ದೀಪಾವಳಿ ಹಬ್ಬದ ಸಮಯದಲ್ಲಿಯೂ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ !

೧. ಮತಾಂತರ ವಿರೋಧಿ ಕಾನೂನು ಯಾವಾಗ ಬರುವುದು?

‘ಕ್ರೈಸ್ತ ಮಿಶನರಿಗಳು ಹಿಂದೂಗಳನ್ನು ಮತಾಂತರಿಸಲು ಶ್ರೀಮದ್ ಭಗವದ್ಗೀತೆಯಂತಹ ‘ಗೀತೆಯೇ ನಿನ್ನ ಜ್ಞಾನ ಅಮೃತ’ ಎಂಬ ಕನ್ನಡ ಪುಸ್ತಕಗಳನ್ನು ಹಂಚುತ್ತಿದ್ದಾರೆ’ ಎಂದು ಬಜರಂಗದಳ ಪೊಲೀಸರಿಗೆ ದೂರು ನೀಡಿದೆ.

೨. ದೀಪಾವಳಿ ಹಬ್ಬದ ಸಮಯದಲ್ಲಿಯೂ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ !

ಮತಾಂಧ ಮುಸಲ್ಮಾನರು ಅಕ್ಟೋಬರ್ ೨೪ ರ ರಾತ್ರಿ ವಡೋದರಾ (ಗುಜರಾತ್) ದಲ್ಲಿ, ಪಟಾಕಿ ಸಿಡಿಸುವುದನ್ನು ವಿರೋಧಿಸಿ ಹಿಂಸಾಚಾರ ನಡೆಸಿದರು. ಈ ವೇಳೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.

೩. ಪಾದ್ರಿಯ ನಿಜ ಸ್ವರೂಪವನ್ನು ತಿಳಿಯಿರಿ !

ಹಡಪ್ಸರ್ (ಪುಣೆ ಜಿಲ್ಲೆ) ಇಲ್ಲಿನ ಪಾದ್ರಿ ವಿನ್ಸೆಂಟ್ ಪೆರೇರಾ ಇವರು ೧೩ ವರ್ಷದ ಬಾಲಕನಿಗೆ ಅನೈಸರ್ಗಿಕ ಲೈಂಗಿಕ ಕಿರುಕುಳ ಕೊಡುತ್ತಿದ್ದರು. ಅವರ ವಿರುದ್ಧ ಈ ಹಿಂದೆಯೂ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಹಡಪ್ಸರ್ ಪೊಲೀಸರು ದೂರು ದಾಖಲಿಸಿಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ.

೪. ‘ದಲಿತ-ಮುಸಲ್ಮಾನ ಭಾಯಿ ಭಾಯಿ’ ಎನ್ನುವವರು ಈಗೇಕೆ ಮೌನವಾಗಿದ್ದಾರೆ ?

ಸಮಸ್ತಿಪುರದಲ್ಲಿ (ಬಿಹಾರ) ದಲಿತ ಹಿಂದೂ ವ್ಯಕ್ತಿ ಪಾಸ್ವಾನ್ ಎಂಬಾತನನ್ನು ಒಬ್ಬ ಮೌಲಾನಾನು ನೂರಾರು ಮುಸಲ್ಮಾನರ ಮುಂದೆ ೫ ಬಾರಿ ಉಗುಳು ನೆಕ್ಕುವಂತೆ ಮಾಡಿದನು. ಮುಸಲ್ಮಾನ ಯುವತಿಯ ಜೊತೆಗಿನ ಪ್ರೇಮ ಪ್ರಕರಣದಿಂದ ಈ ಘಟನೆ ನಡೆದಿದೆ.

೫. ಭಾರತ ಈಗಲೇ ಕ್ರಮ ಕೈಗೊಳ್ಳಬೇಕು !

ಮುಂಬಯಿ ಮೇಲೆ ೨೬ ನವೆಂಬರ್ ೨೦೦೮ ರಂದು ನಡೆದ ಉಗ್ರವಾಗಿ ದಾಳಿಯ ಮುಖ್ಯ ರೂವಾರಿಗಳಿಗೆ ಇನ್ನೂ ಶಿಕ್ಷೆ ಆಗಿಲ್ಲ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದರು.

೬. ಈ ಜಿಹಾದಿ ಸಂಘಟನೆಯನ್ನು ನಿಷೇಧಿಸಿ !

ಹಲಾಲ್ ಪ್ರಮಾಣಪತ್ರ ನೀಡುವ ‘ಜಮಿಯತ್ ಉಲೇಮಾ-ಎ-ಹಿಂದ್ ಹಲಾಲ್ ಟ್ರಸ್ಟ್’ ಈ ಸಂಘಟನೆಯು ಮುಂಬಯಿ ಮೇಲಿನ ೨೬/೧೧ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಖಟ್ಲೆ ನಡೆಸಲು ಹಣವನ್ನು ಪೂರೈಸಿದೆ.

೭. ಹಿಂದೂಗಳೇ ಇದನ್ನು ನ್ಯಾಯಸಮ್ಮತವಾಗಿ ವಿರೋಧಿಸಿ !

ಗೋವಾದ ಶಾಲಾ ಪಠ್ಯಪುಸ್ತಕಗಳಲ್ಲಿ ಗೋವಾದಲ್ಲಿ ಹಿಂದೂಗಳ ಮೇಲೆ ಇನ್ಕ್ವೀಜೀಶನ್ (ಧರ್ಮಚ್ಛಲ) ಹೇರಿದ ಫ್ರಾನ್ಸಿಸ್ ಝೇವಿಯರನ ವೈಭವೀಕರಣವಾಗುತ್ತಿದೆ ಎಂಬುದು ಶಾಲೆಯ ೬ ನೇ ತರಗತಿಯ ಹಿಂದಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಪ್ರಶ್ನೆಯಿಂದಾಗಿ ಬೆಳಕಿಗೆ ಬಂದಿದೆ.