ಭ್ರಷ್ಟಾಚಾರದಿಂದ ಕೂಡಿರುವ ಮಹಾರಾಷ್ಟ್ರದ ಅಬಕಾರಿ ಇಲಾಖೆ !
ನಾಶಿಕ – ಉಪಹಾರಗೃಹ ಮತ್ತು ಮದ್ಯದಂಗಡಿಗಳ ಪರವಾನಿಗೆ ಮುಂದುವರಿಸಲು ಪ್ರತಿ ತಿಂಗಳು 3 ಉಪಾಹಾರಗೃಹಗಳಿಂದ 12 ಸಾವಿರ ರೂಪಾಯಿಗಳ ಹಪ್ತಾ ಕೇಳಿ, ಅದರ ಬದಲು 9 ಸಾವಿರ ರೂಪಾಯಿಗಳ ಲಂಚವನ್ನು ಸ್ವೀಕರಿಸಿರುವ ಪ್ರಕರಣದಲ್ಲಿ ಮಹಾರಾಷ್ಟ್ರದ ಅಬಕಾರಿ ಇಲಾಖೆಯ ಅಧಿಕಾರಿ ಲೊಕೇಶ ಗಾಯಕವಾಡರೊಂದಿಗೆ 2 ಖಾಸಗಿ ದಲ್ಲಾಳಿ ಪಂಡಿತ ಶಿಂದೆ ಮತ್ತು ಪ್ರವೀಣ ಠೊಂಬರೆ ಇವರನ್ನು ಭ್ರಷ್ಟಾಚಾರ ತಡೆ ಇಲಾಖೆಯ ಅಧಿಕಾರಿಗಳು ಫೆಬ್ರುವರಿ 7 ರಂದು ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.
1. ನಿಫಾಡ ನಗರದಲ್ಲಿ ಉಪಾಹಾರಗೃಹಗಳ ವ್ಯವಹಾರ ಹೊಂದಿರುವ ದೂರುದಾರನ ಯೆವಲಾ ರಸ್ತೆಯಲ್ಲಿ 3 ಬಾರ್ ಮತ್ತು ಉಪಾಹಾರಗೃಹಗಳಿವೆ. ಇದನ್ನು ರಾಜ್ಯ ಅಬಕಾರಿ ಇಲಾಖೆಯ ದಳದ ಪರಿಶೀಲನೆ ನಡೆಸುತ್ತಿರುತ್ತದೆ.
2. ದೈನಂದಿನ ಪರಿಶೀಲನೆಯ ಸಮಯದಲ್ಲಿ ಉಪಾಹಾರಗೃಹದ ಕೆಲಸಕಾರ್ಯಗಳಲ್ಲಿ ಕುಂದು ಕೊರತೆಯನ್ನು ತೋರಿಸದೇ ಇರಲು ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿ ಗಾಯಕವಾಡ ಹಾಗೆಯೇ ವಸೂಲಿಗಾಗಿ ಮಧ್ಯಸ್ತಿಕೆ ನಡೆಸುತ್ತಿದ್ದ ಖಾಸಗಿ ವ್ಯಕ್ತಿ ಶಿಂದೆ ಮತ್ತು ಠೊಂಬರೆಯವರು ಒಂದು ಉಪಾಹಾರಗೃಹದಿಂದ 4 ಸಾವಿರ ರೂಪಾಯಿಗಳಂತೆ ಒಟ್ಟು 12 ಸಾವಿರ ರೂಪಾಯಿ ಲಂಚವನ್ನು ಫೆಬ್ರುವರಿ 3 ರಂದು ಕೇಳಿದ್ದರು.
3. ಹೊಂದಾಣಿಕೆಯ ಬಳಿಕ 3 ಉಪಾಹಾರಗೃಹಗಳಿಂದ 9 ಸಾವಿರ ರೂಪಾಯಿಗಳನ್ನು ನೀಡಲು ಒಪ್ಪಂದವಾಗಿತ್ತು. ತದನಂತರ ಈ ಪ್ರಕರಣದ ದೂರುದಾರನು ಭ್ರಷ್ಟಾಚಾರ ವಿರೋಧಿ ಇಲಾಖೆಯಲ್ಲಿ ದೂರು ದಾಖಲಿಸಿದ್ದರು.
ಸಂಪಾದಕೀಯ ನಿಲುವುಎಲ್ಲ ಸರಕಾರಿ ಸೌಲಭ್ಯಗಳು ಮತ್ತು ಕೈತುಂಬ ಸಂಬಳವನ್ನು ತೆಗೆದುಕೊಳ್ಳುತ್ತಿರುವಾಗಲೂ ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿ ಲಂಚ ತೆಗೆದುಕೊಳ್ಳುವ ಭ್ರಷ್ಟ ಕೃತ್ಯವನ್ನು ಮಾಡುತ್ತಾರೆ. ಇದರಿಂದ ಅವರ ಸಂಪತ್ತು ಜಪ್ತಿ ಮಾಡಿ, ಅವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಬೇಕು. |