ಪೂರ್ವ ಅಥವಾ ದಕ್ಷಿಣ ಈ ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಬೇಕು ! (ನಾಲ್ಕು ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಿದರೆ ಆಗುವ ಪರಿಣಾಮ )

ವೈದ್ಯ ಮೇಘರಾಜ ಪರಾಡಕರ್

ಪ್ರಾಕ್ಶಿರಃ ಶಯನೇ ವಿದ್ಯಾತ್ ಧನಮ್ ಆಯುಶ್ಚ ದಕ್ಷಿಣೇ |
ಪಶ್ಚಿಮೇ ಪ್ರಬಲಾ ಚಿನ್ತಾ ಹಾನಿಮೃತ್ಯುರಥೋತ್ತರೇ ||
– ಆಚಾರಮಯೂಖ

ಅರ್ಥ : ‘ಪೂರ್ವದಿಕ್ಕಿಗೆ ತಲೆ ಇಟ್ಟು ಮಲಗಿದರೆ ಧನ, ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಆಯುಷ್ಯ ಪ್ರಾಪ್ತಿಯಾಗುತ್ತದೆ. ಪಶ್ಚಿಮ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಚಿಂತೆ ಹೆಚ್ಚುತ್ತದೆ, ಉತ್ತರದಿಕ್ಕಿಗೆ ತಲೆ ಇಟ್ಟು ಮಲಗಿದರೆ ಹಾನಿಯಾಗುತ್ತದೆ ಅಥವಾ ಮೃತ್ಯುವನ್ನು ಬರಮಾಡಿಕೊಳ್ಳುತ್ತೇವೆ.
ತಾತ್ಪರ್ಯ : ಪಶ್ಚಿಮ ಅಥವಾ ಉತ್ತರ ಈ ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಬಾರದು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೧೧.೨೦೨೨)