ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪಾಛತ್ರವಿರುವಾಗ ಸಾಧಕರು ಒತ್ತಡರಹಿತ, ಸಕಾರಾತ್ಮಕ ಮತ್ತು ಆನಂದದಿಂದಿದ್ದು ಸಾಧನೆಯನ್ನು ಮಾಡಬೇಕು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ದೇವದ (ಪನವೇಲ)ನ ಸನಾತನ ಸಂಸ್ಥೆಯ ಆಶ್ರಮದಲ್ಲಿ ನನಗೆ ಅನೇಕ ಸಾಧಕರ ಸತ್ಸಂಗ ಮತ್ತು ಅವರಿಂದ ಸಾಧನೆಯ ಸಂದರ್ಭದಲ್ಲಿ ಬಹಳಷ್ಟು ಕಲಿಯಲು ಸಿಗುತ್ತದೆ. ಗುರುಕೃಪೆಯಿಂದ ನನಗೆ ಕೆಲವು ಸಾಧಕರ ಮತ್ತು ಸಂತರ ವಿಷಯದಲ್ಲಿ ಕಲಿಯಲು ಸಿಕ್ಕಿದ ಗುಣವೈಶಿಷ್ಟ್ಯಗಳನ್ನು ಬರೆದು ಕೊಡುವ ಸೇವೆ ಇತ್ತು. ಸಾಧಕರಿಂದ ಕಲಿಯುವ ಉದ್ದೇಶದಿಂದ ನಾನು ಆಶ್ರಮದ ಕೆಲವು ಸಾಧಕರಿಗೆ, ”ನೀವು ೨ ನಿಮಿಷಗಳ ಕಾಲ ವಿಚಾರ ಮಾಡಿ ಒಂದೇ ವಾಕ್ಯದಲ್ಲಿ ನಿಮ್ಮಲ್ಲಿರುವ ೫ ಗುಣಗಳನ್ನು ನನಗೆ ಹೇಳಬಹುದೇ ?’’ ಎಂದು ಕೇಳಿದೆನು. ಆಗ ಸುಮಾರು ಶೇ. ೮೦ ರಷ್ಟು ಸಾಧಕರಿಗೆ ಅವರಲ್ಲಿರುವ ಒಂದೇ ಒಂದು ಗುಣವನ್ನು ತಕ್ಷಣ ಹೇಳಲು ಸಾಧ್ಯವಾಗಲಿಲ್ಲ. ಉಳಿದ ಶೇ. ೨೦ ರಷ್ಟು ಸಾಧಕರು ಬಹಳ ವಿಚಾರ ಮಾಡಿ ಅವರಲ್ಲಿರುವ ೧-೨ ಗುಣಗಳನ್ನು ಹೇಳಿದರು; ಆದರೆ ಆಶ್ಚರ್ಯವೆಂದರೆ ನಾನು ಅವರಿಗೆ ಅವರಲ್ಲಿರುವ ೫ ಸ್ವಭಾವದೋಷಗಳನ್ನು ಹೇಳಲು ಹೇಳಿದಾಗ ಅವರು ಸ್ವಯಂಪ್ರೇರಿತರಾಗಿ ತಮ್ಮಲ್ಲಿನ ಅನೇಕ ಸ್ವಭಾವದೋಷಗಳನ್ನು ಮತ್ತು ಅಹಂನ ಲಕ್ಷಣಗಳನ್ನು ತಕ್ಷಣ ಹೇಳಿದರು. ಈ ಬಗ್ಗೆ ಸಹಸಾಧಕರೊಂದಿಗೆ ಮಾತನಾಡುವಾಗ ಪರಾತ್ಪರ ಗುರು ಡಾಕ್ಟರರು ನಮಗೆ ಮುಂದಿನ ಅಂಶಗಳನ್ನು ಸೂಚಿಸಿದರು.

ಪೂ. ಶಿವಾಜಿ ವಟಕರ

೧. ನಮ್ಮ ಮನಸ್ಸಿನಲ್ಲಿ ಬರುವ ಮೊದಲ ವಿಚಾರ ಸಕಾರಾತ್ಮಕವೋ ಅಥವಾ ನಕಾರಾತ್ಮಕವೋ ?, ಎಂಬುದರ ಮೇಲೆ ನಮ್ಮ ಮನಸ್ಸಿನ ಸ್ಥಿತಿ ಅವಲಂಬಿಸಿರುತ್ತದೆ

‘ಸಹಸಾಧಕರು ಅಥವಾ ಸಮಾಜದ ಇತರ ವ್ಯಕ್ತಿಗಳು ನಮ್ಮನ್ನು ಭೇಟಿಯಾದಾಗ ನಮಗೆ ಅವರಲ್ಲಿರುವ ಮತ್ತು ನಮ್ಮಲ್ಲಿರುವ ಮೊದಲು ಸ್ವಭಾವದೋಷಗಳು ಕಾಣಿಸುತ್ತವೆಯೋ ಅಥವಾ ಗುಣಗಳು ಕಾಣಿಸುತ್ತವೆ ?’, ಇದರ ಬಗ್ಗೆ ನಾವು ವಿಚಾರ ಮಾಡಬೇಕು. ನಮ್ಮ ಮನಸ್ಸಿನಲ್ಲಿ ಬರುವ ಮೊದಲ ವಿಚಾರ ಸಕಾರಾತ್ಮಕವಾಗಿದೆಯೋ ಅಥವಾ ನಕಾರಾತ್ಮಕವಾಗಿದೆ ?, ಎಂಬುದರ ಮೇಲೆ ನಮ್ಮ ಮನಃಸ್ಥಿತಿಯು ಅವಲಂಬಿಸಿರುತ್ತದೆ ಮತ್ತು ಅದಕ್ಕನುಸಾರ ನಮ್ಮ ವರ್ತನೆಯಿರಬಲ್ಲದು.

೨. ನಾವು ನಮ್ಮ ಮತ್ತು ಇತರರ ಗುಣಗಳನ್ನು ನೋಡಿ ಸಕಾರಾತ್ಮಕ ಮತ್ತು ಆನಂದದಿಂದ ಇರಬೇಕು

ನಮ್ಮ ಸಾಧನೆಯೆಂದು ನಮ್ಮಲ್ಲಿರುವ ಕೆಲವು ಗುಣಗಳು ಮತ್ತು ನಮ್ಮ ಮೇಲಿನ ಗುರುಕೃಪೆ ಇವುಗಳಿಂದಾಗಿ ನಾವು ನಾಮಸ್ಮರಣೆ, ಸತ್ಸಂಗ, ಸತ್ಸೇವೆ, ಭಾವಜಾಗೃತಿ ಇತ್ಯಾದಿ ಪ್ರಯತ್ನಗಳನ್ನು ಮಾಡುತ್ತೇವೆ. ಆ ಸಮಯದಲ್ಲಿ ನಾವು ಭಗವಂತ ಅಥವಾ ಗುರುದೇವರ ಅನುಸಂಧಾನದಲ್ಲಿ ಇರುವುದರಿಂದ ಅಥವಾ ಸತ್ಸೇವೆಯ ವಿಚಾರಗಳಲ್ಲಿ ಇರುವುದರಿಂದ ನಮಗೆ ಶಕ್ತಿ, ಚೈತನ್ಯ ಮತ್ತು ಆನಂದ ಸಿಗುತ್ತದೆ. ನಾವು ಸ್ವಭಾವದೋಷ ಮತ್ತು ನಕಾರಾತ್ಮಕ ವಿಷಯಗಳ ವಿಚಾರ ಮಾಡುತ್ತಿದ್ದರೆ ಅವುಗಳ ಅನುಸಂಧಾನದಲ್ಲಿರುತ್ತೇವೆ, ಆಗ ನಮಗೆ ದುಃಖ ನಿರಾಶೆ ಮತ್ತು ಕೆಟ್ಟ ಶಕ್ತಿಗಳ ತೊಂದರೆಯಾಗುತ್ತದೆ. ಅದಕ್ಕಾಗಿ ನಾವು ನಮ್ಮಲ್ಲಿರುವ ಮತ್ತು ಇತರರಲ್ಲಿರುವ ಗುಣಗಳನ್ನು ನೋಡಿ ಸಕಾರಾತ್ಮಕ ಮತ್ತು ಆನಂದದಿಂದಿರಲು ಪ್ರಯತ್ನಿಸಬೇಕು.

೩. ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವಾಗ ಸಾಧಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಜೊತೆಗೆ ಗುಣಸಂವರ್ಧನೆಯನ್ನೂ ಮಾಡಬೇಕು

ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಗುರುಕೃಪಾಯೋಗ ಸಾಧನಾಮಾರ್ಗಕ್ಕನುಸಾರ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯ ಪ್ರಕ್ರಿಯೆಗೆ ಅಸಾಧಾರಣ ಮಹತ್ವವಿದೆ. ನಾವೆಲ್ಲ ಸಾಧಕರು ಅದಕ್ಕನುಸಾರ ಪ್ರಯತ್ನಿಸಿ ಪ್ರಗತಿಯನ್ನೂ ಮಾಡಿಕೊಳ್ಳುತ್ತಿದ್ದೇವೆ; ಆದರೆ ಇದನ್ನು ಮಾಡುವಾಗ ‘ನಮ್ಮಲ್ಲಿರುವ ಗುಣಗಳನ್ನು ನೋಡುವುದು ಮತ್ತು ಗುಣಸಂವರ್ಧನೆ ಮಾಡಿಕೊಳ್ಳುವುದು, ಹಾಗೆಯೇ ಇತರ ಸಾಧಕರಲ್ಲಿನ ಗುಣಗಳನ್ನು ನೋಡಿ ಅವುಗಳನ್ನು ಕಲಿತುಕೊಳ್ಳುವುದು’ ಮತ್ತು ಅವುಗಳಿಗನುಸಾರ ಪ್ರಯತ್ನಿಸುವುದೂ ಅಷ್ಟೇ ಆವಶ್ಯಕವಾಗಿದೆ. ಇವುಗಳಿಂದ ನಮ್ಮಲ್ಲಿ ಸಕಾರಾತ್ಮಕತೆ ಮತ್ತು ಸಹಜತೆ ಬಂದು ನಾವು ಸದಾ ಆನಂದದಿಂದ ಇರಬಹುದು, ಹಾಗೆಯೇ ನಾವು ಈಶ್ವರಪ್ರಾಪ್ತಿಯ ಧ್ಯೇಯವನ್ನು ಸಂಘರ್ಷವಿಲ್ಲದೇ ಸಹಜ ಪ್ರಾಪ್ತಮಾಡಿಕೊಳ್ಳಬಹುದು’, ಎಂದು ನನಗೆ ಅನಿಸುತ್ತದೆ.

೪. ಸಕಾರಾತ್ಮಕವಾಗಿ ಮಾತನಾಡುವ ವ್ಯಕ್ತಿಯು ಎಲ್ಲರಿಗೂ ಇಷ್ಟವಾಗುತ್ತಾನೆ ಮತ್ತು ನಕಾರಾತ್ಮಕವಾಗಿ ಮಾತನಾಡುವ ವ್ಯಕ್ತಿಯು ಯಾರಿಗೂ ಇಷ್ಟವಾಗುವುದಿಲ್ಲ

ಸಕಾರಾತ್ಮಕವಾಗಿ ಮಾತನಾಡುವ ವ್ಯಕ್ತಿಯು ಎಲ್ಲರಿಗೂ ತಮ್ಮವನೆನಿಸಿ ಅವನ ಸತ್ಸಂಗ ಬೇಕೆನಿಸುತ್ತದೆ ಮತ್ತು ನಕಾರಾತ್ಮಕವಾಗಿ ಮಾತನಾಡುವ ವ್ಯಕ್ತಿಯು ನಮಗೆ ಬೇಡವೆನಿಸುತ್ತಾನೆ; ಏಕೆಂದರೆ ನಕಾರಾತ್ಮಕ ಮಾತನಾಡುವುದರಿಂದ ರಜ-ತಮ ಹೆಚ್ಚಾಗಿ ವಾತಾವರಣವು ಕಲುಷಿತವಾಗುತ್ತದೆ. ನಾವು ಯಾವಾಗಲೂ ನಮ್ಮ ಮತ್ತು ಇತರರ ಸ್ವಭಾವದೋಷಗಳನ್ನು ನೋಡುತ್ತಿದ್ದರೆ, ಅದು ಯಾರಿಗೂ, ತೀರಾ ಭಗವಂತನಿಗೂ ಇಷ್ಟವಾಗುವುದಿಲ್ಲ. ಅದಕ್ಕಾಗಿ ನಾವು ಪ್ರತಿಯೊಂದು ವಿಷಯ ಮತ್ತು ವ್ಯಕ್ತಿಯಲ್ಲಿರುವ ಗುಣಗಳನ್ನು ನೋಡಿ ಅವರೊಂದಿಗೆ ವ್ಯವಹರಿಸಿದರೆ, ನಮ್ಮ ಸಾಧನೆಯಾಗಿ ಎಲ್ಲರಿಗೂ ಆನಂದ ಸಿಗುತ್ತದೆ.

೫. ಸಕಾರಾತ್ಮಕ ವ್ಯಕ್ತಿಗೆ ಪ್ರತಿಯೊಂದು ಅಡಚಣೆಯಲ್ಲಿ ಅವಕಾಶ ಕಾಣಿಸುವುದರಿಂದ ಸಾಧಕರು ಸಕಾರಾತ್ಮಕ ಮತ್ತು ಆನಂದದಿಂದಿರುವುದು ಆವಶ್ಯಕ !

‘ನಕಾರಾತ್ಮಕ ವ್ಯಕ್ತಿಗೆ ಪ್ರತಿಯೊಂದು ಅವಕಾಶದಲ್ಲಿ ಅಡಚಣೆ ಕಾಣಿಸುತ್ತದೆ, ಸಕಾರಾತ್ಮಕ ವ್ಯಕ್ತಿಗೆ ಪ್ರತಿಯೊಂದು ಅಡಚಣೆಯಲ್ಲಿ ಅವಕಾಶ ಕಾಣಿಸುತ್ತದೆ’, ಎಂದು ಹೇಳುತ್ತಾರೆ. ಅದರಂತೆ ಅಹಂಕಾರಿ ವ್ಯಕ್ತಿಗೆ ಪ್ರತಿಯೊಂದು ವ್ಯಕ್ತಿಯಲ್ಲಿ ಸ್ವಭಾವದೋಷಗಳು ಕಾಣಿಸುತ್ತವೆ ಮತ್ತು ಗುಣವಂತ ಸಾಧಕನಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಈಶ್ವರೀ ಗುಣವನ್ನು ನೋಡುವ ಮತ್ತು ಕಲಿಯುವ ಸಂಸ್ಕಾರವಿರುತ್ತದೆ. ಅದಕ್ಕಾಗಿ ನಾವು ಯಾವಾಗಲೂ ಸಕಾರಾತ್ಮಕರಾಗಿದ್ದು ಪ್ರತಿಯೊಂದು ವ್ಯಕ್ತಿಯಲ್ಲಿನ ಈಶ್ವರೀ ಗುಣವನ್ನು ಅಂಗೀಕರಿಸಿ ಆನಂದದಿಂದಿರಲು ಪ್ರಯತ್ನಿಸುವುದು ಆವಶ್ಯಕವಾಗಿದೆ.

೬. ‘ಜೀವನದಲ್ಲಿ ಬರುವ ಅಡಚಣೆಗಳು ಸಹ ಈಶ್ವರನ ಇಚ್ಛೆಯಾಗಿದೆ’, ಎಂದು ತಿಳಿದು ಸಾಧಕನು ಸಾಧನೆ ಮಾಡಿದರೆ ಸಾಧಕನಿಗೆ ಅಡಚಣೆಯಲ್ಲೂ ಆನಂದ ಸಿಗುತ್ತದೆ

ಪ್ರತಿಯೊಬ್ಬರಲ್ಲಿ ಹೆಚ್ಚುಕಡಿಮೆ ಪ್ರಮಾಣದಲ್ಲಿ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳಿರುತ್ತವೆ. ಅವುಗಳನ್ನು ಜಯಿಸುವುದು ಮತ್ತು ತಮ್ಮಲ್ಲಿರುವ ಗುಣಗಳನ್ನು ಬೆಳೆಸುವುದು, ಇದು ಸಾಧನೆಯಾಗಿದೆ. ಜೀವನವನ್ನು ನಡೆಸುವಾಗ ತನ್ನ ಪ್ರಾರಬ್ಧ ಮತ್ತು ತಪ್ಪುಗಳಿಂದಾಗಿ ಪ್ರಸಂಗಗಳು ಘಟಿಸುತ್ತವೆ. ಇದರ ಪರಿಣಾಮವೆಂದು ನಮಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳಾಗುತ್ತವೆ. ‘ಜೀವನದಲ್ಲಿ ಬರುವ ಅಡಚಣೆಗಳೂ ಈಶ್ವರೇಚ್ಛೆಯಿಂದ ಮತ್ತು ಈಶ್ವರೀ ಆಯೋಜನೆಗನುಸಾರ ಬರುತ್ತಿರುತ್ತವೆ’, ಎಂದು ತಿಳಿದು ಸಾಧಕನು ಸಾಧನೆಯನ್ನು ಮಾಡಿದರೆ, ಸಾಧಕನಿಗೆ ಅಡಚಣೆಗಳ ಸಮಯದಲ್ಲಿಯೂ ಆನಂದ ಸಿಗುತ್ತದೆ.

೭. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಬೆಟ್ಟದಷ್ಟು ಆನಂದ ನೀಡುವುದು

‘ಸುಖ ನೋಡಿದರೆ ಎಳ್ಳಿನಷ್ಟು ಮತ್ತು ದುಃಖ ಬೆಟ್ಟದಷ್ಟು |’ ಎಂದು ಸಂತ ತುಕಾರಾಮ ಮಹಾರಾಜರು ಹೇಳಿದ್ದಾರೆ. ಅದನ್ನು ಪ್ರತಿಯೊಬ್ಬ ಸಾಧಕನು ವ್ಯಾವಹಾರಿಕ ಜೀವನದಲ್ಲಿ ಅನುಭವಿಸಿದ್ದಾನೆ; ಆದರೆ ಪರಾತ್ಪರ ಗುರು ಡಾ. ಆಠವಲೆಯವರು ನಮ್ಮೆಲ್ಲ ಸಾಧಕರಿಗೆ ‘ದುಃಖ ಸಣ್ಣ ಕಣದಷ್ಟು ಮತ್ತು ಆನಂದ ಬೆಟ್ಟದಷ್ಟು’ ನೀಡುತ್ತಿದ್ದಾರೆ. ಇಂತಹ ಜಗದ್ಗುರು ಮತ್ತು ಮೋಕ್ಷಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನಮಗೆ ಗುರುಗಳೆಂದು ಲಭಿಸಿದ್ದಾರೆ. ಅದಕ್ಕಾಗಿ ನಾವು ಒತ್ತಡರಹಿತ, ಸಕಾರಾತ್ಮಕವಾಗಿ ಮತ್ತು ಆನಂದದಿಂದಿದ್ದು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಚರಣಗಳಲ್ಲಿ ಯಾವಾಗಲೂ ಕೃತಜ್ಞರಾಗಿರೋಣ.’

– (ಪೂ.) ಶಿವಾಜಿ ವಟಕರ (ಸನಾತನದ ೧೦೨ ನೇ (ಸಮಷ್ಟಿ) ಸಂತರು, ವಯಸ್ಸು ೭೭ ವರ್ಷಗಳು), ಸನಾತನ ಆಶ್ರಮ, ದೇವದ, ಪನವೇಲ. (೨೦.೧೨.೨೦೨೩)