ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರವು ಅಧಿಕಾರ ಸ್ವೀಕರಿಸಿದ ನಂತರ ಮೂರು ತಿಂಗಳಲ್ಲಿ ಬಾಂಗ್ಲಾದೇಶದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಒಂದು ವಾರ್ತಾ ಸಂಸ್ಥೆಯು ನೀಡಿರುವ ವಾರ್ತೆಯ ಪ್ರಕಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಕಮಾಲುದ್ದೀನ್ ಅಹಮದ್ ಮತ್ತು ಇತರ ೫ ಸದಸ್ಯರು ಇತ್ತೀಚಿಗೆ ರಾಷ್ಟ್ರಪತಿಗೆ ಅವರ ರಾಜೀನಾಮೆ ನೀಡಿದರು. ಆಯೋಗದ ಪೂರ್ಣ ವೇಳೆ ಸದಸ್ಯ ಮಹಮ್ಮದ್ ಸಲೀಂ ರಝಾ, ಅಮೀನುಲ್ ಇಸ್ಲಾಂ, ಕೊಂಗಝರಿ ಚೌಧರಿ, ವಿಶ್ವಜಿತ್ ಚಂದಾ ಮತ್ತು ತಾನಿಯಾ ಹಕ್ ರಾಜೀನಾಮೆ ನೀಡಿರುವವರ ಹೆಸರುಗಳಾಗಿವೆ.