ಕೆನಡಾದಲ್ಲಿ ಹೆಚ್ಚುತ್ತಿರುವ ಹಿಂದೂದ್ವೇಷದಿಂದ ನೊಂದಿರುವ ಕೆನಡಾದ ಜನತೆ ! – ಕೆನಡಾದ ಸಂಸದ ಚಂದ್ರ ಆರ್ಯ

ದೇವಸ್ಥಾನದ ವಿಧ್ವಂಸದ ಬಗ್ಗೆ ಕೆನಡಾ ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ ಭಾರತೀಯ ಮೂಲದ ಸಂಸದ !

ಓಟಾವಾ (ಕೆನಡಾ) – ಕೆನಡಾದ ಬ್ರಮ್ಪಟನ್ ನಗರದಲ್ಲಿ ಹಿಂದುಗಳ ಗೌರೀಶಂಕರ ದೇವಸ್ಥಾನದಲ್ಲಿ ವಿಧ್ವಂಸಕ ಕೃತ್ಯ ನಡೆದಿತ್ತು. ಈ ವಿಷಯವನ್ನು ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಇವರು ಕೆನಡಾದ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಇಲ್ಲಿ ಖಲಿಸ್ತಾನಿ ಬೆಂಬಲಿತ ಘೋಷಣೆಯನ್ನೂ ಬರೆಯಲಾಗಿತ್ತು. ಈ ಘಟನೆಯನ್ನು ಭಾರತದ ರಾಯಭಾರಿ ಕಚೇರಿಯೂ ಖಂಡಿಸಿದೆ.

ಕೆನಡಾದಲ್ಲಿ ಹೆಚ್ಚುತ್ತಿರುವ ಹಿಂದೂದ್ವೇಷದಿಂದ ಇಲ್ಲಿನ ಜನರು ನೊಂದಿದ್ದಾರೆ. ಕೆನಡಾ ಸರಕಾರ ಈ ಘಟನೆಗಳನ್ನು ತಡೆಯಲು ಪ್ರಯತ್ನಿಸಬೇಕು ಎಂದೂ ಸಂಸದ ಚಂದ್ರ ಆರ್ಯ ಇವರು ಸಂಸತ್ತಿನಲ್ಲಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ಎಷ್ಟು ಹಿಂದೂ ಜನಪ್ರತಿನಿಧಿಗಳು ದೇಶ ಮತ್ತು ವಿದೇಶಗಳಲ್ಲಿರುವ ಹಿಂದುಗಳ ದೇವಸ್ಥಾನಗಳು ಹಾಗೂ ಹಿಂದುಗಳ ಮೇಲೆ ನಡೆಯುವ ದಾಳಿಯ ವಿಷಯವನ್ನು ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಂಡಿಸುತ್ತಾರೆ ?