‘ಅ’ಶಿಸ್ತಿನ ಶತಕ !

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಭಾರತ ಜೋಡೋ’ ಯಾತ್ರೆ ಮೂಲಕ ದೇಶಾದ್ಯಂತ ಸಂಚರಿಸುತ್ತಿದ್ದಾರೆ. ಗಣ್ಯ ವ್ಯಕ್ತಿ ಎಂದ ಮೇಲೆ ಅವರಿಗೆ ಅಂತಹ ಗುಣಮಟ್ಟದ ಭದ್ರತಾ ವ್ಯವಸ್ಥೆ ಇರುತ್ತದೆ ! ಅಂದರೆ, ಆ ಭದ್ರತಾ ವ್ಯವಸ್ಥೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗುತ್ತದೆ; ಆದರೆ ರಾಹುಲ ಗಾಂಧಿಗೆ ‘ಕರ್ತವ್ಯ’ ಎಂಬ ಪದದ ಅರ್ಥವಾದರೂ ಗೊತ್ತಿದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತದೆ. ‘ಅವರು ೨೦೨೦ ರಿಂದ ೧೧೩ ಬಾರಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ‘ಭಾರತ ಜೋಡೋ’ ಯಾತ್ರೆಯಲ್ಲೂ ಹಲವು ರೀತಿಯ ಉಲ್ಲಂಘನೆಗಳು ನಡೆದಿವೆ’, ಎಂದು ‘ಕೇಂದ್ರ ಮೀಸಲು ಪೊಲೀಸ್ ಪಡೆ’ (ಸಿ.ಆರ್.ಪಿ.ಎಫ್.) ಮಾಹಿತಿ ನೀಡಿದೆ. ‘ರಾಹುಲ ಗಾಂಧಿಯವರ ಸೋಮಾರಿತನವೇ ಇದಕ್ಕೆ ಕಾರಣ’ ಎಂದು ಹೇಳಿದರೆ ತಪ್ಪಾಗದು. ಆಯಾ ಸಮಯದಲ್ಲಿ ಈ ಉಲ್ಲಂಘನೆಯ ಬಗ್ಗೆ ಆಡಳಿತ ವ್ಯವಸ್ಥೆಯು ಅವರಿಗೆ ಅರಿವು ಮಾಡಿಕೊಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ ಶಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಇವರು, ‘ರಾಹುಲ ಇವರಿಗೆ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ. ಆ ಪತ್ರಕ್ಕೆ ಪೊಲೀಸ್ ದಳವು ಮೇಲಿನ ಉತ್ತರ ನೀಡಿದೆ. ರಾಹುಲ ಗಾಂಧಿಯವರಿಗೆ ‘ಝಡ್ ಪ್ಲಸ್’ ಭದ್ರತೆ ನೀಡಲಾಗಿದೆ. ಆದ್ದರಿಂದ ಜನರು ಈ ಭದ್ರತೆಯನ್ನು ಭೇದಿಸಿ ಅವರನ್ನು ತಲುಪಲು ಸಾಧ್ಯವಿಲ್ಲ; ಆದರೆ ರಾಹುಲ ಗಾಂಧಿ ಅವರೇ ನಿಯಮ ಉಲ್ಲಂಘಿಸಿ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ? ಇದು ವರೆಗೆ ೧೧೩ ಬಾರಿ ನಿಯಮ ಉಲ್ಲಂಘಿಸಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ‘ಈ ಕ್ರಮ ಏಕೆ ಕೈಗೊಳ್ಳಲಿಲ್ಲ ?’, ಎಂಬುದನ್ನೂ ಹುಡುಕಬೇಕು.

ಜನರಿಗೆ ಬುದ್ಧಿಮಾತು !

ಕಾಂಗ್ರೆಸ್ ೬೦ ವರ್ಷಗಳ ಕಾಲ ಭಾರತದಲ್ಲಿ ರಾಜ್ಯವನ್ನು ಭೋಗಿಸಿತು; ಆದರೆ ಅದು ಜನರಿಗೂ ಶಿಸ್ತುಬದ್ಧಗೊಳಿಸಲಿಲ್ಲ ತಾನೂ ಶಿಸ್ತುಬದ್ಧವಾಗಲಿಲ್ಲ. ಇದರ ಅನೇಕ ದುಷ್ಪರಿಣಾಮಗಳನ್ನು ಇಂದು ದೇಶ ಅನುಭವಿಸುತ್ತಿದೆ. ಸಂಕ್ಷಿಪ್ತವಾಗಿ, ಶಿಸ್ತು ಮತ್ತು ಕಾಂಗ್ರೆಸ್ ನಡುವೆ ದೂರದ ಸಂಬಂಧವೂ ಇಲ್ಲ. ಅದು ತನ್ನಲ್ಲೇ ಇಲ್ಲದಿರುವಾಗ ಅದು ಇತರರಲ್ಲಿ ಹೇಗೆ ಬೇರೂರಿಸಬಹುದು ? ಹಾಗಾಗಿಯೇ ರಾಹುಲ ಗಾಂಧಿ ಭದ್ರತಾ ವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸಿ ಶತಕ (?) ಬಾರಿಸಿದ್ದಾರೆ ! ಆ ಬಗ್ಗೆ ಅವರಿಗೇನೂ ಸಂಬಂಧವಿದ್ದಂತಿಲ್ಲ. ಇಲ್ಲಿಯವರೆಗೂ ವಂಶಾಡಳಿತದ ಪರಂಪರೆಯನ್ನು ಅನುಭವಿಸುತ್ತಿರುವ ಗಾಂಧಿ ಕುಟುಂಬಕ್ಕೆ ಶಿಸ್ತು, ಪ್ರೀತಿ, ನಾಯಕತ್ವ, ದಕ್ಷತೆ, ಇವುಗಳ ಬೆಲೆ ಏನು ಗೊತ್ತು ? ಭಾರತವನ್ನು ಜೋಡಿಸಲು ಬಯಸುವವರೇ ನಿಯಮಗಳನ್ನು ಉಲ್ಲಂಘಿಸಿದರೆ ಅದರಿಂದ ಭಾರತ ಎಂದಾ ದರೂ ಜೋಡಿಸಲ್ಪಡುವುದೇ ? ದೇಶವನ್ನು ಒಗ್ಗೂಡಿಸಲು ಇಚ್ಛಾಶಕ್ತಿ, ರಾಷ್ಟ್ರನಿಷ್ಠೆ, ಪ್ರಜೆಗಳ ಬಗ್ಗೆ ಗೌರವವಿರಬೇಕು. ಅಂತಹ ಪ್ರತಿಯೊಂದು ದಾರದಿಂದ ಮಾತ್ರ ದೇಶದ ಹೊಕ್ಕುಳಬಳ್ಳಿಯನ್ನು ಸಂಪರ್ಕಿಸಬಹುದು. ಇದೆಲ್ಲ ರಾಹುಲ ಗಾಂಧಿಯವರಿಗೆ ಯಾವಾಗ ತಿಳಿಯುವುದು ? ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಇದೇ ಗಾಂಧಿ ಮಹಾಶಯರು ತಮ್ಮ ಕಾರ್ಯಕರ್ತರನ್ನುದ್ದೇಶಿಸಿ “ನಿಮ್ಮೆಲ್ಲರಲ್ಲಿ ಪ್ರೀತಿ ಮತ್ತು ಶಿಸ್ತನ್ನು ಹೆಚ್ಚಿಸುವುದು ನನ್ನ ಕೆಲಸ” ಎಂದು ಹೇಳಿದ್ದರು. ೧೧೩ ಸಲ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಯು ಕಾರ್ಯಕರ್ತರಲ್ಲಿ ಶಿಸ್ತು ಹೇಗೆ ತರುವುದು ? ೨೦೧೮ ರಲ್ಲಿ, ಕಾಂಗ್ರೆಸ್ ನಾಯಕ ದೀಪಕ್ ಬಬಾರಿಯಾ ಅವರು ಕಾರ್ಯಕರ್ತರಿಗೆ ಅಮೂಲ್ಯವಾದ ಸಲಹೆಯನ್ನು ನೀಡಿದರು, ‘ಶಿಸ್ತು ಎಂದರೇನು ?’, ಅದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಕಲಿಯಿರಿ; ಏಕೆಂದರೆ ಆ ವೇಳೆ ಕಾರ್ಯಕ್ರಮವೊಂದರಲ್ಲಿ ಕಾರ್ಯಕರ್ತರು ತಮ್ಮ ಉತ್ಸಾಹದಿಂದ ಅವಾಂತರ ಸೃಷ್ಟಿಸಿದ್ದರು. ರಾಹುಲ ಗಾಂಧಿಗೆ ಬಹುಶಃ ಈ ಘಟನೆಗಳು ಗೊತ್ತಿರಲಿಕ್ಕಿಲ್ಲ. ಅವರು ಅದನ್ನು ತಮ್ಮ ಕಾರ್ಯಕರ್ತರಿಂದ ಕಲಿಯಬೇಕು, ಇಲ್ಲದಿದ್ದರೆ ‘ಹೇಳುವುದು ಶಾಸ್ತ್ರ ಇಕ್ಕುವುದು ಗಾಳ’ ಎಂಬ ಸ್ಥಿತಿಯಾಗುವುದು. ಭಾರತ ತಂಡದ ಮಾಜಿ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಡಾಂಗಣಕ್ಕೆ ತಡವಾಗಿ ಬರುವ ಆಟಗಾರರಿಗೆ ೧೦ ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಅನಂತರ ಯಾವ ಆಟಗಾರನೂ ತಡ ಮಾಡಲಿಲ್ಲ. ಇದನ್ನೇ ‘ನಾಯಕತ್ವ’ ಎನ್ನುತ್ತಾರೆ ! ರಾಹುಲ ಗಾಂಧಿ ಇದರ ಬಗ್ಗೆ ಗಮನದಲ್ಲಿಟ್ಟು ಆತ್ಮಚಿಂತನೆ ಮಾಡಬೇಕು. ಅವರು ಸುರಕ್ಷತಾ ನಿಯಮಗಳನ್ನು ಹಲವು ಬಾರಿ ಉಲ್ಲಂಘಿಸಿದ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ಅವರ ನಿಜರೂಪ ಬಯಲಾಗಿದೆ. ಸರಳತೆಯ ಸೋಗಿನೊಂದಿಗೆ ನಾವು ದಿನನಿತ್ಯದ ಮುಂದೆ ಹೋಗುವ ಅದೇ ಜನರು ತಮ್ಮ ‘ಭಾರತ್ ಜೋಡೋ’ ಯಾತ್ರೆಯನ್ನು ಎಂದಾದರೂ ಭರವಸೆಯಿಂದ ನೋಡುತ್ತಾರೆಯೇ?

ಯಾರು ಆದರ್ಶ?

ಪ್ರಧಾನಿ ನರೇಂದ್ರ ಮೋದಿಯವರನ್ನು ಕಳೆದ ೫೦ ವರ್ಷಗಳ ಜೀವನೋಪಾಯದ ಲೆಕ್ಕ ಕೇಳಿದರೆ ಅವರು ಲೆಕ್ಕ ಕೊಡಬಹುದು; ಏಕೆಂದರೆ ಅವರು ನಿಷ್ಕಳಂಕವಾಗಿದ್ದಾರೆ. ಅದಕ್ಕಾಗಿಯೇ ಅವರು ಅತ್ಯಂತ ವಿಶ್ವಾಸಾರ್ಹ, ದಕ್ಷ ಮತ್ತು ದೂರದೃಷ್ಟಿಯ ಪ್ರಧಾನ ಮಂತ್ರಿ. ಭಾರತದ ಪ್ರಜೆಗಳೂ ಅವರನ್ನು ಗೌರವಿಸುತ್ತಾರೆ. ಸಾಮಾನ್ಯ ಚಿತ್ರಣ ಏನೆಂದರೆ ಇಂದಿನ ಯುವ ಪೀಳಿಗೆ ಹೆಚ್ಚಾಗಿ ‘ನರೇಂದ್ರ ಮೋದಿ’ಯನ್ನು ‘ಫಾಲೋ’ ಮಾಡುತ್ತದೆ ಮತ್ತು ರಾಹುಲ ಗಾಂಧಿಯನ್ನು ಲೇವಡಿ ಮಾಡುತ್ತಾರೆ. ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿತ್ತು. ಕೆಲ ಕಾಲ ರಾಹುಲ್ ಗಾಂಧಿ ಅವರು ಸಕ್ರಿಯ ‘ಉದಯೋನ್ಮುಖ ನಾಯಕ’ನ ರೂಪದಲ್ಲಿ ಹೊಸ ಮುಖವಾಗಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಪ್ರಯತ್ನಿಸಿದರು. ಅವರ ಮೂಲಕ ಕಾಂಗ್ರೆಸ್ಸಿಗರೂ ‘ಆಶಾ ಕಿರಣ’ ಕಂಡರು; ಆದರೆ ಅವರ ಬಾಲಿಶತನದಿಂದ ಅದು ಶೀಘ್ರದಲ್ಲೇ ಕಣ್ಮರೆಯಾಯಿತು. ‘ಭಾರತ ಜೋಡೋ’ ಮೂಲಕ ಮತ್ತೊಮ್ಮೆ ರಾಹುಲ ಗಾಂಧಿ ತಮ್ಮ ಕಳಂಕಿತ ಪ್ರತಿಷ್ಠೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ; ಆದರೆ ಭಾರತದ್ವೇಷಿಗಳು ಮತ್ತು ಹಿಂದೂದ್ವೇಷಿಗಳೊಂದಿಗಿನ ಪ್ರಯಾಣವು ಏನನ್ನು ಸಾಧಿಸುತ್ತದೆ ?

‘ಇದು ಭಾರತದ ಪ್ರಜ್ಞಾವಂತ ಹಿಂದೂಗಳಿಗೆ ಗೊತ್ತು’ ಎಂಬುದನ್ನು ರಾಹುಲ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿಯವರೆಗೆ ಕಾಂಗ್ರೆಸ್ ಲೆಕ್ಕವಿಲ್ಲದಷ್ಟು ದುಷ್ಕೃತ್ಯಗಳನ್ನು ಮಾಡಿದೆ. ಜನ ಅದನ್ನು ಎಂದಿಗೂ ಮರೆಯುವುದಿಲ್ಲ. ಇಲ್ಲಿಯವರೆಗಿನ ಕಾಂಗ್ರೆಸ್ ನ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಹೋಗುತ್ತಿದ್ದ ರಾಹುಲ ಗಾಂಧಿ ಇವೆಲ್ಲುವಗಳಿಂದ ಕಲಿಯಬೇಕು. ಒಬ್ಬ ಮನುಷ್ಯ ೨ ಅಥವಾ ೪ ಬಾರಿ ತಪ್ಪು ಮಾಡಬಹುದು; ಆದರೆ ಅವನು ಇನ್ನೂ ಬುದ್ಧಿವಂತನಾಗಲು ಪ್ರಯತ್ನಿಸುತ್ತಾನೆ. ನೀವು ಇಲ್ಲಿ ೧೧೩ ಬಾರಿ ನಿಯಮಗಳನ್ನು ಹೇಗೆ ಮುರಿಯಬಹುದು ? ಇದು ‘ಭಾರತ್ ಜೋಡೋ’ ನಾಯಕತ್ವಕ್ಕೆ ಶೋಭಿಸುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು.