ಅಮೇರಿಕಾದ ಸಂಸತ್ತಿನಲ್ಲಿ ಭಾರತೀಯ ಅಮೇರಿಕನ್ನರ ಪ್ರಶಂಸೆ !

ತೆರಿಗೆಯನ್ನು ತೆರುವುದರಲ್ಲಿ ಅಮೇರಿಕಾದಲ್ಲಿ ಭಾರತೀಯರ ಮಹತ್ವದ ಕೊಡುಗೆ !

( ಸೌಜನ್ಯ : PTC NEWS)

ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾದ ಉಪಚುನಾವಣೆಯಲ್ಲಿ ಜಾರ್ಜಿಯಾದಿಂದ ಆರಿಸಿ ಬಂದಿರುವ ರಿಪಬ್ಲಿಕನ್ ಪಕ್ಷದ ಸಂಸದರಾದ ರಿಚ್ ಮ್ಯಕ್ಕಾರ್ಮಿಕರವರು ಸಂಸತ್ತಿನಲ್ಲಿ ಭಾರತೀಯರ ಪ್ರಶಂಸೆ ಮಾಡಿದರು. ಅವರು “ಅಮೇರಿಕಾದ ಜನಸಂಖ್ಯೆಯಲ್ಲಿ ಭಾರತೀಯರ ಸಂಖ್ಯೆಯು ಕೇವಲ ಶೇ. ೧ರಷ್ಟಿದೆ. ಆದರೆ ತೆರಿಗೆ ತುಂಬಿಸುವಲ್ಲಿ ಅವರ ಪಾಲು ಶೇ. ೬ ರಷ್ಟಿದೆ. ಅಮೇರಿಕಾದಲ್ಲಿ ೪೨ ಲಕ್ಷ ಭಾರತೀಯರಿದ್ದಾರೆ. ಇದು ಏಶಿಯಾದ ಮೂರನೇ ಅತೀ ದೊಡ್ಡ ಸಮೂಹವಾಗಿದೆ” ಎಂದು ಹೇಳಿದರು. ಮ್ಯಕ್ಕಾರ್ಮಿಕ ಮಾತು ಮುಂದುವರಿಸುತ್ತ ‘ಜಾರ್ಜಿಯಾದಲ್ಲಿ ೧ ಲಕ್ಷ ಭಾರತೀಯರಿದ್ದಾರೆ. ಅವರು ಕಾನೂನು ಪಾಲಿಸುತ್ತಾರೆ ಹಾಗೂ ತೆರಿಗೆಯನ್ನೂ ಪಾವತಿಸುತ್ತಾರೆ. ಭಾರತೀಯ ಸಮಾಜವು ಉತ್ಪಾದನೆ ಮಾಡುತ್ತದೆ. ಈ ಸಮಾಜವು ಕುಟುಂಬವನ್ನು ಬೆಂಬಲಿಸುವ ಹಾಗೂ ದೇಶಭಕ್ತ ಆಗಿದೆ. ಇಂತಹ ಜನರ ಸ್ಥಳಾಂತರದ ಪ್ರಕ್ರಿಯೆಯನ್ನು ಇನ್ನೂ ವೇಗ ಹಾಗೂ ವ್ಯವಸ್ಥಿತವಾಗಿ ಮಾಡಬೇಕು. ಭಾರತದ ವಾಣಿಜ್ಯಮಂತ್ರಿ ಪಿಯುಷ್ ಗೋಯಲರು ತಮ್ಮ ಅಮೇರಿಕಾದ ಪ್ರವಾಸದ ಸಮಯದಲ್ಲಿ ಬಾಯಡೆನ್ ಸರಕಾರದಿಂದ ‘ಬಿಝ್ನೆಸ್ ವೀಸಾ‘ ನೀಡುವ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸುವಂತೆ ವಿನಂತಿಸಿದ್ದಾರೆ. ಇದರಿಂದ ವ್ಯಾವಹಾರಿಕ ಹಿತಕ್ಕಾಗಿ ಭಾರತೀಯರು ಅಮೇರಿಕಾಗೆ ಬರಬಹುದು”, ಎಂದು ಹೇಳಿದರು.

ಚುನಾವಣೆಯ ಪಲಿತಾಂಶದಲ್ಲಿ ಭಾರತೀಯರ ಮಹತ್ವ !

ಅಮೇರಿಕಾದ ಚುನಾವಣೆಯ ಪಲಿತಾಂಶದಲ್ಲಿ ಭಾರತೀಯ ಮತದಾರರ ನಿಲುವು ನಿರ್ಣಯಾತ್ಮಕವಾಗುತ್ತಿದೆ. ಭಾರತೀಯರ ಮತವು ಹೆಚ್ಚಿನ ಪ್ರಮಾಣದಲ್ಲಿ ಸಿಗಬೇಕೆಂದು ಭಾರತೀಯರನ್ನು ಕೇಂದ್ರಬಿಂದುವನ್ನಾಗಿಟ್ಟು ಪ್ರಚಾರ ಮಾಡಲಾಗುತ್ತಿದೆ.

ಸಂಪಾದಕರು ನಿಲುವು

 ಭಾರತೀಯರ ಜನಸಂಖ್ಯೆ ಶೇ. ೧ ರಷ್ಟಿದ್ದರೂ ತೆರಿಗೆ ತುಂಬಿಸುವಲ್ಲಿ ಶೇ. ೬ರಷ್ಟು ಕೊಡುಗೆ !