ಬಾಂಗ್ಲಾದೇಶದಲ್ಲಿನ ಹಿಂದೂ ಯುವತಿಯ ಅಪಹರಣ, ವಿವಾಹ, ಮತಾಂತರ ಮತ್ತು ಹತ್ಯೆ !

ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು !

ಪ್ರಾತಿನಿಧಿಕ ಛಾಯಾಚಿತ್ರ

ಢಾಕಾ (ಬಾಂಗ್ಲಾದೇಶ) – ಇಲ್ಲಿಯ ಮುನ್ಷಿಗಂಜ ಜಿಲ್ಲೆಯಲ್ಲಿನ ಶ್ರೀನಗರದ ಲಾವಣ್ಯ ರಾಜಬಂಶಿ (ವಿವಾಹದ ನಂತರದ ಹೆಸರು ನುಸರತ ಜಹಾ ) ಈ ಹಿಂದೂ ಯುವತಿಯನ್ನು ಆಕೆಯ ಮುಸಲ್ಮಾನ ಪತಿ ಸಾಜು ಮಿಯಾ ಹತ್ಯೆ ಮಾಡಿದ್ದಾನೆ. ಡಿಸೆಂಬರ್ ೨೧ ರಂದು ಸಾಜು ಮಿಯಾ ಮತ್ತು ಅವನ ಸ್ನೇಹಿತರು ಈ ಯುವತಿಯನ್ನು ಅಪಹರಣ ಮಾಡಿದರು ಮತ್ತು ಅವಳನ್ನು ವಿವಾಹವಾಗಿ ಅವಳಿಗೆ ಇಸ್ಲಾಂ ಧರ್ಮ ಸ್ವೀಕರಿಸಲು ಅನಿವಾರ್ಯಗೊಳಿಸಿದರು. ವಿವಾಹದ ೩ ದಿನದ ಬಳಿಕ ಸಾಜು ಮಿಯಾ ಲಾವಣ್ಯಳ ಹತ್ಯೆ ಮಾಡಿದನು ಎನ್ನುವ ಮಾಹಿತಿ `ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಸಂಘಟನೆಯು ಟ್ವೀಟ್ ಮೂಲಕ ತಿಳಿಸಿದೆ

ಅಪ್ರಾಪ್ತ ಹಿಂದೂ ಹುಡುಗಿಯರನ್ನು ಮುಸಲ್ಮಾನರಿಂದ ಅಪಹರಣ : ನಿಷ್ಕ್ರಿಯ ಪೊಲೀಸರು !

ಇನ್ನೊಂದು ಘಟನೆಯಲ್ಲಿ ೧೫ ವರ್ಷದ ಹಿಂದೂ ಹುಡುಗಿ ಶತಾಬ್ದಿ ಬರ್ಮನ್ ಈಕೆ ಯನ್ನು ಡಿಸೆಂಬರ್ ೧೮ ರಂದು ನಜಮೂಲ ಮತ್ತು ಅವನ ಸ್ನೇಹಿತರು ಅಪಹರಿಸಿದ್ದರು. ಶತಾಬ್ದಿ ಇವಳು ಢಾಕಾದಲ್ಲಿನ ನವೀನಗರ ಜಿಲ್ಲೆಯಲ್ಲಿನ ಆಶೂಲಿಯ ಇಲ್ಲಿಯ ನಿವಾಸಿ. ಆಕೆಯ ತಂದೆ ಆದಿತ್ಯ ಬರ್ಮನ್ ಇವರು, ಪೊಲೀಸರು ಅವರ ಹುಡುಗಿಯನ್ನು ಬಿಡಿಸುವುದಕ್ಕಾಗಿ ಏನನ್ನು ಮಾಡುತ್ತಿಲ್ಲ ಮತ್ತು ಅವರ ಹುಡುಗಿಯ ಬಿಡುಗಡೆಗಾಗಿ ಹಣದ ಬೇಡಿಕೆ ಮಾಡಲಾಗಿದೆ ಎಂದು ಆರೋಪಿಸಿರುವುದು, ಈ ಮಾಹಿತಿ ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್ ಈ ಸಂಘಟನೆಯು ಟ್ವೀಟ್ ಮೂಲಕ ತಿಳಿಸಿದೆ.

ಮುಸಲ್ಮಾನ ಬಾಹುಳ್ಯವಿರುವ ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆಯೋ,ಅದೇ ಬಹು ಸಂಖ್ಯಾತ ಹಿಂದೂಗಳಿರುವ ದೇಶದಲ್ಲಿಯೂ ಹಿಂದೂ ಯುವತಿಯರ ಸಂದರ್ಭದಲ್ಲಿ ನಡೆಯುತ್ತಿದೆ !- ಸಂಪಾದಕರು