ಪಾಕಿಸ್ತಾನವು ಭಯೋತ್ಪಾದಕರ ನೇಮಕಾತಿಗಳನ್ನು ಕೇಂದ್ರ ಮತ್ತು ನೆಲೆಗಳನ್ನು ನಡೆಸುತ್ತಿದೆ ! – ಎಸ್. ಜೈಶಂಕರ

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ

ವಿಯೆನ್ನಾ (ಆಸ್ಟ್ರಿಯಾ) – ನಮ್ಮ ದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶ ಪಾಕಿಸ್ತಾನವೇ ಆಗಿದೆ. ಇದೇ ದೇಶ ನಮ್ಮ ಮುಂಬಯಿ ಮೇಲೆ ಭಯೋತ್ಪಾದಕ ದಾಳಿ ನಡೆಸಿತು. ಇದೇ ದೇಶವು ನಮ್ಮ ದೇಶದ ಹೋಟೆಲ್‌ಗಳನ್ನೂ, ಪ್ರವಾಸಿ ತಾಣಗಳನ್ನೂ ಗುರಿಯಾಗಿಸುತ್ತದೆ, ಇದು ಪ್ರತಿದಿನ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಭಾರತದೊಳಗೆ ನುಸುಳಿಸುತ್ತದೆ. ಪಾಕಿಸ್ತಾನವು ಭಯೋತ್ಪಾದಕರನ್ನು ಸೇರಿಸುವ ಕೇಂದ್ರಗಳು ಮತ್ತು ನೆಲೆಗಳನ್ನು ನಡೆಸುತ್ತಿದೆ. ಭಯೋತ್ಪಾದಕರು ನಿಮ್ಮ (ಪಾಕಿಸ್ತಾನ) ಗಡಿ ಪ್ರದೇಶಗಳಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದಾರೆ, ಅವರು ನಿಮ್ಮ ಗಡಿಯನ್ನು ನಿಯಂತ್ರಿಸುತ್ತಾರೆ. ಈ ಬಗ್ಗೆ ಪಾಕಿಸ್ತಾನಕ್ಕೆ ಏನೂ ಗೊತ್ತಿಲ್ಲವೇ ? ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರು ಹೇಳಿಕೆ ನೀಡಿದರು. ಆಸ್ಟ್ರಿಯಾದ ಒ.ಆರ್.ಎಫ್. ವಾಹಿನಿಯ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ನಡೆಸಿದ ಸಂದರ್ಶನದಲ್ಲಿ ಪಾಕಿಸ್ತಾನ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಅವರು ಮೇಲಿನ ಹೇಳಿಕೆಯನ್ನು ನೀಡಿದರು.

‘ಭಯೋತ್ಪಾದಕರು ಸೇನೆಯ ಯುದ್ಧತಂತ್ರಗಳನ್ನು ಭಯೋತ್ಪಾದಕ ತರಬೇತಿ ಚಟುವಟಿಕೆಗಳಿಗಾಗಿ ಬಳಸುತ್ತಾರೆ’ ಎಂದೂ ಸಹ ಜೈಶಂಕರ ಹೇಳಿದರು. ಜೈಶಂಕರ ಅವರು ಮಾತನ್ನು ಮುಂದುವರೆಸುತ್ತಾ, ಭಯೋತ್ಪಾದನೆಯು ವಿಶ್ವದಲ್ಲಿ ಎಲ್ಲಕ್ಕಿಂತ ದೊಡ್ಡ ಸಮಸ್ಯೆಯಾಗಿದೆ. ’ಭಯೋತ್ಪಾದನೆಯು ಬೇರೊಂದು ದೇಶದ ವೈಯಕ್ತಿಕ ಸಮಸ್ಯೆಯಾಗಿದೆ’ ಎಂದು ಭಾವಿಸಿ ಅದನ್ನು ನಿರ್ಲಕ್ಷಿಸಬಾರದು ಎಂದೂ ಐರೋಪ್ಯ ರಾಷ್ಟ್ರಗಳಿಗೆ ತಾಕೀತು ಮಾಡಿದರು.

ಪಾಕಿಸ್ತಾನದ ಪರ ವಹಿಸಿದ ಪತ್ರಕರ್ತ ಮತ್ತು ಅವನಿಗೆ ಪ್ರತ್ಯುತ್ತರ ನೀಡಿದ ಜೈಶಂಕರ !

೧. ಸಂದರ್ಶನದ ವೇಳೆ, ಜೈಶಂಕರ ಇವರಿಗೆ “ನೀವು ಈ ಮೊದಲೂ ಕೂಡ `ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ” ಎಂದು ಹೇಳಿದ್ದೀರಿ. ಪಾಕಿಸ್ತಾನ ’ಕೇಂದ್ರಬಿಂದು’ ಎಂಬ ಪದಪ್ರಯೋಗವು ಸೂಕ್ತವೇ ?’, ಎಂದು ಪ್ರಶ್ನಿಸಿದರು. (ಇದರಿಂದ ಯುರೋಪಿಯನ್ ಮಾಧ್ಯಮಗಳಿಗೆ ಪಾಕಿಸ್ತಾನದ ಬಗ್ಗೆ ಕನಿಕರ ಇದೆ ಎಂದು ತಿಳಿದುಕೊಳ್ಳಬೇಕೇ ? – ಸಂಪಾದಕರು)

೨. ಇದಕ್ಕೆ ಜಯಶಂಕರ ಅವರು, “ನಾನು ವಿದೇಶಾಂಗನೀತಿ ತಜ್ಞನಾಗಿದ್ದೇನೆ ಇದರ ಅರ್ಥ ನಾನು ಸತ್ಯವನ್ನು ಮಾತನಾಡಬಾರದು ಎಂದಲ್ಲ. ನಾನು ಪಾಕಿಸ್ತಾನವನ್ನು `ಭಯೋತ್ಪಾದನೆಯ ಕೇಂದ್ರಬಿಂದು’ ಎಂದು ಹೆಳದೇ ಇನ್ನೂ ಹೆಚ್ಚು ಕಟುವಾದ ಪದಗಳನ್ನು ಬಳಸಬಹುದಿತ್ತು. ಪ್ರಸ್ತುತ, ಭಾರತದೊಂದಿಗೆ ಏನು ನಡೆಯುತ್ತಿದೆಯೋ ಅದಕ್ಕೆ ‘ಕೇಂದ್ರಬಿಂದು’ ಎಂಬ ಪದವೂ ತುಂಬಾ ಸೌಮ್ಯವಾಗಿದೆ. ಇದೆಲ್ಲವೂ (ಭಯೋತ್ಪಾದಕ ಚಟುವಟಿಕೆಗಳು) ಹಾಡುಹಗಲಿನಲ್ಲಿ ನಡೆಯುತ್ತಿದೆ. ಇಂತಹ ಸಮಯದಲ್ಲಿ ಪಾಕಿಸ್ತಾನವು ಸಾರ್ವಭೌಮ ರಾಷ್ಟ್ರವಾಗಿದ್ದು ತನ್ನ ದೇಶವನ್ನು ನಿಯಂತ್ರಿಸುತ್ತಿದೆ ಮತ್ತು ಅದಕ್ಕೆ ಈ ಬಗ್ಗೆ ಮಾಹಿತಿಯಿಲ್ಲ ಎಂದು ನಾವು ಹೇಗೆ ನಂಬಲು ಸಾಧ್ಯ ? ಈ ನೆಲೆಗಳಲ್ಲಿ ಉಗ್ರವಾದಿಗಳಿಗೆ ಸೈನ್ಯದಂತೆ ಮತ್ತು ಯುದ್ಧತಂತ್ರದ ತರಬೇತಿ ನೀಡಲಾಗುತ್ತದೆ.” ಎಂದು ಹೇಳಿದರು.

ಚೀನಾವು ಒಪ್ಪಂದವನ್ನು ಮುರಿದು ಗಡಿಯಲ್ಲಿನ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿತು, ಆದ್ದರಿಂದ ಚೀನಾದೊಂದಿಗೆ ಉದ್ವಿಗ್ನತೆ ಮುಂದುವರೆದಿದೆ ! – ಜೈಶಂಕರ

ಚೀನಾದ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ ಅವರು, ಚೀನಾವು ಭಾರತದೊಂದಿಗಿನ ಒಪ್ಪಂದಗಳನ್ನು ಮುರಿದು ಏಕಪಕ್ಷೀಯವಾಗಿ ವಾಸ್ತವಿಕ ನಿಯಂತ್ರಣ ರೇಖೆಯನ್ನು ಬದಲಾಯಿಸಲು ಪ್ರಯತ್ನಿಸಿತು ಎಂದು ಹೇಳಿದರು. ಆದ್ದರಿಂದ ಚೀನಾದೊಂದಿಗಿನ ಉದ್ವಿಗ್ನತೆ ಮುಂದುವರೆದಿದೆ. ಜೈಶಂಕರ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಇದು ಉಪಗ್ರಹಗಳ ಯುಗವಾಗಿದೆ. ಈ ಮೂಲಕ ಗಡಿಯಲ್ಲಿ ಯಾವ ಚಲನವಲನಗಳು ನಡೆಯುತ್ತಿವೆ ಎಂಬುದು ಛಾಯಾಚಿತ್ರಗಳ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ. ನೀವು ಈ ಛಾಯಾಚಿತ್ರಗಳನ್ನು ನಿರಾಕರಿಸಲಾಗುವುದಿಲ್ಲ. ಎರಡೂ ದೇಶಗಳು ಗಡಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೈನ್ಯ ಪಡೆಗಳನ್ನು ನಿಯೋಜಿಸುವುದಿಲ್ಲ ಎಂದು ಚೀನಾದೊಂದಿಗೆ ನಮ್ಮ ಒಪ್ಪಂದವಿತ್ತು; ಆದರೆ ಚೀನಾ ಅದನ್ನು ಪಾಲಿಸಿಲ್ಲ. ಇದರಿಂದಲೇ ಎರಡೂ ದೇಶಗಳ ನಡುವೆ ಬಿಗುವಿನ ಸ್ಥಿತಿಯಿದೆ ನೀವು ಛಾಯಾಚಿತ್ರಗಳನ್ನು ನೋಡಿದರೆ, ಗಡಿಪ್ರದೇಶಕ್ಕೆ ಯಾರು ಸೈನ್ಯವನ್ನು ಮೊದಲು ಕಳುಹಿಸಿದರು ಎಂಬುದು ನಿಮಗೆ ತಿಳಿಯುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಯೋತ್ಪಾದಕರನ್ನು ಸೇರಿಸುವ ಕೇಂದ್ರಗಳನ್ನು ಮತ್ತು ನೆಲೆಗಳನ್ನು ನಾಶಪಡಿಸುವ ಮೂಲಕ ಭಾರತವನ್ನು ಮತ್ತು ಕೆಲ ಮಟ್ಟಿಗೆ ಇಡೀ ಜಗತ್ತನ್ನೂ ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಭಾರತವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜನರ ಅಪೇಕ್ಷೆಯಾಗಿದೆ !