ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಪರ್ಯಾಯ ಹೆಸರು ನೀಡುವುದರ ಬಗ್ಗೆ ಮಹಾನಗರ ಪಾಲಿಕೆಯಿಂದ ಸಲಹೆ ಕೇಳಿದೆ !

ಹುಬ್ಬಳ್ಳಿ – ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ (ಹೆಚ್.ಡಿ.ಎಂ.ಸಿ.ಯು) ಈದ್ಗಾ ಮೈದಾನ ಮತ್ತು ಮಂತೂರ ರಸ್ತೆ ಎಂದು ಪ್ರಸಿದ್ಧ ಆಗಿರುವ ಮೈದಾನದ ಹೆಸರು ಕೊಡುವ ಪ್ರಸ್ತಾಪಕ್ಕಾಗಿ ಸೂಚನೆ ಮತ್ತು ದೂರು ಕೇಳಿದೆ. ಆಗಸ್ಟ್ ೨೦೨೨ ರಲ್ಲಿ ಎಚ್.ಡಿ.ಎಂ.ಸಿ. ಯ ಸಾಮಾನ್ಯ ಸಭೆಯಲ್ಲಿ ವಿಭಾಗ ಕ್ರಮಾಂಕ ೫೭ ರಲ್ಲಿ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನಕ್ಕೆ ‘ಕಿತ್ತೂರ ರಾಣಿ ಚೆನ್ನಮ್ಮ ಮೈದಾನ’ ಈ ಹೆಸರು ನೀಡವ ಪ್ರಸ್ತಾವ ಸಮ್ಮತಿಸಿದ್ದರು. ಈ ಕುರಿತು ದೂರು ಮತ್ತು ಸಲಹೆಯನ್ನು ೩೦ ದಿನದ ಒಳಗೆ ಹೆಚ್.ಡಿ.ಎಂ.ಸಿ.ಯ ಝೋನ್ ಕ್ರಮಾಂಕ ೮ ರ ಕಾರ್ಯಾಲಯದಲ್ಲಿ ಪ್ರಸ್ತುತಪಡಿಸಿ ಬಹುದು. ಅದೇ ಪ್ರಕಾರ ವಿಭಾಗ ಕ್ರಮಾಂಕ ೬೧ ಮತ್ತು ೬೨ (ಮಂತುರ್ ರೋಡ)ರ ರಸ್ತೆಗೆ ‘ಜೈ ಭೀಮ ಮಾರ್ಗ’ ಎಂಬ ಹೆಸರು ನೀಡುವ ಪ್ರಸ್ತಾವ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಹೆಚ್‍.ಡಿ.ಎಂ.ಸಿ.ಯ ಸಾಮಾನ್ಯ ಸಭೆಯಲ್ಲಿ ಸಮ್ಮತಿಸಿತ್ತು. ಈಗ ಹೆಚ್.ಡಿ.ಎಂ.ಸಿ.ಯು ಸಲಹೆ ಮತ್ತು ದೂರ ಕೇಳಿದೆ.