ಸ್ವತಂತ್ರ ವೀರ ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣ
ಪುಣೆ: ಸ್ವಾತಂತ್ರ್ಯವೀರ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ನೋಟಿಸ್ ನೀಡಿದ್ದಾರೆ. ಗುಂಡುರಾವ್ ಅವರು 15 ದಿನಗಳೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’, ಎಂದು ಸಾತ್ಯಕಿ ಸಾವರ್ಕರ್ ಸ್ಪಷ್ಟಪಡಿಸಿದ್ದಾರೆ.
‘ಸ್ವಾತಂತ್ರ್ಯವೀರ ಸಾವರ್ಕರ್ ಗೋಹತ್ಯೆಯ ವಿರುದ್ಧ ಇರಲಿಲ್ಲ. ಅವರು ದನದ ಮಾಂಸ ತಿನ್ನುತ್ತಿದ್ದರು. ಅವರ ಅಭಿಪ್ರಾಯಗಳು ಮೂಲಭೂತವಾದಿ ಆಗಿತ್ತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವಮಾನಕರ ಹೇಳಿಕೆ ನೀಡಿದ್ದರು. ಅವರು ಸಾವರ್ಕರ್ ಅವರನ್ನು ಮಹಾತ್ಮ ಗಾಂಧಿ ಮತ್ತು ಮುಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಹೋಲಿಸಿದರು. ಸಾವರ್ಕರ್ ಅವರ ಬೇಜವಾಬ್ದಾರಿ ಮತ್ತು ಆಧಾರ ರಹಿತ ಹೇಳಿಕೆಯಿಂದ ಅವರ ಘನತೆಗೆ ಧಕ್ಕೆಯಾಗಿದೆ. ಇದರ ವಿರುದ್ಧ ಸಾವರ್ಕರ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡೂರಾವ್ ಹೇಳಿಕೆ ವೈಯಕ್ತಿಕವೇ ? ಹಾಗೂ ಸಂಬಂಧಿತ ಹೇಳಿಕೆ ಮತ್ತು ಆಲೋಚನೆಗಳಿಗೆ ಕಾಂಗ್ರೆಸ್ ನ ಪಾತ್ರ ಏನು ? ಅವುಗಳನ್ನೂ ಬಹಿರಂಗಪಡಿಸಬೇಕು ಎಂದು ಗುಂಡೂರಾವ್ ಅವರಿಗೆ ನೀಡಿರುವ ನೋಟಿಸ್ ನಲ್ಲಿ ಸಾವರ್ಕರ್ ತಿಳಿಸಿದ್ದಾರೆ.