ಕಾಬುಲ್ ನ ಸೈನ್ಯದ ನೆಲೆಯಲ್ಲಿ ಸ್ಫೋಟದಲ್ಲಿ ೧೦ ಜನರು ಹತ

ಕಾಬುಲ್ (ಅಪಘಾನಿಸ್ತಾನ್) – ಜನವರಿ ೧ ರಂದು ಬೆಳಿಗ್ಗೆ ಸೈನ್ಯದ ನೆಲೆಯಲ್ಲಿ ನಡೆದ ಸ್ಫೋಟದಲ್ಲಿ ೧೦ ಜನರು ಹತರಾಗಿ, ೮ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿಂದೆ ಡಿಸೆಂಬರ್ ೨೯ ರಂದು ಅಪಘಾನಿಸ್ತಾನದ ತಾಲೂಕನ ಪ್ರಾಂತದಲ್ಲಿ ಸ್ಪೋಟವಾಗಿತ್ತು. ಅದರಲ್ಲಿ ೪ ಜನರು ಗಾಯಗೊಂಡಿದ್ದರು, ಅದಕ್ಕೂ ಮುನ್ನ ಅಂದರೆ ಡಿಸೆಂಬರ್ ೨೬ ರಂದು ಬದಖಶಾನ್ ಪ್ರಾಂತದಲ್ಲಿ ನಡೆದಿರುವ ಸ್ಪೋಟದಲ್ಲಿ ಓರ್ವ ಪೊಲೀಸ ಅಧಿಕಾರಿಯು ಸಾವನ್ನಪ್ಪಿದ್ದರು.