‘ವೀರ ಸಾವರ್ಕರ್ ಬ್ರಾಹ್ಮಣನಾಗಿದ್ದರೂ ಗೋಮಾಂಸ ತಿನ್ನುತ್ತಿದ್ದರಂತೆ !’ – ಸಚಿವ ದಿನೇಶ ಗುಂಡೂರಾವ

ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದಲ್ಲಿನ ಸಚಿವ ದಿನೇಶ ಗುಂಡೂರಾವ ಇವರಿಂದ ವಿವಾದಾತ್ಮಕ ಹೇಳಿಕೆ !

ಬೆಂಗಳೂರು – ಸ್ವಾತಂತ್ರ್ಯ ವೀರ ಸಾವರ್ಕರ್ ಚಿತ್ಪಾವನ ಬ್ರಾಹ್ಮಣರಾಗಿದ್ದರು, ಆದರೂ ಕೂಡ ಅವರು ಸಾರ್ವಜನಿಕ ಸ್ಥಳದಲ್ಲಿ ಗೋಮಾಂಸ ತಿನ್ನುತ್ತಿದ್ದರು ಮತ್ತು ಅದರ ಪ್ರಸಾರ ಮಾಡುತ್ತಿದ್ದರು. ಸಾವರ್ಕರರು ಎಂದಿಗೂ ಕೂಡ ಗೋಹತ್ಯೆಯನ್ನು ವಿರೋಧಿಸಲಿಲ್ಲ. ಇದರ ಕುರಿತು ಅವರ ವಿಚಾರ ಅತ್ಯಂತ ಮುಂದುವರೆದಿದ್ದರು, ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಇವರು ಹೇಳಿಕೆ ನೀಡಿದ್ದಾರೆ. ಮೋಹನದಾಸ ಗಾಂಧಿ ಇವರ ಜಯಂತಿಯ ಪ್ರಯುಕ್ತ ಆಯೋಜಿಸಿರುವ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮ. ಗಾಂಧಿ ಕಟ್ಟರ ಸಸ್ಯಹಾರಿ ಆಗಿದ್ದರು !

ಗುಂಡೂರಾವ್ ಮಾತು ಮುಂದುವರೆಸಿ, ಮ. ಗಾಂಧಿ ಹಿಂದೂ ಸಾಂಸ್ಕೃತಿಕ ರೂಢಿವಾದದ ಆದರ್ಶ ಉದಾಹರಣೆ ಆಗಿದ್ದರು; ಆದರೆ ಅವರು ಕಟ್ಟರ ಸಸ್ಯಹಾರಿ ಆಗಿದ್ದರು. ಹಾಗೂ ಗಾಂಧಿ ಪ್ರಜಾಪ್ರಭುತ್ವದ ನಾಯಕರು ಆಗಿದ್ದರು. (ಗಾಂಧಿ ಇವರು ದೇಶಕ್ಕೆ ಆಘಾತ ಮಾಡಿದರು. ಅವರು ಭಾರತದ ಮತ್ತು ಹಿಂದುಗಳ ಹಾನಿ ಮಾಡಿರುವಷ್ಟು, ಮುಸಲ್ಮಾನ ಆಕ್ರಮಕರು ಕೂಡ ಮಾಡಿರಲಿಲ್ಲ, ಎಂದು ಹೇಳಿದರೆ ಇದು ಅತಿಶಯೋಕ್ತಿ ಆಗುವುದಿಲ್ಲ ! – ಸಂಪಾದಕರು) ಮಹಮ್ಮದ್ ಅಲಿ ಜಿನ್ನಾ ಕಟ್ಟರ ಆಗಿರಲಿಲ್ಲ; ಆದರೆ ವೀರ ಸಾವರ್ಕರ್ ಕಟ್ಟರರಾಗಿದ್ದರು. (ಜಿನ್ನಾ ಇವರಿಂದಲೇ ದೇಶದ ವಿಭಜನೆ ಆಯಿತು, ಆಗ ಸಾವರ್ಕರ್ ವಿಭಜನೆಯನ್ನು ವಿರೋಧಿಸಿದ್ದರು. ಇದನ್ನು ಕಾಂಗ್ರೆಸ್ಸಿಗರು ಎಂದಿಗೂ ಹೇಳುವುದಿಲ್ಲ ! – ಸಂಪಾದಕರು) ಜಿನ್ನಾ ನಿಷಿದ್ಧ ವಾಗಿರುವ ಹಂದಿಮಾಂಸ ಸವಿಯುತ್ತಾ ತಿನ್ನುತ್ತಿದ್ದರು; ಕೆಲವು ಜನರು ಹೀಗೆ ಕೂಡ ದಾವೆ ಮಾಡುತ್ತಾರೆ. ಆದರೆ ಜಿನ್ನ ಮುಸಲ್ಮಾನರ ನಾಯಕನಾದರು.

ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ದಾಳಿ, ಇದು ಸಾವರ್ಕರರ ವಿಚಾರಗಳಲ್ಲ !

ಸಚಿವ ಗುಂಡೂರಾವ್ ಇವರು, ದೇಶದಲ್ಲಿ ನಥುರಾಮ್ ಗೋಡಸೆ ಇವರ ವಿಚಾರಧಾರೆಯ ಬೇರುಗಳು ಗಟ್ಟಿ ಆಗುತ್ತಿವೆ. (ಮ. ಗಾಂಧಿ ಇವರ ವಿಶ್ವಾಸಘಾತಕ ಅಹಿಂಸಾವಾದಿ ವಿಚಾರಗಳಿಗಿಂತಲೂ ಕೂಡ ಪ್ರಖರ ರಾಷ್ಟ್ರವಾದಿ ವಿಚಾರಗಳ ಬೇರುಗಳು ಗಟ್ಟಿ ಏಕೆ ಆಗುತ್ತಿದೆ ?, ಇದನ್ನು ಕಾಂಗ್ರೆಸ್ ವೆ ವಿಚಾರ ಮಾಡಬೇಕು ! – ಸಂಪಾದಕರು) ಇದೇ ವಿಚಾರದಿಂದ ಮ. ಗಾಂಧಿ ಇವರ ಹತ್ಯೆ ಮಾಡಿದರು. ಗಾಂಧಿ ಧಾರ್ಮಿಕವಾಗಿದ್ದರು, ಈಗಿನ ಕ್ಷಣಕ್ಕೆ ಮಾತ್ರ ಕಟ್ಟರತೆ ಹಬ್ಬುತ್ತಿದೆ. ಗೋರಕ್ಷಣೆಯ ಹೆಸರಿನಲ್ಲಿ ಯಾರನ್ನಾದರೂ ಹೊಡೆಯಲಾಗುತ್ತಿದೆ. ಈ ವಿಚಾರಗಳು ವೀರ ಸಾವರ್ಕರ ಇವರದಾಗಿರಲಿಲ್ಲ. ಅವರ ವಿಚಾರ ಕಟ್ಟರವಾಗಿದ್ದರೂ, ಎರಡು ಕಡೆಯಿಂದ ಅವರು ಆಧುನಿಕರಾಗಿದ್ದರು. ಸಾವರ್ಕರರ ಕಟ್ಟರತಾವಾದ ಎದುರಿಸಲು ಗಾಂಧಿ ಇವರ ವಿಚಾರ ಇಂದಿಗೂ ಪ್ರೇರಕವಾಗಿವೆ.

ಸುಳ್ಳುಗಾರ ಕಾಂಗ್ರೆಸ್ ! – ಕೇಂದ್ರ ಸಚಿವ ಅನುರಾಗ ಠಾಕೂರ್

ಕಾಂಗ್ರೆಸ್ ಸುಳ್ಳುಗಾರ. ಭಾರತ ಸ್ವಾತಂತ್ರ್ಯವೀರ ಸಾವರ್ಕರ್ ಇವರ ಅವಮಾನ ಸಹಿಸುವುದಿಲ್ಲ. ಸಾವರ್ಕರರಿಂದ ಕಾಂಗ್ರೆಸ್ ಇಲ್ಲಿಯವರೆಗೆ ಯಾವುದನ್ನು ಕಲಿಯಲಿಲ್ಲ. ಕಾಂಗ್ರೆಸ್ ಸ್ವಾತಂತ್ರ್ಯ ಸೈನಿಕರನ್ನು ಗೌರವಿಸುದಿಲ್ಲ, ಇದು ಮತ್ತೊಮ್ಮೆ ಸಾಬೀತಾಗಿದೆ, ಎಂದು ಕೇಂದ್ರ ಸಚಿವ ಮತ್ತು ಭಾಜಪದ ನಾಯಕ ಅನುರಾಗ ಠಾಕೂರ್ ಇವರು ವಾಗ್ದಾಳಿ ನಡೆಸಿದರು. (ಕೇಂದ್ರ ಸಚಿವರು ಗುಂಡೂರಾವ್ ಇವರ ಮೇಲೆ ದೂರು ದಾಖಲಿಸಲು ಮತ್ತು ಅವರನ್ನು ಬಂಧಿಸುವದಕ್ಕಾಗಿ ಸರಕಾರಿ ಮಟ್ಟದಲ್ಲಿ ಪ್ರಯತ್ನಿಸಬೇಕು ! – ಸಂಪಾದಕರು)

ಸಚಿವ ಗುಂಡೂರಾವ್ ಇವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುವೆವು ! – ರಣಜಿತ ಸಾವರ್ಕರ್

ಸ್ವಾತಂತ್ರ್ಯವೀರ ಸಾವರ್ಕರ್ ಇವರ ಮೊಮ್ಮಗ ರಣಜಿತ ಸಾವರ್ಕರ್ ಇವರು ಕಾಂಗ್ರೆಸ್ ನ್ನು ಟಿಕಿಸಿದರು. ಅವರು, ಚುನಾವಣೆ ಬರುವಾಗಲೆಲ್ಲ ಸಾವರ್ಕರರನ್ನು ಮೇಲಿಂದ ಮೇಲೆ ಕಳಂಕಿತಗೊಳಿಸುವುದು ಕಾಂಗ್ರೆಸ್ಸಿನ ರಣನೀತಿ ಆಗಿದೆ. ಈ ಹಿಂದೆ ರಾಹುಲ್ ಗಾಂಧಿ ಇದನ್ನು ಮಾಡುತ್ತಿದ್ದರು, ಈಗ ಅವರ ನಾಯಕರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಹಿಂದೂ ಜನಾಂಗವನ್ನು ಜಾತಿಯಲ್ಲಿ ವಿಭಜಿಸಿ ಕಾಂಗ್ರೆಸ್ ಚುನಾವಣೆ ಗೆಲ್ಲಬೇಕಿದೆ. ಒಡೆದು ಆಳುವುದು ಇದು ಬ್ರಿಟಿಷರ ನೀತಿಯ ಹಾಗೆ ಇರುವುದು. ಇಂದಿರಾ ಗಾಂಧಿ ಇವರು ಸಾವರ್ಕರರ ನೀತಿಗಳು ಸ್ವೀಕರಿಸಿದ್ದರು. ಸಾವರ್ಕರ ಗೋಮಾಂಸ ತಿನ್ನುವರು ಮತ್ತು ಗೋಹತ್ಯೆಗೆ ಬೆಂಬಲ ನೀಡುವುದು, ಇದನ್ನು ಗುಂಡುರಾವ್ ಇವರ ಹೇಳಿಕೆ ತಪ್ಪಾಗಿದೆ. ನಾನು ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುವೆ ಎಂದು ಹೇಳಿದರು.

ಈ ಜನರಿಗೆ ಸಾವರಕರರ ಬಗ್ಗೆ ಏನು ಕೂಡ ಗೊತ್ತಿಲ್ಲ ! – ದೇವೇಂದ್ರ ಫಡಣವಿಸ್, ಉಪ ಮುಖ್ಯಮಂತ್ರಿ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡನವಿಸ್ ಇವರು, ಈ ಜನರಿಗೆ ಸಾವರ್ಕರರ ಬಗ್ಗೆ ಏನು ಕೂಡ ತಿಳಿದಿಲ್ಲ. ಅವರನ್ನು ಮತ್ತೆ ಮತ್ತೆ ಅವಮಾನಸಲಾಗುತ್ತದೆ. ಸಾವರ್ಕರ ಕುರಿತು ಈ ರೀತಿ ಸುಳ್ಳು ಹೇಳಿಕೆ ನೀಡುವ ಪ್ರಕ್ರಿಯೆ ರಾಹುಲ್ ಗಾಂಧಿಯಿಂದ ಆರಂಭವಾಗಿದೆ ಮತ್ತು ನನಗೆ ಅನಿಸುತ್ತದೆ, ಅದನ್ನು ಮುಂದುವರಿಸುವ ಪ್ರಯತ್ನ ಮಾಡಲಾಗುತ್ತಿದೆ, ಎಂದು ಹೇಳಿದರು.

ಸ್ವಾತಂತ್ರ್ಯವೀರ ಸಾವರ್ಕರ್ ಮಾಂಸಾಹಾರಿ ಆಗಿದ್ದರು; ಆದರೆ ಅವರು ಎಂದಿಗೂ ಗೋಮಾಂಸ ಭಕ್ಷಣೆ ಮಾಡಿರಲಿಲ್ಲ ! – ದುರ್ಗೇಶ್ ಪರೂಳಕರ್, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು

ದುರ್ಗೇಶ ಪರುಳಕರ, ಲೇಖಕರು ಮತ್ತು ವ್ಯಾಖ್ಯಾನಕಾರರು, ಠಾಣೆ

ಸಾವರ್ಕರರು ಎಂದಿಗೂ ಗೋಮಾಂಸ ಭಕ್ಷಣೆ ಮಾಡಿರಲಿಲ್ಲ, ಹಾಗೂ ಅವರು ಗೋಹತ್ಯೆಯನ್ನು ಎಂದಿಗೂ ಬೆಂಬಲಿಸಲಿಲ್ಲ ಎಂದು ಹೇಳಿದರು. ‘ಯುದ್ಧದ ಪ್ರಸಂಗದಲ್ಲಿ ತಮ್ಮನ್ನು ರಕ್ಷಣೆ ಮಾಡುವುದಕ್ಕಾಗಿ ಶತ್ರು ಪಕ್ಷದವರು ಹಸುಗಳ ಹಿಂಡನ್ನು ಮುಂದೆ ಮಾಡಿ ಹಿಂದುಗಳ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದರೆ, ಆಗ ಪರಿಸ್ಥಿತಿ ಬಂದರೆ ಹಸುವಿಗೆ ಹೊಡೆದರು ನಡೆಯುತ್ತದೆ; ಆದರೆ ಶತ್ರುವನ್ನು ಜೀವಂತವಾಗಿ ಬಿಡಬೇಡಿ’, ಎಂದು ಸಾವರ್ಕರರು ಹೇಳಿದ್ದರು. ಆದರೆ ಇದರಲ್ಲಿ ಪರಿಸ್ಥಿತಿ ಬಂದರೆ ಈ ಶಬ್ದ ಪ್ರಯೋಗ ಮಹತ್ವದ್ದಾಗಿದೆ. ಇದರ ಅರ್ಥ ‘ರಾಜುಅರೋಶವಾಗಿ ಗೋಹತ್ಯೆ ಮಾಡಿ’ ಎಂದು ಆಗುವುದಿಲ್ಲ ಎಂದು ಹೇಳಿದರು.

ಮುಸಲ್ಮಾನರು ಹಿಂದುಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿ ಗೋಹತ್ಯೆ ಮಾಡುತ್ತಿದ್ದರೆ, ಗೋಹತ್ಯೆ ಮಾಡುವ ಅಹಿಂದುಗಳಿಗೆ ಹರಿಸಿಂಹ ನಲವಾ ಇವರು ಹೇಗೆ ಶಿಕ್ಷಿಸಿದ್ದರು, ಹಾಗೆ ಶಿಕ್ಷೆ ನೀಡಬೇಕು, ಎಂದು ಸಾವರ್ಕರರು ಹೇಳಿದ್ದರು.

(ಹರಿಸಿಂಹ ನಲವಾ ಇವರ ಸಿಖ್ ಸಾಮ್ರಾಜ್ಯದ ವಿಸ್ತಾರ ಅಪಘಾನಿಸ್ತಾನದವರೆಗೆ ಇತ್ತು. ಅವರು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ವರ್ಚಸ್ಸು ನಿರ್ಮಾಣ ಮಾಡಿದ್ದರು ಎಂದರೆ, ಅವರು ಗೋಹತ್ಯೆಯ ಮೇಲೆ ನಿಷೇಧ ಹೇರಿದ ನಂತರ ಆ ಕಾಲದಲ್ಲಿ ಕಾಶ್ಮೀರದಂತಹ ಸ್ಥಳಗಳಲ್ಲಿ ಕೂಡ ಅದರ ಪಾಲನೆ ಮಾಡಲಾಗುತ್ತಿತ್ತು.