ನವಗ್ರಹಗಳ ಉಪಾಸನೆ ಮಾಡುವುದರ ಹಿಂದಿನ ಉದ್ದೇಶ ಮತ್ತು ಅದರ ಮಹತ್ವ !

‘ಹಿಂದೂ ಧರ್ಮದಲ್ಲಿ ಜೀವನದಲ್ಲಿ ಬರುವ ವೈಯಕ್ತಿಕ ಸಮಸ್ಯೆಗಳ ನಿವಾರಣೆಗಾಗಿ ವ್ಯಾವಹಾರಿಕ ಪ್ರಯತ್ನಗಳಿಗೆ ಉಪಾಸನೆಯ ಜೊತೆಯನ್ನು ನೀಡಲು ಹೇಳಲಾಗಿದೆ. ಆರೋಗ್ಯ, ವಿದ್ಯೆ, ಬಲ, ಸೌಖ್ಯ ಇತ್ಯಾದಿಗಳ ಪ್ರಾಪ್ತಿಗಾಗಿ ಮತ್ತು ವ್ಯಾಧಿ, ಪೀಡೆ, ದುಃಖ ಇತ್ಯಾದಿಗಳ ನಾಶಕ್ಕಾಗಿ ಅನೇಕ ಯಜ್ಞ, ಮಂತ್ರ, ಯಂತ್ರ, ಸ್ತೋತ್ರ ಇತ್ಯಾದಿ ವಿಧಾನಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ನೀಡಲಾಗಿದೆ. ಜ್ಯೋತಿಷ್ಯಶಾಸ್ತ್ರಕ್ಕನುಸಾರ ಗ್ರಹದೋಷಗಳ ನಿವಾರಣೆಗಾಗಿ ಗ್ರಹದೇವತೆಗಳ ಉಪಾಸನೆಯನ್ನು ಮಾಡಲು ಹೇಳಲಾಗುತ್ತದೆ. ಈ ಉಪಾಸನೆಗಳನ್ನು ಮಾಡುವುದರ ಹಿಂದಿನ ಉದ್ದೇಶ ಮತ್ತು ಅವುಗಳ ಮಹತ್ವವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

(ಭಾಗ ೧)

ಶ್ರೀ. ರಾಜ ಕರ್ವೆ
ಕು. ಮಧುರಾ ಭೋಸಲೆ

೧. ನವಗ್ರಹಗಳ ಉಪಾಸನೆಯ ಹಿಂದಿನ ಉದ್ದೇಶ

೧ ಅ. ಗ್ರಹಗಳ ಸೂಕ್ಷ್ಮ ಊರ್ಜೆಯಿಂದ ಮನುಷ್ಯನ ಸೂಕ್ಷ್ಮದೇಹದ ಮೇಲಾಗುವ ಪರಿಣಾಮ : ಆಕಾಶದಲ್ಲಿ ಸಂಚರಿಸುವ ತೇಜದ ಗೋಲಗಳಿಂದ ನಮಗೆ ಕಾಲವನ್ನು ಅಳೆಯಲು ಬರುತ್ತದೆ. ಲೌಕಿಕ ದೃಷ್ಟಿಯಲ್ಲಿ ಕಾಲದ ಅರ್ಥ ‘ಅವಧಿ ಅಥವಾ ಸಮಯ’ ಎಂದಾಗಿದ್ದರೂ, ಫಲಜ್ಯೋತಿಷ್ಯಶಾಸ್ತ್ರದಲ್ಲಿ ಕಾಲಕ್ಕೆ ‘ಪ್ರಾರಬ್ಧ’ ಎಂದು ತಿಳಿದುಕೊಳ್ಳಲಾಗುತ್ತದೆ. ಪ್ರತಿಯೊಂದು ಜೀವವು ತನ್ನ ಪ್ರಾರಬ್ಧದ ಜೊತೆಗೆ ಜನ್ಮತಾಳುತ್ತದೆ. ಜೀವದ ಜನ್ಮದ ಸಮಯದಲ್ಲಿರುವ ಗ್ರಹಸ್ಥಿತಿಯಿಂದ ಅದರ ಪ್ರಾರಬ್ಧದ ಬೋಧವಾಗುತ್ತದೆ. ಭಾರತದ ಋಷಿಗಳು ಗ್ರಹಗಳನ್ನು ಕೇವಲ ಭೌತಿಕ ವಸ್ತುಗಳೆಂದು ಪರಿಗಣಿಸದೆ, ಅವುಗಳಲ್ಲಿರುವ ‘ದೇವತ್ವ’ವನ್ನು ತಿಳಿದುಕೊಂಡರು. ‘ದೇವರು’ ಎಂದರೆ ಯಾವುದು ಪ್ರಕಾಶವನ್ನು (ಊರ್ಜೆಯನ್ನು) ನೀಡು ತ್ತದೆಯೋ ಅದು. ಗ್ರಹಗಳ ಸ್ಥೂಲ ಊರ್ಜೆ, ಅಂದರೆ ಅವುಗಳ ವಿದ್ಯುತ್‌ಚುಂಬಕೀಯ ಶಕ್ತಿ ಮತ್ತು ಸೂಕ್ಷ್ಮ ಊರ್ಜೆಯೆಂದರೆ ಅವುಗಳಲ್ಲಿರುವ ಪ್ರಧಾನ ತತ್ತ್ವ (ಪೃಥ್ವಿ,ಆಪ, ತೇಜ, ವಾಯು ಮತ್ತು ಆಕಾಶ). ಗ್ರಹಗಳ ಸೂಕ್ಷ್ಮ ಊರ್ಜೆಯು ಜೀವಗಳ ಸೂಕ್ಷ್ಮದೇಹದ ಮೇಲೆ (ಟಿಪ್ಪಣಿ) ಶುಭ-ಅಶುಭ ಪರಿಣಾಮವನ್ನು ಬೀರುತ್ತದೆ ಜೀವದ ಸೂಕ್ಷ್ಮದೇಹವು ಅದರ ಸ್ಥೂಲ ದೇಹದ ಮೇಲೆ ಪರಿಣಾಮ ವನ್ನು ಬೀರುತ್ತದೆ .

ಟಿಪ್ಪಣಿ – ಸೂಕ್ಷ್ಮದೇಹ : ಪಂಚಸೂಕ್ಷ್ಮ-ಜ್ಞಾನೇದ್ರಿಯಗಳು, ಪಂಚಸೂಕ್ಷ್ಮ-ಕರ್ಮೇಂದ್ರಿಯಗಳು, ಪಂಚಸೂಕ್ಷ್ಮ-ಪ್ರಾಣ, ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂ, ಇವುಗಳಿಂದ ಜೀವದ ‘ಸೂಕ್ಷ್ಮದೇಹ’ ತಯಾರಾಗುತ್ತದೆ.

೧ ಆ. ಗ್ರಹಗಳ ಉಪಾಸನೆಯನ್ನು ಮಾಡುವುದರಿಂದ ವ್ಯಕ್ತಿಗೆ ಆವಶ್ಯಕವಿರುವ ಸೂಕ್ಷ್ಮ ಊರ್ಜೆಯ ಲಾಭ ಸಿಗುತ್ತದೆ : ಜೀವ ಜನ್ಮಪಡೆಯುವಾಗ ಈ ಗ್ರಹಗಳು ಅಶುಭ ಸ್ಥಿತಿಯಲ್ಲಿದ್ದರೆ ವ್ಯಕ್ತಿಗೆ ಸಂಬಂಧಪಟ್ಟ ಸೂಕ್ಷ್ಮ ಊರ್ಜೆಯ ಕೊರತೆ ಇರುತ್ತದೆ. ಆದ್ದರಿಂದ ಅದಕ್ಕೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳಾಗುತ್ತವೆ. ‘ವ್ಯಕ್ತಿಯಲ್ಲಿ ಕಡಿಮೆಯಿರುವ ಸೂಕ್ಷ್ಮ ಊರ್ಜೆ ಅದಕ್ಕೆ ಸಿಗಬೇಕೆಂದು ಸಂಬಂಧಪಟ್ಟ ಗ್ರಹದ ಉಪಾಸನೆ ಮಾಡಬೇಕೆಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ ಗ್ರಹಕ್ಕೆ ಸಂಬಂಧಿಸಿದ ಶಾಂತಿವಿಧಿ, ಮಂತ್ರಜಪ, ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡುವುದರಿಂದ ವ್ಯಕ್ತಿಗೆ ಆವಶ್ಯಕವಿರುವ ಸೂಕ್ಷ್ಮ ಊರ್ಜೆ ಪ್ರಾಪ್ತವಾಗುತ್ತದೆ. ಪ್ರಾರಬ್ಧ ದಿಂದ ನಿರ್ಮಾಣವಾಗಿರುವ ಸಮಸ್ಯೆಗಳ ನಿವಾರಣೆಗಾಗಿ ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಈ ಮೂರೂ ಸ್ತರಗಳಲ್ಲಿನ ಉಪಾಯವನ್ನು ಮಾಡಬೇಕಾಗುತ್ತದೆ. ಗ್ರಹಗಳ ಉಪಾಸನೆಯನ್ನು ಮಾಡುವುದು ‘ಆಧಿದೈವಿಕ’ ಸ್ತರದ (ಸೂಕ್ಷ್ಮ ಊರ್ಜೆಯ ಸ್ತರದ) ಉಪಾಯವಾಗಿದೆ.

೨. ನವಗ್ರಹಗಳ ಉಪಾಸನೆಯವಿಧಗಳು ಮತ್ತು ಅವುಗಳ ಮಹತ್ವ

ಗ್ರಹಗಳ ಉಪಾಸನೆಯಲ್ಲಿ ಗ್ರಹಗಳಿಗೆ ಸಂಬಂಧಿಸಿದ ರತ್ನಗಳನ್ನು ಧರಿಸುವುದು, ಯಂತ್ರವನ್ನು ಪೂಜಿಸುವುದು, ಮಂತ್ರ ಅಥವಾ ಸ್ತೋತ್ರ ಪಠಣ ಮಾಡುವುದು, ಹವನ ಮಾಡುವುದು, ಸಂಬಂಧಪಟ್ಟ ದೇವತೆಯ ನಾಮಜಪ ಮಾಡುವುದು ಇತ್ಯಾದಿ ವಿಧಗಳಿವೆ. ಈ ಉಪಾಸನೆಯ ತುಲನಾತ್ಮಕ ಮಹತ್ವವನ್ನು ಈ ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ),ಸನಾತನ ಆಶ್ರಮ, ರಾಮನಾಥಿ, ಗೋವಾ.(೨.೬.೨೦೨೧)

– ಕು. ಮಧುರಾ ಭೋಸಲೆ (ಸೂಕ್ಷ್ಮದಲ್ಲಿ ಸಿಕ್ಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ೬೪) ಸನಾತನ ಆಶ್ರಮ, ರಾಮನಾಥಿ ಗೋವಾ. (೨.೬.೨೦೨೧)

೨ ಅ. ಗ್ರಹದ ಅಧಿಪತಿ ದೇವತೆಯ ನಾಮಜಪದಿಂದ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗುತ್ತವೆ : ಈ ಕೋಷ್ಟಕದಿಂದ ಗಮನಕ್ಕೆ ಬರುವುದೇನೆಂದರೆ, ಉಪಾಸನೆಯ ಸ್ವರೂಪ ಎಷ್ಟು ಸೂಕ್ಷ್ಮವಾದಷ್ಟು ಲಾಭದ ಪ್ರಮಾಣ ಹೆಚ್ಚಾಗುತ್ತದೆ.ರತ್ನವನ್ನು ಧರಿಸುವುದು ಸಗುಣ ಸ್ತರದ ಉಪಾಯವಾಗಿರುವುದರಿಂದ ಶಾರೀರಿಕ ತೊಂದರೆಗಳ ನಿವಾರಣೆಗಾಗಿ ಅದರಿಂದÀ ಲಾಭವಾಗುತ್ತದೆ. ಗ್ರಹದ ಯಂತ್ರವನ್ನು ಪೂಜಿಸುವುದು ಮತ್ತು ಮಂತ್ರಜಪಿಸುವುದರಿಂದ ಶಾರೀರಿಕ ಮತ್ತು ಮಾನಸಿಕ ತೊಂದರೆಗಳು ದೂರವಾಗಲು ಸಹಾಯವಾಗುತ್ತದೆ. ‘ಗ್ರಹದ ಅಧಿಪತಿ ದೇವತೆಯ ನಾಮಜಪ ಮಾಡುವುದು, ನಿರ್ಗುಣ ಸ್ತರದ ಉಪಾಯವಾಗಿರುವುದರಿಂದ ಆಧ್ಯಾತ್ಮಿಕ ತೊಂದರೆಗಳು (ಅತೃಪ್ತ ಪೂರ್ವಜರ ತೊಂದರೆ, ಅನಿಷ್ಟ ಶಕ್ತಿಗಳ ತೊಂದರೆ ಇತ್ಯಾದಿ) ದೂರವಾಗಲು ಸಹಾಯವಾಗುತ್ತದೆ.

೨ ಆ. ಉಪಾಸನೆಯನ್ನು ಶ್ರದ್ಧೆಯಿಂದ, ಏಕಾಗ್ರತೆಯಿಂದ ಮತ್ತು ನಿಯಮಿತವಾಗಿ ಮಾಡುವುದು ಆವಶ್ಯಕ : ಯಾವುದೇ ಉಪಾಸನೆಯನ್ನು ಶ್ರದ್ಧೆಯಿಂದ ಮಾಡುವುದು ಆವಶ್ಯಕವಾಗಿರುತ್ತದೆ. ಶ್ರದ್ಧೆಯಿಂದ ಮಾಡಿದ ಉಪಾಸನೆಯಲ್ಲಿ ಮನಸ್ಸು, ಬುದ್ಧಿ ಮತ್ತು ಚಿತ್ತದ ಸಹಭಾಗವಿರುತ್ತದೆ. ಆದ್ದರಿಂದ ಸೂಕ್ಷ್ಮದೇಹದ ಆಳದಲ್ಲಿ ಉಪಾಸನೆಯ ಪರಿಣಾಮ ವಾಗುತ್ತದೆ. ಏಕಾಗ್ರತೆಯಿಂದ ಮತ್ತು ನಿಯಮಿತವಾಗಿ ಮಾಡಿದ ಉಪಾಸನೆಯಿಂದ ಸೂಕ್ಷ್ಮದೇಹದ ಮೇಲಾಗುವ ಪರಿಣಾಮವು ಕ್ರಮೇಣ ಸ್ಥೂಲದೇಹದ ಮೇಲೆ ಕಾಣಿಸುತ್ತದೆ, ಹಾಗೆಯೇ ಪರಿಸ್ಥಿತಿ ಯಲ್ಲಿಯೂ ಬದಲಾವಣೆಯಾಗುತ್ತದೆ.

೩. ಆಧಿಭೌತಿಕ ಉಪಾಯದ ಜೊತೆಗೆ ಆಧಿದೈವಿಕಮತ್ತು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದರ ಮಹತ್ವ

ಸದ್ಯದ ಕಾಲದಲ್ಲಿ ಮನುಷ್ಯನ ಜೀವನದಲ್ಲಿ ಶೇ. 65 ರಷ್ಟು ಘಟನೆಗಳು ಪ್ರಾರಬ್ಧದಿಂದ ಘಟಿಸುತ್ತವೆ. ಸತತ ಅನಾರೋಗ್ಯವಿರುವುದು, ದೀರ್ಘ ಅನಾರೋಗ್ಯ, ಕೌಟುಂಬಿಕ ಕಲಹಗಳು, ಶಿಕ್ಷಣದಲ್ಲಿ ವೈಫಲ್ಯ, ಆರ್ಥಿಕ ಅಡಚಣೆ, ವೈವಾಹಿಕ ಸುಖ ಲಭಿಸದಿರುವುದು, ಅಪಘಾತದ ಪ್ರಸಂಗಗಳು ಬರುವುದು ಇಂತಹ ದುಃಖದ ಪ್ರಸಂಗಗಳು ಪ್ರಾರಬ್ಧದಿಂದ ಬರುತ್ತವೆ. ಇಂತಹ ಸಮಸ್ಯೆಗಳ ನಿವಾರಣೆಗಾಗಿ ಭೌತಿಕ (ಸ್ಥೂಲ) ಉಪಾಯಕ್ಕೆ ಮಿತಿಯಿರುತ್ತದೆ. ಇಂತಹ ಸಮಸ್ಯೆಗಳ ನಿವಾರಣೆಗಾಗಿ ಆಧಿದೈವಿಕ ಮತ್ತು ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕಾಗುತ್ತದೆ. ಆಧಿದೈವಿಕ ಉಪಾಯಗಳೆಂದರೆ ಯಜ್ಞ, ಮಂತ್ರಜಪ, ನಾಮಜಪ ಇತ್ಯಾದಿ ಉಪಾಯಗಳ ಮೂಲಕ ನಮ್ಮ ಪಂಚತತ್ತ್ವಗಳ ಸಮತೋಲನ ಮಾಡಿ ಜೀವನವನ್ನು ಸಮೃದ್ಧಗೊಳಿಸುವುದು. ಆಧ್ಯಾತ್ಮಿಕ ಸ್ತರದ ಉಪಾಯವೆಂದರೆ, ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಲು ಗುರುಗಳ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವುದು.

ಆಧಿದೈವಿಕ ಉಪಾಯವು ಸಕಾಮ ಸಾಧನೆಯಾಗಿದ್ದು ಆಧ್ಯಾತ್ಮಿಕ ಉಪಾಯವು ನಿಷ್ಕಾಮ ಸಾಧನೆಯಾಗಿದೆ. ಆಧ್ಯಾತ್ಮಿಕ ಸಾಧನೆಯಿಂದ ಜೀವದ ಚಿತ್ತದ ಮೇಲಿನ ಸಂಸ್ಕಾರಗಳು ಕ್ರಮೇಣ ಲೋಪವಾಗುತ್ತವೆ; ಇದರಿಂದ ಎಲ್ಲ ದುಃಖಗಳ ಮೂಲವೆ ನಾಶವಾಗುತ್ತದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಹೇಳಿರುವ ಜೀವನಪದ್ಧತಿಯಲ್ಲಿ ಅಧ್ಯಾತ್ಮಕ್ಕೆ ಪ್ರಾಧಾನ್ಯತೆಯಿದೆ.

ಸಾರಾಂಶ, ‘ಗ್ರಹಉಪಾಸನೆ’ಯು ಆಧಿದೈವಿಕ ಉಪಾಸನೆಯ ಒಂದು ವಿಧವಾಗಿದೆ. ಗ್ರಹಗಳ-ಉಪಾಸನೆಯಿಂದ  ನಮಗೆ ಆವಶ್ಯಕವಿರುವ ಸೂಕ್ಷ್ಮ ಊರ್ಜೆಯನ್ನು ಪಡೆಯಬಹುದು. ಪ್ರಾರಬ್ಧದಿಂದ ಉದ್ಭವಿಸುವ ಸಮಸ್ಯೆಗಳಿಗೆ ಕೇವಲ ಭೌತಿಕ (ಸ್ಥೂಲ) ಉಪಾಯವನ್ನು ಮಾಡದೇ ಆಧಿದೈವಿಕ ಮತ್ತು ಆಧ್ಯಾತ್ಮಿಕ ಉಪಾಯವನ್ನೂ ಮಾಡುವುದು ಶ್ರೇಯಸ್ಕರವಾಗಿದೆ !’

– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೧೨.೨೦೨೨)  

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.