ಪರಾತ್ಪರ ಗುರು ಡಾ. ಆಠವಲೆಯವರ ಬಲಗೆನ್ನೆಯ ಮೇಲೆ ಭಾರತದ ನಕಾಶೆಯಂತೆ ಕಾಣಿಸುತ್ತಿರುವ ಆಕಾರ (ಗೋಲದಲ್ಲಿ ದೊಡ್ಡದು ಮಾಡಿ ತೋರಿಸಲಾಗಿದೆ.)’ಪರಾತ್ಪರ ಗುರು ಡಾ. ಆಠವಲೆಯವರ ಬಲಗೆನ್ನೆಯ ತ್ವಚೆಯ ಗಾಢ ಬಣ್ಣದಲ್ಲಿ ಭಾರತದ ನಕಾಶೆಯಂತೆ ಆಕಾರ ಕಾಣಿಸುತ್ತದೆ’, ಎಂಬುದು ೨೩ ಅಕ್ಟೋಬರ್ ೨೦೨೦ ರಂದು ಸಾಧಕರ ಗಮನಕ್ಕೆ ಬಂದಿತು. ಈ ಆಕಾರವನ್ನು ಛಾಯಾಚಿತ್ರದಲ್ಲಿ ರೇಖೆ ಬಿಡಿಸಿ ಸ್ಪಷ್ಟಪಡಿಸಲಾಗಿದೆ. ಈ ಬಗ್ಗೆ ಆಧ್ಯಾತ್ಮಿಕ ಸ್ತರದಲ್ಲಿ ನನಗೆ ಮುಂದಿನ ಅಂಶಗಳು ಗಮನಕ್ಕೆ ಬಂದಿತು.
೧. ಪರಾತ್ಪರ ಗುರು ಡಾ. ಆಠವಲೆಯವರು ಅವತಾರಿ ಪುರುಷರಾಗಿದ್ದು ಅವರು ಕೇವಲ ಭಾರತದಲ್ಲಿ ಮಾತ್ರವಲ್ಲದೇ, ಜಗತ್ತಿನಾದ್ಯಂತ ಹಿಂದೂ ರಾಷ್ಟ್ರ (ಈಶ್ವರೀ ರಾಜ್ಯ) ವನ್ನು ತರುವ ಸಂಕಲ್ಪವನ್ನು ಮಾಡಿದ್ದಾರೆ
ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ೩೦-೩೫ ವರ್ಷಗಳಿಂದ ಈಶ್ವರೀ ರಾಜ್ಯವನ್ನು ತರಲು ಸಕ್ರಿಯರಾಗಿದ್ದಾರೆ. ಇದು ‘ಸತ್ ವಿರುದ್ಧ ಅಸತ್’ನ ಹೋರಾಟವಾಗಿದೆ. ಈ ಕಾರ್ಯಕ್ಕಾಗಿ ಅವರು ಸಾಧನೆಯನ್ನು ಮಾಡುವ ಸಾವಿರಾರು ಸಾಧಕರನ್ನು ರೂಪಿಸಿದ್ದಾರೆ ಮತ್ತು ಅವರು ಈ ಸಮಷ್ಟಿ ಸಾಧನೆಗಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಈಗ ಅದರ ಪರಿಣಾಮ ಕಂಡು ಬರುತ್ತಿದೆ. ಈ ಸಮಷ್ಟಿ ಕಾರ್ಯದಲ್ಲಿ ಅನೇಕ ಜಿಜ್ಞಾಸುಗಳು ಕೈ ಜೋಡಿಸುತ್ತಿದ್ದಾರೆ, ಹಾಗೆಯೇ ಭಾರತದಲ್ಲಿನ ಸಂತರು ಮತ್ತು ಹಿಂದುತ್ವನಿಷ್ಠರೂ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಸಾರ್ವಜನಿಕ ರೀತಿಯಲ್ಲಿ ಮಾಡತೊಡಗಿದ್ದಾರೆ.
೨. ಭಾರತ ದೇಶವು ವಿಶ್ವದ ಬೀಜವಾಗಿರುವುದರಿಂದ ಇಲ್ಲಿ ಈಶ್ವರೀ ರಾಜ್ಯ ಬಂದರೆ ಜಗತ್ತಿನಾದ್ಯಂತ ಅದು ತಾನಾಗಿಯೇ ಬರುವುದು ಮತ್ತು ಅದರ ನಕಾಶೆಯಂತಹ ಆಕಾರವು ಪರಾತ್ಪರ ಗುರು ಡಾ. ಆಠವಲೆಯವರ ಕೆನ್ನೆಯ ಮೇಲೆ ಕಾಣಿಸುವುದೆಂದರೆ ಭಾರತದಲ್ಲಿ ಈಶ್ವರೀ ರಾಜ್ಯ ಬರುವ ವಿಷಯದಲ್ಲಿ ಆಶೀರ್ವಾದ ಸಿಗುವುದು
ಇಷ್ಟು ವರ್ಷಗಳಿಂದ ನಡೆಯುತ್ತಿರುವ ಈಶ್ವರೀ ರಾಜ್ಯದ ಸ್ಥಾಪನೆಯ ಈ ‘ಸತ್ ವಿರುದ್ಧ ಅಸತ್’ನ ಹೋರಾಟವನ್ನು ಸೂಕ್ಷ್ಮದಿಂದ ಹೋರಾಡಲಾಯಿತು. ಈಗ ಆ ಯುದ್ಧದಲ್ಲಿ ವಿಜಯ ಪ್ರಾಪ್ತವಾಗಲು ಆರಂಭವಾಗಿದೆ, ಅಂದರೆ ಈಗ ಸ್ಥೂಲದಲ್ಲಿ ಹೋರಾಡುವ ಸಮಯ ಬಂದಿದೆ. ಸ್ಥೂಲದಲ್ಲಿನ ಹೋರಾಟವೆಂದರೆ ಮುಂಬರಲಿರುವ ಮೂರನೇ ಮಹಾಯುದ್ಧ ! ಭಾರತ ದೇಶವು ವಿಶ್ವಗುರು ಆಗಿದೆ. ಇಲ್ಲಿ ಈಶ್ವರೀ ರಾಜ್ಯ ಬಂದರೆ ಜಗತ್ತಿನಾದ್ಯಂತ ಅದು ತಾನಾಗಿಯೇ ಬರುವುದು. ಅದೇ ರೀತಿ ಭಾರತ ದೇಶವು ವಿಶ್ವದ ಬೀಜವಾಗಿದೆ. ಆದ್ದರಿಂದ ಈ ಬೀಜದಲ್ಲಿ ಈಶ್ವರೀ ರಾಜ್ಯದ ಮೊಳಕೆಯೊಡೆದರೆ ಅದು ವೃಕ್ಷವಾಗಿ ತಾನಾಗಿಯೇ ಹರಡಲಿದೆ. ಇದು ಭಾರತದ ಮಹತ್ವವಾಗಿದೆ. ಆದ್ದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಕೆನ್ನೆಯ ಮೇಲೆ ಭಾರತದ ನಕಾಶೆಯಂತಹ ಆಕಾರ ಕಾಣಿಸಿತು. ಅವರ ಆಧ್ಯಾತ್ಮಿಕ ವೈಶಿಷ್ಟ್ಯದಿಂದಾಗಿ ಈ ಆಕಾರ ಕಾಣಿಸಿತು. ಅವರಂತಹ ಅವತಾರಿ ಪುರುಷರ ಕೆನ್ನೆಯಲ್ಲಿ ಭಾರತದ ನಕಾಶೆಯಂತಹ ಆಕಾರ ಕಾಣಿಸುವುದೆಂದರೆ ಆಧ್ಯಾತ್ಮಿಕವಾಗಿ ಭಾರತಕ್ಕೆ ಈಶ್ವರೀ ರಾಜ್ಯದ ಆಶೀರ್ವಾದ ಸಿಕ್ಕಿದೆ ಎಂದರ್ಥ.
೩. ಪರಾತ್ಪರ ಗುರು ಡಾ. ಆಠವಲೆಯವರ ಬಲಗೆನ್ನೆಯಲ್ಲಿ ಮತ್ತು ಅವರ ಬಲಗಣ್ಣು ಮತ್ತು ಬಲಕಿವಿಯ ನಡುವೆ ಭಾರತದ ನಕಾಶೆಯಂತಹ ಆಕಾರ ಕಾಣಿಸುವುದರ ಅರ್ಥ
ಮನುಷ್ಯನ ಬಲಬದಿಯು ಸೂರ್ಯನಾಡಿಗೆ ಸಂಬಂಧಿಸಿದೆ. ಭಾರತದಲ್ಲಿ ಈಶ್ವರೀ ರಾಜ್ಯ ಬರುವ ಕಾರ್ಯ ನಡೆಯುತ್ತಿರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಬಲಗೆನ್ನೆಯಲ್ಲಿ ಭಾರತದ ನಕಾಶೆಯಂತಹ ಆಕಾರ ಕಾಣಿಸುತ್ತಿದೆ. ಈಶ್ವರೀ ರಾಜ್ಯ ಬರುವುದರಲ್ಲಿ ಭಾರತದ ಪಶ್ಚಿಮ ಹಾಗೂ ಪೂರ್ವ ದಿಕ್ಕಿನಲ್ಲಿರುವ ಶತ್ರು ರಾಷ್ಟ್ರಗಳಿಂದ ಅಡಚಣೆಯಿದೆ. ಪರಾತ್ಪರ ಗುರು ಡಾ. ಆಠವಲೆಯವರ ಬಲಗೆನ್ನೆಯ ಮೇಲಿರುವ ಭಾರತದ ನಕಾಶೆಯ ಪೂರ್ವ ದಿಕ್ಕು ಬಲಗಣ್ಣಿನ ಬದಿಗೆ ಹಾಗೂ ಪಶ್ಚಿಮ ದಿಕ್ಕು ಬಲಗಿವಿಯ ದಿಕ್ಕಿನಲ್ಲಿದೆ. ಆಧ್ಯಾತ್ಮಿಕ ದೃಷ್ಟಿಯಿಂದ ಕಣ್ಣುಗಳು ತೇಜತತ್ತ್ವಕ್ಕೆ ಮತ್ತು ಕಿವಿಗಳು ಆಕಾಶತತ್ತ್ವಕ್ಕೆ ಸಂಬಂಧಿಸಿರುತ್ತವೆ. ಆದ್ದರಿಂದ ತೇಜತತ್ತ್ವ, ಆಕಾಶತತ್ತ್ವ ಇವು ಭಾರತವನ್ನು ಶತ್ರು ರಾಷ್ಟ್ರಗಳಿಂದ ರಕ್ಷಣೆ ಮಾಡಲಿವೆ.
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.
ಆಧ್ಯಾತ್ಮಿಕ ಸಂಶೋಧನೆಯ ಕಡೆಗೆ ಕಲಿಯುವ ದೃಷ್ಟಿಕೋನದಿಂದ ನೋಡಿರಿ !‘ನಾವು ಆಧ್ಯಾತ್ಮಿಕ ಸಂಶೋಧನೆಯ ದೃಷ್ಟಿಕೋನದಿಂದ ಸಾಧನೆಯಿಂದ ವ್ಯಕ್ತಿಯ ಅಂತರ್ಮನಸ್ಸು, ಬಾಹ್ಯಮನಸ್ಸು ಮತ್ತು ಶರೀರದ ಮೇಲಾಗುವ ಪರಿಣಾಮಗಳ ಅಧ್ಯಯನವನ್ನು ಮಾಡುತ್ತಿದ್ದೇವೆ. ‘ಜಿಜ್ಞಾಸುವೇ ಜ್ಞಾನದ ಅಧಿಕಾರಿಯಾಗಿರುತ್ತಾನೆ’, ಈ ಮಾತಿನಂತೆ ಸಾಧನೆಯಿಂದಾಗುವ ಪರಿಣಾಮಗಳ ಕಡೆಗೆ ಜಿಜ್ಞಾಸುವೃತ್ತಿಯಿಂದ ನೋಡಿದರೆ, ಮಾತ್ರ ಈಶ್ವರನು ಇದಕ್ಕೆ ಸಂಬಂಧಿಸಿದ ಅಮೂಲ್ಯ ಜ್ಞಾನವನ್ನು ಕೊಡುವನು, ಇಲ್ಲದಿದ್ದರೆ ಬುದ್ಧಿಪ್ರಾಮಾಣ್ಯವಾದದಲ್ಲಿ ಸಿಲುಕಿದರೆ ಈಶ್ವರನು ಬಹಳಷ್ಟು ಪ್ರಮಾಣದಲ್ಲಿ ಕೊಡುತ್ತಿರುವ ಜ್ಞಾನದಿಂದ ನಾವು ವಂಚಿತರಾಗುವೆವು.’ – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. |