ಸನಾತನ ಸಂಸ್ಥೆಯ ಒಂದು ಆಶ್ರಮದಲ್ಲಿನ ಓರ್ವ ಸಾಧಕರು ಸೇವೆಯ ಅನುಕುಲಕ್ಕಾಗಿ ‘ವಾಟ್ಸಆಪ್’ ನ ಒಂದು ಗುಂಪನ್ನು ತಯಾರಿಸಿದ್ದರು. ಅದರಲ್ಲಿ ಕೆಲವೊಂದು ಸಾಧಕರನ್ನು ಸೇವೆಯ ವರದಿಯನ್ನು ತೆಗೆದುಕೊಳ್ಳಲು ಸೇರಿಸಲಾಗಿತ್ತು; ಆದರೆ ಅದರಲ್ಲಿನ ಓರ್ವ ಸಾಧಕರ ಸಂಚಾರಿವಾಣಿ ಸಂಖ್ಯೆ ಪ್ರಸ್ತುತ ಬಳಕೆಯಲ್ಲಿರಲಿಲ್ಲ, ಅಂದರೆ ಅವರು ಅದನ್ನು ರದ್ದು ಮಾಡಿದ್ದರು, ಈಗ ಅದನ್ನು ಸಮಾಜದ ಬೇರೊಬ್ಬ ವ್ಯಕ್ತಿ ಬಳಸುತ್ತಿದ್ದರು. ಗುಂಪನ್ನು ತಯಾರಿಸುವ ಸಾಧಕನ ಬಳಿ ಆ ಸಾಧಕನ ೨ ಸಂಪರ್ಕ ಸಂಖ್ಯೆಗಳಿದ್ದವು. ಒಂದು ಸಂಖ್ಯೆ ಹೊಸದು ಮತ್ತು ಇನ್ನೊಂದು ಸಂಖ್ಯೆ ಹಳೆಯದಾಗಿತ್ತು. ಅವರು ತಮ್ಮ ಮೊಬೈಲ್‌ನಿಂದ ಹಳೆಯ ಸಂಖ್ಯೆಯನ್ನು ತೆಗೆದಿರಲಿಲ್ಲ (ಡಿಲೀಟ ಮಾಡಿರಲಿಲ್ಲ). ಗುಂಪನ್ನು ತಯಾರಿಸುವ ಸಾಧಕರು ಅವಸರದಲ್ಲಿ ಸಾಧಕನ ಹಳೆಯ ಸಂಖ್ಯೆಯನ್ನು ವಾಟ್ಸಆಪ್ ಗ್ರೂಪ್‌ನಲ್ಲಿ ಸೇರಿಸಿದರು. ಹಾಗಾಗಿ ಆ ಗುಂಪಿನಲ್ಲಿನ ಸಂಭಾಷಣೆಯನ್ನು (Chatting) ಓರ್ವ ಅಪರಿಚಿತ ವ್ಯಕ್ತಿ ನೋಡಿದರು ಮತ್ತು ಓದಿದರು. ಆ ವ್ಯಕ್ತಿ ೨-೩ ಸಲ ಗುಂಪು ತಯಾರಿಸಿದ ಸಾಧಕನಿಗೆ ಕರೆ ಮಾಡಿ ‘ನೀವು ನನ್ನ ಸಂಖ್ಯೆಯನ್ನು ಏಕೆ ಸೇರಿಸಿದ್ದೀರಿ ? ನೀವು ಪೊಲೀಸರಲ್ಲಿ ದೂರು ನೀಡಿ ನನ್ನನ್ನು ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸುವವರಿದ್ದೀರಿ, ಯಾವ ವ್ಯಕ್ತಿಯ ಸಂಖ್ಯೆ ಎಂದು ನೀವು ನನ್ನ ಸಂಖ್ಯೆಯನ್ನು ಸೇರಿಸಿರುವರೋ, ಆ ವ್ಯಕ್ತಿಯ ಹೊಸ ಸಂಖ್ಯೆಯನ್ನು ನನಗೆ ನೀಡಿ, ನನಗೆ ಅವರೊಂದಿಗೆ ಮಾತನಾಡುವುದಿದೆ’, ಇತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಅಪರಿಚಿತ ವ್ಯಕ್ತಿಯ ಸಂಪರ್ಕವಾದ ನಂತರ ನಾವು ನಮ್ಮದು ತಪ್ಪಾಗಿದೆ ಎಂದು ಹೇಳಿದ ಮೇಲೆಯೂ ಅವರಿಂದ ಪುನಃ ಪುನಃ ಕರೆ ಬರುತ್ತಿತ್ತು ಹಾಗೆಯೇ ಆ ಗುಂಪಿನಲ್ಲಿರುವ ಇನ್ನೊರ್ವ ಸಾಧಕಿಯನ್ನು ಸಹ ಅವರು ೩-೪ ಬಾರಿ ಸಂಪರ್ಕಿಸಲು ಪ್ರಯತ್ನಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಯಾರಿಂದಲೂ ಆಗಬಾರದೆಂದು, ಸಾಧಕರು ತಮ್ಮ ಸಂಚಾರಿವಾಣಿಯಲ್ಲಿ ಉಪಯೋಗಿಸದಿರುವ ಹಳೆಯ ಸಂಖ್ಯೆಗಳನ್ನು ‘ಡಿಲೀಟ್’ ಮಾಡಬೇಕು ಹಾಗೆಯೇ ಯಾವುದೇ ಸಾಮಾಜಿಕ ಮಾಧ್ಯಮದ ಗುಂಪಿನಲ್ಲಿ ಸಂಖ್ಯೆಯನ್ನು ಸೇರಿಸುವಾಗ ಅದನ್ನು ಖಚಿತಪಡಿಸಿಯೇ (Confirm ಮಾಡಿಯೇ) ಸೇರಿಸಬೇಕು.