ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಯು.ಎ.ಎಸ್ ಉಪಕರಣದಿಂದ ಮಾಡಿದ ವೈಜ್ಞಾನಿಕ ಸಂಶೋಧನೆ
`ಹಿಂದೂ ಧರ್ಮವು ಜೀವನದಲ್ಲಿ ಘಟಿಸುವ ಮುಖ್ಯ ಹದಿನಾರು ಪ್ರಸಂಗಗಳಲ್ಲಿ ಈಶ್ವರನ ಹತ್ತಿರ ಹೋಗಲು ಸಾಧ್ಯವಾಗಬೇಕೆಂದು ಮಾಡುವ `ಹದಿನಾರು ಸಂಸ್ಕಾರಗಳು’ ಹೇಳಿದೆ. ಅವುಗಳಲ್ಲಿ ಎಲ್ಲಕ್ಕಿಂತ ಮಹತ್ವದ ಸಂಸ್ಕಾರವೆಂದರೆ `ವಿವಾಹಸಂಸ್ಕಾರ’ ! ವಿವಾಹದ ನಿಜವಾದ ಉದ್ದೇಶವೆಂದರೆ -`ಎರಡು ಜೀವಗಳ ಭಾವಿ ಜೀವನವು ಪರಸ್ಪರರಲ್ಲಿ ಪೂರಕ ಮತ್ತು ಸುಖವಾಗಿರಲು ಈಶ್ವರನ ಆಶೀರ್ವಾದವನ್ನು ಪ್ರಾಪ್ತ ಮಾಡಿಕೊಳ್ಳುವುದು !’ಇದಕ್ಕಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ವಿವಾಹವಿಧಿಯನ್ನು ಮಾಡುವುದು ಅಗತ್ಯವಿರುತ್ತದೆ. ೨೦೧೮ ರಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ೨ ವಿವಾಹಗಳಾದವು. ಈ ಎರಡು ವಿವಾಹಗಳು ಹಿಂದೂ ಧರ್ಮಶಾಸ್ತ್ರಕ್ಕನುಸಾರ (ಧಾರ್ಮಿಕ ಪದ್ಧತಿಯಿಂದ) ಮಾಡಲಾಯಿತು.`ಹಿಂದೂ ಧರ್ಮಶಾಸ್ತ್ರಕ್ಕನುಸಾರ (ಧಾರ್ಮಿಕ ಪದ್ಧತಿಯಿಂದ) ಮಾಡಿದ ವಿವಾಹ ವಿಧಿಗಳಿಂದ ವಧು ಮತ್ತು ವರ ಇವರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಯಾವ ಲಾಭಗಳಾಗುತ್ತವೆ ?’, ಎಂಬುದರ ವೈಜ್ಞಾನಿಕ ಅಧ್ಯಯನಕ್ಕಾಗಿ ವಿವಾಹ ಸ್ಥಳದಲ್ಲಿ `ಯು.ಎ.ಎಸ್. (ಯುನಿರ್ವಸಲ್ ಔರಾ ಸ್ಕ್ಯಾನರ್ )’ ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆಯನ್ನು ಮುಂದೆ ಕೊಡಲಾಗಿದೆ.
ವಿವಾಹ ಮಹೋತ್ಸವವನ್ನು `ಸಮಾರಂಭ’ವೆಂದುಲ್ಲ `ಧಾರ್ಮಿಕ ಸಂಸ್ಕಾರ’ವೆಂದು ನೋಡಿ ! ಇತ್ತೀಚೆಗೆ ಹಿಂದೂಗಳಿಗೆ ವಿವಾಹ ಮಹೋತ್ಸವವು ಒಂದುಮೋಜು ಮಾಡುವ ಕಾರ್ಯಕ್ರಮವೆಂದು ಅನಿಸುತ್ತದೆ. ಆದುದರಿಂದ ವಿವಾಹ ವಿಧಿಗೆ ಬಂದಿರುವ ವ್ಯಕ್ತಿಗಳು ಹರಟೆ ಹೊಡೆಯುತ್ತಿರುತ್ತಾರೆ, ಅದೇ ರೀತಿ ಆಗ ಹಾಡನ್ನು ಹಾಕಿರುತ್ತಾರೆ ಮತ್ತು ನಡುನಡುವೆ `ಬ್ಯಾಂಡ್’ ಸಹ ಬಾರಿಸುತ್ತಿರುತ್ತಾರೆ. ಈ ಸದ್ದುಗಳಿಂದಾಗಿ ಧಾರ್ಮಿಕ ವಿಧಿಯಿಂದ ಉತ್ಪನ್ನವಾಗುವ ಸಾತ್ತ್ವಿಕತೆಯು ಉಳಿಯದೇ ಕುಸಿಯುತ್ತದೆ. ಹಿಂದೂ ಧರ್ಮ ಶಾಸ್ತ್ರಕ್ಕನುಸಾರ (ಧಾರ್ಮಿಕ ಪದ್ಧತಿಯಿಂದ) ವಿವಾಹವಿಧಿ ಮಾಡುವುದರಿಂದ ಮತ್ತು ಮಂತ್ರೋಚ್ಚಾರಗಳಲ್ಲಿನ ಸುಮಧುರ ನಾದದಿಂದಾಗಿ ಅಷ್ಟದಿಕ್ಕುಗಳು ಭರಿತವಾಗುತ್ತವೆ ಮತ್ತು ಚೈತನ್ಯದ ಸ್ತರದಲ್ಲಿ ವಧು-ವರರಿಗೆ ಆಶೀರ್ವಾದಾತ್ಮಕ ಬಲ ಪ್ರಾಪ್ತಮಾಡಿಕೊಡಲಾಗುತ್ತದೆ. ಇದು `ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು `ಯು.ಎ.ಎಸ್.(ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆಯ ಮೂಲಕವೂ ಸ್ಪಷ್ಟವಾಗಿದೆ. ಆದುದರಿಂದ ವಿವಾಹ ಸಮಾರಂಭವನ್ನು `ಒಂದು ಮೋಜಿನ ಕಾರ್ಯಕ್ರಮ’ವೆಂದು ನೋಡದೇ `ಒಂದು ಧಾರ್ಮಿಕ ಸಂಸ್ಕಾರ’ವೆAದು ನೋಡಿದರೆ ಅದರಿಂದ ವಧು-ವರರಿಗೆ ಹಾಗೂ ವಿವಾಹಕ್ಕೆ ಬಂದವರಿಗೂ ಲಾಭವಾಗುವುದು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನೋಂದಣಿ ವಿವಾಹಕ್ಕಿಂತ (`ರಿಜಿಸ್ಟರ್ ಮ್ಯಾರೇಜ್’ಗಿಂತ) ಧಾರ್ಮಿಕ ಪದ್ಧತಿಯ ವಿವಾಹವು ಶ್ರೇಯಸ್ಕರವಾಗಿದೆ |
೧. ಪರೀಕ್ಷಣೆಯಲ್ಲಿ ಆಧ್ಯಾತ್ಮಿಕ ತೊಂದರೆ ಇರುವ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ವಧು ಮತ್ತು ವರರ ಮಾಹಿತಿ
೧ ಅ. ಆಧ್ಯಾತ್ಮಿಕ ತೊಂದರೆ ಇರುವ ವಧು-ವರ : ಈ ಪರೀಕ್ಷಣೆಯಲ್ಲಿನ ಆಧ್ಯಾತ್ಮಿಕ ತೊಂದರೆಯಿರುವ ವಧು ಸನಾತನದ ಸಾಧಕಿಯಾಗಿದ್ದಾಳೆ. ಅವಳು ಪ್ರಾಸಂಗಿಕ ಸೇವೆಯನ್ನು ಮಾಡುತ್ತಾಳೆ. ಆಧ್ಯಾತ್ಮಿಕ ತೊಂದರೆಯಿರುವ ವರನು ಇತರ ಸಂಪ್ರದಾಯಕ್ಕನುಸಾರ ಸಾಧನೆಯನ್ನು ಮಾಡುತ್ತಾನೆ.
೧ ಆ. ಆಧ್ಯಾತ್ಮಿಕ ತೊಂದರೆ ಇಲ್ಲದ ವಧು-ವರ :ಈ ಪರೀಕ್ಷಣೆಯಲ್ಲಿ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ವಧು-ವರ ಈ ಇಬ್ಬರೂ ಸನಾತನದ ಪೂರ್ಣ ವೇಳೆ ಸಾಧಕರಾಗಿದ್ದು ಇಬ್ಬರ ಆಧ್ಯಾತ್ಮಿಕ ಮಟ್ಟ ಶೇ. ೬೦ ಕ್ಕಿಂತಲೂ ಹೆಚ್ಚಿದೆ. ಅವರು ಸನಾತನದ ಆಶ್ರಮದಲ್ಲಿದ್ದು ಸಾಧನೆ ಮಾಡುತ್ತಾರೆ. ಈ ಎರಡು ಜೋಡಿಯ ವಿವಾಹವನ್ನು ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಧರ್ಮಶಾಸ್ತ್ರದಂತೆ ಮಾಡಲಾಯಿತು.
೨. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ಎರಡೂ ವಿವಾಹಗಳಲ್ಲಿನ ವಧು ಮತ್ತು ವರ ಇವರ ವಿವಾಹ ವಿಧಿಯ ಮೊದಲು (ಹಿಂದಿನ ದಿನ `ಅರಿಶಿನ ಹಚ್ಚುವುದು’ ಈ ವಿಧಿಯ ಮೊದಲು) ಮತ್ತು ವಿವಾಹವಿಧಿಯ ನಂತರ `ಯು.ಎ.ಎಸ್.’ ಉಪಕರಣದಿಂದ ಪರೀಕ್ಷಿಸಲಾಯಿತು.
೨ ಅ. ವಿವಾಹ ವಿಧಿಯಾದ ನಂತರ ಆಧ್ಯಾತ್ಮಿಕ ತೊಂದರೆಯಿರುವ ವಧು ಮತ್ತು ಆಧ್ಯಾತ್ಮಿಕ ತೊಂದರೆಯಿರುವ ವರ ಇವರಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಕಡಿಮೆಯಾಗುವುದು : ಆಧ್ಯಾತ್ಮಿಕ ತೊಂದರೆಯಿರುವ ವಧು-ವರ ಇವರಲ್ಲಿ ಸಕಾರಾತ್ಮಕ ಊರ್ಜೆ ಕಂಡುಬರಲಿಲ್ಲ. ವಿವಾಹವಿಧಿಆದ ನಂತರ ಇಬ್ಬರಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆ ಆಯಿತು, ಎಂಬುದನ್ನು ಮುಂದಿನ ಪಟ್ಟಿಯಿಂದ ಗಮನಕ್ಕೆ ಬರುತ್ತದೆ.
೨ ಆ. ವಿವಾಹವಿಧಿಗಳಾದ ನಂತರ ಆಧ್ಯಾತ್ಮಿಕ ತೊಂದರೆ ಇಲ್ಲದ ವಧು ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ವರ ಇವರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು : ಆಧ್ಯಾತ್ಮಿಕ ತೊಂದರೆ ಇಲ್ಲದ ವಧು ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ವರ ಇವರಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ. ವಿವಾಹವಿಧಿಗಳಾದ ನಂತರ ಆ ಇಬ್ಬರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು, ಎಂಬುದು ಮುಂದಿನ ಪಟ್ಟಿಯಿಂದ ಗಮನಕ್ಕೆ ಬರುತ್ತದೆ.
೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತಿçಯ ವಿಶ್ಲೇಷಣೆ
ಅ. `ವಿವಾಹವು `ಶಿವ ಮತ್ತು ಶಕ್ತಿ’ ಈ ಇಬ್ಬರು ಪರಸ್ಪರರಲ್ಲಿ ಹೊಂದಿಕೊಳ್ಳುವ ಒಂದು ಪವಿತ್ರ ಸಂಸ್ಕಾರವಾಗಿರುವುದರಿಂದ ಲಿಂಡಾ , ಮಂತ್ರಯುಕ್ತ ನಾದದಿಂದ ಭರಿತವಿರುವ ವಾತಾವರಣದಲ್ಲಿ ವಿವಾಹರೂಪಿ ಪವಿತ್ರ ಬಂಧನದಲ್ಲಿ ಸಿಲುಕಿ ಶಿವ-ಶಕ್ತಿರೂಪದಲ್ಲಿ ಒಂದಾಗಿ ವೈರಾಗ್ಯದ ಮಹಾಮಂತ್ರವನ್ನು ಕೊಟ್ಟು ಜೀವನದ ಕೊನೆಗೆ ಮುಕ್ತರಾಗುವುದು, ಇದೇ ವಿವಾಹದ ನಿಜವಾದ ಗರ್ಭಿತಾರ್ಥವಾಗಿದೆ.’ (ಆಧಾರ : ಸನಾತನದ ಕಿರುಗ್ರಂಥ -` ವಿವಾಹಸಂಸ್ಕಾರ ಶಾಸ್ತç ಮತ್ತು ಸದ್ಯದ ಅಯೋಗ್ಯ ರೂಢಿಗಳು’)
೩ ಆ. ಧಾರ್ಮಿಕ ಪದ್ಧತಿಯಿಂದ ವಿವಾಹವನ್ನು ಮಾಡುವಾಗ ವಿವಾಹದ ದಿನದಂದು ಮಾಡಲಾಗುವ ಕೆಲವು ವಿಧಿಗಳು ಮತ್ತು ಅವುಗಳ ಮಹತ್ವ : `ಬಾಸಿಂಗ ಕಟ್ಟುವುದು, ಅಂತಃಪಟಧಾರಣವಿಧಿ, ಮಂಗಲಾಷ್ಟಕಗಳನ್ನು ಹೇಳುವುದು, ಪರಸ್ಪರರ ನಿರೀಕ್ಷಣೆವಿಧಿ ಮತ್ತು ಪುಷ್ಪಮಾಲೆಗಳನ್ನು ಹಾಕುವುದು, ಅಕ್ಷತಾರೋಪಣವಿಧಿ (ವಧು-ವರರ ಮೇಲೆ ಅಕ್ಷತೆ ಹಾಕುವುದು), ಮಂಗಳಸೂತ್ರಬಂಧನ, ಸಪ್ತಪದಿ ಮುಂತಾದವುಗಳು. ಈ ಎಲ್ಲ ವಿಧಿಗಳ ಹಿಂದೆ ಏನಾದರೊಂದು ಅಧ್ಯಾತ್ಮಶಾಸ್ತಿçಯ ಕಾರಣಗಳಿವೆ. ಅವುಗಳ ಸೂಕ್ಷ್ಮ ಪರಿಣಾಮವು ವಧು ಮತ್ತು ವರ ಇವರ ಮೇಲಾಗುತ್ತದೆ. ಅವರಿಗೆ ದೇವರ ಆಶೀರ್ವಾದ ಸಿಗುತ್ತದೆ, ಹಾಗೆಯೇ ಚೈತನ್ಯ ಸಿಗುತ್ತದೆ.
೩ ಇ. ಧಾರ್ಮಿಕ ಪದ್ಧತಿಯಿಂದ ಮಾಡಿದ ವಿವಾಹವಿಧಿಯಿಂದ ಚೈತನ್ಯ ದೊರಕಿರುವುದರಿಂದ ವಧುವರರಿಗೆ ಆಗಿರುವ ಆಧ್ಯಾತ್ಮಿಕ ಮಟ್ಟದ ಲಾಭ : ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮಾಡಿದ ವಿವಾಹವಿಧಿಯಿಂದ ಚೈತನ್ಯ ಸಿಗುತ್ತದೆ. ಈ ಪರೀಕ್ಷಣೆಯಲ್ಲಿನ ಎರಡೂ ವಿವಾಹಗಳು ಧರ್ಮಶಾಸ್ತ್ರಕ್ಕನುಸಾರ ಆಗಿವೆ. ಹಾಗೆಯೇ ವಿವಾಹದ ಸ್ಥಳ, ಪುರೋಹಿತ ಮುಂತಾದವರು ಸಾತ್ತ್ವಿಕರಿದ್ದರು. ಎರಡೂ ವಿವಾಹಗಳಲ್ಲಿನ ವಧು ಮತ್ತು ವರರು ಸಾಧಕರಾಗಿರುವುದರಿಂದ ವಿವಾಹ ವಿಧಿಗಳು ನಡೆಯುತ್ತಿರುವಾಗ ಅವರು ಈಶ್ವರನ ಅನುಸಂಧಾನದಲ್ಲಿದ್ದರು. ಆದುದರಿಂದ ವಧುವರರಿಗೆ ಮುಂದಿನಂತೆ ಆಧ್ಯಾತ್ಮಿಕ ಮಟ್ಟದಲ್ಲಿನ ಲಾಭವಾಯಿತು.
೧. ಆಧ್ಯಾತ್ಮಿಕ ತೊಂದರೆಯಿರುವ ವಧು ಮತ್ತು ಆಧ್ಯಾತ್ಮಿಕ ತೊಂದರೆ ಇರುವ ವರ ಇವರಿಗೆ ವಿವಾಹವಿಧಿಯಲ್ಲಿನ ಚೈತನ್ಯದ ಲಾಭವಾಗಿರುವುದರಿಂದ ಅವರಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಯಿತು. (ಅವರಿಗೆ ಇರುವ ಆಧ್ಯಾತ್ಮಿಕ ತೊಂದರೆಯೊಂದಿಗೆ (ನಕಾರಾತ್ಮಕ ಸ್ಪಂದನಗಳೊಂದಿಗೆ) ಹೋರಾಡುವುದರಲ್ಲಿ ವಿವಾಹವಿಧಿಯಿಂದ ಪ್ರಕ್ಷೇಪಿತವಾದ ಸಕಾರಾತ್ಮಕ ಸ್ಪಂದನಗಳು (ಚೈತನ್ಯ) ವ್ಯಯವಾಗಿರುವುದರಿಂದ ಆ ವಧು-ವರರಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗಲಿಲ್ಲ.)
೨. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ವಧು ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ವರ ಇವರಲ್ಲಿ ವಿವಾಹವಿಧಿಗಳ ಮೊದಲು ಸಕಾರಾತ್ಮಕ ಊರ್ಜೆ ಇತ್ತು. ಏಕೆಂದರೆ ಅವರಿಬ್ಬರೂ ಅನೇಕ ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದಾರೆ. ಆದುದರಿಂದ ಅವರಲ್ಲಿನ ಸತ್ತ್ವಗುಣದಲ್ಲಿ ಹೆಚ್ಚಳವಾಗಿದೆ. ಸಾಧನೆಯಲ್ಲಿ ಅವರ ಪ್ರಗತಿಯಾಗಿರುವುದರಿಂದ ಅವರು ಶೇ. ೬೦ ಕ್ಕಿಂತಲೂ ಹೆಚ್ಚು ಮಟ್ಟವನ್ನು ತಲುಪಿದ್ದಾರೆ. ಹಾಗೆಯೇ ಅವರಿಗೆ ಆಧ್ಯಾತ್ಮಿಕ ತೊಂದರೆಯಿಲ್ಲ. ಆದುದರಿಂದ ಅವರಿಗೆ ವಿವಾಹ ವಿಧಿಯಿಂದ ಪ್ರಕ್ಷೇಪಿತವಾದ ಸಕಾರಾತ್ಮಕ ಸ್ಪಂದನಗಳ (ಚೈತನ್ಯದ) ಸಂಪೂರ್ಣ ಲಾಭವಾಯಿತು; ಆದ್ದರಿಂದ ಅವರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.
ಸಂಕ್ಷಿಪ್ತವಾಗಿ ಹೇಳುವುದಾದರೆ, ವಿವಾಹದ ಇಚ್ಛೆಯುಳ್ಳ ಸ್ತ್ರೀಪುರುಷರು ಹಿಂದೂ ಧರ್ಮಶಾಸ್ತçಕ್ಕನುಸಾರವೇ ವಿವಾಹವನ್ನು ಮಾಡಬೇಕು; ಏಕೆಂದರೆ ಇಂತಹ ವಿವಾಹವೇ ವ್ಯಕ್ತಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಈ ಮೂರು ಮಟ್ಟಗಳಲ್ಲಿ ಲಾಭದಾಯಕವಾಗುತ್ತದೆ. ಹಿಂದೂ ಧರ್ಮದಲ್ಲಿ ದೈಹಿಕ ವಾಸನೆಗಾಗಿ ವಿವಾಹವಿಧಿಯನ್ನು ಹೇಳಲಿಲ್ಲ, ನಾಲ್ಕು ಪುರುಷಾರ್ಥಗಳಲ್ಲಿ `ಕಾಮ’ ಇದು ಪುರುಷಾರ್ಥವನ್ನು ಸಾಧ್ಯಗೊಳಿಸಿ ಕ್ರಮೇಣ `ಮೋಕ್ಷ’ ಈ ಪುರುಷಾರ್ಥದ ಕಡೆಗೆ ಹೋಗಲು ಸಾಧ್ಯವಾಗಬೇಕು, ಎಂಬುದಕ್ಕಾಗಿ ಈ ವಿವಾಹ ಸಂಸ್ಕಾರವಿದೆ. ಸಮಾಜದಲ್ಲಿ ಸುಪ್ರಜಾ ನಿರ್ಮಾಣವಾಗಿ ಸಮಾಜದ ಅಸ್ತಿತ್ವವನ್ನು ಉಳಿಯಬೇಕು ಮತ್ತು ಅದರ ಏಳಿಗೆಯಾಗಬೇಕು, ಎಂದು ಪವಿತ್ರವಾಗಿರುವ ಈ ವಿವಾಹ ಸಂಸ್ಕಾರದ, ಎಂದರೆ ಗೃಹಸ್ಥಧರ್ಮದ ಸ್ಥಾಪನೆಯಾಗಿದೆ. ವಿವಾಹಸಂಸ್ಥೆಯ ಜೋಪಾನ ಮಾಡುವುದರಲ್ಲಿಯೇ ಸಂಪೂರ್ಣ ಸಮಾಜದ, ಎಂದರೆ ರಾಷ್ಟçದ ಎಲ್ಲ ದೃಷ್ಟಿಯಿಂದಲೂ ಉತ್ಕರ್ಷವಾಗಿದೆ.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೯.೮.೨೦೧೮)
ವಿ-ಅಂಚೆ : [email protected]
ನೋಂದಣಿ ವಿವಾಹಕ್ಕಿಂತ (`ರಿಜಿಸ್ಟರ್ ಮ್ಯಾರೇಜ್’ಗಿಂತ) ಧಾರ್ಮಿಕ ಪದ್ಧತಿಯ ವಿವಾಹವು ಶ್ರೇಯಸ್ಕರವಾಗಿದೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಲ್ಲದ `ನೋಂದಣಿ ವಿವಾಹ’: `ನೋಂದಣಿ ವಿವಾಹ’ದ ಪದ್ಧತಿಯು ೧೮೭೨’ರಲ್ಲಿ ಆಂಗ್ಲರ ಆಡಳಿತದಲ್ಲಿ ಪ್ರಾರಂಭವಾಯಿತು. ಈ ಮಾಧ್ಯಮದಿಂದ ಸಿಗುವ ತೆರಿಗೆಯಿಂದ ಸರಕಾರದ ಉತ್ಪನ್ನವನ್ನು ಹೆಚ್ಚಿಸುವುದು ಬ್ರಿಟಿಷರ ಮುಖ್ಯ ಉದ್ದೇಶವಾಗಿತ್ತು. ಹಿಂದೂಸ್ಥಾನದಲ್ಲಿ ಈಗಲೂ ಈ ಪದ್ಧತಿಯನ್ನು ಪಾಶ್ಚಾತ್ಯರ ಅಂಧಾನುಕರಣೆಯ ಅಭ್ಯಾಸದಿಂದ ಅಥವಾ ಮಿತವ್ಯಯವೆಂದು ಪಾಲಿಸಲಾಗುತ್ತದೆ. ಈ ವಿವಾಹದಲ್ಲಿ ಯಾವುದೇ ವಿಧಿಯನ್ನು ಮಾಡದೇ, ಮುಹೂರ್ತ ಇತ್ಯಾದಿಯನ್ನು ನೋಡದೇ ಕಾಗದಪತ್ರದಲ್ಲಿ ವಿವಾಹವನ್ನು ಮಾಡಲಾಗುತ್ತದೆ. ಹಿಂದೂ ಧರ್ಮಕ್ಕನುಸಾರ ಮನುಷ್ಯನ ಜನ್ಮವು ಈಶ್ವರ ಪ್ರಾಪ್ತಿಗಾಗಿ ಇದೆ. ಗರ್ಭಧಾರಣೆಯಿಂದ ವಿವಾಹದವರೆಗಿನ ಕಾಲದಲ್ಲಿ ಜೀವನದಲ್ಲಿ ಘಟಿಸುವ ಪ್ರಮುಖ ೧೬ ಪ್ರಸಂಗಗಳಲ್ಲಿ ಮಾಡಲಾಗುವ ಧಾರ್ಮಿಕ ಸಂಸ್ಕಾರಗಳಿಂದ ಮನುಷ್ಯನು ಈಶ್ವರನ ಸಮೀಪ ಹೋಗುತ್ತಾನೆ ಎಂದು ಹಿಂದೂ ಧರ್ಮ ಶಾಸ್ತ್ರವು ಹೇಳುತ್ತದೆ. ಧಾರ್ಮಿಕ ಪದ್ಧತಿಯಿಂದ ವಿವಾಹವಾದ ಅನೇಕರಿಗೆ ಇದರ ಬಗ್ಗೆ ಅನುಭೂತಿಗಳೂ ಬಂದಿವೆ. ನೋಂದಣಿ ವಿವಾಹದಲ್ಲಿ ಯಾವುದೇ ಧಾರ್ಮಿಕ ವಿಧಿ ಮಾಡದಿರುವುದರಿಂದ ವಧೂ-ವರರ ಮೇಲೆ ಧರ್ಮ ಸಂಸ್ಕಾರವಾಗುವುದಿಲ್ಲ. ಆದುದರಿಂದ ಇಂತಹ ವಿವಾಹಕ್ಕೆ ಕಾನೂನಿನ ಮಾನ್ಯತೆ ದೊರಕಿದರೂ, ಈ ವಿವಾಹವು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗುವುದಿಲ್ಲ. ಆದುದರಿಂದ ಅಲ್ಪ ಖರ್ಚಿನ ನೋಂದಣಿ ವಿವಾಹದಂತಹ ಧರ್ಮವಿರೋಧಿ ಪರ್ಯಾಯವನ್ನು ಆರಿಸದೇ ಸರಳ ಪದ್ಧತಿಯಿಂದ, ಆದರೆ ಎಲ್ಲ ಧಾರ್ಮಿಕ ವಿಧಿಗಳೊಂದಿಗೆ ವಿವಾಹ ಮಾಡುವುದು ಹೆಚ್ಚು ಯೋಗ್ಯವಾಗಿದೆ. (ಆಧಾರ : ಸನಾತನದ ಕಿರುಗ್ರಂಥ – `ವಿವಾಹಸಂಸ್ಕಾರ ಶಾಸ್ತ್ರ ಮತ್ತು ಸದ್ಯದ ಅಯೋಗ್ಯ ರೂಢಿಗಳು’) |
* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. |