ಪೂ. ವಿನಾಯಕ ರಘುನಾಥ ಕರ್ವೆ ಇವರ ೮೨ ನೇ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು
ಆಶ್ವಯುಜ ಕೃಷ್ಣ ಚತುರ್ಥಿ (೨೦.೧೦.೨೦೨೪) ಈ ದಿನದಂದು ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ರಘುನಾಥ ಕರ್ವೆ (ಪೂ. ಕರ್ವೆಮಾಮಾ) ಇವರ ೮೨ ನೇ ಹುಟ್ಟುಹಬ್ಬ ಇದೆ. ಆ ನಿಮಿತ್ತ ಅರಿವಾದ ಅವರ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.
೧. ಸರಳ ಜೀವನಶೈಲಿ ಮತ್ತು ನಿರಪೇಕ್ಷ ವೃತ್ತಿ
ಪೂ. ಕರ್ವೆಮಾಮಾರವರ ಜೀವನಶೈಲಿ ಅತ್ಯಂತ ಸರಳವಿದೆ. ಅವರು ತಾವೇ ಸ್ವತಃ ದ್ವಿಚಕ್ರ ವಾಹನ ಚಲಾಯಿಸಿಕೊಂಡು ತಮ್ಮ ವೈಯಕ್ತಿಕ ಸೇವೆ ಮತ್ತು ಕೆಲಸಗಳನ್ನು ಮಾಡುತ್ತಾರೆ. ಅವರು ಯಾವಾಗಲೂ ನೆಲದ ಮೇಲೆ ಕುಳಿತುಕೊಂಡೇ ಊಟ ಮಾಡುತ್ತಾರೆ. ‘ತಮಗೆ ಪ್ರತ್ಯೇಕವಾಗಿ ಏನಾದರೂ ಪದಾರ್ಥ ಮಾಡಿಕೊಡಬೇಕೆಂದು’ ಅವರು ಎಂದೂ ಅಪೇಕ್ಷಿಸುವುದಿಲ್ಲ. ಅವರು ಆನಂದದಿಂದ ಪ್ರಸಾದ ಮತ್ತು ಮಹಾಪ್ರಸಾದ ಸೇವಿಸುತ್ತಾರೆ.
೨. ಪ್ರಯಾಣ ಮಾಡಿಯೂ ದಣಿವಾಗದಿರುವುದು
ಕೆಲವೊಮ್ಮೆ ಅವರು ಊರಾದ ಕಾರವಾರಕ್ಕೆ ಹೋಗುತ್ತಾರೆ, ಮಂಗಳೂರಿನಿಂದ ಸುಮಾರು ೫-೬ ಗಂಟೆಗಳ ಪ್ರಯಾಣವಿರುತ್ತದೆ. ಇಷ್ಟು ಪ್ರಯಾಣ ಮಾಡಿಯೂ ಅವರ ಮುಖದಲ್ಲಿ ಆಯಾಸದ ಲಕ್ಷಣಗಳಿರುವುದಿಲ್ಲ.
೩. ಸೇವೆಯ ತಳಮಳ
ಪೂ. ಮಾಮಾರವರು ಕುಂಕುಮದ ಡಬ್ಬಿಗಳ ‘ಪ್ಯಾಕಿಂಗ್’ ಸೇವೆ ಮಾಡುತ್ತಾರೆ. ಅದೇ ರೀತಿ ಸಾಧಕರಿಗಾಗಿ ನಾಮಜಪಾದಿ ಉಪಾಯವನ್ನು ಮಾಡುತ್ತಾರೆ, ಅವರು ಸತತ ಉತ್ಸಾಹದಿಂದ ಸೇವೆ ಮಾಡುತ್ತಾರೆ. ಇತ್ತೀಚೆಗೆ ಅವರಿಗೆ ಕೆಮ್ಮು ನಿರಂತರ ಬಂದು ಕಫ ತುಂಬಿತ್ತು. ಆದರೂ ಸೇವೆಯನ್ನು ನಿಲ್ಲಿಸದೇ ನಿರಂತರವಾಗಿ ಮಾಡುತ್ತಿದ್ದರು.
೪. ಸಾಧಕರ ಸಂದೇಹ ನಿವಾರಣೆ
ಪೂ. ಮಾಮಾ ಮಿತಭಾಷಿಯಾಗಿದ್ದಾರೆ; ಆದರೆ ಅವರಿಗೆ ಸಾಧನೆಯ ಬಗ್ಗೆ ಏನಾದರೂ ಸಂದೇಹ ಅಥವಾ ಪ್ರಶ್ನೆ ಕೇಳಿದರೆ ಅವರ ಅಗಾಧ ಜ್ಞಾನಭಂಡಾರದ ಪರಿಚಯವಾಗುತ್ತದೆ. ಅವರು ‘ಮನಾಚೆ ಶ್ಲೋಕ’, ಭಗವದ್ಗೀತೆಯ ಶ್ಲೋಕ ಇತ್ಯಾದಿಗಳ ಭಾವಾರ್ಥ ತಿಳಿಸಿ ಹೇಳುತ್ತಾರೆ.
೫. ಸತತ ನಾಮಜಪ ಮಾಡುವುದು
ಇಡೀ ದಿನ ಅವರ ಮನಸ್ಸು ಜಪದಲ್ಲಿಯೇ ಇರುತ್ತದೆ. ಜಪಮಾಲೆಯನ್ನು ಅವರು ತಮ್ಮ ಕೈಯಿಂದ ಬಿಡುವುದೇ ಅಪರೂಪ ಎನ್ನಬಹುದು.
೬. ಚೈತನ್ಯದಿಂದ ಸಾಧಕರ ಉತ್ಸಾಹ ಹೆಚ್ಚಾಗುವುದು
ಪೂ. ಮಾಮಾರವರ ಚೈತನ್ಯದಿಂದಾಗಿ ಅವರಿರುವ ಪರಿಸರದಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ. ಇದರಿಂದ ಸಾಧಕರಿಗೆ ಸೇವೆಯ ಉತ್ಸಾಹ ಹೆಚ್ಚಾಗುತ್ತದೆ ಮತ್ತು ಪೂ. ಮಾಮಾರವರ ಅಸ್ತಿತ್ವದಿಂದಾಗಿ ಎಲ್ಲರಿಗೂ ಅವರ ಬಗ್ಗೆ ಆತ್ಮೀಯತೆ ಮೂಡುತ್ತದೆ.
೭. ಭಕ್ತಿಸತ್ಸಂಗದ ಆಸಕ್ತಿ
ಗುರುವಾರದ ಮಧ್ಯಾಹ್ನ ೨.೩೦ ಕ್ಕೆ ಆಗುವ ಭಕ್ತಿಸತ್ಸಂಗವನ್ನು ಪೂ. ಮಾಮಾ ನಿಯಮಿತ ಕೇಳುತ್ತಾರೆ.
೮. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕುರಿತಾದ ಭಾವ
ಸಚ್ಚಿದಾನಂದ ಪರಬ್ರಹ್ಮ ಡಾ ಆಠವಲೆಯವರ ಸ್ಮರಣೆಯಿಂದ ಪೂ. ಮಾಮಾರವರ ಭಾವಜಾಗೃತವಾಗುತ್ತದೆ. ಪೂ. ರಮಾನಂದ ಗೌಡ ಇವರು ಪ.ಪೂ.ಗುರುದೇವರ ಪ್ರಸಂಗ ಅಥವಾ ಅನುಭೂತಿ ಹೇಳುವಾಗ ಪೂ. ಮಾಮಾ ಬೇರೆಯೇ ಸ್ಥಿತಿಯಲ್ಲಿರುತ್ತಾರೆ.
ಪೂ. ಮಾಮಾರಂತಹ ಸಂತರ ಸತ್ಸಂಗ ದೊರಕಿಸಿಕೊಡುವ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಚರಣಗಳಲ್ಲಿ ಅನನ್ಯ ಕೃತಜ್ಞತಾಭಾವದಿಂದ ಪ್ರಾರ್ಥನೆ ಮಾಡುತ್ತೇನೆ, ‘ಅವರಂತೆಯೇ ನಮ್ಮಲ್ಲಿಯೂ ಸಾಧನೆಯ ಉತ್ಸಾಹ, ತಳಮಳ ಬರಲಿ’, ಎಂದು ಶ್ರೀ ಗುರುಚರಣಗಳಲ್ಲಿ ಬೇಡುತ್ತಿದ್ದೇನೆ.
– ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೩, ವಯಸ್ಸು ೫೯ ವರ್ಷ), ಮಂಗಳೂರು. (೩೦.೯.೨೦೨೪)