ಭಾರತೀಯರಲ್ಲಿಯ ರಾಷ್ಟ್ರಪೇಮದ ಅಭಾವ

ಚೀನಾದಿಂದ ಆಮದು ಮಾಡಿದಂತಹ ವಸ್ತುಗಳು ತುಂಬ ಹಿಂದಿನ ಕಾಲದಿಂದಲೇ ಭಾರತದಲ್ಲಿ ತಯಾರು ಮಾಡಲಾಗುತ್ತಿದೆ ಆದರೂ ಭಾರತೀಯರು ಸ್ವದೇಶಿ ವಸ್ತುವನ್ನು ಖರೀದಿಸದೆ ಚೀನಾದವರ ವಸ್ತುಗಳಿಗೆ ಪ್ರಾಧಾನ್ಯ ನೀಡುತ್ತಾರೆ. ಇದರ ಕಾರಣವೆಂದರೆ ಭಾರತೀಯರಲ್ಲಿ ರಾಷ್ಟ್ರಪ್ರೇಮದ ಅಭಾವ, ಎಂದು ಹೇಳಬೇಕಾಗುತ್ತದೆ. ಅಮೇರಿಕವು ಜಪಾನನ ಪೇಟೆಯಲ್ಲಿ ಕಡಿಮೆದರದಲ್ಲಿ ಎಲೆಕ್ಟ್ರಾನಿಕ್ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡುವ ಪ್ರಯತ್ನ ಮಾಡಿತು ಇದರಿಂದ ಅಮೇರಿಕಗೆ ಜಪಾನಿನ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವುದಿತ್ತು ಆದರೆ ದೇಶದ ಬಗ್ಗೆ ಸ್ವಾಭಿಮಾನವಿದ್ದ ಜಪಾನಿನ ಜನತೆಯು ಅಮೇರಿಕದ ವಸ್ತುಗಳ ಕಡೆಗೆ ತಿರಗಿಯೂ ನೋಡಲಿಲ್ಲ ಅವರು ಅದರ ಮೇಲೆ ಒಂದು ರೀತಿಯಲ್ಲಿ ಬಹಿಷ್ಕಾರವನ್ನೇ ಹಾಕಿದರು. -ಶ್ರೀ.ಸಚಿನಕೌಲಕರ,ಮುಂಬೈ