ಆಯುರ್ವೇದದ ದೃಷ್ಟಿಯಿಂದ ‘ವೈರಲ್ ಫಿವರ್’ (ವೈರಾಣುಜನ್ಯ ಜ್ವರ) !

೧. ‘ವೈರಲ್ ಫಿವರ್ (ಜ್ವರ)’ ಬರುವುದರ ಹಿಂದಿನ ಕಾರಣಗಳು ಮತ್ತು ಅದಕ್ಕೆ ಮಾಡಬೇಕಾದ ಆಯುರ್ವೇದೀಯ ಉಪಾಯಗಳು !

೧ ಅ. ಅಯೋಗ್ಯ ಆಹಾರ-ವಿಹಾರಗಳಿಂದ ಶರೀರ ‘ವೈರಲ್ ಜ್ವರ’ಕ್ಕೆ ತುತ್ತಾಗುವುದು : ಈಗ ನಾವು ಆಯುರ್ವೇದದ ದೃಷ್ಟಿಯಿಂದ ‘ವೈರಲ್ ಜ್ವರದ ವಿಚಾರ ಮಾಡೋಣ. ಎಲ್ಲ ಸೋಂಕು ರೋಗಗಳು ಶ್ವಾಸ, ಸ್ಪರ್ಶ, ಏಕಶಯ್ಯಾ (ಒಂದೇ ಹಾಸಿಗೆಯಲ್ಲಿ ಮಲಗಿಕೊಳ್ಳುವುದು), ಏಕವಸ್ತ್ರ (ಪರಸ್ಪರರ ಬಟ್ಟೆಗಳನ್ನು ಧರಿಸುವುದು), ಏಕ ಪಾದತ್ರಾಣ (ಪರಸ್ಪರರ ಚಪ್ಪಲಿಗಳನ್ನು ಹಾಕಿಕೊಳ್ಳುವುದು), ಸಹಭೋಜನ (ಒಂದೇ ತಟ್ಟೆಯಲ್ಲಿ ಪರಸ್ಪರರ ಎಂಜಲನ್ನವನ್ನು ತಿನ್ನುವುದು ಅಥವಾ ಎಂಜಲು ಪೇಯವನ್ನು ಕುಡಿಯುವುದು) ಇವುಗಳಿಂದಲೇ ಹರಡುತ್ತದೆ. ಆದ್ದರಿಂದ ಅವುಗಳನ್ನು ತ್ಯಜಿಸಬೇಕು. ಇದನ್ನು ಆಯುರ್ವೇದ ಮಾತ್ರವಲ್ಲ, ಆಧುನಿಕ ವೈದ್ಯಕೀಯ ಶಾಸ್ತ್ರವೂ ಹೇಳುತ್ತದೆ. ‘ವೈರಲ್’ (viral) ಜ್ವರಕ್ಕೆ ಇದು ಉತ್ತಮ ಪ್ರತಿಬಂಧಾತ್ಮಕ ಉಪಾಯವಾಗಿದೆ. ‘ವೈರಲ್ ಜ್ವರ ಸಾಮಾನ್ಯವಾಗಿ ಋತುಸಂಧಿಯ ಕಾಲದಲ್ಲಿ ತಲೆ ಎತ್ತುತ್ತದೆ; ಆದ್ದರಿಂದ ಈ ಕಾಲದಲ್ಲಿ ‘ಋತು ಬದಲಾವಣೆ’, ಆಯಿತು ಎಂದೆನಿಸಿದರೂ ಅನ್ನಾಹಾರಗಳ ಬದಲಾವಣೆಯನ್ನು ನಿಧಾನವಾಗಿ ಮಾಡಬೇಕು, ಉದಾ. ಚಳಿ ಮುಗಿದು ಬೇಸಿಗೆ ಆರಂಭವಾಗುವಾಗ ಹಿಂದಿನ ಋತುವಿನಲ್ಲಿದ್ದ ಬಿಸಿನೀರಿನ ಸ್ನಾನವನ್ನು ನಿಲ್ಲಿಸಿ ತಕ್ಷಣ ತಣ್ಣೀರಿನ ಸ್ನಾನ ಮಾಡಬಾರದು. ಬೇಸಿಗೆ ಸ್ಥಿರವಾಗುವವರೆಗೆ ‘ಉಗುರುಬಿಸಿ ನೀರು’ ಈ ಮಧ್ಯದ ಮಾರ್ಗವನ್ನು ಅವಲಂಬಿಸಬೇಕು.

ವೈದ್ಯೆ ಸುಚಿತ್ರಾ ಕುಲಕರ್ಣಿ

ನಿಜವಾಗಿ ನೋಡಿದರೆ ‘ವೈರಲ್ ಜ್ವರ’ಕ್ಕೆ ವೈರಾಣು ‘ನಿಮಿತ್ತ ಮಾತ್ರ.’ ಈ ವೈರಾಣು ಎಂದರೆ ಆ ಜ್ವರದ ಮುಖ್ಯ ಕಾರಣವಾಗಿಲ್ಲ, ನಾವು ಅಯೋಗ್ಯ ಆಹಾರ-ವಿಹಾರಗಳಿಂದ ನಮ್ಮ ಶರೀರದಲ್ಲಿ ಕಾಯಿಲೆಗೆ ಅನುಕೂಲ ಮಾಡಿರುವ ವಾತಾವರಣದ ನಿರ್ಮಾಣವು ಅದರ ಮಹತ್ವದ ಕಾರಣವಾಗಿದೆ. ಹಾಗಾದರೆ ನಮ್ಮ ಶರೀರದಲ್ಲಿ ಅಂತಹ ಯಾವ ಬದಲಾವಣೆಗಳಾಗಿರುತ್ತವೆ ? ಆಯುರ್ವೇದದ ಅಭಿಪ್ರಾಯದಲ್ಲಿ ಅಗ್ನಿ ಮಂದವಾಗಿ ಪಚನ ಸರಿಯಾಗಿ ಆಗಿರುವುದಿಲ್ಲ. ಅದರಿಂದ ತಯಾರಾದ ಅರ್ಧಪಚನ ಆಹಾರರಸ (ಆಮವಿಷ) ವನ್ನು ಶರೀರ ಹಾಗೆಯೆ ಹೀರಿಕೊಂಡು ಎಲ್ಲೆಡೆ ಹರಡುತ್ತದೆ. ಆ ಆಹಾರ ರಸವು ತನ್ನ ಜೊತೆಗೆ ಜಠರದಲ್ಲಿನ ಉಷ್ಮಾವನ್ನೂ ತೆಗೆದುಕೊಂಡು ಹೋಗುತ್ತದೆ. ಅದು ಎಲ್ಲಿ ಹೋಗುತ್ತದೆಯೋ, ಅಲ್ಲಿನ ಸ್ರೋತಗಳಲ್ಲಿ ಮಾರ್ಗಾವರೋಧವನ್ನು (ಮಾರ್ಗವನ್ನು ತಡೆದು) ನಿರ್ಮಾಣ ಮಾಡಿ ಶರೀರದ ಬಾಹ್ಯ ಉಷ್ಣತೆಯನ್ನು ಹೆಚ್ಚಿಸುತ್ತದೆ.

೧ ಆ. ಜ್ವರ ಬೇಗನೇ ಕಡಿಮೆಯಾಗಲು ಉಪವಾಸ ಮಾಡುವುದು ಸರ್ವೋತ್ತಮ ಉಪಾಯ ! : ಯಾವುದೇ ಜ್ವರದಲ್ಲಿ ಪ್ರಾರಂಭದಲ್ಲಿ ಉಪವಾಸ ಅಥವಾ ಅತ್ಯಂತ ಹಗುರ ಆಹಾರವೇ ನಿಜವಾದ ಚಿಕಿತ್ಸೆಯಾಗಿದೆ ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಜ್ವರದಲ್ಲಿ ನಮಗೆ ಹಸಿವೆ ಆಗುವುದಿಲ್ಲ. ಇದರ ಅರ್ಥ ಶರೀರ ತಾನೇ ನಮಗೆ ಉಪವಾಸದ ಉಪಾಯವನ್ನು ಸೂಚಿಸುತ್ತದೆ; ಆದರೆ ಇತ್ತೀಚೆಗೆ ‘ಒಂದು ಹೊತ್ತು ಉಪವಾಸವಿರುವುದೆಂದರೆ ಮೃತ್ಯುವಿನ ಬಾಯಿಗೆ ಹೋದಂತೆ, ಎಂಬ ತಪ್ಪು ತಿಳುವಳಿಕೆ ಮೂಡಿದೆ. ಅದರಲ್ಲಿ ಎಂಟಿಬಾಯೋಟಿಕ್ ಇತ್ಯಾದಿಗಳನ್ನು ತೆಗೆದುಕೊಳ್ಳಲಿಕ್ಕಿದ್ದರೆ, ‘ಔಷಧಗಳನ್ನು ಏನಾದರೂ ತಿಂದು ನಂತರ ಸೇವಿಸಿರಿ’, ಎಂಬ ಸೂಚನೆಯೂ ಇರುತ್ತದೆ. ಮೊದಲು ಊಟ ಮಾಡಿ (ಏನಾದರೂ ತಿಂದು) ಜ್ವರ ಬರುವ ಪರಿಸ್ಥಿತಿಯನ್ನು ನಿರ್ಮಿಸುವುದು ಮತ್ತು ನಂತರ ಜ್ವರ ಕಡಿಮೆ ಮಾಡುವ ಔಷಧಿಗಳನ್ನು ಸೇವಿಸುವುದು, ಹೀಗೆ ದ್ರಾವಿಡೀ ಪ್ರಾಣಾಯಾಮವು ನಿತ್ಯ ಮತ್ತು ಎಲ್ಲ ಕಡೆಗೆ ನಡೆಯುತ್ತದೆ. ಇದರಿಂದ ಚಿಕ್ಕ ಮಕ್ಕಳ ಸ್ಥಿತಿಯಂತೂ ತುಂಬಾ ಕೆಡುತ್ತದೆ.

ಅವರಿಗೆ ಹಸಿವು ಇಲ್ಲದಿರುವುದರಿಂದ ಅವರು ಅಕಾಂಡ ತಾಂಡವ ಮಾಡಿ ನಿಸರ್ಗದ ಆಜ್ಞೆಯನ್ನು ಪಾಲಿಸಲು ಪ್ರಯತ್ನಿಸುತ್ತಾರೆ; ಆದರೆ ಅಷ್ಟೇ ಹಟದಿಂದ ಅವರ ತಾಯಿ ಅವರಿಗೆ ಅನ್ನವನ್ನು (ಊಟ ಅಥವಾ ಏನಾದರೂ ತಿನ್ನಿಸಿದರೆ ಅದು ಜೀರ್ಣವಾಗದೇ ಮಕ್ಕಳ ಶರೀರದಲ್ಲಿ ಆಮರೂಪಿ ವಿಷ ನಿರ್ಮಾಣವಾಗುತ್ತದೆ.) ತಿನ್ನಿಸುತ್ತಿರುತ್ತಾರೆ ಮತ್ತು ಅವರಿಗೆ ನಿನಗೆ ‘ಜ್ವರದ ಔಷಧದ ಮೊದಲು ಏನಾದರೂ ತಿನ್ನಲು ಬೇಡವೇ ?’, ಹೀಗೆ ಪ್ರಶ್ನೆಯನ್ನೂ ಕೇಳುತ್ತಾರೆ.

೧ ಇ. ಶರೀರ ನೀಡುವ ಸೂಚನೆಗಳನ್ನು ಗಮನಿಸಿ ಶರೀರದಲ್ಲಿನ ಪ್ರತಿಕಾರ ವ್ಯವಸ್ಥೆಗೆ ಸಹಾಯ ಮಾಡಬೇಕು ! : ಜ್ವರ ೧೦೨ ಫ್ಯಾರಾನಿಟ್‌ಕ್ಕಿಂತ ಕಡಿಮೆಯಿದ್ದರೆ, ಶರೀರದಲ್ಲಿನ ಪ್ರತಿಕಾರವ್ಯವಸ್ಥೆಗೆ ಅದರ ಕಾರ್ಯವನ್ನು ಮಾಡಲು ಬಿಡಬೇಕು. ಆಗ ಉಪವಾಸ, ಬಿಸಿನೀರು, ವಿಶ್ರಾಂತಿ ಈ ಉಪಾಯಗಳನ್ನು ಮಾಡುವ ಸೂಚನೆಯನ್ನು ಶರೀರ ಕೊಡುತ್ತಿರುತ್ತದೆ. ಅದನ್ನು ತಿಳಿದುಕೊಂಡು, ಅದರ ಪಾಲನೆಯನ್ನು ಮಾಡಿ, ಅದಕ್ಕೆ ಸಹಾಯ ಮಾಡಬೇಕು. ವೈದ್ಯರಿಂದ ಔಷಧಗಳನ್ನು ತೆಗೆದುಕೊಳ್ಳಬೇಕು. (ಆಯುರ್ವೇದದಲ್ಲಿ ಇದಕ್ಕೆ ಬಹಳಷ್ಟು ಔಷಧಗಳಿವೆ. ಪ್ರತಿಯೊಬ್ಬ ವ್ಯಕ್ತಿಯ ಅವಶ್ಯಕತೆಗನುಸಾರ ಔಷಧವನ್ನು ಆರಿಸಿಕೊಳ್ಳಬಹುದು.) ಆಂಟಿಬಯೋಟಿಕ್ ಉಪಯೋಗವನ್ನು ಸಾಧ್ಯವಿದ್ದಷ್ಟು ತಪ್ಪಿಸಬೇಕು. (ಶಾಲೆಯ ಮಕ್ಕಳಲ್ಲಿ ಕಂಡು ಬರುವ ಬಹಳಷ್ಟು ಉದ್ರೇಕ ಹಾಗೂ ಅಸ್ವಸ್ಥತೆಯು ಈ ಎಂಟಿಬಯೋಟಿಕ್‌ಗಳ ಅತೀ ಉಪಯೋಗದ ದುಷ್ಪರಿಣಾಮವಿರಬಹುದು’, ಎಂದು ಕೆಲವು ಮಕ್ಕಳರೋಗತಜ್ಞರು ಹೇಳುತ್ತಾರೆ.)

೨. ಜ್ವರ ಬಂದ ಮೇಲೆ ಮೊದಲಿನ ೩ ದಿನ ತಪಾಸಣೆಗಳನ್ನು ಮಾಡಲು ಅವಸರಪಡಬಾರದು !

ಕಹಿ ಔಷಧ ತೆಗೆದುಕೊಳ್ಳುವುದು, ಹೊದಿಕೆಯನ್ನು ಹೊದ್ದುಕೊಂಡು ಮಲಗಿರುವುದು ಹಾಗೂ ಔಷಧಿ ಸಿದ್ಧ ಗಂಜಿ (ಶಾಸ್ತ್ರದಲ್ಲಿ ಇದಕ್ಕೆ ‘ಯವಾಗೂ’ ಎನ್ನುತ್ತಾರೆ) ಇವುಗಳನ್ನು ವೈದ್ಯರ ಸಲಹೆಯಿಂದ ಯೋಗ್ಯ ರೀತಿಯಲ್ಲಿ ಉಪಯೋಗಿಸಬೇಕು. ಹಗಲಿನಲ್ಲಿ ಮಲಗಬಾರದು (ನಿದ್ದೆಯನ್ನು ಮಾಡಬಾರದು) ಹಾಗೂ ಸ್ನಾನ ಮಾಡಬಾರದು. ‘ಜ್ವರ ಇರುವಾಗ ವಿಷ್ಣುಸಹಸ್ರನಾಮದ ಪಠಣವನ್ನು ಮಾಡಬೇಕು ಅಥವಾ ಕೇಳಬೇಕು’, ಎಂದು ಚರಕಸಂಹಿತೆಯಲ್ಲಿ ಹೇಳಲಾಗಿದೆ. ಹಾಗೆ ಮಾಡಿದರೆ ರೋಗಿಗೆ ಲಾಭವಾಗುತ್ತದೆ. ಗಂಭೀರ ಲಕ್ಷಣಗಳು (ಶ್ವಾಸ ತೆಗೆದುಕೊಳ್ಳಲು ಕಷ್ಟವಾಗುವುದು, ಜ್ವರ ೧೦೨ ಕ್ಕಿಂತ ಹೆಚ್ಚಾಗುವುದು, ಗ್ಲಾನಿ ಬರುವುದು, ಬಡಬಡಿಸುವುದು, ಚಳಿಯಾಗಿ ಜ್ವರ ಬರುವುದು) ಇಲ್ಲದಿದ್ದರೆ ಮೊದಲ ೩ ದಿನಗಳಲ್ಲಿ ತಪಾಸಣೆಗಳನ್ನು (ಉದಾ. ರಕ್ತ ತಪಾಸಣೆ) ಮಾಡಲು ಅವಸರ ಪಡಬಾರದು. ಅವುಗಳಲ್ಲಿ ಬದಲಾವಣೆ ಆಗಿರುತ್ತದೆ, ಎಂದೇನಿಲ್ಲ.

೩. ಜ್ವರ ಸಂಪೂರ್ಣ ಕಡಿಮೆ ಆಗುವವರೆಗೆ ರೋಗಿಗೆ ಒಳ್ಳೆಯ ರೀತಿಯಲ್ಲಿ ವಿಶ್ರಾಂತಿ ಕೊಡುವುದು ಆವಶ್ಯಕವಾಗಿದೆ !

‘ಜ್ವರ ಕಡಿಮೆಯಾದರೂ, ನಿತ್ರಾಣ ಕಡಿಮೆಯಾಗಿ ಆರೋಗ್ಯಕ್ಕೆ ಹಿಂದಿನ ಬಲ ಪ್ರಾಪ್ತವಾಗುವ ವರೆಗೆ ಸ್ನಾನ, ಆಹಾರ ಸೇವನೆ, ದಿನದಲ್ಲಿ ಮಲಗುವುದು (ನಿದ್ದೆ ಮಾಡುವುದು), ಮೈಥುನ, ವ್ಯಾಯಾಮ ಹಾಗೂ ಶ್ರಮ ಇವುಗಳನ್ನು ವರ್ಜಿಸಬೇಕು’, ಎಂದು ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ, ಸದ್ಯ ಶಾಲೆ ಅಥವಾ ಗೃಹಪಾಠ (ಟೂಶನ್) ತಪ್ಪಿದರೆ ಜಗತ್ತು ಮುಳುಗುವುದೇನೋ’, ಎನ್ನುವ ಹಾಗೆ ಚಿಕ್ಕ ಮಕ್ಕಳಿಗೂ ಆವಶ್ಯಕವಿರುವ ವಿಶ್ರಾಂತಿಯನ್ನು ಕೊಡುವುದಿಲ್ಲ, ಇದು ದುರ್ದೈವದ ಸಂಗತಿ ಆಗಿದೆ. ಇದರಿಂದ ಅವರು ಪುನಃ ಪುನಃ ಕಾಯಿಲೆಗೊಳಗಾಗುತ್ತಾರೆ; ಏಕೆಂದರೆ ಶರೀರ ಯಾವಾಗಲೂ ದುರ್ಬಲವಾಗಿಯೇ ಇರುತ್ತದೆ.

ಜ್ವರಕ್ಕೆ ಆಯುರ್ವೇದೀಯ ಉಪಚಾರ ಮಾಡಿದ ವ್ಯಕ್ತಿ ಪುನಃ ಬೇರೆ ಯಾವುದೇ ಔಷಧದ ವಿಚಾರ ಮಾಡುವುದಿಲ್ಲ; ಏಕೆಂದರೆ ‘ಆಯುರ್ವೇದೀಯ ಔಷಧಗಳಿಂದ ಹಸಿವು, ಶರೀರ ಹಗುರಾಗುವುದು, ಪ್ರಸನ್ನತೆ ಹಾಗೂ ಶಕ್ತಿ ಶೀಘ್ರದಲ್ಲಿ ಪ್ರಾಪ್ತವಾಗುತ್ತದೆ’. ಇದು ಅನೇಕ ರೋಗಿಗಳ ಅನುಭವವಾಗಿದೆ.

– ವೈದ್ಯೆ ಸುಚಿತ್ರಾ ಕುಲಕರ್ಣಿ (ಆಧಾರ : ಸಾಪ್ತಾಹಿಕ ‘ವಿವೇಕ’)

ಜ್ವರದ ಲಕ್ಷಣಗಳು

ಒಂದು ಋತು ಮುಗಿದು ಇನ್ನೊಂದು ಋತು ಆರಂಭವಾಗುವ ಋತುಸಂಧಿಕಾಲದಲ್ಲಿ ಈ ವೈರಾಣುಜನ್ಯ ಜ್ವರದ ಸೋಂಕು ಬರುತ್ತದೆ. (ಭಾರತದಲ್ಲಿನ ನಗರಗಳಲ್ಲಿ ಜನಸಂಖ್ಯೆ ಬಹಳ ಹೆಚ್ಚಿರುವುದರಿಂದ ಹಾಗೂ ಪ್ರತಿಯೊಬ್ಬರಿಗೂ ಸ್ಥಳ ತುಂಬಾ ಕಡಿಮೆ ಸಿಗುವುದರಿಂದ ಈ ವೈರಾಣುಗಳು ಬಹಳ ರಭಸದಿಂದ ಹರಡುತ್ತವೆ.) ಇದರ ಲಕ್ಷಣಗಳು ಮೂಗು ಅಥವಾ ಗಂಟಲಿನಲ್ಲಿ ೧ -೨ ದಿನಗಳ ಮೊದಲು ಕಾಣಿಸುತ್ತವೆ. ಅನಂತರ ಜ್ವರ ಬರುತ್ತದೆ. ಸುಮಾರು ೧೦೧ ರಿಂದ ೧೦೪ ಫ್ಯಾರಾನಿಟ್ ಈ ಪ್ರಮಾಣದಲ್ಲಿ ಜ್ವರ ಇರುತ್ತದೆ. ಅದರ ಜೊತೆಗೆ ಮೈನೋವು, ಗಂಟಲು ನೋವು, ಗಂಟಲು ತುರಿಸುವುದು, ತಲೆನೋವು, ಮೂಗಿನಿಂದ ನೀರಿಳಿಯುವುದು, ಮೂಗು ಕಟ್ಟುವುದು, ಕೆಮ್ಮು, ಹಸಿವು ಕಡಿಮೆಯಾಗುವುದು, ನಿತ್ರಾಣ, ಕೆಲವೊಮ್ಮೆ ಹೊಟ್ಟೆನೋವು, ಕೆಲವೊಮ್ಮೆ ಭೇದಿ, ವಾಕರಿಕೆ ಬಂದ ಹಾಗೆ ಆಗುವುದು, ಕೆಲವೊಮ್ಮೆ ವಾಂತಿಯಾಗುವುದು ಇಂತಹ ಲಕ್ಷಣಗಳು ಕಾಣಿಸುತ್ತವೆ. ಸಾಮಾನ್ಯವಾಗಿ ಜ್ವರ ೧ ರಿಂದ ೪ ದಿನ ಇರುತ್ತದೆ. ಕೆಲವೊಮ್ಮೆ ೭ ದಿನಗಳ ವರೆಗೂ ಇರುತ್ತದೆ; ಆದರೆ ಇತರ ಲಕ್ಷಣಗಳು ಕಡಿಮೆಯಾಗಲು ೧೦ ರಿಂದ ೧೨ ದಿನಗಳು ತಗಲುತ್ತವೆ.

– ವೈದ್ಯೆ ಸುಚಿತ್ರಾ ಕುಲಕರ್ಣಿ

ಈ ಲೇಖನವು ಕೇವಲ ಸಾಮಾನ್ಯ ಮಾಹಿತಿಗಾಗಿ ಮಾತ್ರ ಇದೆ. ಹೆಚ್ಚಿನ ವಿವರಗಳಿಗಾಗಿ ತಾವು ತಮ್ಮ ವೈದ್ಯರನ್ನು ಮತ್ತು ಆಧುನಿಕ ವೈದ್ಯರನ್ನು (ಡಾಕ್ಟರರನ್ನು) ಸಂಪರ್ಕಿಸಿ ಔಷಧಗಳನ್ನು ತೆಗೆದುಕೊಳ್ಳಬೇಕು. – ಸಂಕಲನಕಾರರು