ಸನಾತನ ಧರ್ಮವನ್ನು ಮುಳುಗಿಸಲು ಯಾರಿಂದಲೂ ಸಾಧ್ಯವಿಲ್ಲ ! – ಸ್ವಾತಂತ್ರ್ಯವೀರ ಸಾವರಕರ

ಸ್ವಾತಂತ್ರ್ಯವೀರ ಸಾವರಕರ

ಸನಾತನ ಧರ್ಮದ ಕುರಿತು ೧೯೩೦ ರಲ್ಲಿಯ ಒಂದು ಲೇಖನದಲ್ಲಿ ಸ್ವಾತಂತ್ರ್ಯವೀರ ಸಾವರಕರರು, “ಹಳೆಯ ಎಲ್ಲ ಕರ್ಮಕಾಂಡಗಳನ್ನು ಬದಲಾಯಿಸಿದರೂ, ಸನಾತನ ಧರ್ಮ ಮುಳುಗಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ಮುಳುಗಿಸುವುದು ಒಂದು ಮುಷ್ಠಿಯಷ್ಟು ಸುಧಾರಕರಿಗಾಗಲಿ, ಸಂಪೂರ್ಣ ಮನುಕುಲಕ್ಕೂ ಸಾಧ್ಯವಿಲ್ಲ” ಎಂದು ಹೇಳುತ್ತಾರೆ. ಯಾವಾಗ ನಾವು ಧರ್ಮ ಶಬ್ದಕ್ಕೆ ‘ಸನಾತನ ಎಂಬ ವಿಶೇಷಣವನ್ನು ಜೋಡಿಸುತ್ತೇವೆ, ಆಗ ಅದರ ಅರ್ಥ ಈಶ್ವರ, ಜೀವ ಮತ್ತು ಜಗತ್ತು ಇವುಗಳ ಸ್ವರೂಪದ ಕುರಿತು ವಿವರಣೆ ನೀಡುವ ಶಾಸ್ತ್ರ ಮತ್ತು ಅವರ ಸಿದ್ಧಾಂತ ಮತ್ತು ತತ್ತ್ವ್ವಜ್ಞಾನ’ ಎಂದಾಗಿರುತ್ತದೆ. ಆದಿಶಕ್ತಿಯ ಸ್ವರೂಪ, ಜಗತ್ತಿನ ಆದಿಕಾರಣ ಮತ್ತು ಆದಿನಿಯಮ ಇವು ಸನಾತನ, ಶಾಶ್ವತ ಮತ್ತು ತ್ರಿಕಾಲಾಬಾಧಿತವಾಗಿರುತ್ತವೆ. ಭಗವದ್ಗೀತೆಯಲ್ಲಿ ಅಥವಾ ಉಪನಿಷತ್ತಿನಲ್ಲಿ ಈ ಕುರಿತು ಯಾವ ಸಿದ್ಧಾಂತವು ಪ್ರಕಟವಾಗಿರುತ್ತವೆ, ಅವು ಸನಾತನವಾಗಿರುತ್ತದೆ. ಅವುಗಳನ್ನು ಬದಲಾಯಿಸುವುದು ಮನುಷ್ಯಶಕ್ತಿಯ ಆಚೆಯ ಮಾತಾಗಿರುತ್ತದೆ. ಆ ಸಿದ್ಧಾಂತಗಳು ಇವೆ ಮತ್ತು ಹಾಗೆಯೇ ಇರಲಿವೆ ಮತ್ತು ಹಾಗೆಯೇ ಶಾಶ್ವತವಾಗಿ ಉಳಿಯುವವು.