ಹಿಂದೂ ಧರ್ಮ ಮತ್ತು ವಾಸ್ತುಶಾಸ್ತ್ರಗಳಲ್ಲಿ ಕೆಲವು ಕೆಲಸಗಳನ್ನು ಸಂಜೆಯ ಹೊತ್ತಿನಲ್ಲಿ ಮಾಡಬಾರದು ಎಂದು ಹೇಳಲಾಗಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ.
೧. ಉಗುರು ಮತ್ತು ಕೂದಲು ಕತ್ತರಿಸುವುದು
ಸೂರ್ಯಾಸ್ತದ ನಂತರ ಉಗುರು ಮತ್ತು ಕೂದಲನ್ನು ಕತ್ತರಿಸಬಾರದು. ಗಡ್ಡ ತೆಗೆಯಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಉಳಿಯುತ್ತದೆ. ಹೀಗೆ ಮಾಡುವುದರಿಂದ ಮನೆ ಮೇಲಿನ ಸಾಲ ಹೆಚ್ಚಾಗುತ್ತದೆ, ಎಂದು ನಂಬಲಾಗಿದೆ. (ಬೆಳಗ್ಗೆ ಸ್ನಾನ ಮಾಡುವ ಮೊದಲೆ ಉಗುರು ಮತ್ತು ಕೂದಲನ್ನು ಕತ್ತರಿಸಬೇಕು. -ಸಂಕಲನಕಾರರು)
೨. ಗಿಡಗಳನ್ನು ಸ್ಪರ್ಶಿಸುವುದು ಅಥವಾ ನೀರು ಹಾಕುವುದು
ಸೂರ್ಯಾಸ್ತದ ನಂತರ ಎಂದಿಗೂ ಗಿಡಗಳನ್ನು ಸ್ಪರ್ಶಿಸಬಾರದು ಅಥವಾ ಅವುಗಳ ಎಲೆಗಳನ್ನು ತೆಗೆಯಬಾರದು ಎಂದು ನಂಬಲಾಗಿದೆ. ರಾತ್ರಿಯ ಸಮಯದಲ್ಲಿ ಅವುಗಳಿಗೆ ನೀರೂ ಹಾಕಬಾರದು. ಸೂರ್ಯಾಸ್ತದ ನಂತರ ಗಿಡಗಳು ಮತ್ತು ವೃಕ್ಷಗಳೂ ಮಲಗುತ್ತವೆ.
೩. ಬಟ್ಟೆ ತೊಳೆಯುವುದು ಮತ್ತು ಒಣಗಿಸುವುದು
ಸಂಜೆ ಬಟ್ಟೆ ತೊಳೆಯುವುದು ಒಳ್ಳೆಯದಲ್ಲ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ ಸಾಯಂಕಾಲದ ನಂತರ ಬಟ್ಟೆಗಳನ್ನು ಒಣಗಿಸುವುದು ತಪ್ಪೆಂದು ಪರಿಗಣಿಸಲಾಗಿದೆ. ಹೀಗೆ ಮಾಡಿದರೆ ಆಕಾಶದಲ್ಲಿನ ಎಲ್ಲ ನಕಾರಾತ್ಮಕ ಊರ್ಜೆಗಳು ಬಟ್ಟೆಗಳಲ್ಲಿ ಪ್ರವೇಶಿಸುತ್ತವೆ, ಎಂದು ಹೇಳಲಾಗುತ್ತದೆ.
೪. ಆಹಾರವನ್ನು ತೆರೆದಿಡುವುದು
ಸೂರ್ಯಾಸ್ತದ ನಂತರ ಆಹಾರ ಅಥವಾ ನೀರು ತೆರೆದಿಡಬಾರದು. ಅದನ್ನು ಯಾವಾಗಲೂ ಮುಚ್ಚಿಡಬೇಕು. ಇವುಗಳು ತೆರೆದಿದ್ದರೆ ಇವುಗಳಲ್ಲಿ ನಕಾರಾತ್ಮಕ ಊರ್ಜೆಯು ಶೋಷಿಸಲ್ಪಡುತ್ತದೆ, ಅದರಿಂದ ವ್ಯಕ್ತಿಯು ಅದನ್ನು ತಿಂದರೆ ಕಾಯಿಲೆ ಬೀಳಬಹುದು, ಎಂದು ಹೇಳುತ್ತಾರೆ.
೫. ಮೊಸರು ಅಥವಾ ಅನ್ನ ತಿನ್ನುವುದು
ಪುರಾಣದಲ್ಲಿ ಸೂಯಾಸ್ತದ ನಂತರ ಮೊಸರು ಸೇವಿಸುವುದು ನಿಷಿದ್ಧ ಎಂದು ಹೇಳಲಾಗಿದೆ. ಹಾಗೆಯೇ ಸೂರ್ಯಾಸ್ತದ ನಂತರ ಅನ್ನ ತಿನ್ನುವುದಿಲ್ಲ.
೬. ಗುಡಿಸುವುದು
ಸೂರ್ಯಾಸ್ತದ ನಂತರ ಮನೆ ಗುಡಿಸಬಾರದು ಅಥವಾ ಸ್ವಚ್ಛತೆ ಮಾಡಬಾರದು ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಧನ ಹಾನಿಯಾಗಬಹುದು.
೭. ಸಾಯಂಕಾಲದ ಸಮಯದಲ್ಲಿ ಮಲಗುವುದು
ಸೂರ್ಯಾಸ್ತದ ನಂತರ ತಕ್ಷಣ ಮಲಗಬಾರದು, ಅಂದರೆ ಸೂರ್ಯಾಸ್ತದ ನಂತರದ ಸಂಧಿ ಪ್ರಕಾಶದಲ್ಲಿ ಲೈಂಗಿಕ ಸಂಬಂಧವನ್ನೂ ನಿಷೇಧಿಸಲಾಗಿದೆ. ಹೀಗೆ ಮಾಡಿದರೆ ಪತಿ-ಪತ್ನಿಯ ಆರೋಗ್ಯದ ಮೇಲೆ ವಿಪರೀತ ಪರಿಣಾಮವಾಗುತ್ತದೆ – (ಆಧಾರ : ‘ಲೋಕಮತ ನ್ಯೂಸ್ ೧೮’ ವಾರ್ತಾವಾಹಿನಿಯ ಜಾಲತಾಣ)