ಕತಾರನಿಂದ ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯ ಮೂಲಕ ಇಸ್ಲಾಂನ ಪ್ರಚಾರ !

ದೋಹ (ಕತಾರ) – ಇಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವ ಕಪ್ ಸ್ಪರ್ಧೆ ಪಂದ್ಯವನ್ನು ನೋಡಲು ಜಗತ್ತಿನಾದ್ಯಂತ ಸಾವಿರಾರು ಫುಟ್ಬಾಲ್ ಪ್ರಿಯರು ಬಂದಿದ್ದಾರೆ. ಅವರನ್ನು ಇಸ್ಲಾಂ ವಿಷಯದ ಬಗ್ಗೆ ಮಾಹಿತಿ ನೀಡುವ ಹಾಗೂ ಇಸ್ಲಾಂನ ಪ್ರಸಾರ ಮಾಡುವ ಪ್ರಯತ್ನ ಕತಾರನಿಂದ ಮಾಡಲಾಗುತ್ತಿದೆ.

೧. ಫುಟ್ಬಾಲ್ ಪ್ರೇಮಿ ಪಂದ್ಯ ನೋಡುವುದರ ಜೊತೆಗೆ ಇಲ್ಲಿ ಪ್ರವಾಸಿಗರೂ ಸಹ ಆನಂದ ಪಡೆಯುತ್ತಿದ್ದಾರೆ. ದೋಹಾದಲ್ಲಿ ಕಟ್ಟಲಾಗಿರುವ `ಕತಾರ ಕಲ್ಚರ್ ವಿಲೇಜ್’ ಈ ಮಸೀದಿ ಆಕರ್ಷಣೆಯ ಕೇಂದ್ರವಾಗಿದೆ. ಈ ಮಸೀದಿಯಲ್ಲಿ ಅನೇಕ ಭಾಷೆಗಳು ಮಾತನಾಡುವ ಪುರುಷರು ಮತ್ತು ಮಹಿಳೆಯರನ್ನು ನೇಮಿಸಲಾಗಿದೆ. ಈ ಜನರು ಮಸೀದಿಗೆ ಬರುವ ಜನರಿಗೆ ಇಸ್ಲಾಂನ ಮಾಹಿತಿ ನೀಡುತ್ತಾರೆ. ಅಷ್ಟೇ ಅಲ್ಲದೆ ಇಲ್ಲಿ ಬರುವ ಪ್ರವಾಸಿಗರಿಗೆ `ಎಲೆಕ್ಟ್ರಾನಿಕ್ ಬೋರ್ಡ್’ ನೋಡಲು ಹೇಳಲಾಗುತ್ತದೆ. `ಎಲೆಕ್ಟ್ರಾನಿಕ್ ಬೋರ್ಡಿ’ನ ಮೇಲೆ ೩೦ ಕೂ ಹೆಚ್ಚಿನ ಭಾಷೆಯಲ್ಲಿ ಇಸ್ಲಾಂನ ವಿಷಯದ ಬಗ್ಗೆ ಮಾಹಿತಿ ಉಪಲಬ್ಧವಿದೆ ಹಾಗೂ ವಿವಿಧ ಭಾಷೆಯಲ್ಲಿ ಇಸ್ಲಾಂನ ಪರಿಚಯ ಮಾಡಿಕೊಡುವ ಪುಸ್ತಕಗಳು ಇಡಲಾಗಿದ್ದು, ಅವುಗಳನ್ನು ಪ್ರವಾಸಿಗರಿಗೆ ಹಂಚಲಾಗುತ್ತಿದೆ.

೨. ಕತಾರಿನ ಆಕಾಫ್ ಮತ್ತು ಇಸ್ಲಾಮಿ ವ್ಯವಹಾರ ಸಚಿವಾಲಯದಿಂದ ವಿಶ್ವಕಪ್ ಸ್ಟೇಡಿಯಂನ ಹೊರಗೆ ಬಂದು ಮಂಟಪ ಕಟ್ಟಲಾಗಿದ್ದು ಅಲ್ಲಿ ಪ್ರವಾಸಿಗರಿಗೆ ಇಸ್ಲಾಂ ಮತ್ತು ಅದನ್ನು ಕಲಿಯುವುದರ ಬಗ್ಗೆ ಪ್ರಬೋಧನೆ ಮಾಡಲಾಗುತ್ತದೆ.

೩. ಕತಾರಗೆ ಬರುವ ಜನರ ಮೇಲೆ ಇಸ್ಲಾಂನ ಪ್ರಭಾವ ಬೀರಬೇಕು, ಅದಕ್ಕಾಗಿ ರಸ್ತೆಯ ಬದಿಯಲ್ಲಿ ಕಟ್ಟಿರುವ ಗೋಡೆಗಳ ಮೇಲೆ ಮಹಮ್ಮದ್ ಪೈಗಂಬರ್ ಇವರ ಗಾದೆಗಳು, ಕಾರ್ಯ ಮತ್ತು ಅವರ ರೂಢಿಗಳನ್ನು ಬರೆಯಲಾಗಿದೆ.

ಸಂಪಾದಕೀಯ ನಿಲುವು

  • ಆಟದಲ್ಲೂ ಕೂಡ ಧರ್ಮ ಸೇರಿಸುವ ಇಸ್ಲಾಮಿ ದೇಶ !
  • ಇದರ ಬಗ್ಗೆ ಭಾರತದಲ್ಲಿನ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಮಾತನಾಡುವರೇ !