ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯೆಂದರೆ ಪರಿಪೂರ್ಣತೆ ಹಾಗೂ ಪ್ರೀತಿಯ ಮೂರ್ತಿ ಸ್ವರೂಪ ! ಸರ್ವಜ್ಞರಾದ ಸಚ್ಚಿದಾನಂದ ಪರಬ್ರಹ್ಮ ಗುರು ಡಾಕ್ಟರರು ಸ್ಪರ್ಶಿಸದಿರುವ ವಿಷಯವೇ ಇಲ್ಲ. ಅವತಾರತ್ವದ ಮಾನವೀ ಶರೀರಕ್ಕೆ ಸೀಮಿತ ನಿರ್ಬಂಧವಿದ್ದರೂ ಹೆಚ್ಚು ಕಡಿಮೆ ಎಲ್ಲ ಕ್ಷೇತ್ರಗಳಲ್ಲಿ, ಅಂದರೆ ಕಟ್ಟಡ ನಿರ್ಮಾಣ ಕಾರ್ಯದಿಂದ ಹಿಡಿದು ಸಂಗೀತದ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅವರು ತಮ್ಮ ಸರ್ವಜ್ಞತೆಯ ಮುದ್ರೆಯನ್ನೊತ್ತಿದ್ದಾರೆ. ಸಾಧಕರಿಗೆ ಅಪೂರ್ಣತೆಯ ಅರಿವು ಮೂಡಿಸಿ ಹಾಗೂ ಅವರಲ್ಲಿ ಪರಿಪೂರ್ಣತೆಯ ಧ್ಯಾಸವನ್ನು ನಿರ್ಮಾಣ ಮಾಡಿ ಪ್ರತಿಯೊಂದು ಕೃತಿಯನ್ನು ಪರಿಪೂರ್ಣಗೊಳಿಸಲು ಪ್ರೋತ್ಸಾಹಿಸುವ ಹಾಗೂ ಪ್ರಸಂಗಾನುಸಾರ ತನ್ನದೆ ಕೃತಿಯಿಂದ ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬಗ್ಗೆ ಎಷ್ಟು ಕೃತಜ್ಞತೆಯ ಪುಷ್ಪಗಳನ್ನು ಅರ್ಪಿಸಬೇಕು ! ತಾವು ನಿರಂತರ ಕಲಿಯುವ ಸ್ಥಿತಿಯಲ್ಲಿದ್ದು ಸಾಧಕರಿಗೆ ಸಾಧನೆಯ ಸೂಕ್ಷ್ಮತ್ವವನ್ನು ಕಲಿಸಿ ಪರಿಪೂರ್ಣತೆಯ ಕಡೆಗೆ ಒಯ್ಯುವ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ವಿಷಯದಲ್ಲಿ ‘ಕೃತಜ್ಞತೆ’ ಎಂಬ ಶಬ್ದವೂ ಅಪೂರ್ಣವೆನಿಸುತ್ತದೆ ! ಸಾಧಕರ ಈಶ್ವರಪ್ರಾಪ್ತಿಯ ವ್ಯಷ್ಟಿ ಧ್ಯೇಯ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯ ಸಮಷ್ಟಿ ಧ್ಯೇಯವು ಪರಸ್ಪರ ಪೂರಕ ಧ್ಯೇಯವಾಗಿದೆ, ಎಂಬುದು ಕೂಡ ಇಲ್ಲಿ ಅರಿವಾಗುತ್ತದೆ. ಕಳೆದ ವಾರದ ಸಂಚಿಕೆಯಲ್ಲಿ ೨೦೦೩ ರಲ್ಲಿ ಮಿರಜ ಆಶ್ರಮದ ಕಾಮಗಾರಿಯ ಕುರಿತು ಅಂಶಗಳನ್ನು ನೋಡಿದೆವು. ಇಂದು ಅದರ ಮುಂದಿನ ಭಾಗವನ್ನು ನೋಡೋಣ.
(ಭಾಗ ೨)
ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/77845.html |
೨. ೨೦೦೫ ರಲ್ಲಿನ (ರಾಮನಾಥಿ ಆಶ್ರಮದ ಕಾಮಗಾರಿಯ ಬಗೆಗಿನ ಅಂಶಗಳು)
೨ ಅ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಗಿಡಗಳನ್ನು ಕತ್ತರಿಸುವ ಮೊದಲು ಗಿಡಗಳಲ್ಲಿರುವ ಶಕ್ತಿಗಳಿಗೆ ಪಾರ್ಥಿಸಲು ಹೇಳುವುದು : ೨೦೦೫-೨೦೦೬ ಈ ವರ್ಷ ರಾಮನಾಥಿ ಆಶ್ರಮದ ಪಕ್ಕದ ರಸ್ತೆಯ ಕೆಲಸ ನಡೆದಿತ್ತು. ಆ ಕೆಲಸದ ಅನುಭವವಿರುವ ಓರ್ವ ಸಾಧಕನು ರಸ್ತೆಯ ಕೆಲಸದ ಮೇಲ್ವಿಚಾರಣೆಯನ್ನು (Supervision) ಮಾಡುತ್ತಿದ್ದನು. ಮರುದಿನ ಅವನ ಕಾಲು ಊದಿಕೊಂಡಿತು. ಅವನು ತನ್ನ ಊದಿಕೊಂಡ ಕಾಲನ್ನು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ತೋರಿಸಿದಾಗ, ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅವನಿಗೆ, ರಸ್ತೆಯ ಕೆಲಸವನ್ನು ಮಾಡುವಾಗ ಗಿಡಗಳನ್ನು ಕತ್ತರಿಸುವ ಮೊದಲು ಗಿಡಗಳಲ್ಲಿ ವಾಸಿಸುವ ಶಕ್ತಿಗಳಿಗೆ ಪ್ರಾರ್ಥನೆ ಮಾಡಬೇಕು. ಇಲ್ಲದಿದ್ದರೆ, ಯಾರಿಗಾದರೂ ತಮ್ಮ ಮನೆ ಬೀಳುತ್ತಿರುವಾಗ ಕೋಪ ಬಂದೇ ಬರುತ್ತದೆ ಎಂದರು.
೨ ಆ. ಅಪೂರ್ಣ ಕಾಮಗಾರಿಯ ಸ್ಥಳದಲ್ಲಾದ ತೆಗ್ಗಿನ ಮೇಲಿಂದ ಸಾಮಾನುಗಳನ್ನು ಸಾಗಿಸಲು ಕಟ್ಟಿಗೆ ಹಲಗೆಗಳ ಸೇತುವೆಯನ್ನು ಕಟ್ಟಿದ ಸಾಧಕನನ್ನು ಪ್ರಶಂಸಿಸುವುದು : ರಾಮನಾಥಿ ಆಶ್ರಮದ ಕಾಮಗಾರಿಯ ಸಮಯದಲ್ಲಿ ಮೂರನೇ ಮಹಡಿಯಿಂದ ಕಲಾಮಂದಿರದ ಗೋಡೆ ಇವುಗಳ ನಡುವೆ ಒಂದು ದೊಡ್ಡ ತಗ್ಗು ಇತ್ತು. ಅಲ್ಲಿನ ಕಾಮಗಾರಿ ಅಪೂರ್ಣವಿತ್ತು. ಅಲ್ಲಿಂದ ಕೆಲಸಗಾರರಿಗೆ ಸಾಹಿತ್ಯಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗಬೇಕೆಂದು ಶ್ರೀ. ಘನಶ್ಯಾಮ ಗಾವಡೆ ಇವರು ಮರದ ಹಲಗೆಗಳಿಂದ ಒಂದು ಸೇತುವೆಯನ್ನು ಕಟ್ಟಿದ್ದರು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ನನಗೆ, “ಈ ಸೇತುವೆಯನ್ನು ಯಾರು ಕಟ್ಟಿದರು ?’ ಎಂದು ಕೇಳಿದರು. ನಾನು ‘ಘನಶ್ಯಾಮ’ರ ಹೆಸರು ಹೇಳಿದಾಗ ಅವರು ನನಗೆ, ‘ಕಾಮಗಾರಿ ವಿಭಾಗದ ಘನಶ್ಯಾಮರು ಪರಿಪೂರ್ಣ ಸಾಧಕರಿದ್ದಾರೆ’ ಎಂದರು.
೨ ಇ. ಪ್ರತಿಯೊಂದು ಕೃತಿ ಸ್ಥೂಲದಲ್ಲಿಯೂ ಚೆನ್ನಾಗಿರಬೇಕು ಎಂದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಹೇಳುವುದು : ರಾಮನಾಥಿ ಆಶ್ರಮದ ಮೊದಲನೇಯ ಮಹಡಿಯ ಕಾಲುದಾರಿಯಲ್ಲಿ ಕೊಟಾ ಹಾಸುಗಲ್ಲುಗಳನ್ನು ಹಾಕಲಾಗಿತ್ತು. ಅವುಗಳ ಪೈಕಿ ಒಂದು ಹಾಸುಗಲ್ಲು ಗಾಢ ಕಪ್ಪು ಬಣ್ಣದ್ದಾಗಿತ್ತು ಮತ್ತು ಅದು ಇತರ ಹಾಸುಗಲ್ಲುಗಳಿಗಿಂತ ಬೇರೆಯೇ ಕಾಣಿಸುತ್ತಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅದನ್ನು ತೆಗೆಯಲು ಹೇಳಿದರು ಮತ್ತು ಸ್ಥೂಲದ ವಿಷಯ ತಿಳಿಯದಿದ್ದರೆ ಸೂಕ್ಷ್ಮದ ವಿಷಯ ಹೇಗೆ ತಿಳಿಯಲು ಸಾಧ್ಯ ?’ ಎಂದು ಹೇಳಿದರು.
೨ ಈ. ಇತರರನ್ನು ಸಿದ್ಧ ಮಾಡುವುದು, ಇದು ಒಳ್ಳೆಯ ಸಾಧನೆ ಇರುವುದಾಗಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಹೇಳುವುದು :
ಆಶ್ರಮದ ಎರಡನೇ ಮಹಡಿಯ ಸ್ಲ್ಯಾಬ್ ಕೆಲಸ ನಡೆಯುತ್ತಿರುವಾಗ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಆ ಕೆಲಸವನ್ನು ಮಾಡುವ ಸಾಧಕರಾದ ಶ್ರೀ. ಪಾಡಳೆಕಾಕಾ ಇವರಿಗೆ, ‘ನೀವು ಈ ಕೆಲಸವನ್ನು ಯಾರಿಗಾದರೂ ಕಲಿಸಿದ್ದೀರಾ, ಇಲ್ಲ ? ಯಾರನ್ನಾದರೂ ತಯಾರು ಮಾಡಿದ್ದೀರಾ ಇಲ್ವಾ ? ಇತರರನ್ನು ತಯಾರು ಮಾಡುವುದು, ಇದು ಒಳ್ಳೆಯ ಸಾಧನೆಯಾಗಿದೆ’ ಎಂದು ಹೇಳಿದರು. ಆ ಸಮಯದಲ್ಲಿ ಶ್ರೀ. ಪಾಡಳೆಕಾಕಾರವರು, ‘ರಾಹುಲ ಕುಲಕರ್ಣಿ ಮತ್ತು ಶ್ರೀ. ಸಂಭಾಜಿ ಮಾನೆ ಇವರನ್ನು ಸಿದ್ಧ ಮಾಡಿದ್ದೇನೆ’ ಎಂದು ಹೇಳಿದರು. ಇದನ್ನು ಕೇಳಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಆನಂದವಾಯಿತು.
೩. ಇತರ ಅಂಶಗಳು
೩ ಅ. ಸಾಧಕರ ನಿದ್ದೆಯ ಬಗ್ಗೆ ಕಾಳಜಿ ವಹಿಸುವ ವಾತ್ಸಲ್ಯಮೂರ್ತಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್ !
೧. ೨೦೦೩ ರಲ್ಲಿ ಮೀರಜ ಆಶ್ರಮಕ್ಕೆ ಮುದ್ರಣಾಲಯಕ್ಕೆ ಹೋಗುವ ಸಾಧಕರು ರಾತ್ರಿ ಆಶ್ರಮಕ್ಕೆ ಬಂದ ನಂತರ ಮೆಟ್ಟಿಲುಗಳ ಕೆಳಗಿರುವ ಖಾಲಿ ಜಾಗದಲ್ಲಿ ಮಲಗುತ್ತಿದ್ದರು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಬೆಳಗ್ಗೆ ಮೆಟ್ಟಿಲುಗಳನ್ನು ಹತ್ತುವಾಗ ತಮ್ಮ ಚಪ್ಪಲಿಗಳ ಅಥವಾ ಹೆಜ್ಜೆಗಳ ಶಬ್ದವಾಗದಂತೆ ನೋಡುತ್ತಿದ್ದರು. ಅವರು ಸಾಧಕರ ನಿದ್ದೆಗೆ ಅಡಚಣೆ ಬರದಂತೆ ಕಾಳಜಿ ವಹಿಸುತ್ತಿದ್ದರು.
೨. ೨೦೦೫ ರಲ್ಲಿ ರಾಮನಾಥಿ ಆಶ್ರಮದಲ್ಲಿ ಸಾಧಕರು ಸ್ವಾಗತಕಕ್ಷೆಯ ಹಾಲ್‌ನಲ್ಲಿ ಮಲಗುತ್ತಿದ್ದರು. ಅವರಿಗೆ ಚಳಿಯಾಗಬಾರೆಂದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ರಾತ್ರಿ ಕಿಟಕಿಗಳನ್ನು ಮುಚ್ಚಲು ಹೇಳಿದರು.
೩ ಆ. ಸಾಧಕನಿಗೆ ಮಾರ್ಗದರ್ಶನ ಮಾಡಿ ಚಿಂತಾಮುಕ್ತರನ್ನಾಗಿ ಮಾಡುವ ಪ್ರೇಮಮಯಿ ಗುರುದೇವರು !
೩ ಆ ೧. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಾಧಕನಿಗೆ ಇತರರಿಂದ ಪಡೆದ ಹಣವನ್ನು ಇದೇ ಜನ್ಮದಲ್ಲಿ ಹಿಂದಿರುಗಿಸಲು ಹೇಳುವುದು : ಡಿಸೆಂಬರ್ ೨೦೦೫ ರಲ್ಲಿ ನಾನು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರನ್ನು, ‘ನಾನು ಮನೆಗೆ ಹೋದ ನಂತರ ಹಿಂದೆ ನಾನು ಮಾಡಿದ ಕೆಲಸದಲ್ಲಿ ಕೆಲವು ಜನರಿಂದ ಹೆಚ್ಚು ಹಣ ಪಡೆದಿರುವುದು ನನ್ನ ಬಳಿಗೆ ಬಂದಿರುವುದು ನೆನಪಾಗಿ ನನಗೆ ಕೆಟ್ಟದೆನಿಸುತ್ತದೆ. ಹಾಗಾದರೆ ನಾನು ಈಗ ಅದಕ್ಕೆ ಏನಾದರೂ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬಹುದೇ ?’ ಎಂದು ಕೇಳಿದೆನು. ಇದಕ್ಕೆ ಅವರು ನನಗೆ, ‘ಅದಕ್ಕೆ ಯಾವುದೇ ಪ್ರಾಯಶ್ಚಿತ್ತವಿಲ್ಲ; ಏಕೆಂದರೆ ನೀನು ಯಾರಿಗೆಲ್ಲ ಕೊಡುವುದಿದೆಯೋ ಅದರ ನೋಂದಣಿ ನಿನ್ನ ಅಂತರ್ಮನದಲ್ಲಿ ಆಗಿ ಹೋಗಿದೆ. ಅದಕ್ಕಾಗಿ ಯಾರಿಗೆಲ್ಲ ಕೊಡುವುದಿದೆಯೋ ಅವರಿಗೆ ಅದನ್ನು ಹಿಂದಿರುಗಿಸು’, ಎಂದು ಹೇಳಿದರು.
೩ ಆ ೨. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಊದುಬತ್ತಿಯನ್ನು ಒದ್ದೆಮಾಡಿ ಬೆಳಗಿಸಲು ನಿರಾಕರಿಸಿ ಅದರ ಕಾರಣ ಹೇಳುವುದು : ೨೦೦೫ ರಲ್ಲಿ ಒಂದು ಸಲ ನಾನು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಳಿ, ‘ಊದುಬತ್ತಿಯನ್ನು ಒದ್ದೆ ಮಾಡಿ ಬೆಳಗಿಸಿದರೆ ಅದು ಹೆಚ್ಚು ಸಮಯ ಉರಿಯುತ್ತಿರುತ್ತದೆ. ನಾನು ಆ ರೀತಿ ಮಾಡಬಹುದೇ ?’ ಎಂದು ಕೇಳಿದೆನು. ಆಗ ಅವರು ನನಗೆ ‘ಬೇಡ. ಏಕೆಂದರೆ ಪರಿಸರದ ಮೇಲೆ ಪಂಚಮಹಾಭೂತಗಳ ಸಂಯೋಜಿತ ಪರಿಣಾಮವು ನಕಾರಾತ್ಮಕ ರೀತಿಯಲ್ಲಿ ಆಗುತ್ತದೆ’, ಎಂದು ಹೇಳಿದರು.
೩ ಆ ೩. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಾಧಕನಿಗೆ ಸಿಟ್ಟಿನ ಮೂಲ ಅವನ ಸ್ವಭಾವದೋಷದಲ್ಲಿದೆ ಎಂದು ಹೇಳುವುದು : ೨೦೦೫ ರಲ್ಲಿ ಓರ್ವ ಸಾಧಕನಲ್ಲಿ ನನಗೆ ಪ್ರಾಪ್ತವಾಗುತ್ತಿರುವ ಜ್ಞಾನದ ಬಗ್ಗೆ ಹೇಳುವಾಗ, ಅವನು ‘ಆ ಜ್ಞಾನವನ್ನು ದೊಡ್ಡ ಕೆಟ್ಟ ಶಕ್ತಿಯು ಕೊಡುತ್ತದೆ’, ಎಂದು ಹೇಳಿದನು. ಆಗ ನನಗೆ ಅವನ ಮೇಲೆ ಸಿಟ್ಟು ಬಂದಿತು. ನಾನು ಈ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಹೇಳಿದೆನು. ಆಗ ಅವರು, ‘ಇದಕ್ಕೆ ಸ್ವಯಂಸೂಚನೆಯನ್ನು ಕೊಡು. ನಿನ್ನ ಸಿಟ್ಟಿನ ಮೂಲ ನಿನ್ನಲ್ಲಿಯೇ ಇದೆ’, ಎಂದು ಹೇಳಿದರು.
– ಶ್ರೀ. ರಾಹುಲ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೮.೨೦೨೦)