ತೀರ್ಥ ಪ್ರಾಶನದಿಂದ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಾಗುವ ಲಾಭ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

‘ದೇವಸ್ಥಾನದಲ್ಲಿ ದೇವರ ದರ್ಶನವನ್ನು ಪಡೆದ ನಂತರ ಅರ್ಚಕರು ನಮಗೆ ತೀರ್ಥ-ಪ್ರಸಾದವನ್ನು ಕೊಡುತ್ತಾರೆ. ದೇವಸ್ಥಾನದಲ್ಲಿ ತೀರ್ಥ-ಪ್ರಸಾದವನ್ನು ಸೇವಿಸಿದ ನಂತರ ಮನಸ್ಸಿಗೆ ಆನಂದವೆನಿಸುತ್ತದೆ. ದೇವರ ಪೂಜೆ, ಧಾರ್ಮಿಕ ವಿಧಿ ಇತ್ಯಾದಿ ಪ್ರಸಂಗಗಳಲ್ಲಿಯೂ ನಾವು ತೀರ್ಥ-ಪ್ರಸಾದವನ್ನು ಸೇವಿಸುತ್ತೇವೆ. ತೀರ್ಥ-ಪ್ರಸಾದವನ್ನು ಸೇವಿಸುವಾಗ ದೇವರ ಬಗ್ಗೆ ನಮಗೆ ಕೃತಜ್ಞತಾಭಾವವು ಜಾಗೃತವಾಗುತ್ತದೆ. (ಪ್ರಸಾದವನ್ನು ಸೇವಿಸುವುದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ಮಟ್ಟದಲ್ಲಿನ ಲಾಭವಾಗುವುದು ಈ ಸಂದರ್ಭದಲ್ಲಿನ ಸಂಶೋಧನೆಯನ್ನು ಬೇರೆ ಲೇಖನದಲ್ಲಿ ಕೊಡಲಾಗಿದೆ.)

ಸೌ. ಮಧುರಾ ಕರ್ವೆ

ರಾಮನಾಥಿಯ ಸನಾತನದ ಆಶ್ರಮದಲ್ಲಿ ಮಹರ್ಷಿಗಳ ಆಜ್ಞೆಯಂತೆ ಘಟಸ್ಥಾಪನೆಯಿಂದ ದಸರಾದ ವರೆಗೆ ಪ್ರತಿದಿನ ಯಜ್ಞಯಾಗಗಳನ್ನು ಮಾಡಲಾಯಿತು. ಈ ಯಜ್ಞದಲ್ಲಿನ ತೀರ್ಥವನ್ನು ಸಾಧಕರಿಗೆ ಪ್ರಾಶನ ಮಾಡಲು ಕೊಡಲಾಯಿತು. ‘ತೀರ್ಥ ಪ್ರಶಾನ ಮಾಡುವುದರಿಂದ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನಕ್ಕಾಗಿ ತೀರ್ಥವನ್ನು ಪ್ರಾಶನ ಮಾಡುವ ಮೊದಲು ಮತ್ತು ಅದನ್ನು ಪ್ರಾಶನ ಮಾಡಿದ ೫ ನಿಮಿಷಗಳ ನಂತರ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದ ಮೂಲಕ ೪ ಸಾಧಕಿಯರ ಪರೀಕ್ಷಣೆಗಳನ್ನು ಮಾಡಲಾಯಿತು. ಈ ಪರೀಕ್ಷಣೆಗಳಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ. ಇದರಿಂದ ತೀರ್ಥದಿಂದ ಹೇಗೆ ಲಾಭವಾಗುತ್ತದೆ ? ಎಂಬುದು ಗಮನಕ್ಕೆ ಬರುವುದು.

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

೧ ಅ. ತೀರ್ಥ ಪ್ರಾಶನ ಮಾಡಿದ ನಂತರ ಸಾಧಕಿಯರಲ್ಲಿನ ನಕಾರಾತ್ಮಕ ಊರ್ಜೆ ತುಂಬಾ ಕಡಿಮೆಯಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಗುವುದು : ತೀರ್ಥ ಪ್ರಾಶನದ ಮೊದಲು ಸಾಧಕಿಯರಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳಿದ್ದವು. ಅವರು ತೀರ್ಥ ಪ್ರಾಶನ ಮಾಡಿದ ನಂತರ ಅವರಲ್ಲಿನ ನಕಾರಾತ್ಮಕ ಊರ್ಜೆ ತುಂಬಾ ಕಡಿಮೆಯಾಗಿ ಸಕಾರಾತ್ಮಕ ಉರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು. ಇದು ಪಕ್ಕದಲ್ಲಿ ಕೊಟ್ಟ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಯಜ್ಞದಲ್ಲಿನ ಚೈತನ್ಯಮಯ ತೀರ್ಥ ಪ್ರಾಶನ ಮಾಡಿದ ನಂತರ ಸಾಧಕಿಯರಿಗೆ ಆಧ್ಯಾತ್ಮಿಕ ಮಟ್ಟದಲ್ಲಿನ ಲಾಭವಾಗುವುದು : ನವರಾತ್ರಿಯಲ್ಲಿ ಪ್ರತಿದಿನ ಯಜ್ಞವನ್ನು ಮಾಡಲಾಯಿತು. ಯಜ್ಞದಲ್ಲಿನ ಚೈತನ್ಯಮಯ ವಾತಾವರಣದಿಂದ ಯಜ್ಞದ ಸ್ಥಳದಲ್ಲಿ ಇಟ್ಟಿರುವ ಕಲಶದಲ್ಲಿನ ತೀರ್ಥವು ಸಾತ್ತ್ವಿಕತೆಯಿಂದ ತುಂಬಿತ್ತು. ಸಾಧಕಿಯರು ಈ ಚೈತನ್ಯಮಯ ತೀರ್ಥವನ್ನು ಪ್ರಾಶನ ಮಾಡಿದ ನಂತರ ಅವರಲ್ಲಿನ ತೊಂದರೆದಾಯಕ ಸ್ಪಂದನಗಳು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿ ಸಕಾರಾತ್ಮಕ ಊರ್ಜೆ, ಅಂದರೆ ಅವರಲ್ಲಿನ ಸಾತ್ತ್ವಿಕತೆ ತುಂಬಾ ಹೆಚ್ಚಾಯಿತು. ಇದರಿಂದ ‘ತೀರ್ಥವನ್ನು ಪ್ರಾಶನ ಮಾಡುವುದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ಮಟ್ಟದಲ್ಲಿ ಲಾಭವಾಗುತ್ತವೆ’, ಎಂಬುದು ಗಮನಕ್ಕೆ ಬರುತ್ತದೆ.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೬.೧೨.೨೦೨೨)

ವಿ-ಅಂಚೆ : [email protected]