‘ಪ್ರತಿಯೊಬ್ಬರು ಸುಖವೆಂಬ ಮರೀಚಿಕೆಯ ಹಿಂದೆ ಓಡಿ ಅದನ್ನು ಗಳಿಸಲು ಪರಿಶ್ರಮ ಪಡುತ್ತಿರುತ್ತಾರೆ. ‘ಕೆಲವೊಮ್ಮೆ ಸುಖ ಪ್ರಾಪ್ತವಾದರೂ, ಅದರ ಹಿಂದೆ ದುಃಖವೂ ಬರುತ್ತದೆ’, ಎಂಬ ಜ್ಞಾನದ ಅಭಾವದಿಂದಾಗಿ, ವ್ಯಕ್ತಿಗೆ ದುಃಖದಿಂದ ನಿರಾಶೆ ಬರುತ್ತದೆ. ಇದು ನ್ಯಾಯವ್ಯವಸ್ಥೆಯಲ್ಲಿ ಕಾರ್ಯ ಮಾಡುವ ನ್ಯಾಯವಾದಿಗಳಿಗೂ ಅನ್ವಯಿಸುತ್ತದೆ. ನ್ಯಾಯವಾದಿಗಳಿಗೆ ವಕೀಲಿ ವೃತ್ತಿಯನ್ನು ಮಾಡುವಾಗ ಒತ್ತಡ-ಸಂಘರ್ಷಗಳ ಅನೇಕ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ. ಅದರಿಂದ ಅವರ ವೈಯಕ್ತಿಕ ಜೀವನದ ಮೇಲೆಯೂ ಬಹಳ ಪರಿಣಾಮವಾಗುತ್ತದೆ. ಈ ಒತ್ತಡವನ್ನು ದೂರಗೊಳಿಸಿ ಜೀವನದಲ್ಲಿ ಆನಂದವನ್ನು ದೊರಕಿಸಿಕೊಡಲು ಗುರುಕೃಪಾಯೋಗಾನುಸಾರ ಸಾಧನೆಯೊಂದೇ ಪರ್ಯಾಯವಾಗಿದೆ. ಈ ಸಾಧನೆಯು ಇಂದಿನ ಕಾಲದ ಸಂಜೀವನಿಯೇ ಆಗಿದೆ.
೧. ನ್ಯಾಯವಾದಿಗಳ ಜೀವನದಲ್ಲಿ ಬರುವ ಒತ್ತಡದ ಕೆಲವು ಪ್ರಮುಖ ಕಾರಣಗಳು
೧ ಅ. ಕಕ್ಷಿದಾರರನ್ನು ಸಂಭಾಳಿಸುವ ಜವಾಬ್ದಾರಿ ! : ನ್ಯಾಯವಾದಿಗಳ ಜೀವನವು ತುಂಬಾ ಬಿಡುವಿಲ್ಲದ ಮತ್ತು ಒತ್ತಡಗಳಿಂದ ಕೂಡಿರುತ್ತದೆ. ನ್ಯಾಯವನ್ನು ದೊರಕಿಸಿಕೊಳ್ಳಲು ನ್ಯಾಯಾಲಯದಲ್ಲಿ ಅನ್ಯಾಯ ಮಾಡಿದ ಮತ್ತು ಅನ್ಯಾಯಕ್ಕೊಳಗಾದ, ಹೀಗೆ ಇಬ್ಬರೂ ಕಕ್ಷಿದಾರರು ಬರುತ್ತಾರೆ. ಈ ಎರಡೂ ಪಕ್ಷಗಳ ಬದಿಯನ್ನು ಕೌಶಲ್ಯದಿಂದ ಮಂಡಿಸುವ ಕೆಲಸವನ್ನು ನ್ಯಾಯವಾದಿಗಳು ಮಾಡುತ್ತಾರೆ. ಇದನ್ನು ಮಾಡುವಾಗ ನ್ಯಾಯವಾದಿಗಳು ಕಕ್ಷಿದಾರರಲ್ಲಿ (ಅಥವಾ ಆ ದಾವೆಯಲ್ಲಿ) ತಮ್ಮನ್ನು ತಾವು ಎಷ್ಟು ದೊಡ್ಡ ಪ್ರಮಾಣದಲ್ಲಿ ಸಿಲುಕಿಸಿಕೊಳ್ಳುತ್ತಾರೆಂದರೆ, ಅವರು ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಸಾಧನೆಯನ್ನು ಮಾಡುವುದು ಅಥವಾ ರಾಷ್ಟ್ರ ಮತ್ತು ಧರ್ಮದ ಬಗ್ಗೆ ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಂಡಿರುತ್ತಾರೆ.
೧ ಆ. ವೃತ್ತಿ ಜೀವನವನ್ನು ಸ್ಥಿರಗೊಳಿಸುವ ಒತ್ತಡ : ಪ್ರತಿಯೊಬ್ಬ ನ್ಯಾಯವಾದಿಗೆ ತನ್ನ ತಂದೆಯಿಂದ ಅಥವಾ ಇತರ ವ್ಯಕ್ತಿಗಳಿಂದ ವಕೀಲಿ ಮಾಡುವ ವೃತ್ತಿಯು ಬಳುವಳಿಯಾಗಿ ಬಂದಿರುತ್ತದೆ ಎಂದೇನಿಲ್ಲ. ವೃತ್ತಿ ಜೀವನದಲ್ಲಿ ಸ್ಥಿರವಾಗಲು ಪ್ರತಿಯೊಬ್ಬರಿಗೆ ಸತತವಾಗಿ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಇದಲ್ಲದೇ ಯಾವಾಗಲೂ ಹೊಸ ಹೊಸ ಕಾಯಿದೆಗಳನ್ನು ಅರಿತುಕೊಳ್ಳಲು ಕಾನೂನುಗಳಿಗೆ ಸಂಬಂಧಿಸಿದ ಪುಸ್ತಕಗಳ ಅಧ್ಯಯನ ಮಾಡುವುದು, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ವಿವಿಧ ನ್ಯಾಯಗಳ ತೀರ್ಪುಗಳನ್ನು ಅಧ್ಯಯನ ಮಾಡುವುದು ಮುಂತಾದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.
೧ ಇ. ನೈತಿಕತೆಯ ದೃಷ್ಟಿಯಿಂದ ಅಯೋಗ್ಯವಾಗಿರುವ ಕಕ್ಷಿದಾರರ ಪಕ್ಷವನ್ನು ಮಂಡಿಸಲು ಒತ್ತಡ ಬರುವುದು : ನ್ಯಾಯವಾದಿಗಳು ಸ್ಥಿರವಾಗಿದ್ದರೂ, ಕಕ್ಷಿದಾರರು (ದಾವೆಯನ್ನು ಮಾಡಿರುವವರು) ಸಿಗುವುದು ಮತ್ತು ಅವರನ್ನು ಉಳಿಸಿಕೊಳ್ಳುವುದರ ಬಗ್ಗೆಯೂ ಒತ್ತಡವಿರುತ್ತದೆ. ಅಲ್ಲದೇ ಕಕ್ಷಿದಾರನಿಗೆ ನ್ಯಾಯ ದೊರಕಿಸಿಕೊಡಲು ಪ್ರತಿದಿನ ಪರಿಶ್ರಮ ಪಡಬೇಕಾಗುತ್ತದೆ. ಹೆಚ್ಚಿನ ಬಾರಿ ನೈತಿಕತೆಯ ದೃಷ್ಟಿಯಿಂದ ಕಕ್ಷಿದಾರರ ಪಕ್ಷ ಅಸತ್ಯವಿರುವಾಗಲೂ ಅವರಿಗೆ (ಸುಳ್ಳು) ನ್ಯಾಯವನ್ನು ದೊರಕಿಸಿಕೊಡಲು ಪ್ರಯತ್ನಿಸಬೇಕಾಗುತ್ತದೆ.
೧ ಈ. ನ್ಯಾಯಾಲಯಗಳ ವ್ಯವಸ್ಥೆಗಳಲ್ಲಿನ ದೋಷ ಮತ್ತು ಅವ್ಯವಸ್ಥಿತತನ ಮುಂತಾದವುಗಳಿಂದಲೂ ಒತ್ತಡ ನಿರ್ಮಾಣವಾಗುತ್ತದೆ.
೨. ಒತ್ತಡಮುಕ್ತಿಗಾಗಿ ಮಾಡಬೇಕಾದ ಉಪಾಯಗಳು
೨ ಅ. ಗುಣವೃದ್ಧಿಗಾಗಿ ಪ್ರಯತ್ನಿಸುವುದು : ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅನೇಕ ದೋಷಗಳು ಮತ್ತು ಅಹಂಕಾರವಿರುತ್ತವೆ. ಈ ದೋಷಗಳನ್ನು ದೂರ ಮಾಡದಿದ್ದರೆ ದಿನದಿಂದ ದಿನಕ್ಕೆ ಅವು ಹೆಚ್ಚಾಗುತ್ತಾ ಹೋಗುತ್ತವೆ. ಅವುಗಳೊಂದಿಗೆ ಹೋರಾಡಲು ನಮ್ಮ ಎಲ್ಲ ರೀತಿಯ (ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ) ಶಕ್ತಿ ಖರ್ಚಾಗುತ್ತದೆ. ಯಾವಾಗ ವ್ಯಕ್ತಿಯು ತನ್ನಲ್ಲಿನ ದೋಷಗಳನ್ನು ದೂರಗೊಳಿಸಿ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾನೆಯೋ, ಆಗಲೇ ನಿಜವಾದ ಅರ್ಥದಲ್ಲಿ ವ್ಯಕ್ತಿಯ ಆಧ್ಯಾತ್ಮಿಕ ವಿಕಾಸದೆಡೆಗೆ ಮಾರ್ಗಕ್ರಮಣವಾಗುತ್ತದೆ. ನ್ಯಾಯವಾದಿಗಳಲ್ಲಿ ಆವಶ್ಯಕವಾಗಿರುವ ಕೆಲವು ಗುಣಗಳು ಮುಂದಿನಂತಿವೆ.
೨ ಅ ೧. ಸಮಯಪಾಲನೆ : ಸಮಯಪಾಲನೆಯು ಸೌಜನ್ಯದ ಗುಣಧರ್ಮವಾಗಿದೆ. ವ್ಯಾವಹಾರಿಕ ಅಥವಾ ಆಧ್ಯಾತ್ಮಿಕ ಪ್ರಗತಿಗಾಗಿ ನಮ್ಮಲ್ಲಿ ಈ ಗುಣವಿರುವುದು ಆವಶ್ಯಕವಾಗಿದೆ.
೨ ಅ ೨. ಪ್ರಾಮಾಣಿಕತೆ : ಪ್ರತಿಯೊಬ್ಬರಿಗೆ ಪ್ರಾಮಾಣಿಕ ವ್ಯಕ್ತಿ ಅಥವಾ ಪ್ರಾಮಾಣಿಕ ನ್ಯಾಯವಾದಿಗಳೇ ಇಷ್ಟವಾಗುತ್ತಾರೆ. ಕಕ್ಷಿದಾರರು ಇಂತಹ ನ್ಯಾಯವಾದಿಗಳ ಕಡೆ ಆಕರ್ಷಿತರಾಗುತ್ತಾರೆ. ನ್ಯಾಯವಾದಿಗಳು ಕಾನೂನುತಜ್ಞರೆಂದು ಪ್ರಾಮಾಣಿಕರಾಗಿರುವುದು ಅಪೇಕ್ಷಿತವಾಗಿದೆ. ನಾವು ನಮ್ಮ ವ್ಯವಸಾಯದಲ್ಲಿ ಪ್ರಾಮಾಣಿಕತೆ ಅಥವಾ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು. ಇದರಿಂದ ನಮಗೆ ಸಮಾಧಾನ ದೊರಕಿ ಒತ್ತಡ ಕಡಿಮೆಯಾಗುತ್ತದೆ.
೨ ಅ ೩. ಸ್ಥಿರತೆ : ಯಾರು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸ್ಥಿರವಾಗಿರುತ್ತಾನೆಯೋ ಅವನಿಗೆ, ಕಠಿಣ ಪರಿಸ್ಥಿತಿಯಲ್ಲಿಯೂ ಒಂದು ಅವಕಾಶ ಸಿಗುತ್ತದೆ. ಸ್ಥಿರವಾಗಿರಲು ಸಾಧನೆಯು ಉಪಯುಕ್ತವಾಗಿದೆ.
೨ ಅ ೪. ನೀತಿಶಾಸ್ತ್ರ : ನೈತಿಕ ತತ್ತ್ವಗಳನ್ನು ಅನುಕರಣೆ ಮಾಡುವುದನ್ನು ಕಲಿಯಬೇಕು. ನಾವು ಮರೀಚಿಕೆಯ ಹಿಂದೆ ಓಡಬಾರದು ಮತ್ತು ಇತರರಿಗೂ ವಾಸ್ತವಿಕತೆಯ ಅರಿವು ಮಾಡಿಕೊಡಬೇಕು.
೨ ಆ. ಸತ್ಕರ್ಮಗಳನ್ನು ಮಾಡುವುದು : ಸತ್ಕರ್ಮಗಳನ್ನು ಮಾಡುವುದರಿಂದ ನಮ್ಮ ಪುಣ್ಯವು ಹೆಚ್ಚಾಗುತ್ತದೆ. ಇದಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಿರಬೇಕು. ನಮ್ಮಲ್ಲಿರುವ ದೋಷಗಳು ದೂರವಾದ ಕೂಡಲೇ, ಒತ್ತಡಮುಕ್ತಿ ಮಾತ್ರವಲ್ಲ ಪರಮಾನಂದ ಸ್ವರೂಪ ಜೀವನವನ್ನು ಜೀವಿಸಲು ಸಾಧ್ಯವಾಗುತ್ತದೆ.
೨ ಇ. ಮನಸ್ಸು ಸದೃಢವಾಗಲು ಸಾಧನೆಯನ್ನೇ ಮಾಡಬೇಕು ! : ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರೆ ಕಡಿಮೆ ಸಮಯದಲ್ಲಿ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಜಗತ್ತಿನ ವಿವಿಧಡೆ ಈ ಸಂದರ್ಭದ ಸಂಶೋಧನೆಗಳನ್ನು ಮಾಡಿ ದೃಢಪಟ್ಟಿದೆ. ವಿಶೇಷವಾಗಿ ದೇವತೆಗಳ ನಾಮಜಪವನ್ನು ಮಾಡಿದರೆ ಏಕಾಗ್ರತೆ ಹೆಚ್ಚಾಗಲು ಸಹಾಯವಾಗುತ್ತದೆ. ಯಾವ ರೀತಿ ವ್ಯಾಯಾಮದಿಂದ ಶಾರೀರಿಕ ಕ್ಷಮತೆ ಹೆಚ್ಚಾಗುತ್ತದೆಯೋ, ಅದೇ ರೀತಿ ಸಾಧನೆಯಿಂದ ಮನಸ್ಸು ಮತ್ತು ಬುದ್ಧಿ ಸದೃಢವಾಗಿ ವ್ಯಕ್ತಿಯು ಒತ್ತಡವನ್ನು ಸಹಿಸಲು ಸಕ್ಷಮನಾಗುತ್ತಾನೆ. ಸಾಧನೆಯು ಮನಸ್ಸಿನ ವ್ಯಾಯಾಮವೇ ಆಗಿದೆ.
೨ ಇ ೧. ಯಾವ ಸಾಧನೆಯನ್ನು ಮಾಡಬೇಕು ? : ವ್ಯಕ್ತಿಯ ಮನಸ್ಸಿನ ಮೇಲಿರುವ ಅನೇಕ ಜನ್ಮಗಳ ಅಯೋಗ್ಯ ಸಂಸ್ಕಾರಗಳನ್ನು ನಾಶ ಮಾಡುವುದು ಮತ್ತು ಅವುಗಳ ಬದಲು ನಮ್ಮಲ್ಲಿ ಗುಣವೃದ್ಧಿ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಇದಕ್ಕಾಗಿ ದೇವರ (ದೇವತೆಗಳ) ನಾಮಜಪ ಮಾಡುವುದು, ಇಂದಿನ ಕಾಲದ ಒತ್ತಡಮುಕ್ತಿಯ ಎಲ್ಲಕ್ಕಿಂತ ಸುಲಭ ಮತ್ತು ಸರಳ ಮಾರ್ಗವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಕುಲದಲ್ಲಿ ಜನಿಸಿರುತ್ತಾನೆ ಮತ್ತು ಇದು ಅವನ ಆಧ್ಯಾತ್ಮಿಕ ಉನ್ನತಿಗಾಗಿ ಪರಮೇಶ್ವರನು ಮಾಡಿದ ಆಯೋಜನೆಯೇ ಆಗಿರುತ್ತದೆ. ಆದ್ದರಿಂದ, ಶೀಘ್ರ ಉನ್ನತಿಗಾಗಿ ನಾವು ನಮ್ಮ ಕುಲದೇವತೆಯ ನಾಮಜಪವನ್ನು ಆದಷ್ಟು ಹೆಚ್ಚೆಚ್ಚು ಮಾಡಬೇಕು. ಯಾರಾದರೊಬ್ಬರ ಕುಲದೇವತೆಯು ಶ್ರೀ ಭವಾನಿದೇವಿ ಆಗಿದ್ದರೆ, ಅವರು ‘ಶ್ರೀ ಭವಾನಿದೇವ್ಯೈ ನಮಃ |’, ಎಂದು ನಾಮಜಪವನ್ನು ಮಾಡಬೇಕು. ನಾಮಜಪವೇ ಇಂದಿನ ಕಾಲದ ಯಜ್ಞವಾಗಿದೆ. ಕುಲದೇವತೆಯ ನಾಮಜಪದೊಂದಿಗೆ ಪೂರ್ವಜರ ತೊಂದರೆಗಳಿಂದ ಮುಕ್ತರಾಗಲು ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಮಾಡುವುದೂ ಆವಶ್ಯಕವಾಗಿದೆ. ಬುದ್ಧಿಯಿಂದ ತಿಳಿಯಲಾರದ ಅಥವಾ ವಿಜ್ಞಾನದ ಮಾಧ್ಯಮದಿಂದ ಪರಿಹಾರವಾಗದಂತಹ ಅಡಚಣೆಗಳು ಪೂರ್ವಜರ ತೊಂದರೆಗಳಿಂದ ಉದ್ಭವಿಸಿರಬಹುದು. ಅದಕ್ಕಾಗಿ ಈ ನಾಮಜಪವನ್ನು ಮಾಡಬೇಕು. ‘ಶಾಸ್ತ್ರಾನುಸಾರ ಕೃತಿ ಮಾಡಿದರೆ, ನಿಜವಾಗಿಯೂ ಅನುಭೂತಿಗಳು ಬರುತ್ತವೆ’, ಇದು ಬಹಳಷ್ಟು ಜನರ ಅನುಭವವಾಗಿದೆ. ನಾವೂ ಈ ಅಧ್ಯಾತ್ಮದ ಮಾಧುರ್ಯವನ್ನು ಸವಿಯೋಣ ಮತ್ತು ಒತ್ತಡಮುಕ್ತ ಜೀವನವನ್ನು ಜೀವಿಸಲು ಸಹಾಯ ಮಾಡುವ ಸಾಧನೆಯನ್ನು ನಮ್ಮ ಪ್ರತಿದಿನದ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಇದರಿಂದ ಎಲ್ಲರ ಜೀವನವು ಸಾರ್ಥಕವಾಗುವುದು.
೨ ಇ ೨. ಸನಾತನ-ನಿರ್ಮಿತ ಆಧ್ಯಾತ್ಮಿಕ ಗ್ರಂಥಗಳನ್ನು ಓದಬೇಕು : ಒತ್ತಡಭರಿತ ಜೀವನದ ಬಂಡಿಯನ್ನು ಸುಖ-ದುಃಖಗಳ ಕಾಲಚಕ್ರಗಳಿಂದ ಪ್ರತಿದಿನ ಎಳೆಯ ಬೇಕಾಗುತ್ತದೆ. ಈ ‘ಸುಖ-ದುಃಖ’ದ ಕಾಲಚಕ್ರದ ಆಚೆಗಿನ ಆನಂದ ಮತ್ತು ‘ಆನಂದಪ್ರಾಪ್ತಿಗಾಗಿ ಅಧ್ಯಾತ್ಮ’ ಈ ವಿಲಕ್ಷಣ ಸುವರ್ಣಯೋಗವನ್ನು ಸನಾತನ-ನಿರ್ಮಿತ ಅನೇಕ ಧರ್ಮಗ್ರಂಥಗಳ ಮೂಲಕ ಸಾಧಿಸಲಾಗಿದೆ. ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರು ಅನೇಕ ಧರ್ಮಗ್ರಂಥಗಳ ಸಂಕಲನವನ್ನು ಮಾಡಿದ್ದಾರೆ. ಒತ್ತಡಮುಕ್ತ ಜೀವನವನ್ನು ಜೀವಿಸಲು ಈ ಗ್ರಂಥಗಳ ಲಾಭವನ್ನು ಪಡೆಯಬೇಕು.
ಗುರುಚರಣಗಳ ಸೇವೆಗಾಗಿ ಹಂಬಲಿಸುವ
– ನ್ಯಾಯವಾದಿ ನೀಲೇಶ ಸಾಂಗೋಲಕರ, ನ್ಯಾಯವಾದಿ ಸಂಘಟಕ, ಹಿಂದೂ ವಿಧಿಜ್ಞ ಪರಿಷತ್ತು (ಆಗಸ್ಟ್ ೨೦೨೦)
ನ್ಯಾಯವಾದಿಗಳಿಗೆ ಮತ್ತು ಕಕ್ಷಿದಾರರಲ್ಲಿ ವಿನಂತಿ !ಅನೇಕ ಬಾರಿ ಕಂಡು ಬರುವುದೇನೆಂದರೆ, ಕಕ್ಷಿದಾರರು ನ್ಯಾಯವಾದಿಗಳ ಕಡೆಗೆ ಎಲ್ಲ ಕಾಗದಪತ್ರಗಳನ್ನು ನೀಡಿದ್ದರೂ ನ್ಯಾಯವಾದಿಗಳು ಕಕ್ಷಿದಾರರ ಬದಿಯನ್ನು ಮಂಡಿಸಲು ಕಡಿಮೆ ಬೀಳುತ್ತಾರೆ ಅಥವಾ ಉದ್ದೇಶಪೂರ್ವಕವಾಗಿ ವೈಯಕ್ತಿಕ ಸ್ವಾರ್ಥಕ್ಕಾಗಿ ಕಕ್ಷಿದಾರರ ಪಕ್ಷವನ್ನು ದುರ್ಬಲಗೊಳಿಸುತ್ತಾರೆ. ಇದರಲ್ಲಿ ಅವರ ಜ್ಞಾನ, ಅಜ್ಞಾನ ಮತ್ತು ಅನುಭವ ಇವೆಲ್ಲವುಗಳಿಂದಾಗಿ ಮೊಕದ್ದಮೆಯ ಮೇಲೆ ಮತ್ತು ಖಟ್ಲೆಯ ಮೇಲೆ ಪರಿಣಾಮವಾಗಿ ಕಕ್ಷಿದಾರರ ಪಕ್ಷವು ದುರ್ಬಲವಾಗುತ್ತದೆ. ಕೆಲವೊಮ್ಮೆ ಕಕ್ಷಿದಾರರು ಕೂಡಬೇಕೆಂದೇ ಸತ್ಯ ಸ್ಥಿತಿ, ಮೊಕದ್ದಮೆ ಹಾಗೂ ಖಟ್ಲೆಗೆ ಸಂಬಂಧಿಸಿದ ಮಾಹಿತಿಯನ್ನು ಮತ್ತು ಕಾಗದಪತ್ರಗಳನ್ನು ನ್ಯಾಯವಾದಿಯಿಂದ ಮುಚ್ಚಿಡುತ್ತಾರೆ. ಅದರಲ್ಲಿಯೂ ಅವನ ಸ್ವಾರ್ಥವಿರುತ್ತದೆ. ಈ ಪರಿಸ್ಥಿತಿಯಲ್ಲಿ ನ್ಯಾಯವಾದಿಯು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೂ ಅವನ ಕಕ್ಷಿದಾರರು ಮುಚ್ಚಿಟ್ಟ ಮಾಹಿತಿ ಮತ್ತು ಕಾಗದಪತ್ರಗಳಿಂದಾಗಿ ಮೊಕದ್ದಮೆ ಅಥವಾ ಖಟ್ಲೆಯ ವಿರುದ್ಧ ಹೋಗಿರುವುದು ಅನೇಕ ಬಾರಿ ಗಮನಕ್ಕೆ ಬಂದಿದೆ. ತಮ್ಮ ತಪ್ಪುಗಳನ್ನು ಮುಚ್ಚಿಡಲು, ಅನೇಕ ಕಕ್ಷಿದಾರರು ಪ್ರಾಮಾಣಿಕ ಮತ್ತು ತತ್ತ್ವನಿಷ್ಠೆಯಿಂದ ಕೆಲಸ ಮಾಡುವ ನ್ಯಾಯವಾದಿಗಳ ಮೇಲೆ ದೋಷಾರೋಪಣೆ ಮಾಡುತ್ತಾರೆ. ಅದರಲ್ಲಿಯೂ ನ್ಯಾಯವಾದಿಗಳಿಗೆ ಆರ್ಥಿಕ ಮತ್ತು ಮಾನಸಿಕ ಅಡಚಣೆಯನ್ನು ತರುವ ಪ್ರಯತ್ನಗಳನ್ನು ಮಾಡಲಾಗುತ್ತದೆ. ಇಂತಹ ನ್ಯಾಯವಾದಿಗಳು ಮತ್ತು ಕಕ್ಷಿದಾರರ ಸ್ವಾರ್ಥದ ಬಗ್ಗೆ ಕಹಿ ಅನುಭವಗಳು ಬಂದಿದ್ದರೆ ಪ್ರಕರಣದ ಪ್ರತಿಯೊಂದು ಕಾಗದಪತ್ರಗಳೊಂದಿಗೆ ನಮಗೆ ತಿಳಿಸಬೇಕು. ನ್ಯಾಯಕ್ಷೇತ್ರದಲ್ಲಿನ ಕುಂದುಕೊರತೆಗಳನ್ನು ಸುಧಾರಿಸಲು ನಮಗೆ ಈ ಅನುಭವಗಳು ಉಪಯೋಗವಾಗುವವು. ನ್ಯಾಯವಾದಿ ನೀಲೇಶ ಸಾಂಗೋಲಕರಪತ್ರವ್ಯವಹಾರಕ್ಕಾಗಿ ವಿಳಾಸ ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ – ಗೋವಾ, ೪೦೩೪೦೧ ವಿ-ಅಂಚೆ ವಿಳಾಸ : [email protected] ಸಂಚಾರವಾಣಿ ಕ್ರಮಾಂಕ : ೯೫೯೫೯೮೪೮೪೪ |