ಡೆನ್ಮಾರ್ಕನಲ್ಲಿಯೂ ಕುರಾನ್ ಗೆ ಬೆಂಕಿ

ರೈಸಮಸ ಪಲುದಾನ( ಬಲಬದಿ)

(ಡೆನ್ಮಾರ್ಕ) – ಸ್ವೀಡನ್ ಮತ್ತು ನೆದರಲ್ಯಾಂಡ್ಸ್ ತದನಂತರ ಈಗ ಡೆನ್ಮಾರ್ಕನಲ್ಲಿಯೂ ಕುರಾನ ಸುಡಲಾಯಿತು. ಕೋಪನಹೇಗನ್ ಮಸೀದಿಯ ಹತ್ತಿರ ಮತ್ತು ತುರ್ಕಿಯ ರಾಯಭಾರಿ ಕಚೇರಿಯ ಹತ್ತಿರ ಈ ಘಟನೆ ನಡೆದಿದೆ. ಡೆನ್ಮಾರ್ಕನಲ್ಲಿ ಕುರಾನ್ ಸುಟ್ಟ ಬಳಿಕ ತುರ್ಕಿ ದೇಶದಲ್ಲಿನ ಡೆನ್ಮಾರ್ಕ ರಾಯಭಾರಿಗಳನ್ನು ವಿದೇಶಾಂಗ ಸಚಿವಾಲಯದಲ್ಲಿ ಕರೆಸಿ ಮಾಹಿತಿ ನೀಡಿದರು.

1. ರೈಸಮಸ ಪಲುದಾನ ಹೆಸರಿನ ವ್ಯಕ್ತಿ ಕುರಾನ ಸುಟ್ಟನು. ಈ ಹಿಂದೆಯೂ ಅವನೇ ಸ್ವೀಡನನಲ್ಲಿ ತುರ್ಕಿಯ ದೇಶದ ರಾಯಭಾರಿ ಕಚೇರಿಯ ಹೊರಗೆ ಕುರಾನ ಸುಟ್ಟಿದ್ದನು. ಆಗ ಅವನು, ಒಂದುವೇಳೆ ಸ್ವೀಡನ್ ದೇಶಕ್ಕೆ ‘ನಾಟೋ’ (ನಾರ್ತ ಅಟ್ಲಾಂಟಿಕ ಟ್ರೀಟಿ ಆರ್ಗನೈಸೇಶನ್) ದೇಶಗಳಲ್ಲಿ ಸಹಭಾಗಿಯಾಗಲು ತುರ್ಕಿಯ ಅನುಮತಿಸುವುದಿಲ್ಲವೋ, ಅಲ್ಲಿಯವರೆಗೆ ನಾನು ಪ್ರತಿ ಶುಕ್ರವಾರ ಕುರಾನ ಸುಡುತ್ತೇನೆ ಎಂದು ಹೇಳಿದ್ದನು.

2. ಯುರೋಪನ ಸ್ವೀಡನ ಮತ್ತು ಫಿನ್ ಲ್ಯಾಂಡ ದೇಶಗಳಿಗೆ ‘ನಾಟೋ’ ದೇಶಗಳಲ್ಲಿ ಸಹಭಾಗಿಯಾಗುವ ಇಚ್ಛೆಯಿದೆ; ಆದರೆ 30 ಸದಸ್ಯರಲ್ಲಿ ಒಂದಾಗಿರುವ ತುರ್ಕಿ ಇದನ್ನು ವಿರೋಧಿಸುತ್ತಿದೆ. ಈಗ ಕುರಾನ ಸುಟ್ಟಿರುವುದರಿಂದ ದೇಶವು ನಾಟೋ ದೇಶದ ಸದಸ್ಯರಾಗುವ ಅಪೇಕ್ಷೆ ಇಟ್ಟುಕೊಳ್ಳಬಾರದು ಎಂದು ತುರ್ಕಿಯ ಸ್ಪಷ್ಟಪಡಿಸಿದೆ.