ಹಿಂದೂವಿನಲ್ಲಿ ‘ಧರ್ಮ’ ಈ ಪರಿಕಲ್ಪನೆಯಿಂದ ನನಗೆ ಪ್ರೇರಣೆ ದೊರೆಯಿತು ! – ಬ್ರಿಟನ್ನಿನ ಪ್ರಧಾನ ಮಂತ್ರಿ ಋಷಿ ಸುನಕ

ಬ್ರಿಟನ್ನಿನ ಪ್ರಧಾನ ಮಂತ್ರಿ ಋಷಿ ಸುನಕ

ಲಂಡನ (ಬ್ರಿಟನ) – ಕಳೆದ ಚುನಾವಣೆಯಲ್ಲಿ ಲಿಜ್ ಟ್ರಸ್ ಇವರಿಂದ ಸೋತ ನಂತರ ನಾನು ಸ್ವಲ್ಪ ನಿರಾಶನಾಗಿದ್ದೆ. ಈ ಸೋಲಿನ ನಂತರ ನನ್ನ ರಾಜಕೀಯ ಭವಿಷ್ಯ ಮುಗಿಯಿತು, ಎಂದು ನನಗೆ ಅನಿಸಿತು. ಹಿಂದೂದಲ್ಲಿನ ‘ಧರ್ಮ’ ಹೆಸರು ಒಂದು ಪರಿಕಲ್ಪನೆ ಆಗಿದೆ. ಅದರ ಅರ್ಥ ‘ಕರ್ತವ್ಯ’ ಆಗುತ್ತದೆ. ನನ್ನ ಕೆಲಸ ಪ್ರಾಮಾಣಿಕವಾಗಿ ಮಾಡುವುದು, ಇದೇ ನನ್ನ ಕರ್ತವ್ಯವಾಗಿದೆ. ಬಾಲ್ಯದಿಂದ ನನ್ನ ಮೇಲೆ ಕೂಡ ಇದೇ ಸಂಸ್ಕಾರವಾಗಿದೆ. ಒಟ್ಟಾರೆ ನನ್ನಿಂದ ಅಪೇಕ್ಷಿತವಾಗಿರುವ ಕೆಲಸ ಪ್ರಾಮಾಣಿಕವಾಗಿ ಮಾಡುವುದು, ಅದಕ್ಕೆ ‘ಧರ್ಮ’ ಎನ್ನುತ್ತಾರೆ. ಇದರಿಂದ ನನಗೆ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಪ್ರೇರಣೆ ದೊರೆಯಿತು, ಎಂದು ಬ್ರಿಟನ್ನಿನ ಪ್ರಧಾನ ಮಂತ್ರಿ ಋಷಿ ಸುನಕ್ ಇವರು ಒಂದು ಸಂದರ್ಶನದಲ್ಲಿ ಹೇಳಿದರು.

ಅವರ ಸರಕಾರಕ್ಕೆ ೧೦೦ ದಿನ ಪೂರ್ಣಗೊಳಿಸಿದ ಪ್ರಯುಕ್ತ ‘ಪೀಯರ್ಸ್ ಮಾರ್ಗನ್’ ಈ ವಾರ್ತಾ ವಾಹಿನಿಗೆ ಸಂದರ್ಶನ ನೀಡಿದರು. ಆ ಸಮಯದಲ್ಲಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಸುನಾಕ್ ಮಾತು ಮುಂದುವರಿಸಿ, ಕಳೆದ ೧೦೦ ದಿನದಲ್ಲಿ ಪ್ರಧಾನಮಂತ್ರಿ ಎಂದು ನಾನು ಅನೇಕ ಸವಾಲುಗಳು ಎದುರಿಸಿದ್ದೇನೆ. ನಮ್ಮ ಮುಂದೆ ಇನ್ನೂ ಬಹಳಷ್ಟು ಸವಾಲುಗಳಿವೆ; ನಾವು ಎಲ್ಲವನ್ನು ಎದುರಿಸುವೆವು ಎಂದು ನನಗೆ ವಿಶ್ವಾಸವಿದೆ. ಜನರ ಸೇವೆ ಮಾಡುವುದು ಇದೇ ನಮ್ಮ ಕರ್ತವ್ಯವಾಗಿದೆ ಮತ್ತು ದೇಶದಲ್ಲಿ ಬದಲಾವಣೆ ತರುವುವೇವು ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.