೧. ಚಂದ್ರದ ವೇಧಕಾಲ
೮.೧೧.೨೦೨೨ ಮಂಗಳವಾರದಂದು ಚಂದ್ರಗ್ರಹಣ ಇರಲಿದೆ. ಈ ದಿನದಂದು ವೇಧಕಾಲದಲ್ಲಿ ಅಂದರೆ ಸೂರ್ಯೋದಯದಿಂದ ಸಾಯಂಕಾಲ ೬.೧೯ ಗಂಟೆಯವರೆಗೆ ಅನ್ನಗ್ರಹಣ ನಿಷಿದ್ಧವಾಗಿದೆ. ಚಿಕ್ಕ ಮಕ್ಕಳು, ಅಶಕ್ತರು, ರೋಗಿಗಳು, ಮತ್ತು ಗರ್ಭಿಣಿಯರು ಈ ದಿನದಂದು ಬೆಳಗ್ಗೆ ೧೧ ಗಂಟೆಯಿಂದ ಗ್ರಹಣದ ವೇಧಕಾಲ ಪಾಲಿಸಬೇಕೆಂದು ಧರ್ಮಶಾಸ್ತ್ರ ಹೇಳುತ್ತದೆ.
೨. ಆಯುರ್ವೇದದ ಪ್ರಕಾರ ಮಂಬರುವ ಗ್ರಹಣ ಕಾಲದಲ್ಲಿ ಯಾವಾಗ ಊಟ ಮಾಡಬೇಕು ?
ಆದ್ದರಿಂದ ಗ್ರಹಣದ ದಿನದಂದು ರಾತ್ರಿಯ ೮ ರಿಂದ ೮.೩೦ ರ ವರೆಗೆ ಊಟ ಮಾಡಬಹುದು. ಆದ್ದರಿಂದ ಸುಮಾರು ೨೪ ಗಂಟೆಗಳ ಉಪವಾಸ ಆಗುವುದು.
ಬೆಳಗ್ಗೆ ೧೧ ಗಂಟೆಯಿಂದ ವೇಧಕಾಲ ಪಾಲಿಸುವವರು ಗ್ರಹಣದ ದಿನದಂದು ಬೆಳಗ್ಗೆ ಚಹಾ ಅಥವಾ ಉಪಾಹಾರ ಸೇವಿಸದೆ ೧೧ ಗಂಟೆಯ ಮೊದಲು ನೇರ ಊಟ ಮಾಡಬೇಕು.
೩. ೨೪ ಗಂಟೆಗಳ ಉಪವಾಸ ಮಾಡುವುದರಿಂದ ಆಗುವ ಲಾಭ
ಮನುಷ್ಯನಿಗೆ ಅನ್ನದ (ಆಹಾರದ) ಬಹಳ ಅವಶ್ಯಕತೆ ಇರುತ್ತದೆ, ಇದು ಎಲ್ಲರಿಗೂ ತಿಳಿದೇ ಇದೆ. ಆದ್ದರಿಂದ ಋಷಿಮುನಿಗಳು ಗ್ರಹಣದ ಸಂಬಂಧದಲ್ಲಿ ಇಷ್ಟೊಂದು ಕಠಿಣ ನಿಯಮ ಏಕೆ ಹಾಕಿಕೊಟ್ಟಿದ್ದಾರೆ ? ಈ ರೀತಿಯ ನಿಯಮ ಮಾಡುವಾಗ, ‘ಮನುಷ್ಯನಿಗೆ ಗ್ರಹಣ ಕಾಲದಲ್ಲಿ ಹಸಿವೆ ಆದರೆ, ಆಗ ಅವನಿಗೆ ಏನಾದರೂ ತಿನ್ನಲು ಸವಲತ್ತು ನೀಡಬೇಕೇ’ ಎಂದು ಧರ್ಮಶಾಸ್ತ್ರಕಾರರಿಗೆ ಏಕೆ ಅನಿಸಲಿಲ್ಲ? ಅವರು ಮನುಕುಲವನ್ನು ಹಸಿವಿನಿಂದ ಇರುವಷ್ಟು ಕಠೋರ ಏಕೆ ಆದರೋ ಎಂಬ ಪ್ರಶ್ನೆ ಉದ್ಭವಿಸಬಹುದು. ಮುಂದೆ ನೀಡಿರುವ ಉಪವಾಸದ ಲಾಭ ತಿಳಿದುಕೊಂಡು ಒಮ್ಮೆ ಸ್ವತಃ ಉಪವಾಸ ಮಾಡಿ ಅದನ್ನು ಅನುಭವಿಸಿದ ನಂತರ ಮಾತ್ರ ನಮಗೆ ಋಷಿಮುನಿಗಳ ಕುರಿತು ಮತ್ತೆ ಮತ್ತೆ ಕೃತಜ್ಞತೆ ವ್ಯಕ್ತಪಡಿಸಬೇಕೆಂದು ಅನಿಸುತ್ತದೆ. ೨೪ ಗಂಟೆ ಉಪವಾಸ ಮಾಡುವುದರಿಂದ ಮುಂದಿನ ಲಾಭಗಳಾಗುತ್ತವೆ .
ಅ. ರಕ್ತದಲ್ಲಿರುವ ಹೆಚ್ಚುವರಿ ಸಕ್ಕರೆ ಉಪಯೋಗವಾಗುವುದರಿಂದ ಮಧುಮೇಹ ಆಗುವ ಅಪಾಯ ಕಡಿಮೆ ಆಗುತ್ತದೆ.
ಆ. ಯಕೃತ ಹಾಗೂ ಶರೀರದಲ್ಲಿ ಬೇರೆ ಕಡೆ ಸಂಗ್ರಹವಾಗಿದ್ದ ಮೇದಸ್ಸು (ಕೊಬ್ಬು) ಕಡಿಮೆಯಾಗಲು ಪ್ರಾರಂಭವಾಗುತ್ತದೆ.
ಇ. ಹೃದಯದ ರಕ್ತ ವಾಹಿನಿಗಳು ಮುಕ್ತವಾಗಲು (ತೆರೆದುಕೊಳ್ಳಲು) ಪ್ರಾರಂಭವಾಗುತ್ತದೆ. ನಿಯಮಿತವಾಗಿ ಶಾಸ್ತ್ರೀಯ ಪದ್ಧತಿಯಿಂದ ಉಪವಾಸ ಮಾಡಿದರೆ ಹೃದಯ ವಿಕಾರದ ಸಾಧ್ಯತೆ ಕಡಿಮೆ ಆಗುತ್ತದೆ.
ಈ. ಹೊಟ್ಟೆಗೆ ಹಾಗೂ ಕರುಳಿಗೆ ಸಂಪೂರ್ಣ ವಿಶ್ರಾಂತಿ ದೊರೆಯುತ್ತದೆ. ಆದ್ದರಿಂದ ಒಟ್ಟಾರೆ ಪಚನ ಸಂಸ್ಥೆಯ ಆರೋಗ್ಯ ಸುಧಾರಿಸಲು ಸಹಾಯವಾಗುತ್ತದೆ.
ಉ. ಅನ್ನ ಮಾರ್ಗದಲ್ಲಿ ಹುಣ್ಣಾಗಿದ್ದರೆ ಅದು ವಾಸಿಯಾಗಲು ಸಹಾಯವಾಗುತ್ತದೆ.
ಊ. ರೋಗ ಪ್ರತಿಕಾರಕ ಕ್ಷಮತೆ ಹೆಚ್ಚುತ್ತದೆ .
ಎ. ಶರೀರದಲ್ಲಿನ ಹಾನಿಕಾರಕ ಜಂತುಗಳು ಹಾಗೂ ಜೀರ್ಣವಾಗಿರುವ ಕೋಶಗಳು ಸಾಯುತ್ತವೆ. ಆದ್ದರಿಂದ ಜಂತುಗಳ ಸೋಂಕು (ಇನ್ಫೆಕ್ಷನ್) ಇದ್ದರೆ ಅದು ವಾಸಿಯಾಗಲು ಆರಂಭವಾಗುತ್ತದೆ.
ಏ. ಅರ್ಬುದರೋಗದ ಕೋಶಗಳು ಸಾಯುತ್ತವೆ. (ದೀರ್ಘಕಾಲದ ಉಪವಾಸವು ಅರ್ಬುದರೋಗಕ್ಕೆ ಚಿಕಿತ್ಸೆ ಆಗಬಹುದೇ ಎಂಬ ಬಗ್ಗೆ ವಿದೇಶದಲ್ಲಿ ಸಂಶೋಧನೆ ನಡೆಯುತ್ತಿದೆ)
ಐ. ದೊಡ್ಡ ಕರುಳಿನಲ್ಲಿ ಅನೇಕ ಜೀವ ಜಂತುಗಳು ಇರುತ್ತವೆ. ಇದರಲ್ಲಿ ಬಹುತೇಕ ಜೀವ ಜಂತುಗಳು ಶರೀರಕ್ಕೆ ಅನುಕೂಲಕರವಾಗಿರುತ್ತವೆ. ಉಪವಾಸದಿಂದ ಹಾನಿಕಾರಕ ಜೀವ ಜಂತುಗಳು ಸಾಯುತ್ತವೆ, ಆದರೆ ಉಪಯುಕ್ತ ಜೀವಜಂತುಗಳಲ್ಲಿ ಹೆಚ್ಚಳವಾಗುತ್ತದೆ. ಆದ್ದರಿಂದ ಆರೋಗ್ಯ ಚೆನ್ನಾಗಿರುತ್ತದೆ.
ಒ. ಶರೀರದಲ್ಲಿನ ಹಾರ್ಮೋನ್ಸ್ ನಲ್ಲಿ ಸಂತುಲನ ನಿರ್ಮಾಣವಾಗಲು ಆರಂಭವಾಗುತ್ತದೆ.
ಓ. ಮೆದುಳಿನಲ್ಲಿನ ಕೋಶಗಳಲ್ಲಿ ಹೊಸ ಸಂಬಂಧಗಳು ನಿರ್ಮಾಣವಾಗಲು ಪ್ರಾರಂಭವಾಗುತ್ತವೆ. ಆದ್ದರಿಂದ ಮೆದುಳಿನ ಕಾರ್ಯ ಸುಧಾರಿಸುತ್ತದೆ. ಇದರಿಂದ ನಿದ್ದೆ, ಸ್ಮೃತಿ ಮುಂತಾದವು ಸುಧಾರಿಸುತ್ತವೆ.
ಔ. ಶರೀರದಲ್ಲಿ ಹೊಸ ಕೋಶಗಳ ನಿರ್ಮಾಣವಾಗುತ್ತದೆ. ನಿಯಮಿತವಾಗಿ ಶಾಸ್ತ್ರೀಯ ಪದ್ಧತಿಯಿಂದ ಉಪವಾಸ ಮಾಡಿದರೆ ವೃದ್ಧಾಪ್ಯ ತಡವಾಗಿ ಬರುತ್ತದೆ.
೪. ನನಗೆ ೨೪ ಗಂಟೆಗಳ ಉಪವಾಸ ಮಾಡಲು ಸಾಧ್ಯವಾಗುವುದೇ
‘ತಿನ್ನಲಿಲ್ಲ ಎಂದರೆ ನಾನು ಬದುಕಲು ಸಾಧ್ಯವಿಲ್ಲ’, ಎಂಬ ದೊಡ್ಡ ತಪ್ಪು ತಿಳಿವಳಿಕೆ ಜಗತ್ತಿನಾದ್ಯಂತ ಮಾನವರಲ್ಲಿದೆ. ಈ ತಪ್ಪು ತಿಳಿವಳಿಕೆ ದೂರವಾದರೆ, ಯಾರೂ ಕೂಡ ಸಹಜವಾಗಿ ೨೪ ಗಂಟೆ ಅಷ್ಟೇ ಯಾಕೆ, ಅದಕ್ಕಿಂತ ಹೆಚ್ಚಿನ ಸಮಯ ಉಪವಾಸ ಮಾಡಲು ಸಹಜವಾಗಿ ಸಾಧ್ಯವಾಗುತ್ತದೆ. ಈ ತಪ್ಪು ತಿಳಿವಳಿಕೆ ದೂರ ಆಗುವುದಕ್ಕಾಗಿ ಮುಂದಿನ ತಥ್ಯಗಳನ್ನು ತಿಳಿದುಕೊಳ್ಳಬೇಕು.
ಅ. ೫೦ ಕಿಲೋ ತೂಕದ ಯಾವುದೇ ವ್ಯಕ್ತಿ ಯಾವುದೇ ರೀತಿಯ ಅನ್ನಗ್ರಹಿಸದೇ ಕೇವಲ ನೀರು ಕುಡಿದು ೫೦ ದಿನ ಸುಲಭವಾಗಿ ಬದುಕಬಹುದು. ನಮ್ಮ ಶರೀರದಲ್ಲಿ ಅಷ್ಟೊಂದು ಆಹಾರ ಸಂಗ್ರಹ ಇದೆ. ಆದರೆ ನಾವು ಗ್ರಹಣ ಕಾಲದಲ್ಲಿ ಕೇವಲ ೧ ದಿನ ಉಪವಾಸ ಮಾಡಬೇಕಿದೆ.
ಆ. ಒಂದೇ ಸಮನಾಗಿ ತಿನ್ನುವ ರೂಢಿ ಇರುವುದರಿಂದ ಶರೀರದಲ್ಲಿ ಸಂಗ್ರಹವಾಗಿರುವ ಆಹಾರ ಸಂಗ್ರಹ ಎಂದೂ ಉಪಯೋಗಿಸಲ್ಪಡುವುದಿಲ್ಲ. ಆದ್ದರಿಂದ ಬೊಜ್ಜು, ಮಧುಮೇಹ, ಹೃದಯ ವಿಕಾರದಂತಹ ರೋಗಗಳು ಹೆಚ್ಚುತ್ತಿವೆ. ಈ ಆಹಾರ ಸಂಗ್ರಹ ಉಪಯೋಗವಾಗಬೇಕು, ಅದಕ್ಕಾಗಿ ಉಪವಾಸ ಸಹಾಯಕವಾಗುತ್ತದೆ.
ಇ. ತಿನ್ನುವ ಸಮಯವಾದರೆ, ರೂಢಿಯ ಪ್ರಕಾರ ಹಸಿವೆ ಆಗುವುದು ಸಹಜ, ಆದರೆ ಆ ಸಮಯದಲ್ಲಿ ಏನನ್ನೂ ತಿನ್ನಲೇ ಇಲ್ಲ ಅಂದರೆ ಸ್ವಲ್ಪ ಸಮಯದ ನಂತರ ಆ ಹಸಿವು ಹೋಗುತ್ತದೆ. ‘ಸಮಯಕ್ಕೆ ತಕ್ಕಂತೆ ಹಸಿವಾಗುವುದು’ ಇದಕ್ಕೆ ಶರೀರದಲ್ಲಿರುವ ಹಾರ್ಮೋನ್ಸ್ ಕಾರ್ಯ ಕಾರಣವಾಗಿದೆ.
ಈ. ಮನಸ್ಸಿನ ದೃಢ ನಿಶ್ಚಯವಾಗಿದ್ದರೆ ಯಾರೂ ಕೂಡ ಅಂದರೆ ಕೃಶ ವ್ಯಕ್ತಿಯೂ ಕೂಡ ೨೪ ಗಂಟೆ ಉಪವಾಸ ಸುಲಭವಾಗಿ ಮಾಡಬಹುದು.
ಉ. ಧರ್ಮಶಾಸ್ತ್ರದಲ್ಲಿ ಏಕಾದಶಿ, ಚತುರ್ಥಿ, ಗ್ರಹಣ ಕಾಲ ಮುಂತಾದ ಸಮಯಗಳಲ್ಲಿ ಉಪವಾಸ ಹೇಳಲಾಗಿದೆ. ಸಾಮಾನ್ಯ ಮನುಷ್ಯರು ಅದನ್ನು ಪಾಲಿಸಬಹುದು, ಆದ್ದರಿಂದಲೇ ಶಾಸ್ತ್ರಕಾರರು ಅದನ್ನು ಹೇಳಿದ್ದಾರೆ. ಹಾಗೆ ಮಾಡುವುದು ಸಾಧ್ಯ ಇಲ್ಲದಿದ್ದರೆ, ಆಗ ಶಾಸ್ತ್ರಕಾರರು ಅದನ್ನು ಹೇಳುತ್ತಿರಲಿಲ್ಲ.
ಊ. ಧರ್ಮಶಾಸ್ತ್ರದಲ್ಲಿ ಚಾಂದ್ರಾಯಣ ವ್ರತ, ಕೃಚ್ಛ್ರಾ ವ್ರತ ಮುಂತಾದ ಪ್ರಾಯಶ್ಚಿತ್ತಗಳನ್ನು ಹೇಳಲಾಗಿದೆ. ಇದರಲ್ಲಿ ಅನೇಕ ದಿನಗಳವರೆಗೆ ದಿನದಲ್ಲಿ ಒಂದು ಬಾರಿ ಮತ್ತು ಅದು ಕೂಡ ಅತ್ಯಂತ ಸೀಮಿತ ಪ್ರಮಾಣದಲ್ಲಿ ಆಹಾರ ಸೇವಿಸಲು ಹೇಳಲಾಗಿದೆ. ನಾವು ಕೇವಲ ೨೪ ಗಂಟೆ ಉಪವಾಸ ಮಾಡಬೇಕಾಗಿದೆ.
ಎ. ಸಮರ್ಥ ರಾಮದಾಸ ಸ್ವಾಮಿ ಪ್ರತಿದಿನ ೧೨೦೦ ಸೂರ್ಯ ನಮಸ್ಕಾರಗಳನ್ನು ಮಾಡುತ್ತಿದ್ದರು ಮತ್ತು ಕೈ ಬೊಗಸೆಯಲ್ಲಿ ಎಷ್ಟು ಹಿಡಿಯುತ್ತದೆಯೋ ಅಷ್ಟು ಭಿಕ್ಷೆ ಬೇಡಿ ಅದನ್ನೂ ಗೋದಾವರಿಯ ನೀರಿನಲ್ಲಿ ತೊಳೆದು ಸೇವಿಸುತ್ತಿದ್ದರು. ಆದ್ದರಿಂದ ಶಕ್ತಿ ಕೇವಲ ಅನ್ನದಿಂದ ಸಿಗುತ್ತದೆ ಎಂಬುದೊಂದು ತಪ್ಪು ತಿಳುವಳಿಕೆ.
ಏ. ಈಗಿನ ಕಾಲದಲ್ಲಿಯೂ ದಿನದಲ್ಲಿ ಕೇವಲ ಒಂದು ಬಾರಿ ಊಟ ಮಾಡುವ ಜನರಿದ್ದಾರೆ. ಈಶಾ ಯೋಗ ಸಂಸ್ಥೆಯ ಸದ್ಗುರು ಜಗ್ಗಿ ವಾಸುದೇವ ಇವರು ದಿನದಲ್ಲಿ ಕೇವಲ ಒಂದು ಬಾರಿ ಊಟ ಮಾಡುತ್ತಾರೆ. ಅಂದರೆ ಅವರಿಗೆ ಪ್ರತಿ ದಿನ ಸುಮಾರು ೨೪ ಗಂಟೆಯ ಉಪವಾಸ ಆಗುತ್ತದೆ. ಹೀಗೆ ಇದ್ದರೂ ಕೂಡ ಅವರು ಪೂರ್ಣ ಕ್ಷಮತೆಯಿಂದ ಕಾರ್ಯನಿರತವಾಗಿರುತ್ತಾರೆ. ಹಾಗೂ ದೇಶವಿದೇಶಗಳಲ್ಲಿ ತಾವೇ ದ್ವಿಚಕ್ರ ವಾಹನ ಚಲಾಯಿಸಿ ಪ್ರವಾಸ ಕೂಡ ಮಾಡುತ್ತಾರೆ.
ಐ. ಪ್ರಧಾನಿ ಮೋದಿಯವರು ಕಳೆದ ೪೪ ವರ್ಷಗಳಿಂದ ನವರಾತ್ರಿಯ ೯ ದಿನ ಕೇವಲ ಸೀಮಿತ ಫಲಹಾರ ಮತ್ತು ನೀರು ಕುಡಿದು ಉಪವಾಸ ಮಾಡುತ್ತಾ ಬಂದಿದ್ದಾರೆ. ಆ ಸಮಯದಲ್ಲಿ ಕೂಡ ಅವರು ಪೂರ್ಣ ಕ್ಷಮತೆಯಿಂದ ಕಾರ್ಯನಿರತವಾಗಿರುತ್ತಾರೆ.
ಒ. ಮೆರಠ, ಉತ್ತರ ಪ್ರದೇಶ ಇಲ್ಲಿರುವ ಐ.ಎ.ಎಸ್.ಎಸ್ (International Association for Scientific Spiritualism ) ಹೆಸರಿನ ಸಂಸ್ಥೆಯಲ್ಲಿ ೭-೭ ದಿನ ಅಹಾರ ಸೇವಿಸದೇ ಉಪವಾಸ ಮಾಡುವ ಶಿಬಿರಗಳು ನಡೆಸಲಾಗುತ್ತದೆ. ಈ ಶಿಬಿರದಲ್ಲಿ ಬರುವ ಜನರು ೭ ದಿನ ಏನೂ ತಿನ್ನದೆ ಕೇವಲ ನೀರು ಕುಡಿದು ಅನೇಕ ರೋಗಳಿಂದ ಮುಕ್ತರಾಗುತ್ತಾರೆ.
ಓ. ವಿದೇಶದಲ್ಲಿ ೪೦-೪೦ ದಿನ ಕೇವಲ ನೀರು ಕುಡಿದು ಉಪವಾಸ ಮಾಡುವ ಅನೇಕ ಜನರಿದ್ದಾರೆ. ಅಲ್ಲಿ ಉಪವಾಸದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ನಮಗೋ, ಕೇವಲ ೧ ದಿನ ಉಪವಾಸ ಮಾಡಬೇಕಾಗಿದೆ!
ಔ. ಮುಂಬರುವ ಭೀಷಣ ಆಪತ್ಕಾಲದಲ್ಲಿ ಆಹಾರ ಸುಲಭವಾಗಿ ಸಿಗುವುದಿಲ್ಲ. ಅದಕ್ಕಾಗಿ ಸಿದ್ಧತೆ ಎಂದು ಕೂಡ ೧ ದಿನದ ಉಪವಾಸ ಮಾಡಬಹುದು.
೫. ಗ್ರಹಣ ಕಾಲದಲ್ಲಿ ೨೪ ಗಂಟೆ ಉಪವಾಸ ಹೇಗೆ ಮಾಡುವುದು ?
ಅ. ಉಪವಾಸ ಮಾಡುವ ದೃಢ ನಿಶ್ಚಯ ಮಾಡಿ ಅದನ್ನು ನಮ್ಮಿಂದ ಪೂರ್ಣಗೊಳಿಸುವಂತೆ ನಮ್ಮ ಉಪಾಸ್ಯ ದೇವತೆಗೆ ಪ್ರಾರ್ಥನೆ ಮಾಡಬೇಕು.
ಆ. ಗ್ರಹಣದ ಮೊದಲನೇ ದಿನ ರಾತ್ರಿ ಊಟ ಮಾಡಬೇಕು. ಅದರ ನಂತರ ಏನನ್ನು ತಿನ್ನಬಾರದು.
ಇ. ಈ ಸಮಯದಲ್ಲಿ ನೀರು ಕುಡಿಯಬಹುದು ; ಆದರೆ ಒಂದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯದೆ ಸ್ವಲ್ಪ ಸ್ವಲ್ಪ ಕುಡಿಯಬೇಕು. ಒಂದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದರೆ ಹೆಚ್ಚಿನ ನೀರು ಮೂತ್ರದ ರೂಪದಲ್ಲಿ ಹೊರಹೋಗುತ್ತದೆ. ಆ ನೀರಿನ ಉಪಯೋಗ ಶರೀರಕ್ಕೆ ಆಗುವುದಿಲ್ಲ. ಹೂಕುಂಡದಲ್ಲಿರುವ ಗಿಡಗಳಿಗೆ ಹೆಚ್ಚು ನೀರುಣಿಸಿದರೆ ಕುಂಡದಲ್ಲಿರುವ ಛಿದ್ರದಿಂದ ನೀರು ಹೇಗೆ ಹೊರಗೆ ಹೋಗುತ್ತದೆಯೋ ಅದೇ ರೀತಿ ಇಲ್ಲಿಯೂ ಆಗುತ್ತದೆ. ಗಿಡಕ್ಕೆ ಸರಿಯಾಗಿ ನೀರು ಸಿಗಬೇಕು, ಎಂದು ಹನಿ ನೀರಾವರಿ ಮಾಡುತ್ತಾರೆ. ಇದರಲ್ಲಿ ಒಂದು ಸಮಯಕ್ಕೆ ಹೆಚ್ಚಿನ ನೀರು ನೀಡದೆ ಹನಿ ಹನಿಯಾಗಿ ನೀರು ಪೂರೈಸಲಾಗುತ್ತದೆ. ಈ ನೀರು ಗಿಡಕ್ಕೆ ಸರಿಯಾಗಿ ಉಪಯೋಗವಾಗುತ್ತದೆ. ಅದೇ ರೀತಿ ಶರೀರಕ್ಕೆ ಕೂಡ ಸರಿಯಾಗಿ ನೀರು ಸಿಗಬೇಕಾದರೆ ಸ್ವಲ್ಪ ಸ್ವಲ್ಪ ಸಮಯದ ಅಂತರದಲ್ಲಿ ಒಂದೊಂದು ಗುಟುಕು ಕುಡಿಯಬೇಕು.
ಈ. ಉಪವಾಸ ಮಾಡುವಾಗ ಸಾಕಾಗುವಷ್ಟು ನೀರು ಕುಡಿದರೆ ಸ್ವಲ್ಪವು ಆಯಾಸ ಆಗುವುದಿಲ್ಲ, ಪಿತ್ತ ಆಗುವುದಿಲ್ಲ, ಹಾಗೂ ತಲೆನೋವು ಕೂಡ ಬರುವುದಿಲ್ಲ.
ಉ. ಗ್ರಹಣದ ಪರ್ವಕಾಲದಲ್ಲಿ, ಎಂದರೆ ನವಂಬರ ೮ ರಂದು ಸೂರ್ಯಸ್ತದಿಂದ ಸಂಜೆ ೬.೧೯ ಗಂಟೆಯವರೆಗೆ, ಎಂದರೆ ಗ್ರಹಣ ಮುಗಿಯುವವರೆಗೆ ನೀರು ಕೂಡ ಕುಡಿಯಬಾರದು. (ನಿಮ್ಮ ಊರಿನಲ್ಲಿ ಸೂರ್ಯಾಸ್ತದ ಸಮಯ ನೋಡಬಹುದು, ಸರಿಸುಮಾರು ಈ ಕಾಲಾವಧಿ ೨೦ ನಿ. ಅಷ್ಟೇ ಆಗಿದೆ!)
ಊ. ಈ ಸಮಯದಲ್ಲಿ ನಾವು ನಿತ್ಯದ ಎಲ್ಲಾ ಕೆಲಸ, ಕಷ್ಟದ ಕೆಲಸ, ಹಾಗೂ ವ್ಯಾಯಾಮ ಕೂಡ ಮಾಡಬಹುದು.
ಎ. ಗ್ರಹಣ ಕಾಲದಲ್ಲಿ ಮಧ್ಯಾಹ್ನ ಮಲಗಬಾರದು. ನಿದ್ದೆ ಆವರಿಸಿದರೆ ಕುಳಿತಲ್ಲೆ ಚಿಕ್ಕನಿದ್ರೆ ಮಾಡಬಹುದು.
ಏ. ಗ್ರಹಣ ಮುಗಿದ ನಂತರ ಹಸಿವೆ ಆಗಿದೆ ಎಂದು ತಕ್ಷಣ ದೀಪಾವಳಿಯಿಂದ ಉಳಿದ ತಿಂಡಿಗಳು ಅಥವಾ ಅನ್ಯ ಪದಾರ್ಥಗಳನ್ನು ತಿನ್ನಬಾರದು.
ಐ. ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಅನ್ನ ತವ್ವೆ ಅಥವಾ ಹೆಸರು ಬೇಳೆಯ ಹುಗ್ಗಿ ಈ ರೀತಿಯ ಹಗುರವಾದ ಆಹಾರಕ್ಕೆ ೧-೨ ಚಮಚ ತುಪ್ಪ ಹಾಕಿ ಸೇವಿಸಬೇಕು.
ಒ. ಮರುದಿನದಿಂದ ಎಂದಿನಂತೆ ಆಹಾರ ಸೇವಿಸಬೇಕು.
೬. ಮದುಮೇಹಿಗಳು ಉಪವಾಸ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಬೇಕು.
ಮಧುಮೇಹಕ್ಕಾಗಿ ಅಲೋಪತಿಯ ಮಾತ್ರೆ ಅಥವಾ ಇನ್ಸುಲಿನ್ ಇದ್ದರೆ ಮಾತ್ರ ಉಪವಾಸ ಮಾಡುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆದು ಅದರ ಪ್ರಕಾರ ಆ ದಿನದಂದು ಔಷಧಿಯ ಪ್ರಮಾಣ ನಿಶ್ಚಯಿಸಿಕೊಳ್ಳಬೇಕು. ಸಾಮಾನ್ಯವಾಗಿ ಅನ್ನ ಇಲ್ಲದೆ ಉಪವಾಸ ದಿನದಂದು ಮಧುಮೇಹದ ಯಾವುದೇ ಔಷದ ಸೇವಿಸಬಾರದು ಎಂದಿರುತ್ತದೆ, ಆದರೂ ಕೂಡ ನಿಮ್ಮ ವೈದ್ಯರನ್ನು ಕೇಳಿಕೊಂಡು ಮಾರ್ಗದರ್ಶನ ಪಡೆಯಿರಿ.
೭. ಉಪವಾಸ ಮಾಡುವಾಗ ತೊಂದರೆ ಆದರೆ ಏನು ಮಾಡಬೇಕು?
ಮೇಲೆ ನೀಡಿರುವ ಹಾಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದು ಉಪವಾಸ ಮಾಡಿದರೆ ತೊಂದರೆ ಆಗುವುದಿಲ್ಲ. ಆದರೂ ಕೂಡ ತೊಂದರೆ ಆದರೆ ಮುಂದೆ ನೀಡಿರುವಂತೆ ಚಿಕಿತ್ಸೆ ಪಡೆಯಬೇಕು.
ಅ. ತಲೆನೋವು : ಅಂಗಾತ ಮಲಗಿಕೊಂಡು ಮೂಗಿನ ಹೊಳ್ಳೆಗಳಲ್ಲಿ ೨ -೨ ಹನಿ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಹಾಕಬೇಕು. ಚಮಚದಷ್ಟು ಕೊಬ್ಬರಿ ಎಣ್ಣೆಗೆ ೨ ರಿಂದ ೪ ಚಿಟಿಕೆ ಕರ್ಪೂರ ಸೇರಿಸಿ ಅದನ್ನು ತಲೆಗೆ ಹಚ್ಚಬೇಕು.
ಆ. ಪಿತ್ತ ಹೆಚ್ಚಾಗಿ ಹೊಟ್ಟೆ ತೊಳಸಿದಂತಾದರೆ ಅಥವಾ ವಾಂತಿ ಆದರೆ : ವಾಂತಿ ಸುಲಭವಾಗಿ ಆಗುವದಕ್ಕೆ ಲೋಟದಷ್ಟು ನೀರು ಕುಡಿದು ನಾಲಿಗೆಯನ್ನು ಬೆರಳಿನಿಂದ ಉಜ್ಜಬೇಕು. ಹೆಚ್ಚಾಗಿರುವ ಪಿತ್ತ ಹೊರಗೆ ಹೋದರೆ ವಾಂತಿ ನಿಲ್ಲುತ್ತದೆ. ಪಿತ್ತ ಹೊರಗೆ ಹೋದ ನಂತರ ಆರಾಮ ಎನಿಸುತ್ತದೆ. ಆದರೆ ವಾಂತಿ ಆಗದಿದ್ದರೆ ಬಲವಂತವಾಗಿ ಮಾಡಲು ಪ್ರಯತ್ನಿಸಬಾರದು. ವಾಂತಿ ಆಗದಿದ್ದರೆ ಕುಡಿದಿರುವ ನೀರು ಮೂತ್ರದ ಮೂಲಕ ಹೊರಗೆ ಹೋಗುವುದು ಮತ್ತು ಅದರ ಜೊತೆಗೆ ಪಿತ್ತ ಕೂಡ ಮೂತ್ರದ ಮೂಲಕ ಹೊರಗೆ ಹೋಗುವುದು.
ಇ. ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಕಡಿಮೆ ಆಗುವುದು : ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿರುವಂತೆ ಸೂಚಿಸುವ ‘ನಡುಕು ಬರುವುದು, ಕಣ್ಣಿಗೆ ಕತ್ತಲಾವರಿಸುವುದು, ಬೆವರು ಬರುವುದು, ಎದೆ ಡವಡವಗುಟ್ಟುವುದು’ ಮುಂತಾದ ಲಕ್ಷಣಗಳು ಕಂಡುಬಂದರೆ ಸಕ್ಕರೆ ಅಥವಾ ಬೆಲ್ಲ ತಿಂದು ನೀರು ಕುಡಿಯಬೇಕು. (ಮಧುಮೇಹ ಇಲ್ಲದಿದ್ದರೆ ಕೇವಲ ನೀರು ಕುಡಿಯಬೇಕು)
೮ . ಉಪವಾಸ ಮಾಡುವುದಕ್ಕಾಗಿ ಮನಸ್ಸಿನ ಸಿದ್ಧತೆ ಮಾಡಿ !
ಉಪವಾಸ ಮಾಡಲು ಮನಸ್ಸಿನ ಸಿದ್ಧತೆ ಆಗಬೇಕೆಂದು ಈ ಲೇಖನ ಮತ್ತೆ ಮತ್ತೆ ಓದಿ. ಆದರೂ ಕೂಡ ಮನಸ್ಸಿನ ಸಿದ್ಧತೆ ಆಗದೆ ಇದ್ದರೆ ಉಪವಾಸ ಮಾಡಬೇಡಿ. ಪ್ರತಿಯೊಬ್ಬರ ಪ್ರಕೃತಿ ಬೇರೆಬೇರೆ ಇರುವುದರಿಂದ ಯಾರು ಯಾರಿಗೂ ಒತ್ತಾಯ ಮಾಡಬಾರದು. ಸ್ವಂತ ನಿಶ್ಚಯ ಆದರೆ ಆಗ ಮಾತ್ರ ೨೪ ಗಂಟೆ ಉಪವಾಸ ಮಾಡಿ ಅನುಭವ ಪಡೆಯಬೇಕು.
ಧರ್ಮೋ ರಕ್ಷತಿ ರಕ್ಷಿತಃ | ಅಂದರೆ ಯಾರು ಧರ್ಮದ ರಕ್ಷಣೆ ಮಾಡುತ್ತಾರೆಯೋ, ಅವರ ರಕ್ಷಣೆ ಧರ್ಮ ಅಂದರೆ ಈಶ್ವರನೇ ಮಾಡುತ್ತಾನೆ! ಧರ್ಮಾಚರಣೆ ಧರ್ಮದ ರಕ್ಷಣೆಯೇ ಆಗಿದೆ. ಗ್ರಹಣ ಕಾಲದಲ್ಲಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಆಚರಣೆ ಮಾಡುವುದಕ್ಕೆ ಎಲ್ಲರಿಗೂ ಶಕ್ತಿ ಸಿಗಲಿ, ಎಂದೇ ಈಶ್ವರ ಚರಣದಲ್ಲಿ ಪ್ರಾರ್ಥನೆ !
ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ, (೨.೧೧.೨೦೨೨)