ನಾನು ಹೇಳಿದ್ದೂ ‘ಗಾಂಧಿ ಸಸ್ಯಾಹಾರಿ ಮತ್ತು ಸಾವರಕರ ಮಾಂಸಾಹಾರಿ ಆಗಿದ್ದರು ಅಂತ ! – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ರಾಜ್ಯದ ಕಾಂಗ್ರೆಸ್ ಸರಕಾರದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಸಾವರಕರ ಬಗೆಗಿನ ಅವರ ಹೇಳಿಕೆಯ ಬಗ್ಗೆ ತಿಪ್ಪೆ ಸಾರಿಸುವ ಪ್ರಯತ್ನ

ಮಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರದ ಆರೋಗ್ಯಸಚಿವ ದಿನೇಶ ಗುಂಡೂರಾವ ಇವರು ಗಾಂಧಿ ಜಯಂತಿಯ ಕಾರ್ಯಕ್ರಮದಲ್ಲಿ `ಚಿತ್ಪಾವನ ಬ್ರಾಹ್ಮಣರಾಗಿರುವ ವೀರ ಸಾವರಕರ ಅವರು ಗೋಮಾಂಸ ತಿನ್ನುತ್ತಿದ್ದರು’ ಎಂದು ಹೇಳಿದ್ದರು. ಈ ಹೇಳಿಕೆಯ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ ಬಳಿಕ ಚಿಕ್ಕಬಳ್ಳಾಪುರದಲ್ಲಿ ಸ್ಪಷ್ಟೀಕರಣ ನೀಡುವಾಗ ದಿನೇಶ ಗುಂಡೂರಾವ ಅವರು, `ಗಾಂಧೀಜಿ ಹಿಂದೂ ಧರ್ಮದ ಅನುಯಾಯಿಯಾಗಿದ್ದರು. ಅವರಿಗೆ ದೇವರ ಮೇಲೆ ಅಪಾರ ಭಕ್ತಿಯಿತ್ತು ಮತ್ತು ಅವರು ಶಾಖಾಹಾರಿಯಾಗಿದ್ದರು; ಆದರೆ ಸಾವರಕರ ನಾಸ್ತಿಕರಾಗಿದ್ದರು ಮತ್ತು ಮಾಂಸಾಹಾರಿಯಾಗಿದ್ದರು. ನಾನು ಇವರಿಬ್ಬರ ನಡುವಿನ ವ್ಯತ್ಯಾಸವನ್ನು ಹೇಳಿದ್ದೇನೆ. ನಾನು ಸಾವರಕರರನ್ನು ಟೀಕಿಸಿಲ್ಲ’’(ಸುಳ್ಳುಗಾರ ಗುಂಡೂರಾವ ! ಗುಂಡೂರಾವ ಇವರು ಸಾವರಕರ ಗೋಮಾಂಸ ತಿನ್ನುತ್ತಿದ್ದರು ಎಂದು ಹೇಳಿದ್ದರು ಮತ್ತು ಈಗ ಅವರು ತಮ್ಮ ಮಾತನ್ನು ತಿರುಚಿ, ಅವರು ಮಾಂಸಾಹಾರಿಯಾಗಿದ್ದರು’ ಎಂದು ಹೇಳಿ ಅದರ ಗಂಭೀರತೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಎಷ್ಟೇ ತಿಪ್ಪೆಸಾರಿಸುವ ಪ್ರಯತ್ನ ಮಾಡಿದರೂ ಕಾಂಗ್ರೆಸ್ಸಿಗರಿಗೆ ಸಾವರಕರ ವಿಷಯದಲ್ಲಿ ಮತ್ತು ಗೋವುಗಳ ವಿಷಯದಲ್ಲಿ ಯಾವ ಮಾನಸಿಕತೆಯಿದೆ ಎನ್ನುವುದು ದೇಶವಾಸಿಗಳಿಗೆ ತಿಳಿದಿದೆ ! -ಸಂಪಾದಕರು)

ಗುಂಡೂರಾವ್ ಅವರು ಮಾತನಾಡುತ್ತಾ, ಗಾಂಧೀಜಿಯವರಿಗೆ ಗೋವುಗಳ ಪೂಜೆಯ ಮೇಲೆ ಶ್ರದ್ಧೆಯಿತ್ತು, ಅದು ಸಾವರಕರರಲ್ಲಿ ಇರಲಿಲ್ಲ. ಸಾವರಕರರು, `ಗೋವು ಒಂದು ಪ್ರಾಣಿಯಾಗಿದೆ, ಹೀಗಿರುವಾಗ ಅದರ ಪೂಜೆಯನ್ನು ಏಕೆ ಮಾಡುತ್ತೀರಿ?’ ಎಂದು ಕೇಳಿದ್ದರು. (ತನ್ನ ಅನುಕೂಲಕ್ಕೆ ತಕ್ಕಂತೆ ಹೇಳಿಕೆಯನ್ನು ನೀಡಿ ಸಮಾಜದಲ್ಲಿ ದ್ವೇಷವನ್ನು ಹರಡುವ ಕಾಂಗ್ರೆಸ್ ! ಸಾವರಕರ ಇವರು ಅನೇಕ ಹೇಳಿಕೆಗಳನ್ನು ನೀಡಿದ್ದಾರೆ. ಅವುಗಳನ್ನು ಸಮಾಜವು ಸ್ವೀಕರಿಸಿದೆ. ಆ ವಿಷಯದಲ್ಲಿ ಕಾಂಗ್ರೆಸ್ ಏಕೆ ಮಾತನಾಡುವುದಿಲ್ಲ ? – ಸಂಪಾದಕರು) ಸಾವರಕರ ತರ್ಕಬದ್ಧವಾಗಿ ವಿಚಾರ ಮಾಡುವವರಾಗಿದ್ದರು ಎಂದು ನಾನು ಹೇಳಿದ್ದೆನು. (ಸಾವರಕರ ತರ್ಕಬದ್ಧ ವಿಚಾರ ಮಾಡುವವರಾಗಿದ್ದರು, ಎನ್ನುವ ಅರಿವು ಕಾಂಗ್ರೆಸ್ಸಿಗರಿಗೆ ಇದೇ ಪ್ರಕರಣದಲ್ಲಿ ಹೇಗೆ ಆಯಿತು ? ಅವರು ಅನೇಕ ತರ್ಕಬದ್ಧ ವಿಚಾರವನ್ನು ಮಂಡಿಸಿದ್ದಾರೆ. ಅವುಗಳನ್ನು ಕಾಂಗ್ರೆಸ್ಸಿಗರು ಸ್ವೀಕರಿಸಿಲ್ಲ ! – ಸಂಪಾದಕರು)

ಸಂಪಾದಕೀಯ ನಿಲುವು

ತಮ್ಮ ಮಾತನ್ನು ಹೇಗೆ ತಿರುಚಬಹುದು ಎನ್ನುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ, ಎನ್ನುವುದು ಇದರಿಂದ ಮತ್ತೊಮ್ಮೆ ಕಂಡು ಬಂದಿದೆ. ಸಾವರಕಾರರಿಗೆ ‘ಗೋಮಾಂಸ ಸೇವಿಸುವವರು‘ ಎಂದು ಹೇಳಿದ ಬಳಿಕ ಎಷ್ಟೇ ಸ್ಪಷ್ಟೀಕರಣವನ್ನು ನೀಡಿದರೂ, ಕಾಂಗ್ರೆಸ್ಸಿಗರನ್ನು ಜನತೆ ಚೆನ್ನಾಗಿ ತಿಳಿದಿದ್ದಾರೆ.’ !