ಚೀನಾದ ವಸ್ತುಗಳ ಮೂಲಕ ಚೀನಾ ಜಗತ್ತಿನಾದ್ಯಂತ ನಡೆಸುತ್ತಿರುವ ಬೇಹುಗಾರಿಕೆ !

ಇಂತಹ ಧೂರ್ತ( ಕುತಂತ್ರ) ಚೀನಾದ ಎಲ್ಲಾ ವಸ್ತುಗಳ ಆಮದವನ್ನು ನಿಷೇಧಿಸಿ ಭಾರತ ಅದಕ್ಕೆ ತಕ್ಕ ಪಾಠ ಕಲಿಸುವುದು ಅವಶ್ಯಕ !

ಲಂಡನ್ (ಬ್ರಿಟನ) – ಚೀನಾ ನಕಲಿ ಫ್ರಿಡ್ಜ್, ಸಂಚಾರ ವಾಣಿ, ಲ್ಯಾಪ್ ಟಾಪ್, ಮಿಕ್ಸರ್ ಗ್ರೈಂಡರ್ ಮುಂತಾದ ಗೃಹ ಉಪಯೋಗಿ ವಸ್ತುಗಳ ಮೂಲಕ ಚೀನಾ ಬ್ರಿಟಿಷರ ಬೇಹುಗಾರಿಕೆ ಮಾಡುತ್ತಿದೆ, ಎಂದು ಬ್ರಿಟನ್ ಸರಕಾರದಿಂದ ವಿಸ್ತೃತ ಪರಿಶೀಲನೆಯ ನಂತರ ಹೇಳಿದೆ. ಚೀನಾ ಈ ರೀತಿ ಕೇವಲ ಬ್ರಿಟನ್ ನಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಬೇಹುಗಾರಿಕೆ ಮಾಡುತ್ತಿದೆ, ಎಂದು ಸರಕಾರದ ಅಭಿಪ್ರಾಯವಾಗಿದೆ. ಈ ಉಪಕರಣಗಳಲ್ಲಿ ಅಳವಡಿಸಲಾಗಿರುವ ಮೈಕ್ರೋ ಚಿಪ್ ಮೂಲಕ ಚೀನಾ ಮಾಹಿತಿ ಪಡೆಯುತ್ತಿದೆ ಎಂದು ಸರಕಾರದ ಗಮನಕ್ಕೆ ಬಂದಿದೆ.

೧. ಕಾರಿನಲ್ಲಿ ಉಪಯೋಗಿಸುವ ಚೀನಾದ ಬಿಡಿ ಭಾಗಗಳಲ್ಲಿ ಕೂಡ ಚೀಪ್ ಅಳವಡಿಸಲಾಗಿದೆ. ಮನೆಯಲ್ಲಿ ಹಾಕುವ ಚೀನಾದ ಎಲ್ಇಡಿ ಬಲ್ಬ್ ನಲ್ಲಿ ಕೂಡ ಬೇಹುಗಾರಿಕೆಯ ಯಂತ್ರ ಇರಬಹುದು, ಎಂದು ಸರಕಾರದ ಅಭಿಪ್ರಾಯವಾಗಿದೆ.

೨. ಬ್ರಿಟನಿನ ಅನೇಕ ವಿಶ್ವವಿದ್ಯಾಲಯಗಳು ಚೀನಾ ಕಂಪನಿಯ ಜೊತೆ ತಂತ್ರ ವಿಜ್ಞಾನದ ಬಗ್ಗೆ ಒಪ್ಪಂದ ಮಾಡಿ ಕೊಂಡಿದೆ. ಈ ವಿಶ್ವವಿದ್ಯಾಲಯದಲ್ಲಿನ ಸಂಶೋಧನೆಯ ಮಾಹಿತಿ ಕೂಡ ಚೀನಾ ಕಂಪನಿ ಕಳವು ಮಾಡುತ್ತಿರುವುದರ ಬಗ್ಗೆ ಬ್ರಿಟನಿಗೆ ಅನುಮಾನವಿದೆ. ಆಫ್ರಿಕಾ ದೇಶದಲ್ಲಿ ಬೇಹುಗಾರಿಕೆ ನಡೆಸಿರುವ ಆರೋಪ ಇರುವ ಬಹಳಷ್ಟು ಕಂಪನಿಗಳು ಇದರಲ್ಲಿ ಸೇರಿವೆ.

೩. ಚೀನಾದ ಕೇವಲ ಮೂರು ಕಂಪನಿಗಳು ‘ಕ್ವೆಕ್ಟೇಲ್’ ‘ಫೈಬೋಕಾಮ’ ಮತ್ತು ‘ಚೈನಾ ಮೊಬೈಲ್’ ಈ ಎಲೆಕ್ಟ್ರಾನಿಕ್ಸ್ ಉಪಕರಣಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇಕಡ ೫೪ ರಷ್ಟು ಪಾಲುಹೊಂದಿದೆ. ಜಗತ್ತಿನ ದೊಡ್ಡ ೧೦ ಲ್ಯಾಪ್ ಟಾಪ್ ಕಂಪನಿಗಳಿಗೆ ಚೀನಾದ ಈ ೩ ಕಂಪನಿಗಳು ತಯಾರಿಸುವ ಬಿಡಿ ಭಾಗಗಳು ಉಪಯೋಗಿಸುತ್ತವೆ. ಸಂಚಾರ ಸಂಬಂಧ ಪಟ್ಟ ಉದ್ಯೋಗದಲ್ಲಿ ಕೂಡ ಈ ೩ ಕಂಪನಿಗಳಿಂದ ಜಗತ್ತಿನ ಮಾರುಕಟ್ಟೆಯಲ್ಲಿ ಶೇಕಡಾ ೭೫ ರಷ್ಟು ಪಾಲು ಪಡೆದಿದೆ. ವಿಶೇಷವೆಂದರೆ ಈ ಮೂರು ಕಂಪನಿಗಳ ಮೇಲೆ ಚೀನಾ ಸರಕಾರದ ನಿಯಂತ್ರಣವಿದೆ. ‘ಟೆಸ್ಲಾ’ ದಂತಹ ದೊಡ್ಡ ಕಾರಿನ ಉತ್ಪಾದನೆ ಮಾಡುವ ಕಂಪನಿ ಕೂಡ ‘ಕನೆಕ್ಟಿವಿಟಿ’ಗಾಗಿ ಇದೆ ಮೂರು ಕಂಪನಿಗಳ ನೆಟ್ ವರ್ಕ್ ಉಪಯೋಗಿಸುತ್ತದೆ.

೪. ಬ್ರಿಟಿಷ ಸರಕಾರದ ಪ್ರಕಾರ, ಚೀನಾ ಯಂತ್ರದಲ್ಲಿ ಬೇಹುಗಾರಿಕೆ ‘೫-ಜಿ’ ನೆಟ್ ವರ್ಕ್ ಮೂಲಕ ನಡೆಯುತ್ತದೆ. ಅದು ಚೀನಾದ ವಿವಿಧ ಸರ್ವರ್ ಜೊತೆ ಜೋಡಣೆಯಾಗಿದೆ. ಇದರಲ್ಲಿ ಬ್ರಿಟನ್ ನ ಮಹತ್ವದ ವ್ಯಕ್ತಿ, ಸಂಸ್ಥೆ, ಸೈನಿಕ ಚಲನವಲನ ಮುಂತಾದರ ಮಾಹಿತಿ ಪೂರೈಸುತ್ತದೆ.

೫. ಬ್ರಿಟನ್ನಿನ ವರದಿಯಲ್ಲಿ, ಅಮೇರಿಕಾದಲ್ಲಿ ಶಸ್ತ್ರಾಸ್ತ್ರಕ್ಕೆ ಸಂಬಂಧ ಪಟ್ಟ ಸಣ್ಣ ಸಣ್ಣ ಚಲನವಲನೆ ಕೂಡ ಚೀನಾ ಸುಲಭವಾಗಿ ಪಡೆದಿತ್ತು. ಅಮೇರಿಕಾ ತೈವಾನಗೆ ಯಾವಾಗ, ಎಷ್ಟು ಮತ್ತು ಯಾವ ಶಸ್ತ್ರಾಸ್ತ್ರಗಳು ಪೂರೈಸುತ್ತಿದೆ ?, ಇದರ ಮಾಹಿತಿ ಚೀನಾ ಮೊದಲೇ ಪಡೆದಿದೆ. ಶಸ್ತ್ರಾಸ್ತ್ರ ಸಂಗ್ರಹ ಪೂರೈಸುವ ಮೊದಲು ಚೀನಾ ತೈವಾನಿನ ಸುತ್ತಮುತ್ತ ಯುದ್ಧ ವಿಮಾನಗಳು ಕಳುಹಿಸಿತ್ತು. ಹಾಗೂ ಯುದ್ಧ ನೌಕೆಯು ಸಿದ್ಧಗೊಳಿಸಿತ್ತು.

೬. ಚೀನಾದಲ್ಲಿ ೨೨ ವರ್ಷ ರಾಜಕೀಯ ಅಧಿಕಾರಿಯಾಗಿರುವ ಕಾರ್ಲೆಸ್ ಪಾರ್ಟನ್ ಇವರು, ಯಾವ ದೇಶಕ್ಕೆ ಚೀನಾದ ವಸ್ತುಗಳು ಹೋಗುತ್ತದೆ, ಅಲ್ಲಿ ಬೇಹುಗಾರಿಕೆಯ ಅನುಮಾನ ಇರುತ್ತದೆ. ಕೇವಲ ಭದ್ರತೆಯ ಹಿನ್ನೆಲೆಯಲ್ಲಿ ಅಷ್ಟೇ ಅಲ್ಲದೆ, ಚೀನಾದ ದೃಷ್ಟಿಯಿಂದ ಗ್ರಾಹಕರ ಅಭಿಪ್ರಾಯವನ್ನು ತಿಳಿದುಕೊಳ್ಳುವುದಕ್ಕಾಗಿ ಇದು ಒಂದು ಮಾರ್ಗವಾಗಿದೆ.

ಚೀನಾದಿಂದ ನಡೆಯುವ ಬೇಹುಗಾರಿಕೆ ತಡೆಯುವ ಉಪಾಯ ದೊರೆತಿಲ್ಲ !

ಲ್ಯಾಪ್ ಟಾಪ್, ವಾಯ್ಸ್ ಕಂಟ್ರೋಲ್ ಸ್ಮಾರ್ಟ್ ಸ್ಪೀಕರ್, ಸ್ಮಾರ್ಟ್ ವಾಚ್, ಸ್ಮಾರ್ಟ್ ಎನರ್ಜಿ ಮೀಟರ್, ಸಿಸಿಟಿವಿ ಕ್ಯಾಮೆರ, ಜಗತ್ತಿನಾದ್ಯಂತ ಪೊಲೀಸ ವ್ಯವಸ್ಥೆಗಾಗಿ ಉಪಯೋಗಿಸುವ ಕ್ಯಾಮರ, ಡೋರ್ ಬೆಲ್ ಕ್ಯಾಮರಾ, ಕಾರ್ಡ್ ಪೇಮೆಂಟ್ ಮಷೀನ್, ಹಾಟ್ ಟಬ್, ಕಾರು ಮುಂತಾದವು ಚೀನಾದಿಂದ ತಯಾರಿಸಲಾಗುತ್ತದೆ ಅಥವಾ ಅದರ ಬಿಡಿ ಭಾಗಗಳು ಇರುತ್ತವೆ. ಈ ಮೂಲಕ ನಡೆಯುವ ಬೇಹುಗಾರಿಕೆ ತಡೆಯುವದಕ್ಕೆ ಇಲ್ಲಿಯವರೆಗೆ ಉಪಾಯ ದೊರೆತಿಲ್ಲ.

ಚೀನಾಕಗೆ ಈ ದೊರೆಯುತ್ತದೆ !

ಚೀನಾ ‘ಸ್ಮಾರ್ಟ್ ಫೋನ್’ನ ಮೂಲಕ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿ ಚೀನಾ ಸಂಸ್ಥೆ ಸಂಗ್ರಹಿಸುತ್ತಿದೆ. ನೀವು ಯಾರಿಗೆ ಹಣ ನೀಡಿದ್ದೀರಿ ? ಎಷ್ಟು ನೀಡಿದ್ದೀರಿ ? ನಾವು ಹಣ ಹೇಗೆ ಖರ್ಚು ಮಾಡುತ್ತೇವೆ ? ನಿಮ್ಮ ಸಂಪರ್ಕದಲ್ಲಿ ಯಾರ್ಯಾರು ಇದ್ದಾರೆ ? ಮುಂತಾದ ಎಲ್ಲಾ ಮಾಹಿತಿ ಚೀನಾಗೆ ಸುಲಭವಾಗಿ ಲಬ್ಯವಾಗುತ್ತಿದೆ. ಮನೆಯಲ್ಲಿನ ಸಿಸಿ ಟಿವಿ ಕ್ಯಾಮೆರಾದ ಚಿತ್ರೀಕರಣ ಕೂಡ ಚೀನಾ ಬಳಿ ತಲುಪುತ್ತದೆ. ವಿಶೇಷವೆಂದರೆ ಸಂಚಾರ ವಾಣಿ ಬಂದಾಗಿದ್ದರು ಅದರಲ್ಲಿ ಆಡಿಯೋ ವಿಡಿಯೋ ರೆಕಾರ್ಡ್ ಆಗುತ್ತದೆ. ಜಗತ್ತಿನ ಲ್ಯಾಪ್ ಟಾಪ್, ಸಿಸಿಟಿವಿ ಕ್ಯಾಮೆರಾ, ಸ್ಮಾರ್ಟ್ ಫೋನ್ ನ ಬಿಡಿ ಭಾಗಗಳು ‘ಚೈನಾ ಮೊಬೈಲ್’ ಮತ್ತು ‘ಫೈಬೋಕಾಮ’ ಕಂಪನಿ ತಯಾರಿಸುತ್ತದೆ. ಆದ್ದರಿಂದ ಅವರಿಗೆ ಈ ಉಪಕರಣದಲ್ಲಿನ ಮಾಹಿತಿ ನೋಡಲು ಬರುತ್ತದೆ. ಭಾರತದಲ್ಲಿ ಇಲ್ಲಿಯವರೆಗೆ ‘ಮಾಹಿತಿ ಸುರಕ್ಷಿತ ಕಾನೂನು’ (ಡೇಟಾ ಪ್ರೊಟೆಕ್ಷನ್ ಕಾನುನು) ತಯಾರಿಸಿಲ್ಲ. ಆದ್ದರಿಂದ ಚೀನಾ ಕಂಪನಿಗಳಿಗೆ ಯಾವುದೇ ಕಡಿವಾಣವಿಲ್ಲ. ಬ್ರಿಟನ್ ನಿನ್ನಂತಹ ಯುರೋಪಿಯನ ದೇಶದಲ್ಲಿ ಕಠಿಣ ಕಾನೂನು ಇದೆ. ಅಲ್ಲಿಯ ಮಾಹಿತಿ (ಡೇಟಾ) ಹೊರಗೆ ಹೋಗುವುದು ಕಂಡು ಬಂದರೆ ಅಲ್ಲಿಯ ಚೀನಾ ಕಂಪನಿಗೆ ಜಗತ್ತಿನಾದ್ಯಂತದ ಆದಾಯದ ಶೇಕಡ ೪ ರಷ್ಟು ದಂಡ ವಿಧಿಸುತ್ತಾರೆ. ಅದು ಅಬ್ಜ ರೂಪಾಯಿ ಆಗಬಹುದು.