* ಹಿಂದೂಗಳ ಸಂತರನ್ನು ಅಪರಾಧಿಗಳಂತೆ ತೋರಿಸಲಾಗುತ್ತಿದೆ !
* ಸಾಮಾಜಿಕ ಮಾಧ್ಯಮಗಳಿಂದ ವಿರೋಧವಾಗುತ್ತಿದೆ ! |
ನವದೆಹಲಿ – ಪಾಕಿಸ್ತಾನದಲ್ಲಿ ನಿರ್ಮಾಣವಾದ ‘ಸೇವಕ-ದ ಕನ್ಫೆಶನ’ ಎಂಬ ‘ವೆಬ್ ಸಿರೀಸ’ನ ಮೂಲಕ ಭಾರತ ಹಾಗೂ ಹಿಂದೂಗಳ ಪ್ರತಿಮೆಯನ್ನು ಮಲೀನಗೊಳಿಸಲಾಗುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಸಾಮಾಜಿಕ ಮಾಧ್ಯಮಗಳಿಂದ ಈ ‘ವೆಬ್ ಸಿರೀಸ’ಗೆ ವಿರೋಧ ವ್ಯಕ್ತವಾಗುತ್ತಿದೆ. ಅಂಜುಮ ಶಹಜಾದರವರು ಈ ಮಾಲಿಕೆಯ ನಿರ್ದೇಶನ ಮಾಡಿದ್ದಾರೆ.
हिंदुओं के खिलाफ भड़का रही है ये पाकिस्तानी सीरीज, लोगों ने लिया आड़े हाथ#ZeeHindustanDigital https://t.co/l4PaLXYRSK
— ZEE HINDUSTAN (@ZeeHindustan_) December 11, 2022
ಈ ವೆಬ್ ಸಿರೀಸನ್ನು ನವೆಂಬರ್ ೨೬ರಂದು ಪಾಕಿಸ್ತಾನದಲ್ಲಿ ಪ್ರದರ್ಶಿಸಲಾಯಿತು. ಈ ಮಾಲಿಕೆಯು ‘ಯು ಟ್ಯೂಬ್’ನಲ್ಲಿಯೂ ದೊರೆಯುತ್ತದೆ. ಈ ಮಾಲಿಕೆಯಲ್ಲಿ ಭಾರತದ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಸಿಖ್ಖರ ವಿರುದ್ಧ ನಡೆದ ದಂಗೆ, ೨೦೦೨ರಲ್ಲಿ ನಡೆದ ಗುಜರಾತಿನ ದಂಗೆಗಳು, ಹಾಗೆಯೇ ಬಾಬರಿ ನೆಲಕಚ್ಚಿಸಿರುವ ಘಟನೆಗಳ ಚಿತ್ರೀಕರಣವಿದೆ. ಇದರಲ್ಲಿ ಹಿಂದೂಗಳ ಸಂತರನ್ನು ಅಪರಾಧಿಗಳ ರೂಪದಲ್ಲಿ ತೋರಿಸಲಾಗಿದೆ, ಹಾಗೆಯೇ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ದಿವಂಗತ ಹೇಮಂತ ಕರಕರೆ, ಗೌರಿ ಲಂಕೇಶ, ಖಲಿಸ್ತಾನವಾದಿ ದೀಪ ಸಿದ್ಧು ಮುಂತಾದವರನ್ನೂ ಇದರಲ್ಲಿ ತೋರಿಸಲಾಗಿದೆ.
* ಪಾಕಿಸ್ತಾನವು ಭಾರತದ ಪ್ರತಿಮೆಯನ್ನು ಎಷ್ಟೇ ಮಲೀನಗೊಳಿಸಲು ಪ್ರಯತ್ನಿಸಿದರೂ ಜಗತ್ತಿಗೆ ಪಾಕಿಸ್ತಾನದ ಮಾನಸಿಕತೆಯು ತಿಳಿದಿರುವುದರಿಂದ ಭಾರತದ ಮೇಲೆ ಇದರ ಯಾವುದೇ ಪರಿಣಾಮವಾಗುವುದಿಲ್ಲ, ಇದೂ ಕೂಡ ಇಷ್ಟೇ ಆಗಿದೆ !- ಸಂಪಾದಕರು |