ದೇವರಪೂಜೆಯ ಬಟ್ಟೆಗಳನ್ನು ಸಾಮಾನ್ಯ ಬಟ್ಟೆಗಳೊಂದಿಗೆ ತೊಳೆಯದೇ ಪ್ರತ್ಯೇಕವಾಗಿ ಒಗೆಯಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ದೇವರಪೂಜೆಯಲ್ಲಿ ಬಳಸುವ ವಸ್ತ್ರಗಳನ್ನು ಉದಾ. ದೇವರನ್ನು ಒರೆಸುವ ಬಟ್ಟೆ, ದೇವರಕೋಣೆಯಲ್ಲಿ ದೇವತೆಗಳಿಗೆ ಆಸನವೆಂದು ಉಪಯೋಗಿಸಿದ ಬಟ್ಟೆಗಳನ್ನು ಇತರ ಬಟ್ಟೆಗಳೊಂದಿಗೆ ಒಗೆಯಬಾರದು. ಅವುಗಳನ್ನು ಯಾವಾಗಲೂ ಪ್ರತ್ಯೇಕವಾಗಿ ಒಗೆಯಬೇಕು. ದೇವತೆಗಳಿಗಾಗಿ ಉಪಯೋಗಿಸಿದ ಬಟ್ಟೆಗಳು ದೇವರ ಪೂಜೆಯಿಂದ ಸಾತ್ತ್ವಿಕವಾಗಿರುತ್ತವೆ. ಅವುಗಳನ್ನು ನಮ್ಮ ಇತರ ಬಟ್ಟೆಗಳೊಂದಿಗೆ ಒಗೆದರೆ ನಮ್ಮ ಬಟ್ಟೆಗಳಲ್ಲಿನ ರಜ-ತಮದಿಂದ ಆ ಬಟ್ಟೆಗಳಲ್ಲಿನ ಸಾತ್ತ್ವಿಕತೆ ಕಡಿಮೆಯಾಗುತ್ತದೆ. ಇದೇ ರೀತಿ ಸಂತರ ಬಟ್ಟೆಗಳ ಸಂದರ್ಭದಲ್ಲಿಯೂ ಆಗುತ್ತದೆ. ಆದ್ದರಿಂದ ಸಂತರ ಬಟ್ಟೆಗಳನ್ನೂ ಪ್ರತ್ಯೇಕವಾಗಿ ಒಗೆಯಬೇಕು. ವಾಚಕರೂ ಈ ಚೌಕಟ್ಟನ್ನು ಓದಿ ಮೇಲಿನಂತೆ ಕೃತಿಯನ್ನು ಅವಶ್ಯವಾಗಿ ಮಾಡಬೇಕು, ಅದರೊಂದಿಗೆ ಇತರರಿಗೂ ಪ್ರಬೋಧನೆ ಮಾಡಬೇಕು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೫.೧೨.೨೦೨೨)