ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ಮುಂದಿನ ಎರಡೂ ಉಪಚಾರಗಳನ್ನು ಕಡಿಮೆಪಕ್ಷ ೩ ತಿಂಗಳಾದರೂ ಮಾಡಬೇಕು.
೧. ನಾಲ್ಕು ಚಮಚದಷ್ಟು ಬ್ರಾಹ್ಮಿ ಚೂರ್ಣವನ್ನು ೪ ಬಟ್ಟಲು ಕೊಬ್ಬರಿ ಎಣ್ಣೆಯಲ್ಲಿ ಸಾಧಾರಣ ೧ ನಿಮಿಷ ಕುದಿಸಬೇಕು. ನಂತರ ಆ ಎಣ್ಣೆಯನ್ನು ಸೋಸಿಕೊಳ್ಳಬೇಕು. ಎಣ್ಣೆ ತಣ್ಣಗಾದ ನಂತರ ಬಾಟಲಿಯಲ್ಲಿ ತುಂಬಿ ಅದರಲ್ಲಿ ೧೦ ಗ್ರಾಮ್ ಭೀಮಸೇನಿ ಕರ್ಪೂರವನ್ನು ಪುಡಿ ಮಾಡಿ ಹಾಕಬೇಕು ಮತ್ತು ಬಾಟಲಿಯ ಮುಚ್ಚಳವನ್ನು ಹಾಕಿಡಬೇಕು. ಪ್ರತಿದಿನ ರಾತ್ರಿ ಮಲಗುವಾಗ ಅದರಲ್ಲಿನ ೧-೨ ಚಮಚದಷ್ಟು ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು ಮಲಗಬೇಕು.
೨. ರಾತ್ರಿ ಮಲಗುವಾಗ ೧ ಚಮಚ ಬ್ರಾಹ್ಮಿ ಚೂರ್ಣವನ್ನು ಅರ್ಧ ಬಟ್ಟಲು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬೇಕು.
| ೧. ಅಳತೆಗಾಗಿ ಚಹಾದ ಚಮಚವನ್ನು ಉಪಯೋಗಿಸಬೇಕು. ೨. ಇಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಲಾಗಿದೆ. ೭ ದಿನಗಳಲ್ಲಿ ಗುಣಮುಖವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು. ೩. ಸನಾತನದ ಬ್ರಾಹ್ಮಿ ಚೂರ್ಣ ಮತ್ತು ಭೀಮಸೇನಿ ಕರ್ಪೂರ ಲಭ್ಯವಿದೆ. |
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೮.೨೦೨೨)
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಮನುಷ್ಯ, ಮನಸ್ಸು ಹಾಗೂ ಆಹಾರ
ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?