ಪವಾಡಗಳನ್ನು ತೋರಿಸಿ ಹಿಂದೂಗಳನ್ನು ಮತಾಂತರಿಸುವಕ್ರೈಸ್ತ ಪಾದ್ರಿಗಳನ್ನೇಕೆ ಅಂನಿಸದವರು ವಿರೋಧಿಸುವುದಿಲ್ಲ ?- ಆಚಾರ್ಯ ಮಹಾಮಂಡಲೇಶ್ವರ ಶ್ರೀ ಮಹಂತ ಸುಧೀರದಾಸ ಮಹಾರಾಜ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ ‘ಬಾಗೇಶ್ವರ ಧಾಮ’ನಧೀರೇಂದ್ರ ಶಾಸ್ತ್ರಿಯವರನ್ನೇಕೆ ಗುರಿ ಮಾಡಲಾಗುತ್ತಿದೆ ?’ ಈ ಕುರಿತು ‘ಅನ್‌ಲೈನ್’ ವಿಶೇಷ ಸಂವಾದ

ಶ್ರೀ ಮಹಂತ ಸುಧೀರದಾಸ ಮಹಾರಾಜ

ಮುಂಬೈ – ‘ಬಾಗೇಶ್ವರ ಧಾಮ’ನ ಪಂಡಿತ ಧೀರೇಂದ್ರ ಶಾಸ್ತ್ರಿ ಅವರು ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವ ಕಾರ್ಯ ಮಾಡುತ್ತಿದ್ದಾರೆ. ಹಾಗಾಗಿ ಪಂಡಿತ ಧೀರೇಂದ್ರ ಶಾಸ್ತ್ರಿಯವರನ್ನು ಅಪ ಮಾನಿಸುವ ಷಡ್ಯಂತ್ರ ನಡೆಯುತ್ತಿದೆ. ಕೇವಲ ಪಂಡಿತ ಧೀರೇಂದ್ರ ಶಾಸ್ತ್ರಿ ಮಾತ್ರವಲ್ಲ, ಹಿಂದೂ ಧರ್ಮ ಮತ್ತು ಸಾಧುಸಂತರ ಮಾನಹಾನಿ ಮಾಡುವ ದೊಡ್ಡ ಷಡ್ಯಂತ್ರವು ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿದೆ. ಅಂಧಶ್ರ್ರದ್ಧಾ ನಿರ್ಮೂಲನ ಸಮಿತಿಯ  (ಅಂನಿಸ) ಶಾಮ ಮಾನವ, ಸಾಮ್ಯವಾದಿ ಮತ್ತು ಕೆಲವು ಕಾಂಗ್ರೆಸ್ಸಿಗರು ಹಿಂದೂ ಧರ್ಮದ ಕಾರ್ಯವನ್ನು ನಿಲ್ಲಿಸಲು ಈ ಯೋಜಿತ ಷಡ್ಯಂತ್ರವನ್ನು ನಡೆಸುತ್ತಿದ್ದಾರೆ; ಆದರೆ ಇದೇ ಜನರು ರಾಜಾರೋಷವಾಗಿ ಪವಾಡಗಳ ಹೆಸರಿನಲ್ಲಿ ಹಿಂದೂಗಳನ್ನು ಬಹಿರಂಗವಾಗಿ ವಂಚಿಸುವ ಕ್ರೈಸ್ತ ಮಿಶನರಿಗಳಿಗೆ ಅಥವಾ ಪಾದ್ರಿಗಳಿಗೆ ಎಂದಿಗೂ ಸವಾಲು ಹಾಕುವುದು ಕಾಣಿಸುವುದಿಲ್ಲ. ಹಾಗಾಗಿ ಹಿಂದೂ ಧರ್ಮದ ಅಪಪ್ರಚಾರ ಮಾಡುವವರನ್ನು ತಡೆಯಲು ಕೇಂದ್ರ ಸರಕಾರ ಕಠಿಣ ಕಾನೂನು ರೂಪಿಸಬೇಕು’ ಎಂದು ನಾಶಿಕನ ‘ಶ್ರೀ ಕಾಳಾರಾಮ ದೇವಸ್ಥಾನ’ದ ಆಚಾರ್ಯ ಮಹಾಮಂಡಲೇಶ್ವರ ಶ್ರೀ ಮಹಂತ ಸುಧೀರದಾಸ ಮಹಾರಾಜ ಇವರು ಆಗ್ರಹಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರ ಶಾಸ್ತ್ರಿ ಅವರನ್ನೇಕೆ ಗುರಿ ಮಾಡಲಾಗುತ್ತಿದೆ ?’ ಎಂಬ ವಿಷಯದಲ್ಲಿ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ಅಂನಿಸದವರು ಧೀರೇಂದ್ರ ಶಾಸ್ತ್ರಿಯವರನ್ನು ಸುಳ್ಳು ಪ್ರಚಾರದ ಮೂಲಕ ತೇಜೋವಧೆ ಮಾಡುತ್ತಿದ್ದಾರೆ !- ಸೌ. ಸ್ನೇಹಲ ಜೋಶಿ, ಪತ್ರಕರ್ತರು, ಸುದರ್ಶನ ನ್ಯೂಸ್‌

ಸೌ. ಸ್ನೇಹಲ ಜೋಶಿ

‘ನಾಗಪುರದಲ್ಲಿ ಪಂಡಿತ ಧೀರೇಂದ್ರ ಶಾಸ್ತ್ರಿ ಅವರ ಕಾರ್ಯಕ್ರಮದ ಪತ್ರಿಕಾಗೋಷ್ಠಿಯಲ್ಲಿ ನಾನು ಪತ್ರಕರ್ತೆಯಾಗಿ ಭಾಗವಹಿಸಿದ್ದೆ. ಈ ಸಮಯದಲ್ಲಿ, ಪಂಡಿತ ಧೀರೇಂದ್ರ ಶಾಸ್ತ್ರೀಜಿ ಅವರು ನಾಗಪುರದಲ್ಲಿ ಕಾರ್ಯಕ್ರಮವು ಜನವರಿ ೫ ರಿಂದ ೧೧ ರ ವರೆಗೆ ಇರುತ್ತದೆ ಎಂದು ಘೋಷಿಸಿದ್ದರು ಮತ್ತು ಬಾಗೇಶ್ವರ ಧಾಮ ವ್ಯವಸ್ಥಾಪನೆಯು ಅದೇ ದಿನಾಂಕಗಳನ್ನು ಘೋಷಿಸಲು ಜನವರಿ ೩ ರಂದು ಟ್ವೀಟ್‌ ಮಾಡಿತ್ತು; ಆದರೆ ‘ಕೆಲವು ಲೋಪದೋಷಗಳಿಂದಾಗಿ ನಾಗಪುರದಲ್ಲಿ ಪಂಡಿತ ಧೀರೇಂದ್ರ ಶಾಸ್ತ್ರಿ ಅವರ ಕಾರ್ಯಕ್ರಮವನ್ನು ಜನವರಿ ೫ ರಿಂದ ೧೩ ರವರೆಗೆ ನಡೆಸುವು ದಾಗಿಯೂ ಘೋಷಿಸಲಾಯಿತು. ಸಮನ್ವಯದ ಕೊರತೆಯಿಂದ ದಿನಾಂಕಗಳ ಗೊಂದಲವಾಗಿರುವುದನ್ನು ಅಂನಿಸದವರು ದುರುಪಯೋಗ ಪಡಿಸಿಕೊಂಡು ಧೀರೇಂದ್ರ ಶಾಸ್ತ್ರಿ ಇವರು ಸವಾಲನ್ನು ಸ್ವೀಕರಿಸದೆ ಓಡಿಹೋದರು’, ಎಂದು ಪ್ರಚಾರ ಮಾಡುವ ಮೂಲಕ ಅವರನ್ನು ಅಪಮಾನಿಸಿದ್ದಾರೆ.

ಹಿಂದೂಗಳ ‘ಘರವಾಪಸಿ’ ಮಾಡಲಾರಂಭಿಸಿದಾಗಿನಿಂದ ಪಂಡಿತ ಧೀರೇಂದ್ರ ಶಾಸ್ತ್ರಿಗಳಿಗೆ ಅಂನಿಸ ಕಡೆಯಿಂದ ವಿರೋಧ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ರಮೇಶ ಶಿಂದೆ

ಪಂಡಿತ ಧೀರೇಂದ್ರ ಶಾಸ್ತ್ರಿ ಅವರು ಕ್ರೈಸ್ತ ಮಿಶನರಿಗಳಿಂದ ದಾರಿ ತಪ್ಪಿದ ಹಿಂದೂಗಳನ್ನು ‘ಘರವಾಪಸಿ’ (ಪುನಃ ಸ್ವಧರ್ಮಕ್ಕೆ ಕರೆಸಿಕೊಳ್ಳುವುದು) ಮಾಡಲು ಪ್ರಾರಂಭಿಸಿದಾಗಿನಿಂದ, ‘ಅಂನಿಸ’ ಇದು ಪಂಡಿತ ಧೀರೇಂದ್ರ ಶಾಸ್ತ್ರಿಯವರ ಕಾರ್ಯಕ್ಕೆ ವಿರೋಧಿಸಲು ಪ್ರಾರಂಭಿಸಿದೆ. ಪಂಡಿತ ಧೀರೇಂದ್ರ ಶಾಸ್ತ್ರಿ ಯಾರಿಗಾದರೂ ಮೋಸ ಮಾಡಿದ್ದಾರಾ ಅಥವಾ ಶೋಷಣೆ ಮಾಡಿದ್ದಾರಾ ? ನಂಬಿಕೆಯೋ ಮೂಢನಂಬಿಕೆಯೋ ಇದು ಪ್ರತಿಯೊಬ್ಬರ ಶ್ರದ್ಧೆಯ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ವಿಶ್ವವಿದ್ಯಾಲಯದಿಂದ ಅಧಿಕೃತ ಪದವಿ ಪಡೆಯ ದಿದ್ದರೂ ತಮ್ಮನ್ನು ಸಂಮೋಹನ ಚಿಕಿತ್ಸಕರು ಎಂದು ಕರೆಸಿ ಕೊಳ್ಳುವ ‘ಅಂನಿಸ’ನ ಶಾಮ ಮಾನವರು ಜನರನ್ನು ವಂಚಿಸುತ್ತಿಲ್ಲವೇ ?