ಬ್ರಿಟನ್ನಿನ ರಾಜ ಮೂರನೇ ಚಾರ್ಲ್ಸ್‌ರ ಪಟ್ಟಾಭಿಷೇಕಕ್ಕೆ ರಾಣಿಯಾದ ಕಮಿಲಾರು ಕೋಹಿನೂರ ವಜ್ರವಿರುವ ಕಿರೀಟವನ್ನು ಧರಿಸುವುದಿಲ್ಲ !

ಭಾರತೀಯರ ವಿರೋಧದ ಪರಿಣಾಮ !

ಲಂಡನ (ಬ್ರಿಟನ) – ಬ್ರಿಟನ್ನಿನ ರಾಜ ಮೂರನೇ ಚಾರ್ಲ್ಸ್‌ರ ಪಟ್ಟಾಭಿಷೇಕದ ಸಮಯದಲ್ಲಿ ಅವರ ಪತ್ನಿ ರಾಣಿ ಕಮಿಲಾರವರು ಕೊಹಿನೂರ ವಜ್ರವನ್ನು ಹಾಕಲಾದ ಕಿರೀಟವನ್ನು ಧರಿಸದಿರುವುದಾಗಿ ನಿರ್ಧರಿಸಿದ್ದಾರೆ. ಇದು ಭಾರತೀಯ ಸಮಾಜದ ವಿರೋಧದ ವಿಜಯವಾಗಿದೆ ಎಂದು ಹೇಳಲಾಗುತ್ತಿದೆ. ಬ್ರಿಟೀಷರು ಕೊಹಿನೂರ ವಜ್ರವನ್ನು ಭಾರತದಿಂದ ದೋಚಿದ್ದರು. ಇದರಿಂದಾಗಿ ಭಾರತದಿಂದ ಇದಕ್ಕೆ ಮೊದಲಿನಿಂದಲೂ ವಿರೋಧವಿತ್ತು ಹಾಗೂ ಅದನ್ನು ಭಾರತಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಲಾಗುತ್ತಿದೆ. ಬರುವ ಮೇ ೬ರಂದು ಪಟ್ಟಾಭಿಷೇಕದ ಕಾರ್ಯಕ್ರಮ ಜರುಗಲಿದೆ. ರಾಣಿ ಕಮಿಲಾರವರು ಈಗ ರಾಣಿ ಮೇರಿಯ ಮುಕುಟವನ್ನು ಧರಿಸಲು ನಿರ್ಧರಿಸಿದ್ದಾರೆ. ಇದರ ಮೇಲೂ ಕೊಹಿನೂರಿನಂತಹ ವಜ್ರವನ್ನು ಅಳವಡಿಸಲಾಗಿದೆ. ಆದರೆ ಅದನ್ನೂ ಬ್ರಿಟೀಷರು ಇತರ ದೇಶಗಳಿಂದ ದೋಚಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಈಗ ಭಾರತೀಯರು ಹಾಗೂ ಭಾರತ ಸರಕಾರವು ವಜ್ರವನ್ನು ಹಿಂತರಲು ಪ್ರಯತ್ನಿಸಬೇಕು !