತು ಮರ್ದನ (ಮಾಲೀಸು) ! : ನಾನು ದೇವದ ಆಶ್ರಮಕ್ಕೆ ಬಂದಾಗಿನಿಂದ ಪರಾತ್ಪರ ಗುರು ಪಾಂಡೆ ಮಹಾರಾಜರು ಸುಮಾರು ೬ ತಿಂಗಳು ನನಗಾಗಿ ಪ್ರತಿ ದಿನ ನಾಮಜಪಾದಿ ಉಪಾಯ ಮತ್ತು ಮರ್ದನ (ಮಾಲೀಸು) ಮಾಡಿದರು. ಅವರು ನನಗೆ ಕಾಲಕಾಲಕ್ಕೆ ಮಂತ್ರಜಪವನ್ನು ನೀಡಿ ನನಗೆ ನೋವು ಸಹಿಸಲು ಸಾಧ್ಯವಾಗಬೇಕೆಂದು ಪ್ರಯತ್ನಿಸಿದರು. ಅವರ ಈ ಪ್ರೀತಿಗೆ ನನ್ನ ಬಳಿ ಉಪಮೆಯೇ ಇಲ್ಲ. ಆದುದರಿಂದಲೇ ನನಗೆ ನೋವನ್ನು ಸಹಿಸಲು ಆಗುತ್ತಿತ್ತು. ಇದಕ್ಕಾಗಿ ಅವರ ಚರಣಗಳಲ್ಲಿ ಎಷ್ಟೇ ಕೃತಜ್ಞತೆಗಳನ್ನು ವ್ಯಕ್ತ ಮಾಡಿದರೂ, ಅದು ಕಡಿಮೆಯೇ ಆಗಿದೆ. ‘ಇಂತಹ ಕಠಿಣ ಸ್ಥಿತಿಯಲ್ಲಿ ನನಗೆ ಪರಾತ್ಪರ ಗುರು ಪಾಂಡೆ ಮಹಾರಾಜರಂತಹ ಶ್ರೇಷ್ಠ ಸಂತರ ಸತತ ಸತ್ಸಂಗ ಲಭ್ಯವಾಗುವುದು’, ಇದು ನನ್ನ ಮೇಲಿನ ಗುರುದೇವರ ಕೃಪೆಯೇ ಆಗಿದೆ.
೭ ಆ. ನಾನು ಅನುಭವಿಸಿದ ಪರಾತ್ಪರ ಗುರು ಡಾಕ್ಟರರ ಕೃಪೆ !
೭ ಆ ೧. ಗುರುದೇವರು ಈ ಕಾಲಾವಧಿಯಲ್ಲಿ ನನಗೆ ಪ್ರೇರಣೆ, ಶಕ್ತಿ ಮತ್ತು ಚೈತನ್ಯವನ್ನು ನೀಡಿ ಸಂಕಲ್ಪದಿಂದ ಕಾರ್ಯವನ್ನು ಮಾಡಿಸಿಕೊಂಡರು. ಅವರು ನನಗೆ ಆಗಾಗ ಸಾಧಕರ ಮಾಧ್ಯಮದಿಂದ ಸಂದೇಶ ಕಳುಹಿಸಿ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುತ್ತಿದ್ದರು. ಇದರಿಂದ ನನ್ನ ಮೇಲೆ ಬಹಳಷ್ಟು ಚೈತನ್ಯ ಮತ್ತು ಕೃಪೆಯ ಸುರಿಮಳೆಯಾಗುತ್ತಿತ್ತು.
೭ ಆ ೨. ಈ ಅವಧಿಯಲ್ಲಿ ನನಗೆ ‘ಚೈತನ್ಯ ಮತ್ತು ಶಕ್ತಿ ಸಿಗಬೇಕೆಂದು’ ಪ.ಪೂ. ಡಾಕ್ಟರರು ಗೋವಾದಿಂದ ದೇವದಗೆ ಬರುವ ಸಾಧಕರ ಜೊತೆಗೆ ನನಗೆ ಪ್ರಸಾದ ಕಳುಹಿಸುತ್ತಿದ್ದರು.
೭ ಆ ೩. ಪ.ಪೂ. ಡಾಕ್ಟರರು ಸಾಧಕರ ಮಾಧ್ಯಮದಿಂದ ‘ನನಗೆ ಯೋಗ್ಯ ವೈದ್ಯಕೀಯ ಚಿಕಿತ್ಸೆ ಸಿಗುತ್ತಿರುವ ಬಗ್ಗೆ ಕೇಳುತ್ತಿದ್ದರು.
೭ ಆ ೪. ಪ.ಪೂ. ಡಾಕ್ಟರರು ಸಾಧಕರ ಮಾಧ್ಯಮದಿಂದ ‘ನೀವು ಹೇಗಿದ್ದಿರಿ ?’, ಎಂದು ಕೇಳುತ್ತಿದ್ದರು. ಈ ಸಂದೇಶವೂ ನನಗೆ ಬಹಳ ಆನಂದ ಮತ್ತು ಪ್ರೇರಣೆಯನ್ನು ನೀಡುತ್ತಿತ್ತು. ಇದರಿಂದ ‘ನನ್ನತ್ತ ಶ್ರೀ ಗುರುಗಳ ಗಮನವಿದೆ’, ಎಂಬ ಅರಿವು ಹೆಚ್ಚಾಗುತ್ತಿತ್ತು.
೭ ಆ ೫. ಆಧ್ಯಾತ್ಮಿಕ ಸ್ತರದ ಉಪಾಯ
ಅ. ‘ನನಗಾಗುವ ಎಲ್ಲ ರೀತಿಯ ತೊಂದರೆಗಳು ದೂರವಾಗಬೇಕು’ ಮತ್ತು ‘ನನ್ನ ಮೇಲೆ ಆಧ್ಯಾತ್ಮಿಕ ಸ್ತರದ ಉಪಾಯಗಳಾಗಬೇಕು’, ಎಂಬುದಕ್ಕಾಗಿ ಪ.ಪೂ. ಡಾಕ್ಟರರು ನನಗೆ ತಮ್ಮ ಹಸ್ತಾಕ್ಷರವಿರುವ ಕಾಗದವನ್ನು ಕಳುಹಿಸಿದರು.
ಆ. ಅವರು ಉಪಯೋಗಿಸಿದ ಮಂಚದ ೩ ದೊಡ್ಡ ಹಲಗೆಗಳನ್ನು ನನಗಾಗಿ ಕಳುಹಿಸಿದ್ದರು. ಆಧ್ಯಾತ್ಮಿಕ ಸ್ತರದ ಉಪಾಯಗಳಿಗಾಗಿ ಅವುಗಳನ್ನು ನಾನು ನನ್ನ ಹಾಸಿಗೆಯ ಕೆಳಗೆ ಅದಲು ಬದಲು ಮಾಡಿ ಇಂದಿಗೂ ಬಳಸುತ್ತೇನೆ.
ಇ. ಸೆಪ್ಟೆಂಬರ್ ೨೦೧೨ ರಲ್ಲಿ ನನ್ನ ೫೦ ನೇ ಹುಟ್ಟುಹಬ್ಬದ ನಿಮಿತ್ತ ಅವರು ನನಗಾಗಿ ಗುರುಕೃಪಾಯೋಗದ ಲೋಗೊ ಮತ್ತು ತಮ್ಮ ಛಾಯಾಚಿತ್ರವನ್ನು ಕಳುಹಿಸಿದರು. ಅದು ನನಗಾಗಿ ಅವರು ಕಳುಹಿಸಿದ ಮಹಾಪ್ರಸಾದವೇ ಆಗಿತ್ತು. ಆ ಲೋಗೊದಿಂದ ನನ್ನ ಸುತ್ತಲೂ ಸಂರಕ್ಷಣಾ ಕವಚ ನಿರ್ಮಾಣವಾಯಿತು ಮತ್ತು ಅವರ ಛಾಯಾಚಿತ್ರವನ್ನು ದೇವರಮಂಟಪದಲ್ಲಿ ಇಟ್ಟಿದುದರಿಂದ ನನಗೆ ಅವರ ಅನುಸಂಧಾನದಲ್ಲಿರಲು ಸಾಧ್ಯವಾಯಿತು.
೭ ಆ ೬. ಪರಾತ್ಪರ ಗುರು ಡಾ. ಆಠವಲೆಯವರು ಸಂತ ಮತ್ತು ಸಾಧಕರ ಮಾಧ್ಯಮದಿಂದ ತಪ್ಪುಗಳನ್ನು ಗಮನಕ್ಕೆ ತಂದು ಕೊಟ್ಟು ನನ್ನ ಸಾಧನೆಯ ಹಾನಿಯನ್ನು ತಪ್ಪಿಸುವುದು : ಇದೇ ಕಾಲಾವಧಿಯಲ್ಲಿ ನನ್ನಿಂದ ತಿಳಿದು-ತಿಳಿಯದೇ ಆದ ತಪ್ಪುಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಸೌ. ಅಶ್ವಿನಿ ಪವಾರ (೯.೭.೨೦೧೭ ಈ ದಿನದಂದು ಅವರು ಸನಾತನದ ೬೯ ನೇ (ಸಮಷ್ಟಿ) ಸಂತರಾದರು.) ಇವರ ಮಾಧ್ಯಮದಿಂದ ನನ್ನ ಗಮನಕ್ಕೆ ತಂದುಕೊಟ್ಟು ನನ್ನ ಸಾಧನೆಯಲ್ಲಿ ಆಗಲಿರುವ ಹಾನಿಯನ್ನು ತಪ್ಪಿಸಿದರು. ಇದಕ್ಕಾಗಿ ಗುರುಚರಣಗಳಲ್ಲಿ ಎಷ್ಟೇ ಕೃತಜ್ಞತೆಗಳನ್ನು ವ್ಯಕ್ತ ಮಾಡಿದರೂ ಅದು ಕಡಿಮೆಯೇ ಆಗಿದೆ.
೮. ಈ ಕಾಲಾವಧಿಯಲ್ಲಿ ಅರಿವಾದ ಗುರುಕೃಪೆಯ ಇತರ ಕೆಲವು ವೈಶಿಷ್ಟ್ಯಪೂರ್ಣ ಅಂಶಗಳು
೮ ಅ. ಗುರುದೇವರ ಕೃಪೆಯಿಂದ ಈ ಕಾಲಾವಧಿಯಲ್ಲಿ ನನ್ನ ಮನಸ್ಸಿನಲ್ಲಿ ಯಾವುದೇ ನಕಾರಾತ್ಮಕ ವಿಚಾರಗಳು ಬರಲಿಲ್ಲ ಅಥವಾ ಯಾವುದೇ ವಿಕಲ್ಪ ಉತ್ಪನ್ನವಾಗಲಿಲ್ಲ. ಇದು ಕೇವಲ ಮತ್ತು ಕೇವಲ ಗುರುಕೃಪೆಯಿಂದಲೇ ಸಾಧ್ಯವಾಯಿತು.
೮ ಆ. ಕೆಟ್ಟ ಶಕ್ತಿಗಳ ದಾಳಿಯಿಂದಾಗಿ ನಡುನಡುವೆ ನನ್ನ ಮನಸ್ಸಿನ ಅಸ್ವಸ್ಥತೆ ಹೆಚ್ಚಾಗುತ್ತಿದ್ದರೂ, ಬೇರೆ ಉಪಾಯ ಮಾಡದಿದ್ದರೂ ಸ್ವಲ್ಪ ಸಮಯದ ನಂತರ ಅದು ಪುನಃ ಕಡಿಮೆಯಾಗುತ್ತಿತ್ತು. ಆಗ ನನಗೆ, ‘ಪ.ಪೂ ಡಾಕ್ಟರರು ಸೂಕ್ಷ್ಮದಿಂದ ನನಗಾಗಿ ನಾಮಜಪಾದಿ ಉಪಾಯ ಮಾಡಿರಬಹುದು’, ಎಂದು ಅನಿಸುತ್ತಿತ್ತು.
೮ ಇ. ‘ಬುದ್ಧಿಯು ಸಾಧನೆಯಲ್ಲಿನ ಅಡಚಣೆಯಾಗಿದೆ. ನಾನು ಬುದ್ಧಿಯಿಂದ ವಿಚಾರ ಮಾಡಿದ್ದರೆ, ”ನನಗೆ ಇಷ್ಟು ಸಮಯ ಸೇವೆಯನ್ನು ಹೇಗೆ ಮಾಡುವುದು ?’, ‘ನನಗೆ ಕುಳಿತುಕೊಳ್ಳಲೂ ಆಗುವುದಿಲ್ಲ, ನಾನು ಸತ್ಸಂಗವನ್ನು ಹೇಗೆ ತೆಗೆದುಕೊಳ್ಳಲಿ ?’, ‘ಶರೀರದಲ್ಲಿ ಶಕ್ತಿ ಇಲ್ಲದ ಕಾರಣ ನನಗೆ ಮಾತನಾಡಲೂ ಬರುವುದಿಲ್ಲ, ಹಾಗಾದರೆ ನಾನು ಮಾತನಾಡುವ ಸೇವೆಯನ್ನು ಹೇಗೆ ಮಾಡಲಿ ?’, ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಬರಬಹುದಿತ್ತು; ಆದರೆ ಪ.ಪೂ. ಗುರುದೇವರ ಕೃಪೆಯಿಂದ ನನ್ನ ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಬರಲೇ ಇಲ್ಲ. ಪ.ಪೂ ಡಾಕ್ಟರರು ಹೇಳಿದ ಸೇವೆಯನ್ನು ನಾನು ವಿಮರ್ಶಿಸದೇ ಬುದ್ಧಿಯನ್ನು ಕೇವಲ ಅವರು ಹೇಳಿದ ಸೇವೆಯನ್ನು ಇನ್ನೂ ಹೆಚ್ಚು ಉತ್ತಮವಾಗಿ ಮಾಡಲು ಉಪಯೋಗಿಸಿದೆನು. ‘ಶ್ರೀ ಗುರುಗಳು ಹೇಳಿದ್ದನ್ನು ಕೂಡಲೇ ಕೃತಿಯಲ್ಲಿ ತರಲು ಪ್ರಯತ್ನಿಸಿದರೆ ಶ್ರೀ ಗುರುಗಳ ಸಂಕಲ್ಪ ಕಾರ್ಯನಿರತವಾಗುತ್ತದೆ ಮತ್ತು ಅವರು ಹೇಳಿದ ಕಾರ್ಯವು ಸಹಜ ಸಾಧ್ಯವಾಗಿ ಅದರಿಂದ ಸಾಧನೆ ಆಗುತ್ತದೆ’, ಇದು ನನಗೆ ಕಲಿಯಲು ಸಿಕ್ಕಿತು.
೮ ಈ. ನಿರಂತರವಾಗಿ ಸೇವೆಯಲ್ಲಿ ತೊಡಗಿದುದರಿಂದ ದೇಹಬುದ್ಧಿ ಕಡಿಮೆಯಾಗುವುದು : ಗುರುದೇವರು ನನ್ನನ್ನು ಎಷ್ಟು ಕಾರ್ಯನಿರತರನ್ನಾಗಿಸಿದ್ದರು, ಅಂದರೆ, ನನಗೆ ಬೇರೆ ವಿಚಾರ ಮಾಡಲು ಬಿಡುವೇ ಇರಲಿಲ್ಲ. ಅವರು ನನ್ನ ಸೇವೆಯ ಹಂಬಲವನ್ನು ಎಷ್ಟು ಹೆಚ್ಚಿಸಿದ್ದರೆಂದರೆ, ಸೇವೆಯನ್ನು ಮಾಡುವಾಗ ನನಗೆ ದೇಹಬುದ್ಧಿಯೇ ಉಳಿಯುತ್ತಿರಲಿಲ್ಲ.’ ನನಗೆ ಅನೇಕ ಸಂತರು ಮತ್ತು ಸಾಧಕರು, ‘ಇಷ್ಟು ತೊಂದರೆ ಇರುವಾಗ ನೀವು ಈ ಸೇವೆಯನ್ನು ಹೇಗೆ ಮಾಡುತ್ತೀರಿ ?’ ಎಂದು ಕೇಳುತ್ತಿದ್ದರು. ಇದಕ್ಕೆ ಉತ್ತರ, ‘ಗುರುಕೃಪೆ’ !
೮ ಉ. ಈ ಕಾಲಾವಧಿಯಲ್ಲಿ ನಾನು ಯಾವತ್ತೂ ದೇವರ ಬಳಿ ‘ನನ್ನ ರೋಗ ಕಡಿಮೆಯಾಗಲಿ’, ಎಂಬ ಪ್ರಾರ್ಥನೆಯನ್ನು ಮಾಡಲಿಲ್ಲ. ‘ಹಾಗೆ ಮಾಡಬೇಕು’, ಎಂಬ ವಿಚಾರ ಯಾವತ್ತೂ ನನ್ನ ಮನಸ್ಸಿನಲ್ಲಿ ಬರಲಿಲ್ಲ.
೯. ಅನುಭೂತಿ
ಗುರುದೇವರ ಕೃಪೆಯಿಂದಲೇ ನನ್ನ ಶಾರೀರಿಕ ಸ್ಥಿತಿ ಬಹಳ ಪ್ರತಿಕೂಲವಾಗಿರುವಾಗಲೂ ನನ್ನಿಂದ ಸೇವೆ ನಡೆಯುತ್ತಿತ್ತು.
ಮೂಕಂ ಕರೋತಿ ವಾಚಾಲಂ ಪಙ್ಗುಂ ಲಂಘಯತೆ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಮ್ ||
ಅರ್ಥ : ಯಾರ ಕೃಪೆಯು ಮೂಕನನ್ನೂ ಮಾತನಾಡುವಂತೆ ಮಾಡುತ್ತದೆಯೋ ಮತ್ತು ಕುಂಟನಿಗೂ ಪರ್ವತವನ್ನು ಏರಲು ಬಲವನ್ನು ನೀಡುತ್ತದೆಯೋ, ಆ ಪರಮಾನಂದಸ್ವರೂಪ ಮಾಧವನಿಗೆ (ಶ್ರೀಕೃಷ್ಣನಿಗೆ) ನಾನು ನಮಸ್ಕರಿಸುತ್ತೇನೆ.
ನಾನು ಅಕ್ಷರಶಃ ಇದರ ಅನುಭೂತಿಯನ್ನು ಪಡೆದೆನು. ಗುರುದೇವರು ಕೇವಲ ಈ ಜೀವದ ತೀವ್ರ ದೇಹಪ್ರಾರಬ್ಧವನ್ನು ಸಹನೀಯ ಮಾತ್ರವಲ್ಲ, ನನ್ನಿಂದ ತೀವ್ರ ಸಾಧನೆಯನ್ನು ಮಾಡಿಸಿ ಕೊಂಡು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಂಡರು. ಎಷ್ಟಿದೆ ಈ ಶ್ರೀ ಗುರುಗಳ ಅಪಾರ ಸಾಮರ್ಥ್ಯ ! ಈ ಕಾಲಾವಧಿಯಲ್ಲಿ ಪರಾತ್ಪರ ಗುರು ಡಾಕ್ಟರರು ನನಗೆ ಬಹಳ ಕಲಿಸಿದರು ಮತ್ತು ಅವರ ಮೇಲಿನ ಶ್ರದ್ಧೆ ಹೆಚ್ಚಾಯಿತು. ಅವರ ನನ್ನ ಮೇಲಿನ ಈ ಕೃಪೆಗಾಗಿ ಅವರ ಚರಣಗಳಲ್ಲಿ ಕೋಟಿಶಃ ಕೃತಜ್ಞತೆಗಳು !’
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದ ಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ !’ (ಮುಂದುವರಿಯುವುದು)
ಇದಂ ನ ಮಮ | (ಈ ಬರಹ ನನ್ನದಲ್ಲ !)
– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨೨.೩.೨೦೨೪)