‘ಬಿಬಿಸಿ ನ್ಯೂಸ್’ ನಿಂದ ಪ್ರಧಾನಮಂತ್ರಿ ಮೋದಿ ಇವರನ್ನು ದ್ವೇಷಿಸುವ ಸಾಕ್ಷ್ಯಚಿತ್ರ ನಿರ್ಮಾಣ

ಪಾಕಿಸ್ತಾನಿ ಮೂಲದ ಮುಸಲ್ಮಾನ ಸಂಸದನ ಪ್ರಶ್ನೆಯ ಬಗ್ಗೆ ಬ್ರಿಟನ್ನಿನ ಪ್ರಧಾನಮಂತ್ರಿಯಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ !

ಲಂಡನ್ (ಬ್ರಿಟನ) – ‘ಬಿಬಿಸಿ ನ್ಯೂಸ್’ ಈ ವಾರ್ತಾ ವಾಹಿನಿಯಿಂದ ತಯಾರಿಸಿರುವ ೨ ಭಾಗದ ಸಾಕ್ಷ್ಯಚಿತ್ರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಇವರನ್ನು ಮುಸಲ್ಮಾನ ದ್ವೇಷಿ ಎಂದು ತೋರಿಸುವ ಪ್ರಯತ್ನ ಮಾಡಿದೆ. ಇದರ ಬಗ್ಗೆ ಭಾರತ ಸರಕಾರದಿಂದ ‘ಈ ಸರಣಿ ಅಪಪ್ರಚಾರದ ಒಂದು ಭಾಗವಾಗಿದೆ’ ಎಂದು ಟೀಕೆಸಿದೆ. ಪಾಕಿಸ್ತಾನಿ ಮೂಲದ ಬ್ರಿಟಿಷ್ ಸಂಸದರು ಬ್ರಿಟನ್ನಿನ ಸಂಸತ್ತಿನಲ್ಲಿ ಈ ಅಂಶಗಳನ್ನು ಮಂಡಿಸಿದಾಗ ಬ್ರಿಟನ್ನಿನ ಪ್ರಧಾನ ಮಂತ್ರಿ ಋಷಿ ಸುನಾಕ್ ಇವರು ಮೋದಿ ಅವರ ಪರ ನಿಂತರು. ಪ್ರಸ್ತುತ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳ್ಳುತ್ತಿದೆ.

೧. ಪಾಕಿಸ್ತಾನಿ ಮೂಲದ ಸಂಸದ ಇಮ್ರಾನ್ ಹುಸೇನ್ ಇವರು ‘ಪ್ರಧಾನಿ ಮೋದಿ ಅವರು ಗುಜರಾತನ ಮುಖ್ಯಮಂತ್ರಿ ಆಗಿದ್ದಾಗ ೨೦೦೨ ರಲ್ಲಿ ಗಲಭೆಯಲ್ಲಿ ಸಹಭಾಗಿಯಾಗಿದ್ದರು’, ಎಂದು ದಾವೆ ಮಾಡುತ್ತಾ ಪ್ರಧಾನಿ ಋಷಿ ಸುನಕ ಇವರು ಇದರ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಬೇಕೆಂದು’ ಆಗ್ರಹಿಸಿದರು.

೨. ಸಂಸದ ಹುಸೇನ್ ಇವರು, ಬ್ರಿಟನ್ ನ ವಿದೇಶಾಂಗ ಖಾತೆಯ ಮಾಹಿತಿಯ ಪ್ರಕಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ೨೦೦೨ ರಲ್ಲಿನ ಗುಜರಾತ ಗಲಭೆಯಲ್ಲಿ ನಡೆದಿರುವ ಹಿಂಸಾಚಾರಕ್ಕೆ ನೇರ ಹೊಣೆಗಾರರಾಗಿದ್ದರು. ಭಾರತದ ಜೊತೆಗೆ ಜಗತ್ತಿನಾದ್ಯಂತ ಅನೇಕ ಕುಟುಂಬಗಳು ಇಂದಿಗೂ ಗಲಭೆಯಿಂದ ಮಾನಸಿಕ ತೊಂದರೆ ಸಹಿಸುತ್ತಿದ್ದಾರೆ. ಅನೇಕರಿಗೆ ಇಂದಿಗೂ ನ್ಯಾಯ ದೊರೆತಿಲ್ಲ. ಪ್ರಧಾನಿ (ಋಷಿ ಸುನಕ) ತಮ್ಮ ವಿದೇಶಾಂಗ ಇಲಾಖೆಯ ಈ ಅಭಿಪ್ರಾಯಕ್ಕೆ ಸಹಮತ ಇರುವರೆ ? ಎಂದು ಹುಸೇನ ಅವರು ಪ್ರಶ್ನೆಯನ್ನು ಕೇಳಿದರು.

೩. ಹುಸೇನ್ ಇವರ ಪ್ರಶ್ನೆಗೆ ಋಷಿ ಸುನಕ ಉತ್ತರಿಸುವಾಗ, ಇದರ ಹಿನ್ನೆಲೆಯಲ್ಲಿ ಬ್ರಿಟಿಷ್ ಸರಕಾರದ ಅಭಿಪ್ರಾಯ ದೃಢವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂದರೆ ನಾವು ಯಾವುದೇ ರೀತಿಯ ಹಿಂಸಾಚಾರಕ್ಕೆ ಎಲ್ಲಿಯೂ ಬೆಂಬಲ ನೀಡುವುದಿಲ್ಲ; ಆದರೆ ಇಮ್ರಾನ್ ಹುಸೇನ್ ಇವರು ಮಂಡಿಸಿರುವ ಅಭಿಪ್ರಾಯಕ್ಕೆ ನನ್ನ ಸಹಮತಿಯಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನ ಮೂಲದ ಮುಸಲ್ಮಾನ ಸಂಸದನಿಗೆ ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಹಿಂದೂಗಳ ನರಸಂಹಾರ ನಡೆದಿರುವುದು ಕಾಣುವುದಿಲ್ಲ, ಇದನ್ನು ತಿಳಿಯಿರಿ !