ಪರಿಪೂರ್ಣತೆಯ ಮೂರ್ತಿರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಹವಾಸದಲ್ಲಿ ಸೇವೆ ಮಾಡುವಾಗ ಶ್ರೀ. ರಾಹುಲ ಕುಲಕರ್ಣಿ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸರ್ವಜ್ಞರಾದ ಪರಾತ್ಪರ ಗುರು ಡಾಕ್ಟರರು ಸ್ಪರ್ಶ ಮಾಡದಿರುವಂತಹ ಯಾವುದೇ ವಿಷಯಗಳಿಲ್ಲ. ಅವತಾರತ್ವಕ್ಕೆ ಮಾನವ ದೇಹದ ಮಿತಿಗಳಿಂದ ಬಂಧಿಸಲ್ಪಟ್ಟಿದ್ದರೂ ಸುಮಾರು ಎಲ್ಲ ಕ್ಷೇತ್ರಗಳಲ್ಲಿ, ಅಂದರೆ ಕಟ್ಟಡದಿಂದ ಸಂಗೀತದವರೆಗಿನ ಪ್ರತಿಯೊಂದು ಕ್ಷೇತ್ರದಲ್ಲಿ ಅವರು ತಮ್ಮ ಸರ್ವಜ್ಞತೆಯ ಹೆಜ್ಜೆಗಳನ್ನಿಟ್ಟಿದ್ದಾರೆ. ಸಾಧಕರಿಗೆ ಅಪೂರ್ಣತೆಯ ಅರಿವು ಮಾಡಿಕೊಟ್ಟು ಅವರಿಗೆ ಪೂರ್ಣತ್ವದ ಹಂಬಲವನ್ನು ಹಚ್ಚಿ ಪ್ರತಿಯೊಂದು ಕೃತಿಯನ್ನು ಪರಿಪೂರ್ಣವಾಗಿ ಮಾಡಲು ಪ್ರೋತ್ಸಾಹ ನೀಡುವ ಮತ್ತು ಸಮಯ ಬಂದಾಗ ತಮ್ಮ ಕೃತಿಯಿಂದ ಕಲಿಸುವ ಪರಾತ್ಪರ ಗುರುದೇವರ ಬಗ್ಗೆ ಎಷ್ಟು ಕೃತಜ್ಞತಾಪುಷ್ಪಗಳನ್ನು ಅರ್ಪಿಸಬೇಕು ! ಸ್ವತಃ ಸತತವಾಗಿ ಕಲಿಯುವ ವೃತ್ತಿಯಲ್ಲಿದ್ದು ಸಾಧಕರಿಗೆ ಸಾಧನೆಯ ಸಣ್ಣಪುಟ್ಟ ವಿಷಯಗಳನ್ನು ಕಲಿಸಿ ಪರಿಪೂರ್ಣತೆಯ ಕಡೆಗೆ ಕರೆದೊಯ್ಯುವ ಪರಾತ್ಪರ ಗುರುದೇವರ ಸಂದರ್ಭದಲ್ಲಿ ‘ಕೃತಜ್ಞತೆ’ ಈ ಶಬ್ದವೂ ಕಡಿಮೆ ಬೀಳುವುದು. ಸಾಧಕರ ಈಶ್ವರಪ್ರಾಪ್ತಿಯ ವ್ಯಷ್ಟಿ ಧ್ಯೇಯ ಮತ್ತು ಹಿಂದೂ ರಾಷ್ಟ್ರ-ಸ್ಥಾಪನೆಯ ಸಮಷ್ಟಿ ಧ್ಯೇಯವೂ ಎಷ್ಟು ಪರಸ್ಪರ ಪೂರಕ ಧ್ಯೇಯವಾಗಿವೆ, ಎಂಬುದು ಇಲ್ಲಿ ಗಮನಕ್ಕೆ ಬರುತ್ತದೆ. ೨೪/೧೭ ನೇ ಸಂಚಿಕೆಯಲ್ಲಿ ೨೦೦೫ ರಲ್ಲಿ ರಾಮನಾಥಿ ಆಶ್ರಮದ ಕಟ್ಟಡಕಾಮಗಾರಿ ಸೇವೆ ಸಂದರ್ಭದಲ್ಲಿನ ಅಂಶಗಳನ್ನು ನೋಡಿದೆವು. ಇಂದು ಉಳಿದ ಕೊನೆಯ ಭಾಗವನ್ನು ನೋಡೋಣ.   

(ಭಾಗ ೩)

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/78471.html
ಶ್ರೀ. ರಾಹುಲ ಕುಲಕರ್ಣಿ

೩. ಇತರ ಅಂಶಗಳು

೩ ಇ. ಸಾಧಕನಿಗೆ ಮಾತುಕತೆ ನಡೆಸುವಲ್ಲಿನ ದೋಷ ತೆಗೆಯುವ ಮಹತ್ವವನ್ನು ಹೇಳಿ ಅದಕ್ಕಾಗಿ ಪ್ರಯತ್ನಿಸಲು ಹೇಳುವುದು

ಒಮ್ಮೆ ಪ.ಪೂ. ಡಾಕ್ಟರರು ನನಗೆ, ”ನೀನು ಎಲ್ಲರೊಂದಿಗೆ ಮಾತನಾಡುತ್ತೀಯಾ ?” ಎಂದು ಕೇಳಿದರು. ಆಗ ನಮ್ಮಿಬ್ಬರಲ್ಲಿ ಮುಂದಿನ ಸಂಭಾಷಣೆ ಆಯಿತು.

ನಾನು : ನನಗೆ ಸರಿ ಮಾತನಾಡಲು ಬರುವುದಿಲ್ಲ. ನನಗೆ, ‘ನನ್ನ ಮಾತಿನಿಂದ ಇತರರಿಗೆ ಅಡಚಣೆ ಬರುವುದು’, ಎಂದೆನಿಸುತ್ತದೆ.

ಪ.ಪೂ. ಡಾಕ್ಟರ್ : ನೀನು ಎಲ್ಲರೊಂದಿಗೆ ಮಾತನಾಡಬೇಕು. ಆವಾಗಲೇ ನಿನ್ನಲ್ಲಿನ ಮಾತನಾಡದಿರುವ ಅಡತಡೆಗಳು ಹೊರಟು ಹೋಗುವುದು. ಒಂದು ವೇಳೆ ನೀನು ಮಾತನಾಡುವಾಗ ತಪ್ಪಾದರೆ, ಏನಾಗುವುದು ? ಹೆಚ್ಚೆಂದರೆ ನಿನಗೆ ಅದರ ಅರಿವು ಮಾಡಿ ಕೊಡಲಾಗುವುದು; ಆದರೆ ಆ ದೋಷವು ನಿನ್ನಲ್ಲಿ ಇರಬಾರದು.

೩ ಈ. ಪ.ಪೂ. ಡಾಕ್ಟರರು ಸಾಧಕನಲ್ಲಿನ ಅಹಂನ ನಿರ್ಮೂಲನೆ ಮಾಡುವುದು

ಒಮ್ಮೆ ರಾಮನಾಥಿ ಆಶ್ರಮದಲ್ಲಿನ ನಾಲ್ಕನೇ ಮಹಡಿಯ ಮೇಲೆ ಕಟ್ಟಡ ಕಾಮಗಾರಿಯ ಕೆಲಸ ನಡೆಯುತ್ತಿರುವಾಗ ಸಾಯಂಕಾಲ ಅಲ್ಲಿ ಉಳಿದಿರುವ ಸಿಮೆಂಟನ್ನು ಕೆಲಸಗಾರರು ಬೇರೆಡೆ ಎಲ್ಲಿಯೂ ಚೆಲ್ಲಬಾರದೆಂದು ನಾನು ಅದನ್ನು ಮೊದಲನೇ ಮಹಡಿಗೆ ತೆಗೆದುಕೊಂಡು ಹೋಗುತ್ತಿದ್ದೆನು. ಆಗ ಪ.ಪೂ. ಡಾಕ್ಟರರು ಅಲ್ಲಿಂದ ಹೋಗುತ್ತಿದ್ದರು. ಆಗ ನನ್ನ ಮನಸ್ಸಿನಲ್ಲಿ ‘ಈಗ ನನಗೆ ‘ಏನು ಮಾಡುತ್ತಿರುವೆ ?’ ಎಂದು ಕೇಳಿ ಅವರು ನನ್ನನ್ನು ಪ್ರಶಂಶಿಸಬಹುದು’, ಎಂಬ ತೀವ್ರ ಅಪೇಕ್ಷೆಯ ವಿಚಾರ ಬರತೊಡಗಿತು. ಅಷ್ಟರಲ್ಲಿ ಪ.ಪೂ. ಡಾಕ್ಟರರು ಅಲ್ಲಿ ಪಕ್ಕದಲ್ಲಿ ಬಿದ್ದಿರುವ ರಟ್ಟಿನ ಒಂದು ತುಂಡನ್ನು ತೋರಿಸಿ ”ಇದನ್ನು ತೆಗೆಯಬೇಕೆಂದು ಗಮನಕ್ಕೆ ಬರಲಿಲ್ಲವೇ ?” ಎಂದು ನನಗೆ ಕೇಳಿದರು.

೩ ಉ. ಅನುಸಂಧಾನದಲ್ಲಿದ್ದರೆ ಮಾತ್ರ ದೇವರು ತಪ್ಪುಗಳನ್ನು ಗಮನಕ್ಕೆ ತಂದುಕೊಡುವುದಾಗಿ ಪ.ಪೂ. ಡಾಕ್ಟರರು ಹೇಳುವುದು

ಒಮ್ಮೆ ನಾನು ಪ.ಪೂ. ಡಾಕ್ಟರರ ಕೋಣೆಯಲ್ಲಿ ಅವರೊಂದಿಗೆ ಮಾತನಾಡುತ್ತಿದ್ದೆನು. ಆಗ ಅಲ್ಲಿ ಇಬ್ಬರು ಸಾಧಕರು ಮಂತ್ರಪಠಣವನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಪ.ಪೂ. ಡಾಕ್ಟರರು ನನಗೆ, ”ನಾವು ಮಾತನಾಡುತ್ತಿರುವಾಗ ನಮ್ಮ ಮಾತಿನಿಂದ ಮಂತ್ರಪಠಣದಲ್ಲಿ ಅಡಚಣೆ ಬಂದಿತು. ಮಂತ್ರಪಠಣವನ್ನು ಮಾಡುವ ಇಬ್ಬರು ಸಾಧಕರಲ್ಲಿ ಒಬ್ಬನು ಹಿಂದೆ ತಿರುಗಿ ನೋಡಿದನು”, ಎಂದು ಹೇಳಿದರು. ಅವರು ಹೇಳಿದ ನಂತರ ಇದು ನನ್ನ ಗಮನಕ್ಕೆ ಬಂದಿತು. ಆಗ ಅವರು, ”ನಾವು ಅನುಸಂಧಾನದಲ್ಲಿದ್ದರೆ, ದೇವರೇ ನಮಗೆ ನಮ್ಮ ತಪ್ಪುಗಳನ್ನು ಗಮನಕ್ಕೆ ತಂದುಕೊಡುತ್ತಾನೆ” ಎಂದು ಹೇಳಿದರು.

೩ ಊ. ಸಾಧಕನಿಗೆ ಆಗುವ ತೊಂದರೆಯು ಕಡಿಮೆಯಾಗುವುದರ ಬಗ್ಗೆ ಭರವಸೆ ನೀಡುವುದು

೨೦೧೦ ರಲ್ಲಿ ನಾನು ಮನೆಗೆ ಹೋಗಿದ್ದೆನು. ಅಲ್ಲಿಂದ ಮರಳಿ ಬಂದ ನಂತರ ನಾನು ಪ.ಪೂ. ಡಾಕ್ಟರರ ಕೋಣೆಯಲ್ಲಿ ಸೇವೆಯನ್ನು ಮಾಡುತ್ತಿರುವಾಗ ಅವರು, ”ಕೆಟ್ಟ ಶಕ್ತಿಗಳೊಂದಿಗೆ ನಿನ್ನ ಪ್ರತಿದಿನ ಸೂಕ್ಷ್ಮಯುದ್ಧ ನಡೆದಿರುತ್ತದೆ. ಒಮ್ಮೆ ಅವರು ಗೆದ್ದರೆ, ಒಮ್ಮೆ ನೀನು ಗೆಲ್ಲುವೆ. ಯಾವಾಗ ಅವರು ಗೆಲ್ಲುತ್ತಾರೆಯೋ, ಆಗ ನೀನು ಮನೆಗೆ ಹೋಗುವೆ ಮತ್ತು ಯಾವಾಗ ನೀನು ಗೆಲ್ಲುತ್ತಿಯೋ, ಆಗ ನೀನು ಆಶ್ರಮದಲ್ಲಿರುವೆ. ಕೊನೆಗೆ ಸೂಕ್ಷ್ಮಯುದ್ಧದಲ್ಲಿ ನೀನೇ ಗೆಲ್ಲುವೆ”, ಎಂದು ಹೇಳಿದರು.

೩ ಎ. ತೊಂದರೆಗಳ ಬಗ್ಗೆ ಸಾಧಕನಿಗಾದ ಅನುಭೂತಿ

೨೦೧೩ ರಲ್ಲಿ ನನಗೆ ಗೋಡೆಯ ಮೇಲೆ ಅನೇಕ ಚಿತ್ರವಿಚಿತ್ರ ಆಕಾರಗಳು ಕಾಣಿಸುತ್ತಿದ್ದವು. ಅವು ಕೆಲವೊಮ್ಮೆ ಸ್ತ್ರೀಯರ ಅಥವಾ ಭೂತಗಳ ಆಕಾರಗಳಿರುತ್ತಿದ್ದವು. ಕೆಲವು ದಿನಗಳ ನಂತರ ಈ ಆಕಾರಗಳು ಕಾಣುವುದು ನಿಂತು ದೇವತೆಗಳ ಆಕಾರ, ಉದಾ. ಶ್ರೀಕೃಷ್ಣ-ಅರ್ಜುನ ರಥ ಈ ರೀತಿ ಚಿತ್ರಗಳು ಆಕಾಶದಲ್ಲಿ ಅಥವಾ ಗೋಡೆಯ ಮೇಲೆ ಕಾಣಿಸತೊಡಗಿದವು. (ಈ ಅನುಭೂತಿಯನ್ನು ಪರಮಪೂಜ್ಯ ಡಾಕ್ಟರರಿಗೆ ಹೇಳಿದಾಗ ಅವರು, ”ಅನುಭೂತಿ ಚೆನ್ನಾಗಿದೆ. ಬರೆದು ಕೊಡು” ಎಂದು ಹೇಳಿದರು. ನನಗೆ ಅದನ್ನು ಬರೆದು ಕೊಡಲು ತಡವಾಯಿತು. ನಂತರ ಕಾಣಿಸುವುದು ನಿಂತಿತು ಮತ್ತು ನಾನು ಬರೆದು ಕೊಡಲಿಲ್ಲ.)

೩ ಐ. ಪ.ಪೂ. ಡಾಕ್ಟರರು ಸಾಧಕನ ಆಧ್ಯಾತ್ಮಿಕ ತೊಂದರೆಯಿಂದ ಶೇ. ೭೦ ರಿಂದ ೮೦ ರಷ್ಟು ಸಾಧನೆ ಖರ್ಚಾಗುತ್ತಿದ್ದರೂ, ಅವನ ಪ್ರಗತಿ ಆಗುತ್ತಿರುವುದಾಗಿ ಹೇಳಿ ಚಿಂತೆ ಮಾಡಬಾರದು ಎಂದು ಹೇಳುವುದು

ಡಿಸೆಂಬರ್ ೨೦೧೪ ರಲ್ಲಿ ಪ.ಪೂ. ಡಾಕ್ಟರರು ನನಗೆ, ”ನಿನ್ನ ಪ್ರಗತಿ ಆಗುತ್ತಿದೆ. ನಿನಗೆ ಏನಾದರೂ ಅರಿವಾಗುತ್ತಿದೆಯೇ ?” ಎಂದು ಕೇಳಿದರು. ನಾನು ಅವರಿಗೆ, ”ಅಧೋಗತಿಯೇ ಆಗುತ್ತಿರುವಂತೆ ಎನಿಸುತ್ತಿದೆ”, ಎಂದು ಹೇಳಿದೆನು. ಆಗ ಅವರು  ”ಪ್ರಗತಿ ಆಗುತ್ತಿದೆ. ತೊಂದರೆಯಿಂದ ಇದುವರೆಗೆ ಶೇ. ೭೦ ರಿಂದ ೮೦ ರಷ್ಟು ನಿನ್ನ ಸಾಧನೆ ಖರ್ಚಾಯಿತು. ಇತರರಂತೆ ನಿನ್ನ ಪ್ರಗತಿಯೂ ಆಗಿರುವುದು ಕಂಡುಬರುತ್ತಿತ್ತು; ಆದರೆ ಚಿಂತೆ ಮಾಡಬೇಡ”, ಎಂದು ನನಗೆ ಹೇಳಿದರು.

೩ ಓ. ಮಕ್ಕಳ ಮದುವೆ ಮಾಡದಿರುವುದರ ಬಗ್ಗೆ ಸಾಧಕನ ತಾಯಿಯ ವಿಚಾರವನ್ನು ಕೇಳಿದಾಗ ಪ.ಪೂ. ಡಾಕ್ಟರ್ ಮತ್ತು ಪ.ಪೂ. ಪಾಂಡೆ ಮಹಾರಾಜರು ಸಾಧಕನ ತಾಯಿಯ ಪ್ರಶಂಸೆ ಮಾಡುವುದು

೨೦೦೬ ರಲ್ಲಿ ನನ್ನ ತಾಯಿಯು ಮಿರಜ ಆಶ್ರಮದಿಂದ ರಾಮನಾಥಿ ಆಶ್ರಮಕ್ಕೆ ಕೆಲವು ದಿನ ಉಳಿಯಲು ಬಂದಿದ್ದಳು. ಆ ಸಮಯದಲ್ಲಿ ಅವಳು ನನಗೆ ಮದುವೆಯ ಬಗ್ಗೆ ನನ್ನ ಅಭಿಪ್ರಾಯವನ್ನು ಕೇಳಿದಳು ಮತ್ತು ನನಗೆ, ”ಮದುವೆ ಆಗದಿರುವುದೇ ಒಳ್ಳೆಯದು. ಮದುವೆ ಮಾಡಿಕೊಂಡು ಏನು ಲಾಭವಾಗುವುದಿಲ್ಲ”, ಎಂದು ಹೇಳಿದಳು. ಮರುದಿನ ಪ.ಪೂ. ಡಾಕ್ಟರರು ನನಗೆ, ”ನಿನ್ನ ತಾಯಿ ನಿನಗೆ ಏನು ಹೇಳಿದಳು ?” ಎಂದು ಕೇಳಿದರು. ಆಗ ನಾನು ಅವರಿಗೆ ನನಗೆ ತಾಯಿಯು ಹೇಳಿದ ವಾಕ್ಯವನ್ನು ಹೇಳಿದೆನು. ಆಗ ಅವರು ನನಗೆ, ”ಪ್ರತಿದಿನ ಬೆಳಗ್ಗೆ ನನಗೆ ತಪ್ಪುಗಳನ್ನು ಕೇಳಲು ಸಿಗುತ್ತವೆ; ಆದರೆ ಇಂದು ನೀನು ನನಗೆ ಆನಂದದ ಸುದ್ದಿಯನ್ನು ಕೊಟ್ಟಿರುವೆ. ಇಂತಹ ತಾಯಿ ಸಿಕ್ಕಿರುವುದರಿಂದ ನೀವಿಬ್ಬರು (ನಾನು ಮತ್ತು ನನ್ನ ಸಹೋದರಿ ಕು. ರೂಪಾಲಿ) ಭಾಗ್ಯವಂತರಾಗಿದ್ದೀರಿ. ಇತರರ ತಾಯಿ-ತಂದೆ ಮಾತ್ರ ‘ಯಾವಾಗ ಒಮ್ಮೆ ಮಕ್ಕಳ ಮದುವೆ ಮಾಡಿ ಅವರನ್ನು ಮಾಯೆಯಲ್ಲಿ ಸಿಲುಕಿಸುತ್ತೇವೆಯೋ, ಎಂಬ ವಿಚಾರ ಮಾಡುತ್ತಾರೆ !”ಎಂದು ಹೇಳಿದರು.

ಅನಂತರ ಕೆಲವು ದಿನಗಳ ನಂತರ ನಾನು ಸೇವೆಗಾಗಿ ದೇವದ ಆಶ್ರಮಕ್ಕೆ ಹೋದಾಗ ಅಲ್ಲಿ ಪ.ಪೂ. ಪಾಂಡೆ ಮಹಾರಾಜರು ನನಗೆ ”ನಿನ್ನ ಮುಂದಿನ ವಿಚಾರವೇನಿದೆ ?” ಎಂದು ಕೇಳಿದಾಗ ನಾನು ಅವರಿಗೆ ಮೇಲಿನ ಪ್ರಸಂಗವನ್ನು ಹೇಳಿದೆನು. ಆಗ ಅವರು ನನಗೆ, ”ನಿಜವಾದ ಸಾಧನೆ ನಿನ್ನ ತಾಯಿಗೆ ತಿಳಿದಿದೆ. ಅವಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ಹೇಳು”, ಎಂದು ಹೇಳಿದರು.

(ಮುಕ್ತಾಯ)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.
* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.