ನವದೆಹಲಿ – ಅಕ್ಟೋಬರ್ 28 ರ ರಾತ್ರಿ ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅಂದರೆ ಜೆಎನ್‌ಯುನಲ್ಲಿ, ಕಾರ್ಯಕಾರಿಣಿ ಸಭೆ ನಡೆಯುತ್ತಿರುವಾಗ ಕಮ್ಯುನಿಸ್ಟರು ಭಗವಾನ್ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಹಾಗೂ ಸ್ವಾತಂತ್ರ್ಯ ವೀರ ಸಾವರ್ಕರ್ ಅವರನ್ನೂ ಅವಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ಸಭೆಯನ್ನು ಸ್ತಗಿತಗೊಳಿಸಿದೆ.
JNU में UGBM के दौरान प्रभु श्री राम का अपमान किया गया। लेफ्ट एक सदस्य ने अपने वक्तव्य में प्रभु श्री के लिए ‘नीच’ जैसे शब्द का प्रयोग क्या। प्रभु श्री राम समस्त देशवासियों के लिए पूज्य हैं एवं हमारे सांस्कृतिक विरासत के अभिन्न अंग हैं।
अखिल भारतीय विद्यार्थी परिषद लेफ्ट के… pic.twitter.com/fJ2iOJc1da
— ABVP JNU (@abvpjnu) October 29, 2024
‘ಮೊದಲು ಕ್ಷಮೆಯಾಚಿಸಿ, ಆಮೇಲೆ ಸಭೆ ನಡೆಸುವೆವು’ ಎಂಬ ನಿಲುವಿನಲ್ಲಿ ನಾವು ದೃಢವಾಗಿದ್ದರಿಂದ ಆ ಸಭೆಯನ್ನು ಕಮ್ಯುನಿಸ್ಟರು ಬಹಿಷ್ಕರಿಸಿದರು; ಆದರೆ ಅವರು ಕ್ಷಮೆ ಕೇಳಲಿಲ್ಲ’ ಎಂದು ಪರಿಷತ್ತಿನ ಕಾರ್ಯಕರ್ತರು ಹೇಳಿದರು. ಈ ಸಮಯದಲ್ಲಿ ಎರಡೂ ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಘರ್ಷಣೆ ನಡೆದಿರುವುದಾಗಿಯೂ ವರದಿಯಾಗಿದೆ. ಈ ಸಭೆಯ ವಿಡಿಯೋ ಕೂಡ ವೈರಲ್ ಆಗಿದೆ. ಎರಡೂ ಗುಂಪುಗಳು ಘೋಷಣೆಗಳನ್ನು ಕೂಗುತ್ತಿರುವುದು ಇದರಲ್ಲಿ ಕಾಣುತ್ತಿದೆ.
ಸಂಪಾದಕೀಯ ನಿಲುವುಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯು ಹಿಂದೂ ದ್ವೇಷಿಯಾಗಿದ್ದು, ನಿರಂತರವಾಗಿ ಇಂತಹ ಅವಮಾನಗಳನ್ನು ಮಾಡಲು ಪ್ರಯತ್ನಿಸುತ್ತಿರುತ್ತದೆ. ಸರಕಾರವು ಇದರ ವಿರುದ್ಧ ಕ್ರಮಕೈಗೊಂಡು ಅದರ ಮೇಲೆ ನಿಷೇಧ ಹೇರುವುದು ಈಗ ಅವಶ್ಯಕವಾಗಿದೆ ! |